ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ "ವಿಂಡೋಸ್ 10" ಲ್ಯಾಪ್‌ಟಾಪ್‌ಗಳು

Written By:

ಲ್ಯಾಪ್‌ಟಾಪ್‌ ಖರೀದಿ ಬೆಲೆ ಡೆಸ್ಕ್‌ಟಾಪ್‌ಗಳ ಬೆಲೆಗಿಂತಲೂ ಹೆಚ್ಚು ಇರುತ್ತೆ ಅನ್ನೋ ಗುಂಗಲ್ಲೇ ಇನ್ನೂ ಬಹುಸಂಖ್ಯಾತರು ಇದ್ದಾರೆ. ಆದ್ರೆ ಕಂಪ್ಯೂಟರ್‌ ಪ್ರಿಯರು ತಾವು ಹೋದಲೆಲ್ಲಾ ಹಿಡಿದು ಓಡಾಡಲು ಈಗ ಮೊಬೈಲ್‌ ಖರೀದಿಸುವ ಬೆಲೆಯಲ್ಲಿ "ವಿಂಡೋಸ್‌ 10" ಚಾಲಿತ ಟಾಪ್ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ. 10-20 ಸಾವಿರದೊಳಗೆ ಖರೀದಿಸಬಹುದಾದ ಲ್ಯಾಪ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದು, ಅವು ಯಾವುವು, ಅವುಗಳ ಫೀಚರ್ ಏನು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಬಾಲ್‌ ಕಾಂಪ್‌ಬುಕ್‌ ಎಕ್ಸೆಲೆನ್ಸ್

ಐಬಾಲ್‌ ಕಾಂಪ್‌ಬುಕ್‌ ಎಕ್ಸೆಲೆನ್ಸ್

1

ಐಬಾಲ್‌ ಕಾಂಪ್‌ಬುಕ್‌ ಎಕ್ಸೆಲೆನ್ಸ್ (iBall CompBook Excelance), ಪೂರ್ಣ ಪ್ರಮಾಣದ ಸಾಮಾರ್ಥ್ಯ ಹೊಂದಿರುವ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ರೂ 9,999 ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ವಿಂಡೋಸ್‌ 10 ಆಪರೇಟಿಂಗ್‌ ವ್ಯವಸ್ಥೆ ಹೊಂದಿರುವ 'ಐಬಾಲ್‌ ಕಾಂಪ್‌ಬುಕ್‌ ಎಕ್ಸೆಲೆನ್ಸ್' 10,00 mAh ಬ್ಯಾಟರಿ ಹೊಂದಿದೆ. ಅಲ್ಲದೇ 2GB RAM, ಇಂಟೆಲ್‌ ಕ್ವಾಡ್‌ಕೋರ್‌ ಪ್ರೊಸೆಸರ್ ಹೊಂದಿದೆ.

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಬುಕ್‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಬುಕ್‌

2

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಬುಕ್‌ನ ಬೆಲೆ ರೂ 13,999 ಆಗಿದ್ದು ಮತ್ತೊಂದು ಕಡಿಮೆ ಬೆಲೆಯ ಲ್ಯಾಪ್‌ಟಾಪ್‌. ವಿಶೇಷ ಅಂದ್ರೆ ಮೈಕ್ರೋಮ್ಯಾಕ್ಸ್‌ ಲ್ಯಾಪ್‌ಬುಕ್ 32GB ಆಂತರಿಕ ಸ್ಟೋರೇಜ್‌ ಹೊಂದಿದೆ. ಎರಡು ಸ್ಪೀಕರ್‌ ಹೊಂದಿದೆ.

 ಆಸಸ್ ಈಬುಕ್‌

ಆಸಸ್ ಈಬುಕ್‌

3

ಆಸಸ್‌ ಈಬುಕ್ ಅನ್ನು 14,000 ದೊಳಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ ರಿಟೈಲರ್‌ ಶಾಪ್‌ಗಳಲ್ಲೂ ಸಹ ಖರೀದಿಸಬಹುದಾಗಿದೆ. ಅಟಂ ಕ್ವಾಡ್‌ಕೋರ್‌ ಪ್ರೊಸೆಸರ್ಸ್‌, 11.6 ಇಂಚಿನ ಡಿಸ್‌ಪ್ಲೇ ಮತ್ತು 32GB ಆಂತರಿಕ ಸ್ಟೋರೇಜ್‌ ಹೊಂದಿದೆ.

 HP ಸ್ಟ್ರೀಮ್‌ 13

HP ಸ್ಟ್ರೀಮ್‌ 13

4

ವಿಂಡೋಸ್‌ 10 ಚಾಲಿತ 'HP ಸ್ಟ್ರೀಮ್‌ 13' ಲ್ಯಾಪ್‌ಟಾಪ್‌ ಅನ್ನು ಬೆಲೆ ರೂ 18,889 ಕ್ಕೆ ಖರೀದಿಸಬಹುದಾಗಿದೆ. ಹಿಂದಿನ ಎರಡು ಲ್ಯಾಪ್‌ಗಳಂತೆ ಆಂತರಿಕವಾಗಿ 32GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. HP ಸ್ಟ್ರೀಮ್‌ 13, ಲ್ಯಾಪ್‌ಟಾಪ್ ಇಂಟೆಲ್‌ ಸೆಲೆರಾನ್ ಡ್ಯುಯೆಲ್‌ ಕೋರ್‌ ಪ್ರೊಸೆಸರ್ಸ್‌, 13.3 ಇಂಚಿನ ಆಂಟಿ-ಗ್ಲೇರ್ ಡಿಸ್‌ಪ್ಲೇ ಹೊಂದಿದೆ.

 HP ಪೆವಿಲಿಯನ್ 11

HP ಪೆವಿಲಿಯನ್ 11

5

ಬೆಲೆ ರೂ 20,000
'HP ಪೆವಿಲಿಯನ್ 11', ವಿಂಡೋಸ್‌ 10 ಆಧಾರಿತ ಲ್ಯಾಪ್‌ಟಾಪ್‌ ಆಗಿದ್ದು, ಇದು ಸಹ ಇಂಟೆಲ್‌ ಸೆಲೆರಾನ್ ಡ್ಯುಯೆಲ್‌ ಕೋರ್‌ ಪ್ರೊಸೆಸರ್ಸ್‌ ಹೊಂದಿದೆ. 2GB RAM, 500GB ಆಂತರಿಕ ಸ್ಟೋರೇಜ್‌ ಹೊಂದಿದ್ದು, 11.6 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಐಬಾಲ್‌ ಕಾಂಪ್‌ಬುಕ್‌ ಎಕ್ಸೆಂಪ್ಲೇರ್‌

ಐಬಾಲ್‌ ಕಾಂಪ್‌ಬುಕ್‌ ಎಕ್ಸೆಂಪ್ಲೇರ್‌

6

ಐಬಾಲ್‌ ಕಾಂಪ್‌ಬುಕ್‌ ಎಕ್ಸೆಂಪ್ಲೇರ್‌(iBall CompBook Exemplaire), ಹಿಂದಿನ ಎಲ್ಲಾ ಲ್ಯಾಪ್‌ಟಾಪ್‌ಗಳಿಗಿಂತಲು ವಿಶೇಷ. ಹಾಗೆ ಖರೀದಿ ಬೆಲೆಯು ಸಹ ಕಡಿಮೆ. ನೀವು ಖರೀದಿಸಬಹುದಾದ ಬೆಲೆ 13,999. 14 ಇಂಚಿನ ಡಿಸ್‌ಪ್ಲೇ, 10,000mAh ಬ್ಯಾಟರಿ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

 

English summary
6 cheapest Windows 10 laptops in India. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot