ಸ್ಮಾರ್ಟ್‌ಫೋನ್‌ ಬಳಸಬೇಕೋ/ಬೇಡವೋ? ಈ ಮಾಹಿತಿ ಓದಿ ನಿರ್ಧರಿಸಿ!

By Suneel
|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಹೊಸದಾಗಿ ಕಾಲಿಡುತ್ತಿರುವ ಪ್ರತಿಯೊಂದು ಮೊಬೈಲ್‌ಗಳು ಸಹ ಮಲ್ಟಿಟಾಸ್ಕ್‌ ಫೀಚರ್‌ಗಳನ್ನು ಹೊಂದಿವೆ. ಇದರಿಂದ ಸ್ಮಾರ್ಟ್‌ಫೋನ್‌ ದಿನೇ ದಿನೇ ಮನುಷ್ಯನಿಗೆ ತುಂಬಾ ಕ್ಲೋಸ್‌ ಆಗುತ್ತಿವೆ. ಹಲವರಿಗೆ ಈಗಾಗಲೇ ಕ್ಲೋಸ್‌ ಆಗಿಬಿಟ್ಟಿವೆ.

ಸ್ಮಾರ್ಟ್‌ಫೋನ್ ಬಗ್ಗೆ ಎಲ್ಲರಿಗೂ ಹಿಂದಿನ ದಿನಗಳಲ್ಲಿ ಆದ ಕೆಲವು ಘಟನೆಯಿಂದ ಒಂದು ಪ್ರಶ್ನೆಯಂತೂ ಕಾಡುತ್ತಿದೆ. ಸದಾ ಉಪಯೋಗವಿರುವ ಸ್ಮಾರ್ಟ್‌ಫೋನ್ ಆಕಸ್ಮಿಕವಾಗಿ ಆಗುವ ದುರಂತದಿಂದ ಹೆಚ್ಚಿನ ಹಾನಿಯನ್ನೇ ಮಾಡುತ್ತದೆ. ಆದ್ದರಿಂದ ಇದು ನಮಗೆ ಲಾಭದಾಯಕವೋ ಅಥವಾ ಹಾನಿಕಾರಕವೋ ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ.

ಹೌದು, ಕಳೆದ ಕೆಲವು ತಿಂಗಳುಗಳ ಹಿಂದೆ ಸ್ಮಾರ್ಟ್‌ಫೋನ್‌ನಿಂದ ಉಂಟಾದ ಘಟನೆಗಳು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಈ ಪ್ರಶ್ನೆಯನ್ನು ಹುಟ್ಟಿಹಾಕಿವೆ. ಅಂದಹಾಗೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಆದ ಸ್ಮಾರ್ಟ್‌ಫೋನ್‌ ದುರಂತಗಳು ಯಾವುವು ಎಂದು ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಈ ಘಟನೆಗಳನ್ನು ತಿಳಿದು ದುರಂತದಿಂದ ಪಾರಾಗಲು ಎಚ್ಚರಗೊಳ್ಳಬಹುದಾಗಿದೆ. ಮುಂದೆ ಓದಿರಿ.

ರೂ 3,999 ಕ್ಕೆ 3G ಸ್ಮಾರ್ಟ್‌ಫೋನ್‌ ' 'ಇಂಟೆಕ್ಸ್‌ ಆಕ್ವಾ ಸೆನ್ಸ್‌ 5.1'

ಗಾರೆತ್‌ ಕ್ಲಿಯರ್‌

ಗಾರೆತ್‌ ಕ್ಲಿಯರ್‌

ಸಿಡ್ನಿಯ 'ಗಾರೆತ್‌ ಕ್ಲಿಯರ್'‌ ಎಂಬುವವರು ಮೊನ್ನೆ ತಾನೆ(ಆಗಸ್ಟ್‌ 1) ರಂದು ತಮ್ಮ 'ಐಫೋನ್ 6' ಬೆಂಕಿ ಹೊತ್ತಿಕೊಂಡಿದ್ದರಿಂದ ಆದ ಘಟನೆ ಕುರಿತ ಫೋಟೋವನ್ನು ಮಾಹಿತಿ ಸಹಿತ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಪ್ಯಾಂಟಿನ ಪಾಕೆಟ್‌ನಲ್ಲಿನ ಐಫೋನ್‌ ಅವರು ಬೈಕ್‌ನಿಂದ ಇಳಿದ ತಕ್ಷಣ ಬೆಂಕಿ ಹೊತ್ತಿಕೊಂಡು ಅವರ ತೊಡೆ ಸಂಪೂರ್ಣ ಬೆಂದು ಹೋಗಿದೆ. ಅವರು ಈಗ ಚರ್ಮದ ಸರ್ಜರಿ ಮಾಡಿಸಬೇಕಿದೆ.

Weibo ವೆಬ್‌ಸೈಟ್‌

Weibo ವೆಬ್‌ಸೈಟ್‌

ಕಳೆದ ಮೂರು ದಿನಗಳ ಹಿಂದಷ್ಟೆ ಬಿಳಿ ಬಣ್ಣದ 'ಶ್ಯೋಮಿ ಮಿ 5' ಸ್ಮಾರ್ಟ್‌ಫೋನ್‌ ಸ್ಫೋಟಗೊಂಡ ಬಗ್ಗೆ Weibo ಮೈಕ್ರೋ ಬ್ಲಾಗಿಂಗ್‌ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಹಾಕಲಾಗಿತ್ತು. ಸ್ಮಾರ್ಟ್‌ಫೋನ್‌ ನೋಡಲು ಚೆನ್ನಾಗಿಯೇ ಇತ್ತು. ಆದರೆ ಮಿ 5 ಬ್ಯಾಟರಿ ಮಾತ್ರ ರಹಸ್ಯವಾಗಿ ಸ್ಫೋಟಗೊಂಡು ದುರಂತಕ್ಕೀಡಾಗಿತ್ತು. ಕಾರಣ ಬ್ಯಾಟರಿ ಹೆಚ್ಚು ಬಿಸಿಯಾಗಿದ್ದ ಕಾರಣ ಈ ಘಟನೆ ಸಂಭವಿಸಿತ್ತಂತೆ.

ಚಾರ್ಜಿಂಗ್ ವೇಳೆಯಲ್ಲಿ ಮಿ 4i

ಶ್ಯೋಮಿ ಮಿ 4i ಸ್ಮಾರ್ಟ್‌ಫೋನ್ ಚಾರ್ಜಿಂಗ್‌ ಆಗುವ ವೇಳೆ ಬೆಂಕಿ ಹೊತ್ತಿಕೊಂಡು ಉರಿದಿತ್ತು. ಈ ಘಟನೆ ಸಿಸಿಟಿವಿಯಲ್ಲಿ ಕ್ಯಾಪ್ಚರ್ ಆಗಿದ್ದು ಅದನ್ನು ಮೊಬೈಲ್‌ ಮಾಲಿಕ ಅಜಯ್ ರಾಜ್‌ ನೆಗಿ ಎಂಬುವವರು ವೀಡಿಯೊವನ್ನು ಶ್ಯೋಮಿ ಮಿ ಮೊಬೈಲ್‌ ಫೇಸ್‌ಬುಕ್‌ ಪೇಜ್‌ಗೆ ಪೋಸ್ಟ್‌ ಮಾಡಿದ್ದರು. ಸಂಪೂರ್ಣ ಫೋನ್‌ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿತ್ತು. ಈ ವೀಡಿಯೋ ನೋಡಿ.

ಮಾರ್ಚ್‌ ಘಟನೆ

ಮಾರ್ಚ್‌ ಘಟನೆ

ಕಳೆದ ಮಾರ್ಚ್‌ ತಿಂಗಳಲ್ಲಿ ವ್ಯಕ್ತಿಯೊಬ್ಬನ ಪರ್ಸ್‌ನಲ್ಲಿದ್ದ ಮೊಬೈಲ್‌ ಒಮ್ಮೆಲೇ ಬೆಂಕಿಗೆ ಆಹುತಿಯಾಗಿತ್ತು.ವೀಡಿಯೊ ನೋಡಲು ಕ್ಲಿಕ್ಕಿಸಿ

 ದಿಂಬಿನ ಅಡಿಯಲ್ಲಿ ಇಟ್ಟರು ಮೊಬೈಲ್ ಬಿಸಿಯಾಗುತ್ತೆ

ದಿಂಬಿನ ಅಡಿಯಲ್ಲಿ ಇಟ್ಟರು ಮೊಬೈಲ್ ಬಿಸಿಯಾಗುತ್ತೆ

ಘಟನೆಯಲ್ಲಿ ಯಾರಿಗೆ ಎನಾಗಿತ್ತು ಎಂಬುದು ತಿಳಿದಿಲ್ಲ. ಆದರೆ NYPD's 33rd Precinct ತನ್ನ ಟ್ವಿಟರ್ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬ ದಿಂಬಿನ ಅಡಿಯಲ್ಲಿ ಇಟ್ಟಿದ್ದ ಪೋನ್‌ ಬಿಸಿಯಾಗಿ ಸ್ಫೋಟಗೊಂಡ ಬಗ್ಗೆ ಪೋಸ್ಟ್‌ ಮಾಡಲಾಗಿತ್ತು.

ಗಿಜ್‌ಬಾಟ್‌

ಗಿಜ್‌ಬಾಟ್‌

ಲೆನೊವೋದ 4GB RAM 'ವೈಬ್ ಕೆ5 ನೋಟ್‌' ಭಾರತದಲ್ಲಿ ಲಾಂಚ್‌ಲೆನೊವೋದ 4GB RAM 'ವೈಬ್ ಕೆ5 ನೋಟ್‌' ಭಾರತದಲ್ಲಿ ಲಾಂಚ್‌

ಮಿಸ್ ಮಾಡದಿರಿ! ಆಂಡ್ರಾಯ್ಡ್ ಫೋನ್‌ಗಳ ಮೇಲೆ ದರಕಡಿತ ಮಿಸ್ ಮಾಡದಿರಿ! ಆಂಡ್ರಾಯ್ಡ್ ಫೋನ್‌ಗಳ ಮೇಲೆ ದರಕಡಿತ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
5 recent instances where smartphones caused serious burns to owners. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X