Subscribe to Gizbot

ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

Written By:

ರಿಲಾಯನ್ಸ್ ಜಿಯೋಗೆ ತಕ್ಕ ಪಾಠವನ್ನು ಕಲಿಸಬೇಕೆಂಬ ಸನ್ನಾಹದಲ್ಲಿ ಇತರ ಟೆಲಿಕಾಮ್ ಆಫರ್‌ಗಳು ಭರ್ಜರಿಯಾಗಿಯೇ ತಮ್ಮ ದಾಳಗಳನ್ನು ಉದುರಿಸುತ್ತಿವೆ. ಜಿಯೋಗೆ ಸರಿಸಮನಾಗಿ ಈ ಕಂಪೆನಿಗಳು ಆಫರ್‌ಗಳ ಮಳೆಯನ್ನೇ ಸುರಿಸುತ್ತಿದ್ದು ಬಳಕೆದಾರರು ಬಳಸುತ್ತಿರುವ ನೆಟ್‌ವರ್ಕ್‌ಗಳಲ್ಲಿಯೇ ಅದ್ಭುತ ಆಫರ್‌ಗಳನ್ನು ಪಡೆದುಕೊಂಡು ಸಂತಸಗೊಳ್ಳುತ್ತಿದ್ದಾರೆ ಅಂತೂ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಟೆಲಿಕಾಮ್ ಕಂಪೆನಿಗಳ ಈ ಯುದ್ಧದಿಂದ ಬಳಕೆದಾರರಿಗೆ ಲಾಭವುಂಟಾಗುತ್ತಿದೆ.

ಓದಿರಿ: ಜಿಯೋ, ವೊಡಾಫೋನ್ ಅಪ್ಲಿಕೇಶನ್ ಬೆಸ್ಟ್ ಯಾವುದು?

ಇಂದಿನ ಲೇಖನದಲ್ಲಿ ಏರ್‌ಟೆಲ್ ಪ್ರಸ್ತುತಪಡಿಸುತ್ತಿರುವ ಅದ್ಭುತ ಆಫರ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ ಸಿರೀಸ್ ಬಳಕೆದಾರರಿಗಾಗಿ ಏರ್‌ಟೆಲ್ ಈ ಆಫರ್ ಅನ್ನು ತರುತ್ತಿದೆ. 

ಓದಿರಿ: ಬಿಎಸ್ಎನ್‌ಎಲ್ 'ಸ್ಟೂಡೆಂಟ್ ಪ್ಲಾನ್‌'ನಲ್ಲಿದೆ ವಿಶೇಷ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 250 ಪಾವತಿ

ರೂ 250 ಪಾವತಿ

15 ಜಿಬಿ 4ಜಿ ಅಥವಾ 3ಜಿ ಡೇಟಾವನ್ನು ಪಡೆದುಕೊಳ್ಳಲು ನೀವು ರೂ 250 ಅನ್ನು ಪಾವತಿಸಬೇಕಾಗುತ್ತದೆ.

15 ಜಿಬಿ ಡೇಟಾ

15 ಜಿಬಿ ಡೇಟಾ

ಅಂದರೆ 1ಜಿಬಿ ಡೇಟಾ ದರದಲ್ಲಿ ನಿಮಗೆ 15 ಜಿಬಿ ಡೇಟಾ ದೊರೆಯಲಿದೆ. ನೀವು ಏರ್‌ಟೆಲ್ ಪ್ರಿಪೈಡ್ ಬಳಕೆದಾರರು ಎಂದಾದಲ್ಲಿ 15 ಜಿಬಿ ಡೇಟಾವನ್ನು ಪಡೆದುಕೊಳ್ಳಲು ಈ ಹಂತಗಳನ್ನು ಪಾಲಿಸಿ.

ಯಾವೆಲ್ಲಾ ಡಿವೈಸ್‌ಗಳು

ಯಾವೆಲ್ಲಾ ಡಿವೈಸ್‌ಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 (2015), ಸ್ಯಾಮ್‌ಸಂಗ್ ಗ್ಯಾಲಕ್ಸಿ J5 (2015), ಸ್ಯಾಮ್‌ಸಂಗ್ ಗ್ಯಾಲಕ್ಸಿ J7 (2015), ಸ್ಯಾಮ್‌ಸಂಗ್ ಗ್ಯಾಲಕ್ಸಿ J2 (2016), ಸ್ಯಾಮ್‌ಸಂಗ್ ಗ್ಯಾಲಕ್ಸಿ J5 (2016), ಸ್ಯಾಮ್‌ಸಂಗ್ ಗ್ಯಾಲಕ್ಸಿ J7 (2016), ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Pro, ಸ್ಯಾಮ್‌ಸಂಗ್ ಗ್ಯಾಲಕ್ಸಿ J Max ಗೆ ಈ ಆಫರ್ ಲಭ್ಯವಿದೆ.

ಈ ಆಫರ್ ಪಡೆದುಕೊಳ್ಳುವುದು ಹೇಗೆ?

ಈ ಆಫರ್ ಪಡೆದುಕೊಳ್ಳುವುದು ಹೇಗೆ?

ನಿಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ ಸಿರೀಸ್ ಡಿವೈಸ್‌ನೊಂದಿಗೆ ಇಲ್ಲಿಗೆ ಭೇಟಿ ನೀಡಿ
ರೂ 250 ಅನ್ನು ಪಾವತಿಸುವುದರ ಮೂಲಕ ಆಫರ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಿ. ಇಷ್ಟು ಮಾಡಿದರೆ ಆಯಿತು ನಿಮಗೆ 1ಜಿಬಿ ಡೇಟಾ ಮತ್ತು ಹೆಚ್ಚುವರಿ 14 ಜಿಬಿ ಅಂತೆಯೇ 4ಜಿ/3ಜಿ ಡೇಟಾ ದೊರೆಯಲಿದೆ.

ನಿಯಮಗಳು

ನಿಯಮಗಳು

ಪ್ರಿಪೈಡ್ ಮೊಬೈಲ್ ಬಳಕೆದಾರರಿಗೆ ಮಾತ್ರ ಈ ಆಫರ್ ಲಭ್ಯವಿದೆ. ಮಾರ್ಚ್ 31 - 2017 ರವರೆಗೆ ಇದಕ್ಕೆ ವ್ಯಾಲಿಡಿಟಿ ಇರುತ್ತದೆ
ಈ ಆಫರ್ ಅನ್ನು ಪಡೆದುಕೊಳ್ಳಲು, ಆಕ್ಟಿವೇಟ್ ನೌಗೆ ಕ್ಲಿಕ್ ಮಾಡಿ ಮತ್ತು ಅನ್ವಯಿತ ರಿಚಾರ್ಜ್‌ಗಳೊಂದಿಗೆ ರಿಚಾರ್ಜ್ ಮಾಡಿಕೊಳ್ಳಿ
ಸರ್ಕಲ್ ಆಧಾರದ ಪ್ರಿಪೈಡ್ ಡೇಟಾ ರಿಚಾರ್ಜ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಮ್ಮೆ ಆಕ್ಟಿವೇಟ್ ಮಾಡಿಕೊಂಡ ಆಫರ್ ಅನ್ನು ಮತ್ತೊಮ್ಮೆ ರಿಕ್ಲೈಮ್ ಮಾಡಿಕೊಳ್ಳಲಾಗುವುದಿಲ್ಲ
3ಜಿ ವಲಯಗಳಲ್ಲಿ, ರಾತ್ರಿ ವೇಳೆಗಾಗಿ 14 ಜಿಬಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ ಇದರ ಅವಧಿ ಬೆಳಗ್ಗೆ 12 ರಿಂದ ಬೆಳಗ್ಗೆ 6 ವರೆಗೆ ಆಗಿರುತ್ತದೆ. ಅದೂ 3ಜಿ/2ಜಿ ನೆಟ್‌ವರ್ಕ್‌ನಲ್ಲಿ.
4ಜಿ ವಲಯಗಳಲ್ಲಿ, ಹೆಚ್ಚುವರಿ 14 ಜಿಬಿ ಡೇಟಾವನ್ನು 4ಜಿ/3ಜಿ/2ಜಿ ನೆಟ್‌ವರ್ಕ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ
ಈ ಉಚಿತ ಡೇಟಾದ ಅವಧಿ 28 ದಿನಗಳಾಗಿವೆ
ತನ್ನದೇ ಆದ ನೆಲೆಗಟ್ಟಿನಲ್ಲಿ ಆಫರ್ ಅನ್ನು ವಿದ್‌ಡ್ರಾ ಮಾಡುವ ಹಕ್ಕನ್ನು ಏರ್‌ಟೆಲ್ ಪಡೆದುಕೊಂಡಿದೆ
ನಿಮ್ಮ ಮೊಬೈಲ್‌ನಲ್ಲಿ ಡೇಟಾ ಬ್ಯಾಲೆನ್ಸ್ ಅನ್ನು ಪರಿಶೀಲಿಸಿಕೊಳ್ಳಲು *121*2# ಡಯಲ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Airtel has come up with an amazing offer for Samsung galaxy j series users. In order to get 15 GB 4G or 3G data you need pay Rs.250 only.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot