ರಿಲಾಯನ್ಸ್ ಜಿಯೋ 4G ಸಿಮ್: 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು

By Suneel
|

ಭಾರತದಲ್ಲಿ ಈಗಾಗಲೇ ಬಹುಸಂಖ್ಯಾತರು ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಸಿದ್ದಾರೆ. ಅವರಲ್ಲಿ ಹಲವರು ಸಿಮ್‌ ಆಕ್ಟಿವೇಟ್‌ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಸಿಮ್‌ ಆಕ್ಟಿವೇಟ್ ಆಗಿರುವವರು ಇಂಟರ್ನೆಟ್ ಸ್ಲೋ ಕನೆಕ್ಷನ್‌, ಕಾಲ್‌ ಡ್ರಾಪ್‌, ಮತ್ತು ಇತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನೂ ಹಲವು ಬಳಕೆದಾರರು ಜಿಯೋ ಇಂಟರ್ನೆಟ್ ಬಳಕೆಯಲ್ಲಿ ಹತಾಶೆಗೊಂಡಿದ್ದಾರೆ.

ರಿಲಾಯನ್ಸ್ ಜಿಯೋ(Jio) ಸಿಮ್‌ ಬಳಕೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂದಿನ ಲೇಖನದಲ್ಲಿ 5 ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳು ಏನು ಎಂದು ತಿಳಿಸುತ್ತಿದ್ದೇವೆ. ಈ ಲೇಖನವನ್ನು ಓದಿ ಜಿಯೋದ ಉತ್ತಮ ಅನುಭವ ಪಡೆಯಿರಿ.

ರಿಲಾಯನ್ಸ್ ಜಿಯೋದಲ್ಲಿ 93 ರೂಗೆ 10GB 4G ಡಾಟಾ ಪಡೆಯುವುದು ಹೇಗೆ?

ಜಿಯೋ ಸಿಮ್ ಸರಿಯಾಗಿ ವರ್ಕ್‌ ಆಗುತ್ತಿಲ್ಲ

ಜಿಯೋ ಸಿಮ್ ಸರಿಯಾಗಿ ವರ್ಕ್‌ ಆಗುತ್ತಿಲ್ಲ

ಜಿಯೋ ಸಿಮ್‌ ಸರಿಯಾಗಿ ವರ್ಕ್‌ ಆಗುತ್ತಿಲ್ಲ ಎಂದಲ್ಲಿ, ನಿಮ್ಮ ಡಿವೈಸ್‌ ಸಫೋಋ್ಟ್‌ ಮಾಡುತ್ತಿಲ್ಲ ಎಂದರ್ಥ. ನೀವು 3G ಫೋನ್ ಹೊಂದಿದ್ದಲ್ಲಿ ಕೆಲವು ಟ್ರಿಕ್ಸ್‌ ಮೂಲಕ ಸಿಮ್‌ ಬಳಸಬಹುದು. ಆದರೆ ಜಿಯೋ ಬೆನಿಫಿಟ್‌ಗಳನ್ನು ಪಡೆಯಲು ಆಗುವುದಿಲ್ಲ.

ಪರಿಹಾರ: ರಿಲಾಯನ್ಸ್ ಜಿಯೋ ಸಿಮ್‌ ಅನ್ನು 4G ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಿ ಬೆನಿಫಿಟ್‌ಗಳನ್ನು ಪಡೆದು ಉತ್ತಮ ಅನುಭವ ಪಡೆಯಿರಿ.

 ಜಿಯೋ ಸಿಮ್ ಡ್ಯುಯಲ್ ಸಿಮ್‌ ಫೋನ್‌ಗಳಲ್ಲಿ ವರ್ಕ್‌ ಆಗುತ್ತಿಲ್ಲ

ಜಿಯೋ ಸಿಮ್ ಡ್ಯುಯಲ್ ಸಿಮ್‌ ಫೋನ್‌ಗಳಲ್ಲಿ ವರ್ಕ್‌ ಆಗುತ್ತಿಲ್ಲ

ರಿಲಾಯನ್ಸ್ ಜಿಯೋ 4G ಬಳಕೆದಾರರು ಖಂಡಿತವಾಗಿಯೂ ಡ್ಯುಯಲ್‌ ಸಿಮ್‌ ಫೋನ್‌ಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಾರಣ ಹಲವು 4G ಸಪೋರ್ಟ್ ಸ್ಮಾರ್ಟ್‌ಫೋನ್‌ಗಳು ಕೇವಲ 'ಸಿಮ್‌ ಕಾರ್ಡ್‌ ಸ್ಲಾಟ್ 1'ರಲ್ಲಿ ಮಾತ್ರ 4G ಕನೆಕ್ಷನ್‌ ನೀಡುತ್ತವೆ.

ಪರಿಹಾರ: ನಿಮ್ಮ 4G ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಸಿಮ್‌ ಅನ್ನು ಸಿಮ್‌ ಕಾರ್ಡ್‌ ಸ್ಲಾಟ್‌ 1 ರಲ್ಲಿ ಇನ್‌ಸರ್ಟ್ ಮಾಡಿ. ಹೀಗೆ ಮಾಡದಿದ್ದಲ್ಲಿ, ವೆಲ್ಕಮ್‌ ಆಫರ್‌ ಸಹ ಸಿಗುವುದಿಲ್ಲ.

ಜಿಯೋ ಸಿಮ್ ರಿಕಾಗ್ನೈಸ್ ಆಗುತ್ತಿಲ್ಲ

ಜಿಯೋ ಸಿಮ್ ರಿಕಾಗ್ನೈಸ್ ಆಗುತ್ತಿಲ್ಲ

ಹಲವು ಬಳಕೆದಾರರು ರಿಲಾಯನ್ಸ್ ಜಿಯೋ 4G ಸಿಮ್‌ ತಮ್ಮ ಫೋನ್‌ನಲ್ಲಿ ರಿಕಾಗ್ನೈಸ್‌ ಆಗುತ್ತಿಲ್ಲ ಎಂಬ ದೂರು ನೀಡುತ್ತಿದ್ದಾರೆ. ಈ ಸಮಸ್ಯೆ ಭಾಗಶಃ ಡ್ಯುಯಲ್‌ ಸಿಮ್ ಫೋನ್‌ಗಳಲ್ಲಿಲ ಆಗುತ್ತಿದೆ.

ಪರಿಹಾರ: ಸಿಮ್ ಕಾರ್ಡ್ ರಿಕಾಗ್ನೈಸ್ ಸಮಸ್ಯೆ ಬಗೆಹರಿಸಲು, ಸಿಮ್ ಅನ್ನು ಒಮ್ಮೆ ತೆಗೆದು ಪುನಃ ಇನ್‌ಸರ್ಟ್‌ ಮಾಡಿ ಚೆಕ್‌ ಮಾಡಿ.

ಯಾವುದೇ ಸಿಗ್ನಲ್‌ ಬಾರ್‌ಗಳು ಇಲ್ಲ

ಯಾವುದೇ ಸಿಗ್ನಲ್‌ ಬಾರ್‌ಗಳು ಇಲ್ಲ

ಜಿಯೋ ಸಿಮ್ ರಿಕಾಗ್ನೈಸ್ ಆಗುತ್ತಿಲ್ಲ, ಅಲ್ಲದೇ ಸಿಗ್ನಲ್‌ ಬಾರ್‌ ಸಹ ಪ್ರದರ್ಶನವಾಗುತ್ತಿಲ್ಲ ಎಂದಲ್ಲಿ, ನೀವು ಕೆಲವು ಟ್ರಿಕ್ಸ್‌ಗಳನ್ನು ಬಳಸಿ ಸಿಗ್ನಲ್‌ ಬಾರ್‌ ಪಡೆಯಬೇಕಿದೆ.

ಪರಿಹಾರ: ಸೆಟ್ಟಿಂಗ್ಸ್ ಮೆನುಗೆ ಹೋಗಿ, ಸಿಮ್‌ ಸೆಟ್ಟಿಂಗ್ಸ್‌ಗೆ ಹೋಗಿ LTE ನೆಟ್‌ವರ್ಕ್‌ ಮೋಡ್‌ಗೆ ಟರ್ನ್‌ ಮಾಡಿ.
Settings → Mobile Networks → Preferred Network Type and choosing LTE only option

ಯಾವುದೇ ಕರೆಗಳನ್ನು ಮಾಡಲು ಆಗುತ್ತಿಲ್ಲ

ಯಾವುದೇ ಕರೆಗಳನ್ನು ಮಾಡಲು ಆಗುತ್ತಿಲ್ಲ

ರಿಲಾಯನ್ಸ್ ಜಿಯೋ ಬಳಕೆದಾರರ ಅತೀ ಸಾಮಾನ್ಯ ಸಮಸ್ಯೆಗಳಲ್ಲಿ ಕರೆ ಮಾಡಲು ಆಗದಿರುವುದು ಒಂದಾಗಿದೆ. ಇದಕ್ಕೆ ಕಾರಣ ಟೆಲಿ ವೆರಿಫಿಕೇಶನ್ ಪ್ರೊಸೆಸ್ ಅಪೂರ್ಣವಾಗಿರುವುದು. ಟೆಲಿ ವೆರಿಫಿಕೇಶನ್ ಪ್ರೊಸೆಸ್ ಮುಗಿಯುವವರೆಗೆ ಯಾವುದೇ ಕರೆಗಳನ್ನು ಮಾಡಲು ಆಗುವುದಿಲ್ಲ.

ಪರಿಹಾರ: ಸಾಮಾನ್ಯವಾಗಿ ಜಿಯೋ 4G ಸಿಮ್‌ನಿಂದ ಕರೆ ಮಾಡಲು ನೀವು ಜಿಯೋಜಾಯಿನ್‌ ಆಫ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಈ ಆಫ್‌ ಬಳಸಿ ಕರೆ ಸಮಸ್ಯೆ ಬಗೆಹರಿಸಬಹುದು.

Best Mobiles in India

English summary
Reliance Jio 4G SIM: 5 Common Problems and Fixes. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X