Subscribe to Gizbot

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

Posted By:

ಫೇಸ್‌ಬುಕ್‌ ಬಳಕೆದಾರರು ಹೆಚ್ಚಾಗುತ್ತಿದ್ದಂತೆ, ಹ್ಯಾಕರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಫೇಸ್‌ಬುಕ್‌ ಅಕೌಂಟ್‌ನ್ನು ಹ್ಯಾಕ್‌ ಮಾಡಿ ಬಳಕೆದಾರನ ಮಾಹಿತಿಯನ್ನು ಖದಿಯುವ ಮಂದಿ ಹೆಚ್ಚಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಸುರಕ್ಷಿತವಾಗಿ ಫೇಸ್‌ಬುಕ್‌ ಬಳಸುವುದಕ್ಕೆ ಕೆಲವು ಟಿಪ್ಸ್‌ಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್ : ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟ್ರಾಂಗ್‌ ಪಾಸ್‌ವರ್ಡ್‌ ಬಳಸಿ

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಪಾಸ್‌ವರ್ಡ್‌ನಲ್ಲಿ ಕನಿಷ್ಟ 6 ನಂಬರ್‌ಗಳಿರಲಿ,ಸಂಖ್ಯೆ,ಪದಗಳನ್ನು ಮಿಶ್ರಣ ಮಾಡಿ ಪಾಸ್‌ವರ್ಡ್ ಕ್ರಿಯೆಟ್ ಮಾಡಿ.

ಲಾಗ್‌ಔಟ್‌ ಮಾಡುವುದನ್ನು ಮರೆಯಬೇಡಿ

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಯವಾಗಲೂ ಫೇಸ್‌ಬುಕ್‌ ಖಾತೆ ಕ್ಲೋಸ್‌ ಮಾಡುವಾಗ ಲಾಗ್‌ಔಟ್‌ ಮಾಡುವುದನ್ನು ಮಾತ್ರ ಮರೆಯಬೇಡಿ. ಅದರಲ್ಲಿಯೂ ಪಬ್ಲಿಕ್‌ ಕಂಪ್ಯೂಟರ್‌ ಹಾಗೂ ಬೇರೆಯವರ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆ ತೆರೆದಿದ್ದಲ್ಲಿ ಮರೆಯದೇ ಲಾಗ್‌ಔಟ್‌ ಮಾಡಿ. ಇದರಿಂದಾಗಿ ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಿಲ್ಲ.

ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಕೆಲವೊಂದು ವೈರಸ್‌ಗಳು ನೇರವಾಗಿ ನಮ್ಮ್ ಕಂಪ್ಯೂಟರ್‌ನ ಮೆಮೋರಿಯಲ್ಲಿ ಸೇವ್‌ ಆಗಿಬಿಡುತ್ತವೆ ನಂತರ ನಾವೂ ಯಾವುದೇ ಖಾತೆಯನ್ನು ತೆರೆದಲ್ಲಿ ಆ ಖಾತೆಯಲ್ಲಿನ ಮಾಹಿತಿಗಳನ್ನು ವೈರಸ್‌ ಹ್ಯಾಕ್‌ ಮಾಡಿಬಿಡುತ್ತದೆ. ಆದ್ದರಿಂದ ಮೊದಲಿಗೆ ನಿಮ್ಮ ಪಿಸಿಯನ್ನು ವೈರಸ್‌ನಿಂದ ಕಾಪಾಡಲು ಫೈರ್‌ವಾಲ್‌ ಪ್ರೊಟೆಕ್ಟರ್‌ ಆಕ್ಟೀವ್‌ ಮಾಡಿಕೊಳ್ಳಿ ಹಾಗೂ ಉತ್ತಮವಾದ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಸೆಕ್ಯೂರಿಟಿ ಪ್ರಶ್ನೆಗಳನ್ನು ಸೆಟ್‌ ಮಾಡಿಕೊಳ್ಳಿ

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಅಕೌಂಟ್‌ ಹ್ಯಾಕ್‌ ಆಗದಂತೆ ತಡೆಯಲು ಸೆಕ್ಯೂರಿಟಿ ಪ್ರಶ್ನೆಗಳನ್ನು ಆರಿಸುವ ಆಯ್ಕೆಯನ್ನು ನೀಡಿದೆ.ಬಳಕೆದಾರರು ಅಕೌಂಟ್‌ ಸೆಟ್ಟಿಂಗ್ಸ್‌ ಹೋಗಿ ಈ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ಫೇಸ್‌ಬುಕ್‌ ಅಕೌಂಟ್‌ನ್ನು ಸುರಕ್ಷಿತವಾಗಿಡಬಹುದು.

ಇಮೇಲ್‌ ಬಳಕೆ ಮಾಡುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಬಹಳಷ್ಟು ಮಂದಿ ತಮ್ಮ ಇಮೇಲ್‌ ಐಡಿಯನ್ನೇ ಫೇಸ್‌ಬುಕ್‌ನಲ್ಲಿ ದಾಖಲಿಸಿ ಅಕೌಂಟ್‌ ತೆರೆದಿರುತ್ತಾರೆ. ಹಾಗಾಗಿ ಈ ರೀತಿ ಅಕೌಂಟ್‌ ತೆರೆದವರು ಇಮೇಲ್‌ಗೆ ಬರುವಂತಹ ಮೇಲ್‌ಗಳಿಗೆ ಉತ್ತರ ನೀಡುವಾಗಲೋ, ಅಥವಾ ಬೇರೆ ವೆಬ್‌ಸೈಟ್‌ ಲಾಗಿನ್‌ ಅಗುವ ಸಂದರ್ಭದಲ್ಲಿ ಇದೇ ಪಾಸ್‌ವಾರ್ಡ್ ನೀಡಬೇಡಿ.

ಬೇರೆ ಬೇರೆ ಪಾಸ್‌ವರ್ಡ್ ಬಳಸಿ:

ಫೇಸ್‌ಬುಕ್‌ ಪಾಸ್‌ವರ್ಡ್ ಸುರಕ್ಷತೆಗಾಗಿ ಟಿಪ್ಸ್‌

ಮೊದಲೇ ತಿಳಿಸಿದಂತೆ ಬಹಳಷ್ಟು ಮಂದಿ ತಮ್ಮ ಇಮೇಲ್‌ ಐಡಿಯನ್ನೇ ಫೇಸ್‌ಬುಕ್‌ನಲ್ಲಿ ದಾಖಲಿಸಿ ಅಕೌಂಟ್‌ ತೆರೆದಿರುತ್ತಾರೆ. ಅಕೌಂಟ್‌ ಕ್ರಿಯೆಟ್‌ ಆದ ಮೇಲೂ ನಿಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲೇ ಪಾಸ್‌ವರ್ಡ್ ಬದಲಾಯಿಸಿಕೊಳ್ಳಬಹುದು.ಹಾಗಾಗಿ ನಿಮ್ಮ ಖಾಸಗಿ ವ್ಯವಹಾರಕ್ಕೆ ಫೇಸ್‌ಬುಕ್‌ ಮತ್ತು ಇಮೇಲ್‌ ಪಾಸ್‌ವರ್ಡ್‌ನ್ನು ಒಂದನ್ನೇ ಬಳಸದೇ ಬೇರೆ ಬೇರೆ ಪಾಸ್‌ವರ್ಡ್‌ ಬಳಸಿ
ನಿಮ್ಮ ಗಮನಕ್ಕೆ: ಫೇಸ್‌ಬುಕ್‌ನಲ್ಲಿ ಪಾಸ್‌ವರ್ಡ್ ಬದಲಾಯಿಸಿದ್ರೂ ಅದು ನಿಮ್ಮ ಇಮೇಲ್‌ ಐಡಿ ಪಾಸ್‌ವರ್ಡ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ನೀವು ನಿಮ್ಮ ಈಮೇಲ್‌ ಐಡಿಯನ್ನು ಹಳೇ ಪಾಸ್‌ವರ್ಡ್ ಹಾಕಿ ಓಪನ್‌ ಮಾಡಿದ್ರೆ ಫೇಸ್‌ಬುಕ್‌ನ್ನು ನಿಮ್ಮ ಇಮೇಲ್‌ ಐಡಿ ಜೊತೆಗೆ ಈಗ ಹೊಸದಾಗಿ ದಾಖಲಿಸಿರುವ ಪಾಸ್‌ವರ್ಡ್ ಹಾಕಿ ಓಪನ್‌ ಮಾಡಬಹುದು. ಈ ರೀತಿ ನೀವು ಮಾಡಿ ನಿಮ್ಮ ಫೇಸ್‌ಬುಕ್‌ನಲ್ಲಿ ಈ ಮೇಲ್‌ಗೆ ಬರುವಂತೆ ನೋಟಿಫಿಕೇಶನ್‌ ಸೆಟ್‌ ಮಾಡಿದ್ರೆ ಫೇಸ್‌ಬುಕ್‌ನ ಎಲ್ಲಾ ನೋಟಿಫಿಕೇಶನ್‌ಗಳು ನಿಮ್ಮ ಇಮೇಲ್‌ಗೆ ಬರುತ್ತವೆ. ಹಾಗಾಗಿ ಪಾಸ್‌ವರ್ಡ್‌ಗಳನ್ನು ನೆನಪಿಡಲು ಕಷ್ಟ ಎಂದು ಭಾವಿಸುವವರು ಒಂದೇ ಇಮೇಲ್‌ ಐಡಿ ಹೊಂದಿರಿ ಆದ್ರೆ ಫೇಸ್‌ಬುಕ್‌ ಮತ್ತು ಇ-ಮೇಲ್‌ಗೆ ಬೇರೆ ಬೇರೆ ಪಾಸ್‌ವರ್ಡ್ ನೀಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot