ಗೂಗಲ್‌ನಿಂದ ಹೊಸ ಪಾಸ್‌ವರ್ಡ್

Posted By: Staff

ಪಾಸ್‌ವರ್ಡ್ ಸಮಸ್ಯೆ ಉಳ್ಳವರಿಗೆ ಗೂಗಲ್‌ನಿಂದ ಒಂದು ಗುಡ್‌ ನ್ಯೂಸ್‌. ಇನ್ನುಮುಂದೆ ಈಗ ಇರುವಂತಹ ಪಾಸ್‌ವರ್ಡ್‌ ಬದಲಿಗೆ ನೀವು ಯುಎಸ್‌ಬಿ ಕೀಯನ್ನು ಪಾಸ್‌ವರ್ಡ್ ಆಗಿ ಬಳಸಬಹುದು.

ಈಗಾಗ್ಲೇ ಪಾಸ್‌ವರ್ಡ್ ಸಮಸ್ಯೆ ಇಂಟರ್‌ನೆಟ್‌ನಲ್ಲಿ ದೊಡ್ಡ ಸಮಸ್ಯೆ ಆಗಿಬಿಟ್ಟಿದೆ. ಕೆಲವು ಹ್ಯಾಕರ್‌ಗಳು ತುಮ್ಮ ಕುತಂತ್ರದಿಂದ ಬೇರೆಯವರ ಇ ಮೈಲ್‌ ಹ್ಯಾಕ್‌ ಮಾಡಿ ಪಾಸ್‌ವರ್ಡ್ ಬದಲಿಸಿ ಅವರ ಅಕೌಂಟ್‌ನಲ್ಲಿರುವ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುತ್ತಿರುವುದು ಈಗ ಹೆಚ್ಚಾಗುತ್ತಿದೆ.ಹಾಗಾಗಿ ಗೂಗಲ್‌ಗೆ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೂಗಲ್‌ ಮುಂದಿನ ದಿನಗಳಲ್ಲಿ ಹೊಸ ರೀತಿಯಲ್ಲಿ ಪಾಸ್‌ವರ್ಡ್‌ ಕೀ ಜಾರಿಗೆ ತರಲಿದೆ.

ಗೂಗಲ್‌ನಿಂದ ಹೊಸ ಪಾಸ್‌ವರ್ಡ್

ಗೂಗಲ್ ಯಾವ ರೀತಿಯಲ್ಲಿ ಪಾಸ್‌ವರ್ಡ್‌ ಕೀ ಬಳಸುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಕೆಲವೊಂದು ಮಾಹಿತಿಗಳ ಪ್ರಕಾರ ಗೂಗಲ್‌ ಎರಡು ರೀತಿಯ ಯೋಜನೆ ಹಾಕಿಕೊಂಡಿದೆ.

ಒಂದನೆಯದು ಈಗ ಇರುವ ಪಾಸ್‌ವರ್ಡ್ ಬದಲಿಗೆ USB ಪೋರ್ಟ್‌ಗೆ ಕನೆಕ್ಟ್‌ ಮಾಡುವಂತಹ ಒಂದು ಯುಬಿ ಕೀ ತಯಾರಿಸುವುದು. ಈ ಯುಬಿ ಕೀಯನ್ನು ನೀವು ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿ ನಿಮ್ಮ ಗೂಗಲ್‌ ಅಕೌಂಟ್‌ ಒಪನ್‌ ಮಾಡುವಂತೆ ರೂಪಿಸುವುದು.

ಎರಡನೆಯದು ಈಗಾಗ್ಲೇ ಕೆಲ ಮೊಬೈಲ್‌ಗಳಲ್ಲಿರುವ ವೈರ್‌ಲೆಸ್‌ ಚಿಪ್‌ ಇರುವ ಹಾಗೆ ಪಾಸ್‌ವರ್ಡ್‌ಗೆ ಸಂಬಂಧಿಸಿದಂತೆ ಚಿಪ್‌  ತಯಾರಿಸುವುದು.

ಈ ರೀತಿಯ ಗೂಗಲ್ ಪಾಸ್‌ವರ್ಡ್ ಯಾವಾಗ ಬರುತ್ತದೆ ಎನ್ನುವುದಕ್ಕೆ ಇನ್ನೂ ದಿನ ನಿಗದಿಯಾಗಿಲ್ಲ. ಒಟ್ಟಿನಲ್ಲಿ ಗೂಗಲ್‌ನ ಈ ಪ್ರಯೋಗ ಯಶಸ್ವಿಯಾದ್ರೆ ಗೂಗಲ್‌ ಬಳಸುವ ಗ್ರಾಹಕರ  ಇಂಟರ್‌ನೆಟ್‌ ಸೆಕ್ಯೂರಿಟಿ ಮತ್ತಷ್ಟು ಹೆಚ್ಚಾಗಲಿದೆ.

ಕಾಲಿವುಡ್‌ ಸ್ಟಾರ್‌ಗಳ ಕೈಯಲ್ಲಿ ಯಾವ ಫೋನಿದೆ ಗೊತ್ತಾ..?

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಕೊಡಿ. ಸರ್ಕಾರಕ್ಕೆ ಜ್ಞಾನ ಆಯೋಗ ಶಿಫಾರಸು

ವಿಶ್ವದ ಟಾಪ್‌ 25 ಐಟಿ ಸಿಟಿಗಳು ಇಲ್ಲಿವೆ ನೋಡಿ..

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot