Just In
Don't Miss
- News
2020-21ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!
- Automobiles
ಕ್ರ್ಯಾಶ್ ಟೆಸ್ಟ್ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್ಯುವಿ 300
- Sports
ಐಎಸ್ಎಲ್: ಬೆಂಗಳೂರು ಎಫ್ಸಿ vs ಹೈದರಾಬಾದ್ ಎಫ್ಸಿ ಹಣಾಹಣಿ, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Movies
ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲ್ಯಾಪ್‌ಟಾಪ್ ಬ್ಯಾಟರಿ ಲೈಫ್ ಹೆಚ್ಚಿಸಲು ಟಾಪ್ ಟಿಪ್ಸ್‌ಗಳು
ಪ್ರಸ್ತುತದಲ್ಲಿ ಇಂದು ಶತಕೋಟಿ ಜನರು ಲ್ಯಾಪ್‌ಟಾಪ್ ಅನ್ನು ಬಳಸುತ್ತಿದ್ದಾರೆ. ಲ್ಯಾಪ್‌ಟಾಪ್ ಇಟ್ಟುಕೊಳ್ಳುವ ಉದ್ದೇಶವೆಂದರೆ ಅದನ್ನು ಎಲ್ಲಿಗೆ ಬೇಕಾದರೂ ಸಹ ಹೊತ್ತೋಯ್ಯಬಹುದು. ವಿದ್ಯುತ್ ಇಲ್ಲದಿದ್ದಾಗಲು ಸಹ ಬ್ಯಾಟರಿಯನ್ನು ಮೊದಲೇ ಚಾರ್ಜ್ ಮಾಡಿಕೊಂಡು ಯಾವಾಗ ಬೇಕಾದರು ಲ್ಯಾಪ್‌ಟಾಪ್ ಅನ್ನು ಬಳಸಬಹುದು. ಆದರೆ ಲ್ಯಾಪ್‌ಟಾಪ್‌ನಲ್ಲಿನ ಪ್ರಮುಖ ಸಮಸ್ಯೆ ಎಂದರೆ ಬ್ಯಾಟರಿ ಲೈಫ್.
ಕೆಲವೊಮ್ಮೆ ಬ್ಯುಸಿ ಕೆಲಸದಿಂದ ಲ್ಯಾಪ್‌ಟಾಪ್ ಅನ್ನು ಸರಿಯಾಗಿ ಚಾರ್ಜ್ ಮಾಡಲು ಆಗದಿರಬಹುದು. ಅಂತಹ ಸಂದರ್ಭದಲ್ಲಿ ನಿರೀಕ್ಷಿಸಿದ ಬ್ಯಾಟರಿ ಲೈಫ್ ಅನ್ನು ಪಡೆಯಲು ಸಾಧ್ಯವಾಗದಿರಬಹುದು. ಹಾಗಾದ್ರೆ ಲ್ಯಾಪ್‌ಟಾಪ್ ಬ್ಯಾಟರಿ ಲೈಫ್ ಅಧಿಕಗೊಳಿಸುವುದು ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡದೇ ಇರದು. ಅಂತಹವರಿಗೆ ಗಿಜ್‌ಬಾಟ್ ಇಂದಿನ ಲೇಖನದಲ್ಲಿ ತಮ್ಮ ಲ್ಯಾಪ್‌ಟಾಪ್ ಬ್ಯಾಟರಿ ಲೈಫ್ ಅಧಿಕಗೊಳಿಸಿಕೊಳ್ಳಲು ಸರಳ ಟಿಪ್ಸ್‌ಗಳನ್ನು ನೀಡುತ್ತಿದೆ. ಟಿಪ್ಸ್‌ಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ಲ್ಯಾಪ್‌ಟಾಪ್ ಬ್ಯಾಟರಿ ಬಳಕೆಯಲ್ಲಿ ಹೆಚ್ಚು ದೀರ್ಘಕಾಲ ಬಾಳಿಕೆ ಬರಲು ಮೊದಲು ಪವರ್ ಸೆಟ್ಟಿಂಗ್ಸ್‌ನಲ್ಲಿ ವ್ಯವಸ್ಥೆಗೊಳಿಸುವುದು. ಸೆಟ್ಟಿಂಗ್ಸ್‌ನಲ್ಲಿ ಹಲವು ವ್ಯವಸ್ಥೆಗಳಿದ್ದು ಪವರ್ ಸೇವಿಂಗ್ ಆಯ್ಕೆಗಳನ್ನು ಸೆಟ್ ಮಾಡಬಹುದಾಗಿದೆ. ಅಲ್ಲದೇ ಕಡಿಮೆ ಬ್ರೈಟ್‌ನೆಸ್ ಮತ್ತು ಇತರೆ ಹಲವು ಬ್ಯಾಟರಿ ಬಳಕೆಯ ಸೆಟ್ಟಿಂಗ್ಸ್‌ಗಳಿವೆ. ಅವುಗಳನ್ನು ವ್ಯವಸ್ಥೆಗೊಳಿಸಬಹುದು. ಲ್ಯಾಪ್‌ಟಾಪ್‌ಗೆ ಇತರೆ ಯಾವುದಾದರೂ ಬಾಹ್ಯ ಸಾಧನಗಳನ್ನು ಕನೆಕ್ಟ್ ಮಾಡಿದ್ದರೆ ಅವುಗಳನ್ನು ತೆಗೆಯಿರಿ. ಉದಾಹರಣೆಗೆ ಬಾಹ್ಯಾ ಮೌಸ್, ಯುಎಸ್‌ಬಿ ಪೆನ್‌ಡ್ರೈವ್, ಪ್ರಿಂಟರ್ ಇತರೆ. ಇವುಗಳೆಲ್ಲವೂ ಸಹ ಬ್ಯಾಟರಿ ಲೈಪ್ ಕಡಿಮೆ ಮಾಡುತ್ತವೆ. ಆದ್ದರಿಂದ ಅವುಗಳನ್ನು ಡಿಸ್‌ಕನೆಕ್ಟ್ ಮಾಡಿ. ನೀವೂ ಕೆಲಸಕ್ಕಾಗಿ ಬಳಸುವುದಕ್ಕಿಂತ ಹೆಚ್ಚಿನ ಪವರ್ ಅನ್ನು ಬ್ಲೂಟೂತ್ ಮತ್ತು ವೈಫೈ ಬಳಸುತ್ತವೆ. ಆದ್ದರಿಂದ ಅವಶ್ಯಕತೆ ಇಲ್ಲದ ಸಮಯದಲ್ಲಿ ಇವುಗಳನ್ನು ಆಫ್ ಮಾಡಿರಿ. ಲ್ಯಾಪ್‌ಟಾಪ್ ಆನ್ ಮಾಡಿದಾಗ ಹಲವು ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ರನ್ ಆಗುತ್ತಿರುತ್ತವೆ. ಇವುಗಳು ಸಹ ಅಧಿಕ ಬ್ಯಾಟರಿ ಪವರ್ ಅನ್ನು ಎಳೆಯುವುದರಲ್ಲಿ ಸಂಶಯವಿಲ್ಲ. ROM ನಲ್ಲೂ ಸಹ ಆಪ್‌ಗಳು ರನ್ ಆಗುತ್ತಿರುತ್ತವೆ. ಆದ್ದರಿಂದ ಅನವಶ್ಯಕ ಆಪ್‌ಗಳನ್ನು ಟಾಸ್ಕ್ ಮೇನೇಜರ್‌ನಲ್ಲಿ Ctrl+Alt+Delete ಮಾಡುವುದರ ಮೂಲಕ ಪ್ರಕ್ರಿಯೆಗಳನ್ನು ಕೊನೆಗೊಳಿಸಿ. ಲ್ಯಾಪ್‌ಟಾಪ್‌ನ ಉತ್ತಮ ಕಾರ್ಯನಿರ್ವಹಣೆಗೆ ಉತ್ತಮ RAM ಹೊಂದುವುದು ಸೂಕ್ತ. ಆದ್ದರಿಂದ ಹೆಚ್ಚುವರಿ RAM ಸಂಪರ್ಕವನ್ನು ಲ್ಯಾಪ್‌ಟಾಪ್‌ಗೆ ವ್ಯವಸ್ಥೆಗೊಳಿಸಿ. ಲ್ಯಾಪ್‌ಟಾಪ್ ಅನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇರಿಸುವುದರಿಂದ ಹೆಚ್ಚು ಪವರ್ ಬಳಕೆ ಆಗುತ್ತದೆ. ಆದ್ದರಿಂದ ಡೇಟಾ ಸೇವ್ ಮಾಡುವುದರೊಂದಿಗೆ ಹೈಬರ್‌ನೇಟ್ ಮೋಡ್‌ನಲ್ಲಿ ಲ್ಯಾಪ್‌ಟಾಪ್ ಇಡುವುದು ಸೂಕ್ತ. ಇದರಿಂದ ಸೊನ್ನೆಯಷ್ಟು ಬ್ಯಾಟರಿ ಪವರ್ ಬಳಕೆಯಾಗುವುದಿಲ್ಲ. ದಿನಾಂಕ ಮುಗಿದ ಹಳೆಯ ಸಾಫ್ಟ್‌ವೇರ್‌ಗಳು ಬ್ಯಾಟರಿ ಪವರ್ ಕ್ಷೀಣಿಸುವಲ್ಲಿ ಮಹತ್ತರ ಪರಿಣಾಮ ಬೀರುತ್ತವೆ. ಆದ್ದರಿಂದ ಆಗಾಗ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ. ಲ್ಯಾಪ್‌ಟಾಪ್ ಅನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಶೆಲ್‌ಗಳು ಹಾನಿಗೊಳಗಾಗುತ್ತವೆ. ಆದ್ದರಿಂದ ಹೆಚ್ಚು ಚಾರ್ಜ್ ಮಾಡುವುದನ್ನು ನಿಯಂತ್ರಿಸಿ. ಲ್ಯಾಪ್‌ಟಾಪ್‌ಗೆ ಚಾರ್ಜ್ ಮಾಡಲು ಸಂಪರ್ಕಿಸುವ ಬ್ಯಾಟರಿ ಚಾರ್ಜರ್‌ನ ಪಾಯಿಂಟ್‌ಗಳನ್ನು ಮತ್ತು ಲ್ಯಾಪ್‌ಟಾಪ್‌ನಲ್ಲಿ ಪವರ್ ಸ್ವೀಕರಿಸುವ ಪಾಯಿಂಟ್‌ಗಳನ್ನು ನಿರಂತರವಾಗಿ ಸ್ವಚ್ಛವಾಗಿಡಿ. ಹೆಚ್ಚು ಡಸ್ಟ್ ಕೂರುವುದರಿಂದ ಬ್ಯಾಟರಿ ಬಾಳಿಕೆಯ ಮೇಲೆ ಪರಿಣಾಮ ಬೀರಬಹುದು. ಪವರ್ ಟ್ರಬಲ್‌ಶೂಟರ್ ಸೆಟ್ಟಿಂಗ್ ಬಳಸಿಕೊಂಡು ಲ್ಯಾಪ್‌ಟಾಪ್‌ನ ಪವರ್ ಬಳಕೆಯ ಬಗ್ಗೆ ಮಾಹಿತಿ ಪಡೆಯಬಹುದು. ಹಾಗು ಪವರ್ ಕಡಿಮೆ ಬಳಕೆ ಆಗುವಂತೆ ವ್ಯವಸ್ಥೆ ಗೊಳಿಸಬಹುದು. ಅಂದಹಾಗೆ ಸಿಸ್ಟಮ್‌ಗಳಲ್ಲಿ ಎಂಎಸ್‌ಕಾನ್ಫಿಗರಿಂಗ್ ಮೈಕ್ರೋಸಾಫ್ಟ್ ವಿಂಡೋಸ್ ಆರಂಭದ ಪ್ರಕ್ರಿಯೆಗೆ ಯುಟಿಲಿಟಿ ಟ್ರಬಲ್‌ಶೂಟ್ ಆಗಿದೆ. ಇದರಿಂದ ಸಾಫ್ಟ್‌ವೇರ್‌ಗಳನ್ನು, ಡಿವೈಸ್ ಡ್ರೈವರ್, ವಿಂಡೋಸ್ ಸರ್ವೀಸ್‌ಗಳನ್ನು ಡಿಸೇಬಲ್ ಮತ್ತು ಎನೇಬಲ್ ಮಾಡಲು ಅನುಕೂಲವಾಗುತ್ತದೆ. ಲ್ಯಾಪ್‌ಟಾಪ್ ಖರೀದಿಸುವಾಗಲೇ ಉತ್ತಮ ಬ್ಯಾಟರಿ ಹೊಂದಿರುವ ಸಿಸ್ಟಮ್ ಖರೀದಿ ಮಾಡುವುದು ಸೂಕ್ತ. ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ
1
2
3
4
5
6
7
8
9
10
11
12
ಗಿಜ್‌ಬಾಟ್
ಟೊಮೊಟೊ/ಆಲೂಗೆಡ್ಡೆಯಿಂದ ವಿದ್ಯುತ್ ಉತ್ಪಾದನೆ ಹೇಗೆ?
ಫ್ಯಾನ್ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?
ಖರ್ಚಿಲ್ಲದೇ ವಾಟರ್ ಬಾಟಲ್‌ನಿಂದ ಟೇಬಲ್ ಫ್ಯಾನ್ ತಯಾರಿಸಿ
ಗಿಜ್‌ಬಾಟ್
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190