ಬಿಎಸ್ಎನ್‌ಎಲ್ 'ಸ್ಟೂಡೆಂಟ್ ಪ್ಲಾನ್‌'ನಲ್ಲಿದೆ ವಿಶೇಷ ಆಫರ್

By Shwetha
|

ಜಿಯೋಗೆ ಹೆಚ್ಚಿನ ಸ್ಪರ್ಧೆಯನ್ನೇ ಇತರ ಟೆಲಿಕಾಮ್ ಕಂಪೆನಿಗಳು ನೀಡುತ್ತಿದ್ದು ಇದರಲ್ಲಿ ಬಿಎಸ್‌ಎನ್ಎಲ್ ತುಸು ಅಧಿಕವಾಗಿಯೇ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಬಿಬಿ 249 ಯೋಜನೆಯನ್ನು ಬಿಎಸ್‌ಎನ್‌ಎಲ್ ಪ್ರಸ್ತುತಪಡಿಸಿದ್ದು ತನ್ನ ಹೆಚ್ಚಿನ ಆಫರ್‌ಗಳ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ ಎಂಬುದಂತೂ ನಿಜ. ಈಗ ಸ್ಟೂಡೆಂಟ್ ಪ್ಲಾನ್‌ನೊಂದಿಗೆ ಬಿಎಸ್ಎನ್‌ಎಲ್ ಬಂದಿದ್ದು ಇದು 3ಜಿ ಯೋಜನೆಯ ಒಂದು ಅಂಗ ಎಂಬುದಾಗಿ ಪರಿಗಣಿಸಲಾಗಿದೆ.

ಓದಿರಿ: ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

ರೂ 118 ಕ್ಕೆ 3ಜಿ ಡೇಟಾದ 1ಜಿಬಿಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು ಇದನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಕಂಪೆನಿ ಯೋಜಿಸಿದೆ. ದೇಶಾದ್ಯಂತ ಈ ಯೋಜನೆಯ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದ್ದು ಬಿಎಸ್‌ಎನ್‌ಎಲ್ ಸ್ಟೂಡೆಂಟ್ ಪ್ಲಾನ್‌ನ ವಿಶೇಷತೆಗಳೇನು ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳಿ.

ಓದಿರಿ: ಉಚಿತ ಕರೆ, ಡೇಟಾ ಹೊಂದಿರುವ ಬಿಎಸ್‌ಎನ್‌ಎಲ್ ಟಾಪ್ ಪ್ಲಾನ್ಸ್

ಪ್ರಯೋಜನಗಳೇನು

ಪ್ರಯೋಜನಗಳೇನು

ರೂ 118 ಕ್ಕೆ 3ಜಿ ಡೇಟಾದ 1ಜಿಬಿಯನ್ನು ಪಡೆದುಕೊಳ್ಳುವುದರ ಜೊತೆಗೆ, ರೂ 10 ರ ಉಚಿತ ಟಾಕ್ ಟೈಮ್ ಅನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇತರ ನೆಟ್‌ವರ್ಕ್‌ಗಳಿಗೆ ಕಾಲ್ ದರ ರೂ 0.30 ಪ್ರತಿ ನಿಮಿಷಕ್ಕೆ ಆಗಲಿದ್ದು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ರೂ 0.10 ನಂತೆ ಪಡೆದುಕೊಳ್ಳಬಹುದಾಗಿದೆ. ಪ್ರತೀ ಎಸ್‌ಎಮ್‌ಎಸ್‌ಗೆ 0.15 ಪೈಸೆಯಂತೆ ದರ ವಿಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನ

ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನ

ಹೆಚ್ಚು ದೀರ್ಘಾವಧಿ ಸಮಯದಲ್ಲಿ ಅತಿ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು ಇದರಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯನ್ನು ಪಡೆದುಕೊಳ್ಳುವುದು ಹೇಗೆ?

ಈ ಯೋಜನೆಯನ್ನು ಪಡೆದುಕೊಳ್ಳುವುದು ಹೇಗೆ?

ಬಿಎಸ್ಎನ್‌ಎಲ್ ರೀಟೈಲರ್ ಶಾಪ್‌ಗೆ ಹೋಗಿ ಸ್ಟೂಡೆಂಟ್ ಸಿಮ್ ಕಾರ್ಡ್ ಅನ್ನು ನೀವು ಖರೀದಿ ಮಾಡಬೇಕು. ರೂ 118 ರ ವೋಚರ್ ಅನ್ನು ರೀಟೇಲರ್‌ನಿಂದ ಆರಂಭಿಸಿಕೊಳ್ಳಿ.

30 ದಿನಗಳ ಗಡುವು

30 ದಿನಗಳ ಗಡುವು

ವಿಶೇಷ ಬಿಎಸ್‌ಎನ್‌ಎಲ್ ಸ್ಟೂಡೆಂಟ್ ಸಿಮ್ ಕಾರ್ಡ್ ಅನ್ನು ಆಕ್ಟಿವೇಶನ್ ಮಾಡಿಕೊಂಡ ನಂತರ, ರೂ 118 ಅನ್ನು ಪಾವತಿಸುವುದರ ಮೂಲಕ 1ಜಿಬಿ, 3ಜಿ ಡೇಟಾವನ್ನು ನಿಮಗೆ ಆನಂದಿಸಬಹುದಾಗಿದೆ. ಮೇಲೆ ತಿಳಿಸಿದ ಟಾರಿಫ್ ಯೋಜನೆಗಳು ಒಂದೇ ರೀತಿಯದ್ದಾಗಿರುತ್ತದೆ.

ಸ್ಟೂಡೆಂಟ್ ಸ್ಮಾರ್ಟ್ ಸಿಮ್ ಅಗತ್ಯವಾಗಿ ಇರಲೇಬೇಕು

ಸ್ಟೂಡೆಂಟ್ ಸ್ಮಾರ್ಟ್ ಸಿಮ್ ಅಗತ್ಯವಾಗಿ ಇರಲೇಬೇಕು

ಈ ಯೋಜನೆಯನ್ನು ಪಡೆದುಕೊಳ್ಳಲು, ಸ್ಟೂಡೆಂಟ್ ಸಿಮ್ ಕಾರ್ಡ್ ಅನ್ನು ನೀವು ಹೊಂದಿರಲೇಬೇಕು. ನಿಮ್ಮ ಪ್ರಸ್ತುತ ಬಿಎಸ್‌ಎನ್‌ಎಲ್ ಸಿಮ್‌ನಲ್ಲಿ ಈ ಆಫರ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
The customers can get 1 GB of 3G data from BSNL at a price of just Rs. 118. This is a special offers meant for the students and it is applicable all over the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X