ಆಂಡ್ರಾಯ್ಡ್ ಫೋನ್ ಬಳಕೆಗಾಗಿ ಟಾಪ್ 10 ಸಲಹೆಗಳು
ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಬಳಸಲು ತುಂಬಾ ಸುಲಭವಾಗಿರುತ್ತದೆ, ಆದರೂ ಕೆಲವೊಂದು ಸರಳ ಮತ್ತು ಸುಲಭ ಸಲಹೆಗಳ ಮೂಲಕ ಈ ಬಳಸುವಿಕೆಯ ಅನುಭವವನ್ನು ಇನ್ನಷ್ಟು ಚೇತೋಹಾರಿಯನ್ನಾಗಿ ನಿಮಗೆ ಮಾಡಬಹುದು.
ಇದನ್ನೂ ಓದಿ: ನಿಮ್ಮ ಜೀವನ ಶೈಲಿ ಬದಲಾಯಿಸುವ ಸರಳ ಕಂಪ್ಯೂಟರ್ ಯೋಗ
ಆಂಡ್ರಾಯ್ಡ್ ಒಂದು ತೆರೆದ ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ ಕಸ್ಟಮೈಸ್ ಮಾಡುವುದನ್ನು ಕೆಲವೊಂದು ವಿಧಾನಗಳಲ್ಲಿ ಸರಳವಾಗಿಸಬಹುದು. ನಿಮ್ಮ ಫೋನ್ ಅನ್ನು ವೈಯಕ್ತೀಕರಿಸುವುದಕ್ಕಿಂತಲೂ ಹೆಚ್ಚಾಗಿ, ನಿಮ್ಮ ಫೋನ್ ಅನ್ನು ಸುಸ್ಥಿತಿಯಲ್ಲಿರಿಸುವ ಮತ್ತು ಬ್ಯಾಟರಿ ಜೀವನವನ್ನು ಮುಡಿಪಾಗಿಡುವ ಕೆಲವೊಂದು ಸರಳ ವಿಧಾನಗಳಿವೆ. ಹಾಗಿದ್ದರೆ ಆ ಹತ್ತು ಸರಳ ಸಲಹೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಅರಿತುಕೊಳ್ಳೋಣ.
ಇದನ್ನೂ ಓದಿ: ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸುವುದು ಹೇಗೆ

#1
ನಿಮ್ಮ ಖಾಸಗಿ ಸಹಾಯಕನಾಗಿ ಗೂಗಲ್ ನೌ ಅನ್ನು ನಿಮ್ಮ ಡಿವೈಸ್‌ನಲ್ಲಿ ಸ್ಥಾಪಿಸಿ. ಗೂಗಲ್ ಅಪ್ಲಿಕೇಶನ್ ಅನ್ನು ತೆರೆಯಿರಿ ಗೂಗಲ್ ನೌ ಅನ್ನು ಪಡೆದುಕೊಳ್ಳಲು ತಟ್ಟಿರಿ, ನಿಮ್ಮ ಆದ್ಯತೆಗಳನ್ನು ಇದರ ಮೂಲಕ ಈಡೇರಿಸಿಕೊಳ್ಳಿ. ನಿಮ್ಮ ಮೆಚ್ಚಿನ ಸ್ಟಾಕ್, ಆಟದ ತಂಡಗಳು ಮತ್ತು ಇತರ ಹೆಚ್ಚಿನ ವೈಯಕ್ತೀಕರಿಸಿದ ಅಧಿಸೂಚನೆಗಳನ್ನು ಪಡೆದುಕೊಳ್ಳಬಹುದು. ಗೂಗಲ್ ನಕ್ಷೆಗಳಿಗಾಗಿ ನಿಮ್ಮ ಆದ್ಯತೆಯನ್ನು ತಿಳಿಸಬಹುದು.

#2
ದಿನವೂ ಒಂದೇ ಮಾದರಿಯ ಹವಾಮಾನ ಗ್ಯಾಜೆಟ್ ಅನ್ನು ಬಳಸಿ ಬೇಜಾರಾಗಿರುವಿರಾ? ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ನಿಮ್ಮ ಆಂಡ್ರಾಯ್ಡ್ ಫೋನ್‌ನ ಸಂಪರ್ಕ ಸಾಧನವನ್ನು ನಿಮಗೆ ಬದಲಾಯಿಸಬಹುದು.

#3
ಸೆಟ್ಟಿಂಗ್ ಮೆನುವಿಗೆ ಹೋಗಿ ಇಲ್ಲಿ ಪವರ್ ಸೇವಿಂಗ್ ಮೋಡ್ ಅನ್ನು ಆನ್ ಮಾಡಿ. ಕೆಲವು ಫೋನ್‌ಗಳು ಹೆಚ್ಚಿನ ಬ್ಯಾಟರಿ ಸೇವಿಂಗ್ ಮೋಡ್‌ನೊಂದಿಗೆ ಬರುತ್ತವೆ.

#4
ಆಂಡ್ರಾಯ್ಡ್ ಫೋನ್‌ಗಳ ಬ್ಯಾಟರಿಯನ್ನು ನೀವು ಹೊರತೆಗದು ಪೂರ್ಣ ಪ್ರಮಾಣದ ಚಾರ್ಜ್ ಇರುವ ಇನ್ನೊಂದು ಬ್ಯಾಟರಿಯನ್ನು ಅಳವಡಿಸಬಹುದು. ಆದ್ದರಿಂದ ಯಾವಾಗಲೂ ಪೂರ್ಣ ಚಾರ್ಜ್ ಇರುವ ಬ್ಯಾಟರಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.

#5
ನಿಮ್ಮ ಗೂಗಲ್ ಖಾತೆಗೆ ನೀವು ಕ್ರೋಮ್ ಬ್ರೌಸರ್ ಮೂಲಕ ಸೈನ್ ಆಗಿದ್ದೀರಿ ಎಂದಾದಲ್ಲಿ, ನಿಮ್ಮ ಬುಕ್‌ಮಾರ್ಕ್‌ಗಳು ಮತ್ತು ಆದ್ಯತೆಗಳು ಸ್ವಯಂಚಾಲಿತವಾಗಿ ಇಲ್ಲಿ ಕಾರ್ಯನಿರ್ವಹಿಸುತ್ತದೆ.

#6
ನಿಮ್ಮ ಅಪ್ಲಿಕೇಶನ್‌ಗಳನ್ನು ಬೇರೆ ಬೇರೆ ಫೋಲ್ಡರ್‌ಗಳಲ್ಲಿ ಇರಿಸಿ ನಿಮಗೆ ಹೆಚ್ಚುವರಿ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಇದರಿಂದ ನೀವು ವೇಗವಾಗಿ ನಿಮಗೆ ಅತ್ಯವಶ್ಯಕವಾಗಿರುವ ಅಪ್ಲಿಕೇಶನ್‌ಗಳನ್ನು ಪಡೆದುಕೊಳ್ಳಬಹುದು.

#7
ಟೈಪ್ ಮಾಡುವುದಕ್ಕಿಂತ ಸ್ವೈಪ್ ಮಾಡುವುದು ಒಮ್ಮೊಮ್ಮೆ ಸುಲಭವಾಗಿರುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚಿನ ಕೀಬೋರ್ಡ್ ಅಪ್ಲಿಕೇಶನ್‌ಗಳಿದ್ದು ಇದರಿಂದ ನಿಮ್ಮ ಇಚ್ಛೆಯನ್ನು ನಿಮಗೆ ಸಾಧಿಸಿಕೊಳ್ಳಬಹುದು.

#8
ರೆಡ್ಯೂಸ್ ಡೇಟಾ ಯೂಸೇಜ್ ಆಯ್ಕೆಯನ್ನು ನೀವು ಕ್ರೋಮ್‌ನಲ್ಲಿ ಆನ್ ಮಾಡಿಕೊಳ್ಳಬಹುದು. ಇದು ಅನಗತ್ಯ ವೈಟ್‌ಸ್ಪೇಸ್ ಅನ್ನು ತೆಗೆದುಹಾಕುತ್ತದೆ ಮತ್ತು ಚಿತ್ರಗಳನ್ನು ಸಣ್ಣದಾಗಿ ಹೊಂದಿಸುತ್ತದೆ.

#9
ನಿಮಗೆ ಎರಡು ಹಂತದ ಪರಿಶೀಲನೆ ಭದ್ರತೆಯನ್ನು ಗೂಗಲ್ ಅಥೆಂಟಿಕೇಟರ್ ನಿಮಗೆ ಒದಗಿಸುತ್ತದೆ. ನೀವು ಲಾಗಿನ್ ಆದಾಗ ನಿಮ್ಮಲ್ಲಿ ಒಂದು ಕೋಡ್ ಅನ್ನು ಕೇಳುತ್ತದೆ. ಇದರಿಂದ ಅಪರಿಚಿತರು ನಿಮ್ಮ ಖಾತೆಗೆ ಲಾಗಿನ್ ಆಗುವ ಸಂಭವ ಕಡಿಮೆ ಇರುತ್ತದೆ.

#10
ನಿಮ್ಮ ಡೀಫಾಲ್ಟ್ ಅಪ್ಲಿಕೇಶನ್ ಅನ್ನು ಬದಲಾಯಿಸುವುದು ನಿಮ್ಮ ಫೋನ್‌ನ ಭದ್ರತೆಯನ್ನು ಹೆಚ್ಚಿಸುತ್ತದೆ. ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಆಗಿ ಇದನ್ನು ನಿಮಗೆ ಬದಲಾಯಿಸಬಹುದು.


Click it and Unblock the Notifications








