Home
ಟೆಕ್ ನೌಕರಿ

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

By Ashwath

ಇಂಟರ್‌ನೆಟ್‌ನಲ್ಲಿ ಹ್ಯಾಕರ್‌ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.ದೊಡ್ಡ ದೊಡ್ಡ ವ್ಯಕ್ತಿಗಳ, ಕಂಪೆನಿಗಳ ವೆಬ್‌ಸೈಟ್‌ಗಳು, ಇಮೇಲ್‌, ಟ್ವೀಟರ್‌ ಖಾತೆಗಳು ಹ್ಯಾಕ್‌ ಆಗುತ್ತಿದೆ.ಹೀಗಾಗಿ ಎಷ್ಟೇ ನಾವು ಪಾಸವರ್ಡ್ ಸುರಕ್ಷತೆ ಮಾಡಿದ್ರೂ ನಮ್ಮ ಸಣ್ಣ ತಪ್ಪಿನಿಂದಾಗಿ ಹ್ಯಾಕರ್‌ಗಳು ನಮ್ಮ ಪಾಸ್‌ವರ್ಡ್‌ಗಳನ್ನು ಕಂಡುಹಿಡಿದು ಏನೇನೋ ಫೋಟೋಗಳನ್ನು ಪೋಸ್ಟ್‌ ಮಾಡುತ್ತಾರೆ.ಹೀಗಾಗಿ ದೊಡ್ಡ ದೊಡ್ಡ ಟೆಕ್‌ ಕಂಪೆನಿಗಳು ಪಾಸ್‌ವರ್ಡ್‌ ಸುರಕ್ಷತೆಗೆ ಟಿಪ್ಸ್‌ ಕೊಡುತ್ತಿವೆ.ಗೂಗಲ್‌ ಈ ನಿಟ್ಟಿನಲ್ಲಿ ಹೊಸದೊಂದು ಪಾಸ್‌ವರ್ಡ‌ ಕಂಡುಹಿಡಿಯವ ಬಗ್ಗೆ ಸುಳಿವು ನೀಡಿತ್ತು. ಆದರೆ ಗೂಗಲ್‌ ಮಾಲೀಕತ್ವದ ಮೊಟರೊಲಾ ಕಂಪೆನಿ ನಾವು ಬಳಸುವ ಬದಲಿಗೆ ಹೊಸದೊಂದು ಪಾಸ್‌ವರ್ಡ್‌ನ್ನು ಸಂಶೋಧನೆ ಮಾಡಲು ಚಿಂತಿಸಿದೆ.

ಮೊಟರೊಲಾ ಹೊಸ ಪಾಸ್‌ವರ್ಡ್‌ ಕಂಡುಹಿಡಿಯಲು ಮುಂದಾಗಿದ್ದು ಟೆಕ್‌ ಪಂಡಿತರು ಈ ಪಾಸ್‌ವರ್ಡ್ ಬಗ್ಗೆ ಭಾರೀ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹೊಸ ಪಾಸ್‌ವರ್ಡ್ ಹೇಗೆ ಇರುತ್ತದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟೊರೊಲಾ ಕಂಪೆನಿ ಪಾಸ್‌ವರ್ಡ್ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆ ನೀಡಿದ್ದು ಈಗ ಇರುವ ಪಾಸವರ್ಡ್ ಬದಲಿಗೆ ಎಲೆಕ್ಟ್ರಾನಿಕ್ ಟ್ಯಾಟೋ ಅಥವಾ ಬಯೋಸ್ಟ್ಯಾಂಪ್‌ ಪಾಸ್‌ವರ್ಡ್ ಸಂಶೋಧನೆಗೆ ಮುಂದಾಗಿದೆ.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ದೇಹದಲ್ಲಿ ಟ್ಯಾಟೋಗಳು ಹೇಗೆ ಹಚ್ಚುತ್ತೇವೋ ಅದೇ ರೀತಿಯಾಗಿ ಈ ಟ್ಯಾಟೋಗಳನ್ನು ನಮ್ಮ ದೇಹದ ಯಾವ ಭಾಗಕ್ಕೂ ಅಂಟಿಸಿ ಸುಲಭವಾಗಿ ಇಮೇಲ್‌ ಅಕೌಂಟ್,ಮೊಬೈಲ್‌ನ್ನು ಓಪನ್‌ ಮಾಡಬಹುದು.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಎಲೆಕ್ಟ್ರಾನಿಕ್ ಟ್ಯಾಟೋವನ್ನು ಸಿಲಿಕಾನ್‌ನಿಂದ ಮಾಡಿದ್ದು, ಸಣ್ಣ ಸರ್ಕ್ಯೂಟ್‌, ಅಂಟೆನಾ,ಸೆನ್ಸಾರ್‌ಗಳು ಈ ಟ್ಯಾಟೋದೊಳಗೆ ಇದೆ. ಈ ಟ್ಯಾಟೋವಿರುವ ದೇಹದ ಭಾಗವನ್ನು ಮೊಬೈಲ್‌ಗಳು/ಕಂಪ್ಯೂಟರ್‌ಗಳ ಎದುರು ಹಿಡಿದಾಗ ಅವು ಸ್ಕ್ಯಾನ್‌ ಮಾಡಿ ಅಕೌಂಟ್‌ ಓಪನ್‌ ಆಗುತ್ತವೆ.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಈ ಟ್ಯಾಟೋಗಳು ಅಧಿಕೃತ ವ್ಯಕ್ತಿಯ ದೇಹದಲ್ಲಿರುವುದರಿಂದ ಪಾಸ್‌ವರ್ಡ್ ಹ್ಯಾಕ್‌ ಆಗಲು ಸಾಧ್ಯವಿಲ್ಲ ಎಂದು ಮೊಟೊರೊಲಾ ಕಂಪೆನಿ ಹೇಳಿದೆ.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಈ ಬಯೋಸ್ಟ್ಯಾಂಪ್‌ಗಳನ್ನು ಅಮೆರಿಕದ ಮೆಸಾಚುಸೆಟ್ಸ್‌‌‌ ಇನ್ಸಿಟಿಟ್ಯೂಟ್‌‌ ಆಫ್‌‌ ಟೆಕ್ನಾಲಜಿ (ಎಂಐಟಿ )ಸಂಶೋಧಕರು ಕಂಡುಹಿಡಿದಿದ್ದಾರೆ.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ರೋಗಿಯ ಆರೋಗ್ಯವನ್ನು ಕ್ಷಣಮಾತ್ರದಲ್ಲಿ ಕಂಡು ಹಿಡಿಯಲು ಈ ಬಯೋಸ್ಟ್ಯಾಂಪ್‌ನ್ನು ಎಂಐಟಿ ಸಂಶೋಧಕರು ಅಭಿವೃದ್ಧಿಪಡಿಸಿದ್ದು,ಇದೇ ಐಡಿಯಾವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಪಾಸ್‌ವರ್ಡ್ ಆಗಿ ಬಳಕೆ ಮಾಡಲು ಮೊಟೊರೊಲಾ ಮುಂದಾಗಿದೆ.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಈ ಎಲೆಕ್ಟ್ರಾನಿಕ್‌ ಅಮೆರಿಕದ ಆಹಾರ ಮತ್ತು ಔಷಧ ಮಂಡಳಿ ಈ ಬಯೋಸ್ಟ್ಯಾಂಪ್‌ಗಳನ್ನು ಬಳಕೆಗೆ ಈಗಾಗಲೇ ಅನುಮತಿಯನ್ನು ನೀಡಿದೆ.

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

ಮೊಟರೊಲಾದಿಂದ ಹೊಸ ಪಾಸ್‌ವರ್ಡ್!

2014ರಲ್ಲಿ ಈ ಹೊಸ ರೀತಿಯ ಪಾಸ್‌ವರ್ಡ್ ತಂತ್ರಜ್ಞಾನವನ್ನು ವಿಶ್ವದ ಜನರಿಗೆ ಪರಿಚಯಿಸಲಿದ್ದೇವೆ ಎಂದು ಮೊಟರೊಲಾ ಹೇಳಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+