ಆಫರ್ ಮುಗಿದರೂ ಜಿಯೋ ಉಚಿತವಾಗಿರುವುದೇಕೆ?..ಎಷ್ಟು ದಿನ ಈ ಆಫರ್?
ಧನ್ ಧನಾ ಧನ್ ಆಪರ್ ರೀಚಾರ್ಜ್ ಮಾಡಿಸದಿದ್ದರೆ ಏನು? ರೀಚಾರ್ಜ್ ಮಾಡಿಸದಿದ್ದರೂ ಎಷ್ಟು ದಿವಸ ಉಚಿತ ಆಫರ್ ಸಿಗುತ್ತದೆ ಎಂಬ ಪ್ರಶ್ನೆಗಳು ಜಿಯೋ ಗ್ರಾಹರೆಲ್ಲರಲ್ಲಿಯೂ ಮೂಡಿವೆ.!!
ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಮುಂದುವರೆಯುತ್ತಿರುವುದು ಜಿಯೋ ಗ್ರಾಹಕರಿಗೆ ಶಾಕ್ ಜೊತೆಗೆ ಆನಂದವೂ ಆಗಿದೆ. ರೀಚಾರ್ಜ್ ಮಾಡಿಸದಿದ್ದವರೂ ಸಹ ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವರೆಸುತ್ತಿದ್ದು, ಎಲ್ಲರಲ್ಲಿಯೂ ಕುತೋಹಲ ಮೂಡಿಸುತ್ತಿದೆ.!!
ಜಿಯೋ ಸೇವೆ ಮತ್ತೆ ಉಚಿತವಾಗಿದೆಯೆ? ಏಪ್ರಿಲ್ 15ರ ನಂತರವೂ ಉಚಿತ ಸೇವೆ ಮುಂದುವರೆಯುತ್ತಿದರುವುದೇಕೆ.? ಧನ್ ಧನಾ ಧನ್ ಆಪರ್ ರೀಚಾರ್ಜ್ ಮಾಡಿಸದಿದ್ದರೆ ಏನು? ರೀಚಾರ್ಜ್ ಮಾಡಿಸದಿದ್ದರೂ ಎಷ್ಟು ದಿವಸ ಉಚಿತ ಆಫರ್ ಸಿಗುತ್ತದೆ ಎಂಬ ಪ್ರಶ್ನೆಗಳು ಜಿಯೋ ಗ್ರಾಹರೆಲ್ಲರಲ್ಲಿಯೂ ಮೂಡಿವೆ.!!
ಓದಿರಿ: ಗೂಗಲ್ ಡೂಡಲ್ ಏಕಿಷ್ಟು ಪ್ರಸಿದ್ದ? ಅಣ್ಣವ್ರಾ ಆಯ್ಕೆಗೊಂದು ಇಂಟ್ರೆಸ್ಟಿಂಗ್ ಸ್ಟೋರಿ!!
ಹಾಗಾಗಿ, ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಏಕೆ ನೀಡುತ್ತಿದೆ.? ಕಾರಣ ಏನು.? ಜಿಯೋ ಷರತ್ತುಗಳು ಏನಿತ್ತು? ರೀಚಾರ್ಜ್ ಮಾಡಿಸದಿದ್ದರೂ ಎಷ್ಟು ದಿವಸ ಉಚಿತ ಆಫರ್ ಸಿಗುತ್ತದೆ ಎಂಬ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಧನ್ ಧನಾ ಧನ್ ಆಫರ್ ಉಚಿತ ಸೇವೆ ಮುಂದುವರೆಯಲು ಕಾರಣ!!
ಧನ್ ಧನಾ ಧನ್ ಆಫರ್‌ನಲ್ಲಿ ಜಿಯೋ ಷರತ್ತುಗಳು ಏನಿತ್ತು ಎಂಬುದನ್ನು ತಿಳಿದರೆ ಜಿಯೋ ಉಚಿತ ಸೇವೆ ಏಪ್ರಿಲ್ 15ರ ನಂತರವೂ ಏಕೆ ಮುಂದುವರೆಯುತ್ತಿದೆ ಎಂಬುದಕ್ಕೆ ಕಾರಣ ಸಿಗುತ್ತದೆ. ಸಮ್ಮರ್ ಸರ್‌ಪ್ರೈಸ್ ಆಫರ್ ನಂತರ ಬಂದ ಜಿಯೋ ಷರತ್ತುಗಳು ಬದಲಾಗಿದ್ದು, ಏಪ್ರಿಲ್ 15 ಕ್ಕೆ ಜಿಯೋ ಉಚಿತ ಸೇವೆ ನಿಲ್ಲಿಸುವ ಸೂಚನೆ ಇಲ್ಲ.!!

ಟ್ರಾಯ್ ಪ್ರಶ್ನಿಸಿಲ್ಲಾ.!!
ಸಮ್ಮರ್ ಸರ್‌ಪ್ರೈಸ್ ಆಫರ್ ನಿಲ್ಲಿಸಲು ಸೂಚನೆ ನೀಡಿದ್ದ ಟ್ರಾಯ್ ಜಿಯೋ ಧನ್ ಧನಾ ಧನ್ ಆಫರ್ ಬಗ್ಗೆ ಪ್ರಶ್ನೆ ಎತ್ತಿಲ್ಲ.!! ಹೌದು, ಟ್ರಾಯ್ ಜಿಯೋಗೆ ಬೆಂಬಲ ನೀಡುತ್ತಿದೆ ಎನ್ನುವ ಊಹಾಪೋಹಗಳಿಗೆ ಇದು ಸಾಕ್ಷಿಯಾಗಿದ್ದು, ಜಿಯೋ ಉಚಿತಸೇವೆ ಮತ್ತೆ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ.

ಜಿಯೋ ಸಿಮ್ ಕೊನೆಯಾಗೊಲ್ಲಾ.!!
ಹೌದು, ನೀವು ಉಪಯೋಗಿಸುತ್ತಿರುವ ಜಿಯೋ ಸಿಮ್ ಸೇವೆ ಕೊನೆಗೊಳ್ಳುವುದಿಲ್ಲ. ರೀಚಾರ್ಜ್ ಮಾಡಿಸದಿದ್ದರೆ ಜಿಯೋ ಉಚಿತ ಸೇವೆ ನಿಲ್ಲಿಸಲಾಗುವುದು ಎಂದು ಮೆಸೇಜ್ ಪಡೆಯುತ್ತಿದ್ದರೂ ಸಹ, ಜಿಯೋ ಸೇವೆ ಇನ್ನು ಆರು ತಿಂಗಳು ಮುಂದುವರೆಯುವುದು. ಆದರೆ, 1GB ಡೇಟಾ ಪಡೆಯಲು ಸಾಧ್ಯವಿಲ್ಲಾ.!!

ಉಚಿತ ಸೇವೆ ಮುಂದುವರೆಯುವುದು ಈ ತಿಂಗಳವರೆಗೆ ಮಾತ್ರ!!
ಜಿಯೋ ಉಚಿತ ಸೇವೆ ಏಪ್ರಿಲ್ 15ರ ನಂತರ ಕೊನೆಗೊಳ್ಳುತ್ತದೆ ಎಂದು ಅಂಬಾನಿ ಹೇಳಿದ್ದರು. ಆದರೆ ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಮುಂದುವರೆಯುತ್ತಿದೆ.!! ಇದು ಅಂಬಾನಿಯ ಮತ್ತೊಂದು ಪ್ಲಾನ್ ಆಗಿದ್ದು, ಟೆಲಿಕಾಂ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳ ಕೊನೆವರೆಗೂ ಜಿಯೋ ಉಚಿತವಾಗಿರಲಿದೆ.!!
ಓದಿರಿ:3 ತಿಂಗಳು ಸಂಪೂರ್ಣ ಉಚಿತ ಡೇಟಾ ಘೊಷಿಸಿದ ಏರ್‌ಟೆಲ್.! ಟೆಲಿಕಾಂಗೆ ಶಾಕ್..!!


Click it and Unblock the Notifications








