ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

By Suneel
|

ಸ್ಮಾರ್ಟ್‌ಫೋನ್‌ ಸ್ಫೋಟಗೊಂಡಿತು, ಬೆಂಕಿ ಹೊತ್ತುಕೊಂಡು ಉರಿಯಿತು ಎಂಬ ಮಾಹಿತಿಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿರಬಹುದು. ಆದರೆ ಈ ಮಾಹಿತಿಗಳನ್ನು ಕೇಳುವುದು ಅಸಾಮಾನ್ಯವಾಗಿದೆ. ಯಾಕಂದ್ರೆ ಫೋನ್‌ ಯಾವಾಗ ಸ್ಫೋಟಗೊಂಡು ವ್ಯಕ್ತಿಯ ಯಾವ ಅಂಗಾಂಗಕ್ಕೆ ತೊಂದರೆಯಾಗುವುದು ಎಂಬುದೇ ತಿಳಿದಿರುವುದಿಲ್ಲ. ಕಾರಣ ಮೊಬೈಲ್ ಅನ್ನು ಶರ್ಟ್‌ ಜೇಬಿನಲ್ಲಿ, ಪ್ಯಾಂಟಿನ ಜೇಬಿನಲ್ಲಿ ಕೈಯಲ್ಲಿ ಅಥವಾ ಬ್ಯಾಗ್‌ಗಳಲ್ಲಿ ಇಟ್ಟಿರಲಾಗಿರುತ್ತದೆ.

ಇತ್ತೀಚೆಗೆ ಗ್ಯಾಲಕ್ಸಿ ಎಸ್‌4 ಬೆಂಕಿ ಹೊತ್ತುಕೊಂಡ ಕಾರಣ ಸಂಪೂರ್ಣ ಅಪಾರ್ಟ್‌ಮೆಂಟ್‌ ಬೆಂಕಿಗೆ ಆಹುತಿಯಾಗಿತ್ತು, ಹುಡುಗಿಯೊಬ್ಬಳು ಮಲಗುವ ದಿಂಬಿನ ಕೆಳಗೆ ಇಟ್ಟಿದ್ದ ಮೊಬೈಲ್‌ ಸ್ಫೋಟಗೊಂಡಿತು.ಇಂತಹ ಸುದ್ದಿಗಳು ಆಗಾಗ ಎಲ್ಲರ ಕಿವಿಗಳಿಗೆ ಬೀಳುವುದು ಸಹಜವಾಗಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಏಕೆ ಸ್ಪೋಟಗೊಳ್ಳುತ್ತವೆ, ಬೆಂಕಿ ಏಕೆ ಹೊತ್ತಿಕೊಳ್ಳುತ್ತದೆ. ಈ ಅಪಾಯಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಸ್ಮಾರ್ಟ್‌ಫೋನ್‌ ಬಳಸುವವರು ಮೊಬೈಲ್ ಏಕೆ ಸ್ಫೋಟಗೊಳ್ಳುತ್ತವೆ ಎಂಬುದಕ್ಕೆ ಕಾರಣವನ್ನು ಸಹ ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್

 ಬ್ಯಾಟರಿ ಅಳವಡಿಕೆ

ಬ್ಯಾಟರಿ ಅಳವಡಿಕೆ

ಮೊಟ್ಟಮೊದಲಿಗೆ ಇಲೆಕ್ಟ್ರಾನಿಕ್ ಡಿವೈಸ್‌ಗಳಾದ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಅಥವಾ ಕ್ಲಾಕ್‌ ರೇಡಿಯೋಗಳಲ್ಲಿ ಬ್ಯಾಟರಿ ಅಳವಡಿಕೆಯ ಅವ್ಯವಸ್ಥೆ ಸ್ಫೋಟಕ್ಕೆ ಕಾರಣವಾಗುತ್ತದೆ. ಬ್ಯಾಟರಿಯೊಂದೆ ಸ್ಫೋಟಕ್ಕೆ ಕಾರಣವಲ್ಲ.

ಚಾರ್ಜರ್‌ ಮತ್ತು ಬ್ಯಾಟರಿ

ಚಾರ್ಜರ್‌ ಮತ್ತು ಬ್ಯಾಟರಿ

ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟರಿ ಅಥವಾ ಡಿವೈಸ್‌ ಚಾರ್ಜರ್‌ಗಳು ಒರಿಜಿನಲ್‌ ಅಗಿರದಿದ್ದಲ್ಲಿ ಡಿವೈಸ್‌ ಸ್ಫೋಟಕ್ಕೆ ಕಾರಣವಾಗುತ್ತದೆ.

ಲಿಥಿಯಂ ಬ್ಯಾಟರಿಗಳು

ಲಿಥಿಯಂ ಬ್ಯಾಟರಿಗಳು

ಸ್ಮಾರ್ಟ್‌ಫೋನ್‌ಗಳು ಬೆಂಕಿ ಹೊತ್ತಿಕೊಳ್ಳಲು ಲಿಥಿಯಂ ಬ್ಯಾಟರಿಗಳಲ್ಲಿನ ಥರ್ಮಲ್‌ ಹರಿಯುವುದು ಕಾರಣ. ಯಾವಾಗ ಬ್ಯಾಟರಿಯು ಹೆಚ್ಚು ಶಾಖವನ್ನು ಪಡೆಯುತ್ತದೋ ಅಂತಹ ಸಂದರ್ಭದಲ್ಲಿ ಲಿಥಿಯಂ ಬ್ಯಾಟರಿಗಳಲ್ಲಿ ಥರ್ಮಲ್‌ ಹರಿಯುವುದು ಕಾರಣವಾಗಿದೆ. ಇಂತಹ ಬ್ಯಾಟರಿಗಳು ಹೆಚ್ಚಿನ ಬೆಲೆಯು ಸಹ ಅಲ್ಲ. ಇವುಗಳನ್ನು ಅಪರಿಚಿತ ಕಂಪನಿಗಳು ತಯಾರಿಸಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತವೆ.

 ತೆಳುವಾದ ಬ್ಯಾಟರಿಗಳು

ತೆಳುವಾದ ಬ್ಯಾಟರಿಗಳು

ಇತ್ತೀಚಿನ ಸೆಲ್‌ಫೋನ್ ಬ್ಯಾಟರಿಗಳು ಹೆಚ್ಚು ತೆಳುವಾಗಿರುತ್ತವೆ. ಅವುಗಳನ್ನು ವ್ಯವಸ್ಥೆ ಮಾಡುವ ಪಾಸಿಟಿವ್ ಮತ್ತು ನೆಗೆಟಿವ್‌ ಪ್ಲೇಟ್‌ ಪ್ರದೇಶವು ಕಡಿಮೆಯಾಗಿರುತ್ತದೆ. ಇದರಿಂದ ಚಾರ್ಜಿಂಗ್‌ ಮಾಡುವ ವೇಳೆ ಹೆಚ್ಚು ಸಮಯ ಚಾರ್ಜಿಂಗ್‌ ಅಳವಡಿಸುವುದರಿಂದ ಓವರ್‌ ಚಾರ್ಜ್‌ನಿಂದ ಸಮಸ್ಯೆಗಳು ಉಂಟಾಗುತ್ತವೆ.

ಬ್ಯಾಟರಿ ತಯಾರಕರು

ಬ್ಯಾಟರಿ ತಯಾರಕರು

ಬ್ಯಾಟರಿ ತಯಾರಕರು ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಪಾಲಿಸಿ ಉತ್ತಮ ಬ್ಯಾಟರಿ ತಯಾರಿಸಬಹುದು. ಆದರೆ ಅವರು ಹಣ ಉಳಿಸುವ ಉದ್ದೇಶದಿಂದ 'ಬ್ಯಾಟರಿ ಹೆಚ್ಚು ಶಾಖ ಪಡೆದಲ್ಲಿ ಸರ್ಕ್ಯೂಟ್ ಡಿಸ್‌ಕನೆಕ್ಟ್‌ ಪಡೆಯುವ ಪ್ಯೂಸ್‌' ಅನ್ನು ಅಳವಡಿಸಿರುವುದಿಲ್ಲ. ಪ್ಯೂಸ್ ಅಳವಡಿಕೆ ಮಾಡದ ಕಾರಣ ಹೆಚ್ಚು ಅಪಾಯಕಾರಿ.

ರಾತ್ರಿ ವೇಳೆ  ಚಾರ್ಜಿಂಗ್‌

ರಾತ್ರಿ ವೇಳೆ ಚಾರ್ಜಿಂಗ್‌

ಪ್ಯೂಸ್ ಅಳವಡಿಸದ ಕಾರಣ ರಾತ್ರಿ ಸಂಪೂರ್ಣ ಪೋನ್‌ ಚಾರ್ಜ್‌ ಅನ್ನು ಮಲಗುವ ಸ್ಥಳದ ಪಕ್ಕದ ಟೇಬಲ್‌ನಲ್ಲಿ ಚಾರ್ಜ್‌ಗೆ ಹಾಕಿ ಮಲಗುವುದು ಹೆಚ್ಚಿನ ಅಪಾಯಕಾರಿಯಾಗಿದೆ.

 ಅನಿರೀಕ್ಷಿತ ಬ್ಯಾಟರಿ ಸ್ಫೋಟ ತಡೆಗಟ್ಟುವುದು ಹೇಗೆ?

ಅನಿರೀಕ್ಷಿತ ಬ್ಯಾಟರಿ ಸ್ಫೋಟ ತಡೆಗಟ್ಟುವುದು ಹೇಗೆ?

ಕಡಿಮೆ ಬೆಲೆಯ ಬ್ಯಾಟರಿ ಖರೀದಿ ಅಂದರೆ ಎಲ್ಲರಿಗೂ ಹೆಚ್ಚಿನ ಖುಷಿ ಇರಬಹುದು. ಆದರೆ ದೇಹಕ್ಕೆ ಜೀವಕ್ಕೆ ಅಪಾಯವಾದರೆ ಎಂಬುದನ್ನು ನೆನಪಿಸಿಕೊಳ್ಳಿ. ಆದ್ದರಿಂದ ತಯಾರಕರ ಒರಿಜಿನಲ್‌ ಬ್ಯಾಟರಿಯನ್ನು ಮಾತ್ರ ಉಪಯೋಗಿಸಿ.

ಡಿವೈಸ್‌ಗಳ ಸ್ಥಾನ

ಡಿವೈಸ್‌ಗಳ ಸ್ಥಾನ

ನಿಮ್ಮ ಡಿವೈಸ್‌ಗಳನ್ನು ಹೆಚ್ಚಿನ ಶಾಖವಿರುವ (ಬಿಸಿ) ಸ್ಥಳದಲ್ಲಿ ಇಡಬೇಡಿ. ಅದರಲ್ಲೂ ಚಾರ್ಜಿಂಗ್‌ ಆಗುವ ಪ್ರದೇಶ ಶಾಖ ಇರುವ ಪ್ರದೇಶವಾಗಿರದಿರಲಿ.

ಚಾರ್ಜಿಂಗ್‌ ಆಗುವ ವೇಳೆಯಲ್ಲಿ ಡಿವೈಸ್‌ ಬಳಕೆ ಅಪಾಯ

ಚಾರ್ಜಿಂಗ್‌ ಆಗುವ ವೇಳೆಯಲ್ಲಿ ಡಿವೈಸ್‌ ಬಳಕೆ ಅಪಾಯ

ಚಾರ್ಜಿಂಗ್ ಆಗುವ ವೇಳೆಯಲ್ಲಿ ಡಿವೈಸ್‌ ಬಳಕೆ ಮಾಡುವುದು ಹೆಚ್ಚು ಅಪಾಯಕಾರಿ. ಅಲ್ಲದೇ ಸಂಪೂರ್ಣ ರಾತ್ರಿ ಡಿವೈಸ್ ಅನ್ನು ಚಾರ್ಜಿಂಗ್‌ನಲ್ಲಿಡುವುದು ಎಂದಿಗೂ ಅಪಾಯಕಾರಿ.

ಲಿ-ಐಯಾನ್‌ ಬ್ಯಾಟರಿಗಳು/ಶೇಕಡ 50 ರಷ್ಟು ಜಾರ್ಜಿಂಗ್

ಲಿ-ಐಯಾನ್‌ ಬ್ಯಾಟರಿಗಳು/ಶೇಕಡ 50 ರಷ್ಟು ಜಾರ್ಜಿಂಗ್

ಶೇಕಡ 50 ರಷ್ಟು ಜಾರ್ಜಿಂಗ್ ಅನ್ನು ಹೊಂದುವುದು ಉತ್ತಮ. ಲಿ-ಐಯಾನ್‌ ಬ್ಯಾಟರಿಗಳು ಇತರೆ ಬ್ಯಾಟರಿಗಳಂತೆ ಮೆಮೊರಿ ಸಮಸ್ಯೆಗಳಿಂದ ಬಳಲುವುದಿಲ್ಲ. ಆದರೆ ಕಡಿಮೆ ವೋಲ್ಟೇಜ್‌ ಇದ್ದಲ್ಲಿ ಹಾನಿಗೊಳಗಾಗುತ್ತವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್

Best Mobiles in India

Read more about:
English summary
How to stop your smartphone battery exploding. along with some tips to prevent your smartphone battery from exploding. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X