2G ಪ್ಲಾನ್ ಇಂಟರ್ನೆಟ್ ಡಾಟಾವನ್ನು 3G ವೇಗದಲ್ಲಿ ಬ್ರೌಸ್ ಮಾಡುವುದು ಹೇಗೆ?
2G ಡಾಟಾ ಪ್ಯಾಕ್ ರೀಚಾರ್ಜ್ ಮಾಡಿಸಿ 3G ಇಂಟರ್ನೆಟ್ ವೇಗ ಪಡೆಯಬೇಕು ಎಂಬುವವರು ಬಹಳ ಜನ. ನೀವು 2G ಇಂಟರ್ನೆಟ್ ಡಾಟಾ ಪ್ಲಾನ್ ಹೊಂದಿದ್ದೀರಾ? ಆಗಿದ್ದಲ್ಲಿ ನಾವು ನಿಮಗೆ 2G ಪ್ಲಾನ್ ಡಾಟಾವನ್ನು 3G ವೇಗದಲ್ಲಿ ಬ್ರೌಸ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ.
ಅಂದಹಾಗೆ ನಾವು ಇಂದು ತಿಳಿಸುತ್ತಿರುವ 2G ಪ್ಲಾನ್ ಡಾಟಾವನ್ನು 3G ವೇಗದಲ್ಲಿ ಬ್ರೌಸ್ ಮಾಡುವ ಟ್ರಿಕ್ಸ್ ಅನ್ನು ಕೆಳಗಿನ ಸ್ಲೈಡರ್‌ನಲ್ಲಿ ಓದಿರಿ.
ರಿಲಾಯನ್ಸ್ ಜಿಯೋ 4G ಸಿಮ್: 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು
ಈ ಹಂತಗಳನ್ನು ಫಾಲೋ ಮಾಡಿ

ಹಂತ 1
* ನಿಮ್ಮ ಡಿವೈಸ್‌ನಲ್ಲಿ ಮೆನು ಟ್ಯಾಪ್ ಮಾಡಿ
* ಫೋನ್ ಸೆಟ್ಟಿಂಗ್ ಓಪನ್ ಮಾಡಿ
* ಸೆಟ್ಟಿಂಗ್ ಓಪನ್ ಮಾಡಿದ ನಂತರ 'Wireless and Network' ಕ್ಲಿಕ್ ಮಾಡಿ 'More Options' ಕ್ಲಿಕ್ ಮಾಡಿ
* ನಂತರ ಪುನಃ 'More Options' ಟ್ಯಾಪ್ ಮಾಡಿ (ಈ ಆಯ್ಕೆಗಳು ಒಂದು ಡಿವೈಸ್‌ಗೂ ಇನ್ನೊಂದು ಡಿವೈಸ್‌ಗೂ ವ್ಯತ್ಯಾಸದಿಂದ ಇರುತ್ತವೆ)

ಹಂತ 2
* ಈ ಹಂತದಲ್ಲಿ ಮೊಬೈಲ್ ನೆಟ್‌ವರ್ಕ್ ಆಪ್ಶನ್ ಸೆಲೆಕ್ಟ್ ಮಾಡಿ
* ನಂತರ ಟ್ಯಾಪ್ ಮಾಡಿ ಸಿಮ್ ಕಾರ್ಡ್ ಸೆಲೆಕ್ಟ್ ಮಾಡಿ (ಡ್ಯುಯಲ್ ಸಿಮ್ ಆಗಿದ್ದಲ್ಲಿ)
* ಡಾಟಾ ಪ್ಲಾನ್ ಆಕ್ಟೀವ್ ಆಗಿರುವ ಸಿಮ್ ಸೆಲೆಕ್ಟ್ ಮಾಡಿ
* 'Network Mode' ಆಪ್ಶನ್ ಚೆಕ್ ಮಾಡಿ ಅದನ್ನು ಟ್ಯಾಪ್ ಮಾಡಿ

ಹಂತ 3
* Gsm only, WCDMA only, WCDMA/GSM ಮೋಡ್ ಎಂಬ 3 ಆಪ್ಸನ್‌ಗಳನ್ನು ಓಪನ್ ಆಗುತ್ತವೆ.
* ಮೇಲಿನವುಗಳಲ್ಲಿ WCDMA only ಆಯ್ಕೆ ಮಾಡಿ
* ನಂತರ ಫೋನ್ ಅನ್ನು ರೀಸ್ಟಾರ್ಟ್ ಮಾಡಿ
ಈನ ನೀವು 3G ಬ್ರೌಸಿಂಗ್ ವೇಗವನ್ನು 2G ಡಾಟಾ ಪ್ಯಾಕ್‌ನಲ್ಲಿ ಎಂಜಾಯ್ ಮಾಡಬಹುದು. ಈ ಟ್ರಿಕ್ಸ್ ಅನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಸೂಚನೆಗಳು
* ಕೇವಲ ಬ್ರೌಸಿಂಗ್ ವೇಗ ಮಾತ್ರ 3G ಸಿಗುತ್ತದೆ. ಆದರೆ ಡೌನ್‌ಲೋಡ್ ವೇಗ ಮಾತ್ರ 2G ಇರುತ್ತದೆ.
* ಅಂದಹಾಗೆ ಈ ಟ್ರಿಕ್ಸ್ ಅನುಕೂಲ ಪಡೆಯಲು ನೀವಿರುವ ಪ್ರದೇಶದಲ್ಲಿ ನಿಮ್ಮ ಇಂಟರ್ನೆಟ್ ಪ್ರೊವೈಡರ್‌ಗಳು 3G ಸೇವೆಯನ್ನು ಹೊಂದಿರಬೇಕು.
* ಮೇಲೆ ತಿಳಿಸಿದ ಈ ಸೆಟ್ಟಿಂಗ್ಸ್ ಕೆಲವು ನೆಟ್‌ವರ್ಕ್‌ಗಳಿಗೆ ವರ್ಕ್ ಆಗದೇ ಇರಬಹುದು.



Click it and Unblock the Notifications








