Subscribe to Gizbot

ಜಿಯೋ ಸಮ್ಮರ್ ಆಫರ್ ಬಗ್ಗೆ ನಿಮಗೆಷ್ಟು ಗೊತ್ತು? ಮೂಡಿರುವ 5 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!!

Written By:

ಆರು ತಿಂಗಳು ಉಚಿತ ಆಫರ್ ನಂತರವೂ ಜಿಯೋ ಮತ್ತೆ ಮೂರು ತಿಂಗಳ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದು ಎಲ್ಲರಿಗೂ ಗೊತ್ತೇ ಇದೆ.!! ಜಿಯೊ ಗ್ರಾಹಕರನ್ನು ತನ್ನ ಪ್ರೈಮ್ ತೆಕ್ಕೆಗೆ ಹಾಕಿಕೊಳ್ಳಲು ಜಿಯೋ, ಈ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಿದ್ದು, ಇದರಿಂದ ಬಹುತೇಕ ಮತ್ತೆ ಮೂರು ತಿಂಗಳು ಜಿಯೋ ಅನ್‌ಲಿಮಿಟೆಡ್ ಸೇವೆಯನ್ನು ಎಂಜಾಯ್ ಮಾಡಬಹುದಾಗಿದೆ.!!

 ಓದಿರಿ: ಸ್ವಿಚ್‌ಆಫ್ ಮಾಡಿ ಚಾರ್ಜ್‌ಗೆ ಹಾಕಿದರೆ ಮೊಬೈಲ್ ಸ್ಪೋಟವಾಗುವುದಿಲ್ಲವೇ?

ಇಷ್ಟುದಿವಸ ಪೂರ್ತಿ ಉಚಿತವಾಗಿದ್ದ ಜಿಯೋ ಸೇವೆ ಇದೀಗ ಸ್ವಲ್ಪ ಕ್ಲಿಷ್ಟಕರವಾಗಿದೆ.? ಸಮ್ಮರ್ ಸರ್‌ಪ್ರೈಸ್ ಆಫರ್ ಎಂದರೆ ಪೂರ್ತಿ ಉಚಿತವೇ? ಸಮ್ಮರ್ ಆಫರ್ ಹೇಗೆ ಪಡೆದುಕೊಳ್ಳುವುದು.? ಪ್ರೈಮ್ ರೀಚಾರ್ಜ್ ಮಾಡಿಸದೇ ಸಮ್ಮರ್ ಸರ್‌ಪ್ರೈಸ್ ಆಫರ್ ದೊರೆಯುವುದೇ? ಎಂಬ ಹಲವು ಪ್ರಶ್ನೆಗಳು ಜಿಯೋ ಗ್ರಾಹಕರನ್ನು ಕಾಡುತ್ತಿವೆ.!!

ಓದಿರಿ: ಜಿಯೋ ಡಿಟಿಹೆಚ್ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!!

ಹಾಗಾಗಿ, ನಾವು ಜಿಯೋ ಸಮ್ಮರ್ ಆಫರ್‌ ಬಗ್ಗೆ ಮೂಡುವ 5 ಪ್ರಶ್ನೆಗಳನ್ನು ಪಟ್ಟಿಮಾಡಿ. ಅವುಗಳಿಗೆ ಸೂಕ್ತ ಉತ್ತರವನ್ನು ನಿಡಲು ಪ್ರಯತ್ನಿಸಿದ್ದೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ ಬಗ್ಗೆ ಮೂಡಿರುವ 5 ಪ್ರಶ್ನೆಗಳಿಗೆ ಉತ್ತರವಿದ್ದು, ಅವುಗಳು ಯಾವುವು ಎಂಬುದನ್ನು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ರಿಲಯನ್ಸ್ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ ಏನನ್ನು ಹೊಂದಿದೆ.?

#1 ರಿಲಯನ್ಸ್ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ ಏನನ್ನು ಹೊಂದಿದೆ.?

ಆರು ತಿಂಗಳು ಉಚಿತ ಆಫರ್ ನಂತರ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಿದ್ದು, ಈ ಆಫರ್‌ನಲ್ಲಿ 303 ರೂಪಾಯಿಯ ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಮತ್ತೆ ಮೂರು ತಿಂಗಳ ಜಿಯೋ ಅನ್‌ಲಿಮಿಟೆಡ್ ಸೇವೆಯನ್ನು ಪಡೆಯಬಹುದು.!!

#2 ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ಗೆ ಯಾರು ಅರ್ಹರು?

#2 ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ಗೆ ಯಾರು ಅರ್ಹರು?

ಜಿಯೋ ಪ್ರೈಮ್ ರೀಚಾರ್ಜ್ ಮಾಡಿಸಿರುವ ಎಲ್ಲಾ ಜಿಯೋ ಗ್ರಾಹಕರು ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಕು ಅರ್ಹರಿದ್ದಾರೆ. ಏಪ್ರಿಲ್ 15 ರ ಒಳಗಾಗಿ ಪ್ರೈಮ್‌ ಮೆಂಬರ್‌ಶಿಪ್ ಮತ್ತು 303 ರೂಪಾಯಿ ಮೇಲ್ಪಟ್ಟು ರೀಚಾರ್ಜ್ ಮಾಡಿಸಿ ಈ ಆಫರ್ ಎಂಜಾಯ್ ಮಾಡಬಹುದು.!!

#3 ಪ್ರೈಮ್ ರೀಚಾರ್ಜ್ ಮಾಡಿಸದೇ ಸಮ್ಮರ್ ಸರ್‌ಪ್ರೈಸ್ ಆಫರ್ ದೊರೆಯುವುದೇ?

#3 ಪ್ರೈಮ್ ರೀಚಾರ್ಜ್ ಮಾಡಿಸದೇ ಸಮ್ಮರ್ ಸರ್‌ಪ್ರೈಸ್ ಆಫರ್ ದೊರೆಯುವುದೇ?

ಖಂಡಿತ ಸಾಧ್ಯವಿಲ್ಲಾ.!! ಹೌದು, ಜಿಯೋ ಪ್ರೈಮ್‌ ರೀಚಾರ್ಜ್ ಮಾಡಿಸದೇ ಇರುವವರು ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆಯಲು ಅರ್ಹವಿರುವುದಿಲ್ಲ. ಹಾಗಾಗಿ, ಏಪ್ರಿಲ್ 15 ರ ಒಳಗಾಗಿ ಪ್ರೈಮ್‌ ಮೆಂಬರ್‌ಶಿಪ್ ಪಡೆಯಬೇಕು?

#4 ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ?

#4 ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ?

ಈಗಾಗಲೇ ಜಿಯೋ ಪ್ರೈಮ್‌ ರೀಚಾರ್ಜ್ ಮಾಡಿಸಿರುವ ಜಿಯೋ ಗ್ರಾಹಕರು ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ಗೆ ಅರ್ಹರಾಗಿರುತ್ತಾರೆ. ಹಾಗಾಗಿ, ಏಪ್ರಿಲ್ 15ರ ಒಳಗಾಗಿ 303 ರೂಪಾಯಿ ರೀಚಾರ್ಜ್ ಮಾಡಿಸಿ ಮೂರು ತಿಂಗಳ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಎಂಜಾಯ್ ಮಾಡಿ.

#5 149 ರೂಪಾಯಿ ರೀಚಾರ್ಜ್ ಮಾಡಿಸಿದರೆ?

#5 149 ರೂಪಾಯಿ ರೀಚಾರ್ಜ್ ಮಾಡಿಸಿದರೆ?

ಈಗಾಗಲೇ ಜಿಯೋ ಪ್ರೈಮ್‌ ರೀಚಾರ್ಜ್ ಮಾಡಿಸಿದ್ದು, ಜಿಯೋ ಆಫರ್‌ನ 149 ರೂಪಾಯಿ ರೀಚಾರ್ಜ್ ಮಾಡಿಸಿದರೆ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್‌ ಪಡೆಯಲು ಸಾಧ್ಯವಿಲ್ಲಾ. ಹಾಗಾಗಿ, 03 ರೂಪಾಯಿ ರೀಚಾರ್ಜ್ ಮಾಡಿಸಿ ಮೂರು ತಿಂಗಳ ಅನ್‌ಲಿಮಿಟೆಡ್‌ ಸೇವೆಯನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Summer Surprise offer gives three months of free usage. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot