ಜಿಯೋ ಚಾಟ್ ಹಿಸ್ಟ್ರಿಯನ್ನು ಕ್ಲಿಯರ್ ಮಾಡುವುದು ಹೇಗೆ?

Written By:

ರಿಲಾಯನ್ಸ್ ಜಿಯೋ ಮೈ ಜಿಯೋ ಪ್ಯಾಕೇಜ್‌ನಲ್ಲಿ ಜಿಯೋ ಅಪ್ಲಿಕೇಶನ್‌ಗಳ ಸೆಟ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ನ ಅಡಿಯಲ್ಲಿ ಬರುವ ಅಪ್ಲಿಕೇಶನ್‌ಗಳಲ್ಲಿ ಒಂದಾದ ಜಿಯೋ ಚಾಟ್ ಆಪ್ ಹೊಸ ಸಂವಹನ ವಿಧಾನವನ್ನೇ ನಮ್ಮೆದುರಿಗೆ ತಂದಿಟ್ಟಿದೆ.

ಓದಿರಿ: ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ

ಈ ಅಪ್ಲಿಕೇಶನ್‌ನೊಂದಿಗೆ, ತ್ವರಿತ ಮೆಸೇಜಿಂಗ್, ಉಚಿತ ಎಸ್‌ಎಮ್‌ಎಸ್, ವಾಯ್ಸ್ ಕಾಲ್ಸ್ ಮತ್ತು ವೀಡಿಯೊ ಕಾಲ್‌ಗಳನ್ನು ಏಕೈಕ ಪ್ಲಾಟ್‌ಫಾರ್ಮ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ನೀವು ಗುಂಪು ಅಥವಾ ವ್ಯಕ್ತಿಯೊಂದಿಗೆ ವೀಡಿಯೊಗಳು, ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳನ್ನು ಹಂಚಿಕೊಳ್ಳಬಹುದಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಕಾನ್ಫರೆನ್ಸ್ ಕರೆಯನ್ನು ಒಂದೇ ಕ್ಲಿಕ್‌ನಲ್ಲಿ ಮಾಡಬಹುದಾಗಿದೆ. ಇತ್ತೀಚಿನ ಸುದ್ದಿಗಳು, ಆಫರ್‌ಗಳು ಮತ್ತು ನಿಮ್ಮ ಮೆಚ್ಚಿನ ಜಿಯೋ ಚಾಟ್ ಚಾನಲ್‌ಗಳಲ್ಲಿ ಬ್ಯಾಂಡ್‌ಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ಗೆ ಇದು ಬೆಂಬಲವನ್ನು ನೀಡುತ್ತದೆ.

ಓದಿರಿ: ರಿಲಾಯನ್ಸ್ ಜಿಯೋ ವೇಗವನ್ನು ವರ್ಧಿಸಿಕೊಳ್ಳುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ಜಿಯೋ ಚಾಟ್ ಹಿಸ್ಟ್ರಿಯನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಕೆಲವು ಸರಳ ಹಂತಗಳ ಮೂಲಕ ತಿಳಿಸುತ್ತಿದ್ದೇವೆ. ಬನ್ನಿ ಅವುಗಳನ್ನು ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪ್ಲಿಕೇಶನ್ ತೆರೆಯಿರಿ

ಅಪ್ಲಿಕೇಶನ್ ತೆರೆಯಿರಿ

ಮೊದಲಿಗೆ, ಆಪ್ ಡ್ರಾವರ್‌ನಿಂದ ನಿಮ್ಮ ಮೊಬೈಲ್‌ನಲ್ಲಿ ಜಿಯೋ ಚಾಟ್ ಅಪ್ಲಿಕೇಶನ್ ಅನ್ನು ತೆರೆಯಿರಿ.

ಸೆಟ್ಟಿಂಗ್ಸ್‌ಗೆ ಹೋಗಿ

ಸೆಟ್ಟಿಂಗ್ಸ್‌ಗೆ ಹೋಗಿ

ಅಪ್ಲಿಕೇಶನ್ ಒಮ್ಮೆ ತೆರೆದೊಡನೆ, ಕೆಳಭಾಗದ ಬಲಮೂಲೆಯಲ್ಲಿರುವ ಮೋರ್ ಆಪ್ಶನ್ ಕ್ಲಿಕ್ ಮಾಡಿ. ಸೆಟ್ಟಿಂಗ್ಸ್ ಆಪ್ಶನ್ ಸ್ಪರ್ಶಿಸಿ.

ಹಿಸ್ಟರಿ ಕ್ಲಿಯರ್ ಮಾಡಿ

ಹಿಸ್ಟರಿ ಕ್ಲಿಯರ್ ಮಾಡಿ

ಸೆಟ್ಟಿಂಗ್ಸ್ ಅನ್ನು ತೆರೆದ ನಂತರ, 'ಕ್ಲಿಯರ್ ಆಲ್ ಚಾಟ್ ಹಿಸ್ಟರಿ' ಸ್ಥಿತಿಯಲ್ಲಿರುವ ಆಪ್ಶನ್ ಸ್ಪರ್ಶಿಸಿ. ಬಾಕ್ಸ್ ಗೋಚರಿಸಲು ಓಕೆ ಒತ್ತಿರಿ.

ನಿಮ್ಮ ಕೆಲಸ ಮುಗಿದಂತೆಯೇ

ನಿಮ್ಮ ಕೆಲಸ ಮುಗಿದಂತೆಯೇ

ನಿಮ್ಮ ಜಿಯೋ ಚಾಟ್ ಹಿಸ್ಟ್ರಿ ಸಂಪೂರ್ಣವಾಗಿ ನಿವಾರಣೆಯಾದಂತೆಯೇ!.

ಜಿಯೋ ಚಾಟ್ ಆಪ್

ಜಿಯೋ ಚಾಟ್ ಆಪ್

ಜಿಯೋ ಚಾಟ್ ಆಪ್ ಹೊಸ ಸಂವಹನ ವಿಧಾನವನ್ನೇ ನಮ್ಮೆದುರಿಗೆ ತಂದಿಟ್ಟಿದೆ.ಈ ಅಪ್ಲಿಕೇಶನ್‌ನೊಂದಿಗೆ, ತ್ವರಿತ ಮೆಸೇಜಿಂಗ್, ಉಚಿತ ಎಸ್‌ಎಮ್‌ಎಸ್, ವಾಯ್ಸ್ ಕಾಲ್ಸ್ ಮತ್ತು ವೀಡಿಯೊ ಕಾಲ್‌ಗಳನ್ನು ಏಕೈಕ ಪ್ಲಾಟ್‌ಫಾರ್ಮ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ನೀವು ಗುಂಪು ಅಥವಾ ವ್ಯಕ್ತಿಯೊಂದಿಗೆ ವೀಡಿಯೊಗಳು, ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳನ್ನು ಹಂಚಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 



English summary
If you have been using the JioChat app, you can check the steps below to know how to delete the JioChat history on your phone.
Please Wait while comments are loading...
Opinion Poll

Social Counting