Home
ಟೆಕ್ ನೌಕರಿ

ಫೋನ್‌ನಲ್ಲಿ ಜಿಯೋ ಸಿಮ್ ಬಳಸಿದ ಮೇಲೆ ಇತರ ಸಿಮ್ ಬಳಸಲಾಗುವುದಿಲ್ಲವೇ?

By Shwetha

ರಿಲಾಯನ್ಸ್ ಜಿಯೋ ಈಗಂತೂ ಭಾರತದಲ್ಲಿ ಹೆಚ್ಚು ಸುದ್ದಿಯನ್ನೇ ಮಾಡುತ್ತಿದೆ. ಈವರೆಗೆ ಯಾವ ಟೆಲಿಕಾಮ್ ಸಂಸ್ಥೆ ಕೂಡ ತರದೇ ಇರುವ ಆಫರ್‌ಗಳನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಜಿಯೋ ಬಳಕೆದಾರರಿಗೆ ಹೆಚ್ಚು ಪರಮಾಪ್ತ ಎಂದೆನ್ನಿಸಿಬಿಟ್ಟಿದೆ. 90 ದಿನಗಳ ಉಚಿತ ಕರೆ, ಎಸ್‌ಎಮ್‌ಎಸ್, ವೋಲ್ಟ್ ಕರೆಗಳು ಹೀಗೆ ಆಫರ್‌ಗಳ ಮಳೆಯನ್ನೇ ಸುರಿಸುವ ಮೂಲಕ ಬಳಕೆದಾರರಲ್ಲಿ ಹೊಸ ಭರವಸೆಯನ್ನು ತಂದಿತ್ತಿದೆ

ಓದಿರಿ: ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

ಇದರಿಂದ ಪ್ರಭಾವಿತಗೊಂಡು ಇತರ ಟೆಲಿಕಾಮ್ ಸಂಸ್ಥೆಗಳು ಆಫರ್ ಅನ್ನು ತಂದಿದ್ದರೂ ಜಿಯೋಗೆ ಇರುವಷ್ಟು ಪ್ರಾಬಲ್ಯವನ್ನು ಸಂಪಾದಿಸಿಕೊಳ್ಳಲು ಕೊಂಚ ಸಮಯ ಹಿಡಿಯಬಹುದು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಅದಾಗ್ಯೂ ಜಿಯೋ ಕೂಡ ಕೆಲವೊಂದು ಅಡ್ಡಿಗಳನ್ನು ಎದುರಿಸುತ್ತಿದೆ. ಒಮ್ಮೊಮ್ಮೆ ಸಿಗ್ನಲ್ ಸಮಸ್ಯೆ, ಸಿಮ್ ಸಮಸ್ಯೆ ಹೀಗೆ ಅಡ್ಡಿಗಳು ಇವೆ. ಈಗ ಹೊಸದಾಗಿ ಬಂದಿರುವ ಸಮಸ್ಯೆ ಎಂದರೆ ಜಿಯೋ 4ಜಿ ಸಿಮ್ ಅನ್ನು ಫೋನ್‌ನಲ್ಲಿ ಬಳಸಿದ ನಂತರ ಇತರ ಸಿಮ್ ಅನ್ನು ಬಳಸಬಹುದೇ ಎಂಬುದಾಗಿದೆ. ಹಾಗಿದ್ದರೆ ಈ ಸಿಮ್ ನಿಮ್ಮ ಫೋನ್‌ನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಬಿಎಸ್ಎನ್‌ಎಲ್ 'ಸ್ಟೂಡೆಂಟ್ ಪ್ಲಾನ್‌'ನಲ್ಲಿದೆ ವಿಶೇಷ ಆಫರ್

ಇತರ ಸಿಮ್‌ಗಳಂತೆಯೇ ಜಿಯೋ ಸಿಮ್ ಕೂಡ ಇದೆ

ಇತರ ಸಿಮ್‌ಗಳಂತೆಯೇ ಜಿಯೋ ಸಿಮ್ ಕೂಡ ಇದೆ

ಹೆಚ್ಚಿನ ಬಳಕೆದಾರರಿಗೆ ಈ ವದಂತಿ ಭಯವನ್ನು ತಂದೊಡ್ಡವುದು ಸಹಜವೇ ಆಗಿದೆ. ಇತರ ನೆಟ್‌ವರ್ಕ್‌ಗಳ ಸಿಮ್ ಮಾಡುವಂತೆ ಜಿಯೋ ಸಿಮ್ ನಿಮ್ಮ ಫೋನ್ ಅನ್ನು ಲಾಕ್ ಮಾಡುವುದಿಲ್ಲ.

ಸಿಮ್ ಯಾವುದೇ ಡಿವೈಸ್ ಅನ್ನು ಲಾಕ್ ಮಾಡುವುದಿಲ್ಲ

ಸಿಮ್ ಯಾವುದೇ ಡಿವೈಸ್ ಅನ್ನು ಲಾಕ್ ಮಾಡುವುದಿಲ್ಲ

ರಿಲಾಯನ್ಸ್ ಜಿಯೋ ಸಿಮ್ ನಿಮ್ಮ ಫೋನ್ ಅನ್ನು ಲಾಕ್ ಮಾಡುತ್ತದೆ ಎಂಬ ಸುದ್ದಿ ಇದ್ದು ಇತರ ಡಿವೈಸ್‌ಗಳಿಗೆ ಇದನ್ನು ಇನ್‌ಸರ್ಟ್ ಮಾಡಿದಾಗ ಡಿವೈಸ್ ಲಾಕ್ ಆಗುತ್ತದೆ ಎಂಬ ವದಂತಿ ಇದೆ. ಆದರೆ ಈ ಸಿಮ್ ನಿಮ್ಮ ಯಾವುದೇ ಡಿವೈಸ್ ಅನ್ನು ಲಾಕ್ ಮಾಡುವುದಿಲ್ಲ ಅಂತೆಯೇ ನೆಟ್‌ವರ್ಕ್ ಅನ್ನು ಕೂಡ ಲಾಕ್ ಮಾಡುವುದಿಲ್ಲ ಎಂದಾಗಿದೆ.

ಕೆಲವು ಬಳಕೆದಾರರಿಗೆ ಇತರ ಸಿಮ್ ಕಾರ್ಡ್ ಬಳಸಲು ಆಗುತ್ತಿಲ್ಲ

ಕೆಲವು ಬಳಕೆದಾರರಿಗೆ ಇತರ ಸಿಮ್ ಕಾರ್ಡ್ ಬಳಸಲು ಆಗುತ್ತಿಲ್ಲ

ತಮ್ಮ ಡಿವೈಸ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಅನ್ನು ಉಪಯೋಗಿಸಿದ ನಂತರ ಇತರ ಸಿಮ್ ಕಾರ್ಡ್‌ಗಳನ್ನು ಬಳಸಲು ಆಗುವುದಿಲ್ಲ ಎಂಬುದಾಗಿ ಕೆಲವು ಬಳಕೆದಾರರು ಆಪಾದಿಸುತ್ತಿದ್ದಾರೆ. ಆದರೆ ಈ ಸಮಸ್ಯೆ ಇರುವುದು ಜಿಯೋ ಸಿಮ್‌ನಿಂದ ಅಲ್ಲ, ಆದರೆ ಈ ಸಮಸ್ಯೆಗೆ ಸರಳ ಸಲಹೆ ಇದೆ.

 ಸಿಮ್ ಎಲ್‌ಟಿಇ ಆಧಾರಿತವಾಗಿದೆ

ಸಿಮ್ ಎಲ್‌ಟಿಇ ಆಧಾರಿತವಾಗಿದೆ

ರಿಲಾಯನ್ಸ್ ಜಿಯೋ ಸಿಮ್ ಎಲ್‌ಟಿಇ ಆಧಾರಿತವಾಗಿದೆ ಎಂಬುದನ್ನು ಎಲ್ಲರೂ ಅರಿತುಕೊಂಡಿರಬೇಕು. 4ಜಿ ಸಿಮ್ ಕಾರ್ಡ್ 3ಜಿ ಅಥವಾ 2ಜಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಇನ್ನೊಂದು ಸಿಮ್ ಬಳಸಿಕೊಳ್ಳಲು ನೆಟ್‌ವರ್ಕ್ ವಿಧ ಬದಲಾಯಿಸಿ

ಇನ್ನೊಂದು ಸಿಮ್ ಬಳಸಿಕೊಳ್ಳಲು ನೆಟ್‌ವರ್ಕ್ ವಿಧ ಬದಲಾಯಿಸಿ

2ಜಿ ಅಥವಾ 3ಜಿ ಸಾಮರ್ಥ್ಯದ ಬೇರೆ ಸರ್ವೀಸ್ ಪ್ರೊವೈಡರ್‌ಗಳ ಇನ್ನೊಂದು ಸಿಮ್ ಅನ್ನು ನೀವು ಬಳಸಲು ಹೊರಟಿದ್ದೀರಿ ಎಂದಾದಲ್ಲಿ, ನಿಮ್ಮ ಫೋನ್‌ನಲ್ಲಿ ನೆಟ್‌ವರ್ಕ್ ಬದಲಾವಣೆಯನ್ನು ನೀವು ಮಾಡಿಕೊಳ್ಳಬೇಕು. ಸೆಟ್ಟಿಂಗ್ಸ್ > ನೆಟ್‌ವರ್ಕ್ ಮೋಡ್ಸ್ ಮತ್ತು ಇದನ್ನು ಎಲ್‌ಟಿಇ ನಿಂದ ಬೇಕಾದ ಮೋಡ್‌ಗೆ ಬದಲಾಯಿಸಿಕೊಳ್ಳಿ.

Best Mobiles in India

English summary
Here, you will get to know if Jio will lock your phone or not with its SIM card. Take a look at the same to understand how the Jio SIM works from below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+