Home
ಟೆಕ್ ನೌಕರಿ

ಐಫೋನ್ ಬಿಸಿಯಾಗುತ್ತಿದೆ - ಪರಿಹಾರಗಳೇನು?

By Shwetha

ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಒಳಭಾಗದಲ್ಲಿರುವ ಕೂಲಿಂಗ್ ಫ್ಯಾನ್ ಕಾರ್ಯನಿರ್ವಹಿಸಲು ವಿಫಲವಾದಾಗ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಬಿಸಿಯಾಗಲು ಆರಂಭವಾಗುತ್ತದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗಳಂತೆಯೇ ನಿಮ್ಮ ಐಫೋನ್ ಅಥವಾ ಐಪ್ಯಾಡ್ ಒಳಭಾಗದಲ್ಲಿ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿಲ್ಲ. ಅದಾಗ್ಯೂ ಐಫೋನ್ ಬಿಸಿಯನ್ನು ಉತ್ಪಾದಿಸುತ್ತದೆ ಯಾವಾಗ ಅಂದರೆ ಇದು ಹೆಚ್ಚುವರಿ ಒತ್ತಡಕ್ಕೆ ಒಳಗಾದಾಗ.

ಓದಿರಿ: ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ಒತ್ತಡ ಮಾತ್ರವಲ್ಲದೆ ಇನ್ನೂ ಬಹಳಷ್ಟು ಕಾರಣಗಳು ನಿಮ್ಮ ಐಓಎಸ್ ಅನ್ನು ಬಿಸಿಯಾಗಿಸುತ್ತದೆ. ಐಫೋನ್ 6 ಬಳಕೆದಾರರು ತಮ್ಮ ಫೋನ್ ಬ್ಯಾಟರಿ ಸ್ಫೋಟಗೊಂಡಿರುವ ಮಾಹಿತಿಯನ್ನು ನೀಡಿದ್ದರು. ಹೀಗೆಯೇ ಬಹಳಷ್ಟು ದಾಖಲೆಗಳು ಉಲ್ಲೇಖವಾಗಿದ್ದು ಹೆಚ್ಚಿನ ಐಫೋನ್ ಮತ್ತು ಐಪ್ಯಾಡ್ ಜ್ವಾಲೆ ಉಗುಳಿದ್ದನ್ನು ನೀವು ಗಮನಿಸರಬಹುದಾಗಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಬಳಸಬೇಕೋ/ಬೇಡವೋ? ಈ ಮಾಹಿತಿ ಓದಿ ನಿರ್ಧರಿಸಿ!

ಇಂದಿನ ಲೇಖನದಲ್ಲಿ ಐಫೋನ್‌ನ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ನೀಡಲಿದ್ದೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ನಿಮ್ಮ ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗಲು ಕಾರಣವೇನು?

ನಿಮ್ಮ ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗಲು ಕಾರಣವೇನು?

ನಿರಂತರ ಬಳಕೆಯಿಂದಾಗಿ ನಿಮ್ಮ ಡಿವೈಸ್ ಬಿಸಿಯಾದಲ್ಲಿ ಹೆದರದಿರಿ. ಒತ್ತಡಕ್ಕೆ ಒಳಗಾದಾಗ ಡಿವೈಸ್ ಬಿಸಿಯಾಗುವುದು ಸರ್ವೇ ಸಾಮಾನ್ಯವಾಗಿದೆ. ನೀವು ಹೆಚ್ಚು ಗುಣಮಟ್ಟದ 3ಡಿ ಗೇಮ್ ಅನ್ನು ಡಿವೈಸ್‌ನಲ್ಲಿ ಆಡುತ್ತಿದ್ದಿರಿ ಎಂದಾದಲ್ಲಿ ನಿಮ್ಮ ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುತ್ತದೆ.

ಸಾಕ್ ಮತ್ತು ಬ್ಯಾಟರಿ ಬಿಸಿ

ಸಾಕ್ ಮತ್ತು ಬ್ಯಾಟರಿ ಬಿಸಿ

ಎಫ್‌ಎಚ್‌ಡಿ ವೀಡಿಯೊ ಸ್ಟ್ರೀಮಿಂಗ್, ಜಿಪಿಎಸ್ ಬಳಕೆಯನ್ನು ಮಾಡುವುದು ಕೂಡ ಫೋನ್ ಬಿಸಿಯಾಗುವಂತೆ ಮಾಡುತ್ತದೆ. ಡಿವೈಸ್‌ನಲ್ಲಿರುವ ಸಾಕ್ ಮತ್ತು ಬ್ಯಾಟರಿ ಬಿಸಿಯನ್ನು ಉತ್ಪಾದಿಸುತ್ತದೆ ಹಾಗೂ ಫ್ಯಾನ್ ಇಲ್ಲದೇ ಇರುವುದರಿಂದ ಉಷ್ಣತೆ ಹಾಗೆಯೇ ಇರುತ್ತದೆ.

ಸರ್ವೇ ಸಾಮಾನ್ಯ

ಸರ್ವೇ ಸಾಮಾನ್ಯ

ನಿಮ್ಮ ಐಓಎಸ್ ತುಸು ಬೆಚ್ಚಗಾಗುವುದು, ಇದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ಆಪಲ್ ಡಿವೈಸ್ ಎಆರ್‌ಎಮ್ ಚಿಪ್‌ಗಳನ್ನು ಬಳಸುವುದರಿಂದ ಅಂತೆಯೇ ಶಾಖ ಉತ್ಪಾದನೆಯಲ್ಲಿ ಇವು ಮಹತ್ತರವಾಗಿರುವುದರಿಂದ ದೀರ್ಘ ಸಮಯದವರೆಗೆ ಶಾಖ ಉತ್ಪತ್ತಿ ನಡೆಯುತ್ತಿರುತ್ತದೆ.

ಕೇಸ್ ಒಮ್ಮೊಮ್ಮೆ ಸಹಕಾರಿಯಾಗಿರುವುದಿಲ್ಲ

ಕೇಸ್ ಒಮ್ಮೊಮ್ಮೆ ಸಹಕಾರಿಯಾಗಿರುವುದಿಲ್ಲ

ನಿಮ್ಮ ಐಫೋನ್ ಅಥವಾ ಐಪ್ಯಾಡ್‌ಗೆ ನೀವು ಕೇಸ್ ಬಳಸುತ್ತಿದ್ದೀರಿ ಎಂದಾದಲ್ಲಿ, ಇದು ಅಷ್ಟೊಂದು ಪ್ರಯೋಜನಕಾರಿಯಾಗಿರುವುದಿಲ್ಲ. ಹವಾಮಾನ ಮತ್ತು ಚಾರ್ಜ್ ಮಾಡುತ್ತಿರುವಾಗ ಫೋನ್ ಬಿಸಿಯಾಗುತ್ತಿದೆ ಎಂದಾದಲ್ಲಿ ಕೇಸ್ ತೆಗೆಯಿರಿ.

ಫೋನ್‌ನ ಬ್ಯಾಟರಿಗೆ ಅಡ್ಡಿ

ಫೋನ್‌ನ ಬ್ಯಾಟರಿಗೆ ಅಡ್ಡಿ

ಒಮ್ಮೊಮ್ಮೆ ಕೇಸ್‌ಗಳು ಫೋನ್‌ನ ಬ್ಯಾಟರಿಗೆ ಅಡ್ಡಿಯನ್ನುಂಟು ಮಾಡಬಹುದು ಆದ್ದರಿಂದ ಉಷ್ಣತೆ ಹೊರಹೋಗುವ ಸಾಧ್ಯತೆ ಕಡಿಮೆ ಇದ್ದು ಡಿವೈಸ್‌ನಲ್ಲೇ ಇದು ಸುತ್ತುತ್ತಿರುತ್ತದೆ.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಐಓಎಸ್ ಡಿವೈಸ್‌ಗಳನ್ನು 0 ಡಿಗ್ರಿಯಿಂದ 35 ಸೆಲ್ಶಿಯಸ್ ಡಿಗ್ರಿಯವರೆಗೆ ಬಳಸುವಂತೆ ತಯಾರಿಸಲಾಗಿರುತ್ತದೆ. ಈ ಶ್ರೇಣಿಯಿಂದ ತಾಪಮಾನವು ಮೀರಿದಲ್ಲಿ ಡಿವೈಸ್‌ಗೆ ಇದು ಸಮಸ್ಯೆಯನ್ನು ಉಂಟುಮಾಡುತ್ತದೆ. ನಿಮ್ಮ ಡಿವೈಸ್ ತುಂಬಾ ಬಿಸಿಯಾದಲ್ಲಿ ಡಿಸ್‌ಪ್ಲೇಯಲ್ಲಿ ಇದು ಸಂದೇಶ ಮೂಲಕ ನಿಮಗೆ ತಿಳಿಸುತ್ತದೆ.

ಮುಖ್ಯ ವ್ಯವಸ್ಥೆಗಳು ನಿಷ್ಕ್ರಿಯ

ಮುಖ್ಯ ವ್ಯವಸ್ಥೆಗಳು ನಿಷ್ಕ್ರಿಯ

ಫೋನ್‌ನ ಮುಖ್ಯ ವ್ಯವಸ್ಥೆಗಳು ನಿಷ್ಕ್ರಿಯಗೊಳ್ಳುತ್ತದೆ ಮತ್ತು ಕಡಿಮೆ ಪವರ್ ಮೋಡ್‌ಗೆ ಇದನ್ನು ತಳ್ಳುತ್ತದೆ. ನಿಮ್ಮ ಡಿವೈಸ್ ತೀವ್ರವಾಗಿ ಬಿಸಿಯಾಗುತ್ತಿದೆ ಎಂದಾದಲ್ಲಿ ಫೋನ್‌ಗೆ ಸಮಸ್ಯೆ ಎದುರಾಗುತ್ತದೆ.

ಇದು ಯಾವಾಗಲೂ ಬಿಸಿಯಾಗಿರುತ್ತದೆಯೇ?

ಇದು ಯಾವಾಗಲೂ ಬಿಸಿಯಾಗಿರುತ್ತದೆಯೇ?

ಶಾಖ ಉತ್ಪಾದನೆಯು ಸಾಮಾನ್ಯವಾಗಿದ್ದು, ಎಲ್ಲಾ ಸಮಯವೂ ಬಿಸಿಯಾದಲ್ಲಿ ಹಾರ್ಡ್‌ವೇರ್ ಅಥವಾ ಐಓಎಸ್‌ನಲ್ಲಿ ದೋಷವಿದೆ ಎಂದರ್ಥವಾಗಿದೆ. ಸಾಮಾನ್ಯವಾಗಿ ಈ ಬಿಸಿ ಉಂಟಾಗಿರುವುದು ಸಾಫ್ಟ್‌ವೇರ್‌ನಿಂದ ಆಗಿರಬಹುದು.

ಬಿಸಿಯಾಗುವಿಕೆ ಪ್ರಕ್ರಿಯೆ

ಬಿಸಿಯಾಗುವಿಕೆ ಪ್ರಕ್ರಿಯೆ

ಬಿಸಿಯಾಗುವಿಕೆ ಪ್ರಕ್ರಿಯೆಯು ಕೂಡಲೇ ಆರಂಭವಾಗುತ್ತಿದೆ ಎಂದಾದಲ್ಲಿ, ನೀವು ತಡವಾಗಿ ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್‌ಗಳಿಗಾಗಿ ಹಿನ್ನಲೆ ಅಪ್ಲಿಕೇಶನ್ ಅನುಮತಿಗಳನ್ನು ರಿವೋಕ್ ಮಾಡಬೇಕಾಗುತ್ತದೆ.

ಐಫೋನ್ ಬಿಸಿಗೆ ಪರಿಹಾರ

ಐಫೋನ್ ಬಿಸಿಗೆ ಪರಿಹಾರ

ಸೆಟ್ಟಿಂಗ್ಸ್ > ಜನರಲ್ > ಬ್ಯಾಕ್‌ಗ್ರೌಂಡ್ ಅಪ್ಲಿಕೇಶನ್ ರಿಫ್ರೆಶ್ ಹೀಗೆ ಮಾಡಿ.

Best Mobiles in India

English summary
Today, we will take a look at why the iOS device gets hot and how you can fix the issue. Check out the same from the slider below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+