ನಿಮ್ಮ ಜೀವನ ಶೈಲಿ ಬದಲಾಯಿಸುವ ಸರಳ ಕಂಪ್ಯೂಟರ್ ಯೋಗ

By Shwetha
|

ಇಂದಿನ ಆಧುನಿಕ ಯಂತ್ರ ಜೀವನದಲ್ಲಿ ಕಂಪ್ಯೂಟರ್ ಕೆಲಸ ನಮ್ಮ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿದೆ. ಕುಳಿತೇ ಮಾಡುವ ಈ ಕೆಲಸ ನಿಜಕ್ಕೂ ವ್ಯಾಯಾಮವಿಲ್ಲದ ಜೀವನ ಶೈಲಿಯನ್ನು ನಮಗೆ ನೀಡುತ್ತಿದೆ. ಕುರ್ಚಿಗೇ ಅಂಟಿಕೊಂಡು ದಿನವಿಡೀ ಕಂಪ್ಯೂಟರ್‌ನತ್ತ ಕಣ್ಣಾಡಿಸಿ ದೇಹ ಮನಸ್ಸು ಜಡ್ಡುಗಟ್ಟಿ ಹೋಗುವುದು ಸಹಜವಾಗಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳ ಬಾಳ್ವಿಕೆಗಾಗಿ ಸರಳ ಸಲಹೆಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳೋಣ ಕಂಪ್ಯೂಟರ್ ಯೋಗದ ಬಗೆಗೆ. ಇದು ನಿಜಕ್ಕೂ ಸರಳವಾಗಿದ್ದು ನಿಮಗೆ ಸ್ವಲ್ಪ ಸಮಯದಲ್ಲಿಯೇ ವಿಶ್ರಾಂತಿ ದೊರಕುತ್ತದೆ. ಕಂಪ್ಯೂಟರ್ ಯೋಗವು ನಿಮ್ಮ ಮನದಲ್ಲಿನ ಚಿಂತೆಯನ್ನು ದೂರಮಾಡಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಈ ಯೋಗವು ಕಂಪ್ಯೂಟರ್‌ನಲ್ಲಿ ಕುಳಿತುಕೊಂಡು ಕೆಲಸ ಮಾಡುವವರಿಗೆ ನಿಜಕ್ಕೂ ವರದಾಯಕವಾಗಿದ್ದು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸುವುದು ಖಂಡಿತವಾಗಿದೆ. ಈ ಎಲ್ಲಾ ಯೋಗಗಳನ್ನು ನೀವು ಕಂಪ್ಯೂಟರ್‌ನ ಎದುರು ಕುಳಿತುಕೊಂಡಿರುವಾಗ ಮಾಡಬಹುದಾಗಿದ್ದು ನಿಜಕ್ಕೂ ಕೆಲವೇ ನಿಮಿಷಗಳಲ್ಲಿ ನಿಮ್ಮ ದೇಹ ಹಗುರಗೊಳ್ಳುತ್ತದೆ ಚಿಂತೆ ಮಾಯವಾಗುತ್ತದೆ.

ಇದನ್ನೂ ಓದಿ: ವೈಫೈ ಭದ್ರತೆಯನ್ನು ಪರಿಶೀಲಿಸುವುದು ಹೇಗೆ?

#1

#1

ನಿಮ್ಮ ತಲೆಯನ್ನು ಎಡ ಬಲ ಮುಂದಕ್ಕೆ ಹಿಂದಕ್ಕೆ ಮಂತ್ರದ ಉಚ್ಛಾರದೊಂದಿಗೆ ತಿರುಗಿಸಿ. ಕಂಪ್ಯೂಟರ್‌ ನೋಡಿಕೊಂಡೇ ಈ ಯೋಗವನ್ನು ನಿಮಗೆ ಮಾಡಬಹುದು.

#2

#2

ನಿಮ್ಮ ಭುಜವನ್ನು ಮುಂದಕ್ಕೆ ಹಿಂದಕ್ಕೆ ಮೇಲಕ್ಕೆ ಕೆಳಕ್ಕೆ ಸರಿಸುತ್ತಾ ಮಂತ್ರವನ್ನು ಜಪಿಸಿ ಇದು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ.

#3

#3

ನಿಮ್ಮ ತಲೆ ಮತ್ತು ಸೊಂಟವನ್ನು ತಿರುಗಿಸಿಕೊಂಡೇ ಈ ಸರಳ ಯೋಗವನ್ನು ಮಾಡಿ. ಇದರಿಂದ ನಿಮ್ಮ ದೇಹ ಮತ್ತು ಮನಸ್ಸು ಹಗುರಗೊಳ್ಳುತ್ತದೆ.

#4

#4

ನಿಮ್ಮ ಪಾದವನ್ನು ನಿಧಾನವಾಗಿ ಮೇಲಕ್ಕೆತ್ತುತ್ತಾ ಓಂ ಮಂತ್ರವನ್ನು ಪಠಿಸಿ. ಇದೇ ತರಹ ಇನ್ನೊಂದು ಪಾದವನ್ನು ಮಾಡಿ.

#5

#5

ತಲೆಯಿಂದ ಹಿಡಿದು ಪಾದದವರೆಗೆ ಮಸಾಜ್ ಮಾಡಿ. ನಿಮ್ಮ ಕೈಗಳನ್ನು ಜೊತೆಯಾಗಿ ತಲೆಯ ಮೇಲಿರಿಸಿಕೊಳ್ಳಿ. ಹಸ್ತವನ್ನು ಉಜ್ಜಿ. ಹೀಗೆಯೇ ನಿಮ್ಮ ಮುಖ, ಕೈಗಳು, ಕಣ್ಣು, ಕಿವಿಗೆ ಮಸಾಜ್ ಅನ್ನು ನಿರ್ವಹಿಸಿ.

#6

#6

ಜಗಕ್ಕೆ ಬೆಳಕನ್ನು ನಾನು ತಂದಿರುವೆ ಭೂಮಿಯ ಮೇಲಿರುವ ಎಲ್ಲಾ ಜನರು ಸಂತೋಷವಾಗಿರಲಿ ಎಂಬ ಭಾವನೆ ನಿಮ್ಮ ಮನದಲ್ಲಿರಲಿ.

#7

#7

ನಿಮ್ಮ ಕೈಗಳನ್ನು ಉಜ್ಜುತ್ತಾ ನಿಮ್ಮ ಬದುಕಿನ ಬಗೆಗೆ, ಮುಂದಿನ ಗುರಿಗಳು, ಯಶಸ್ಸನ್ನು ಪಡೆದುಕೊಳ್ಳುವ ವಿಧಾನದ ಬಗ್ಗೆ ಆಲೋಚಿಸಿ.

#8

#8

ಓಂ ಮಂತ್ರವನ್ನು ಪಠಿಸುತ್ತಾ ನಿಮ್ಮ ಕಾಲುಗಳು, ಹೊಟ್ಟೆಯ ಮೇಲೆ ಕೈಗಳನ್ನಿರಿಸಿ. ಸಕಲ ಜೀವರಾಶಿಗಳೂ ಸಂತೋಷದಿಂದಿರಲಿ ಎಂಬ ಭಾವನೆ ನಿಮ್ಮ ಮನದಲ್ಲಿರಲಿ.

#9

#9

ಇದೆಲ್ಲಾ ವ್ಯಾಯಾಮದ ನಂತರ ಸುಮ್ಮನೆ ವಿಶ್ರಾಂತಿಯನ್ನು ಶಾಂತ ಮನದಿಂದ ಪಡೆದುಕೊಳ್ಳಿ.

#10

#10

ನಿಜಕ್ಕೂ ಒಂದು ಅದ್ಬುತ ಅನುಭೂತಿ ನಿಮ್ಮದಾಗುವುದು ಖಂಡಿತ.

Best Mobiles in India

English summary
This article tells about How to do Computer Yoga in a simple way for mind freshness.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X