Subscribe to Gizbot

ಟೊಮೊಟೊ/ಆಲೂಗೆಡ್ಡೆಯಿಂದ ವಿದ್ಯುತ್‌ ಉತ್ಪಾದನೆ ಹೇಗೆ?

Written By:

ವಿದ್ಯುತ್‌ ಅನ್ನು ನೀರು, ಗಾಳೀ, ಕಲ್ಲಿದ್ದಲು, ಸಮುದ್ರದ ಅಲೆಗಳಿಂದ ಉತ್ಪಾದಿಸಬಹುದು ಎಂದು ಕೇಳಿದ್ದೀರ. ಆದ್ರೆ ತಿನ್ನಲು ಬಳಸುವ ಟೊಮೊಟೊ ಮತ್ತು ಆಲೂಗೆಡ್ಡೆಯಿಂದ ವಿದ್ಯುತ್‌ ಅನ್ನು ತಯಾರಿಸಬಹುದು ಎಂಬುದನ್ನು ಕೇಳಿದ್ದೀರಾ? ಕಂಡಿತ ಇಲ್ಲ ಅನಿಸುತ್ತೆ. ಹಳ್ಳಿ ಕಡೆ ವಿದ್ಯುತ್‌ ಸಮಸ್ಯೆ ಹೆಚ್ಚು. ಆದ್ರೆ ನೀರು ಇದ್ರೆ ಅವರಿಗೆ ಆಹಾರದ ಕೊರತೆಯಂತು ಇರೋದಿಲ್ಲಾ. ಯಾಕಂದ್ರೆ ಅವರಿಗೆ ಬೇಕಾದ ಹಲವು ರೀತಿಯ ಆಹಾರ ಪದಾರ್ಥಗಳನ್ನು ಅವರೇ ಬೆಳೆದು ಕೊಳ್ಳುತ್ತಾರೆ. ರೈತರು ಬೆಳೆಯುವ ತರಕಾರಿಗಳಲ್ಲಿ ಟೊಮೊಟೊ ಮತ್ತು ಆಲೂಗೆಡ್ಡೆ ಸಹ ಪ್ರಮುಖವಾಗಿವೆ. ಅಂದಹಾಗೆ ಇಂದಿನ ಲೇಖನದಲ್ಲಿ ಟೊಮೊಟೊ ಮತ್ತು ಆಲೂಗೆಡ್ಡೆಯಿಂದ ವಿದ್ಯುತ್‌ ತಯಾರಿಸುವುದು ಹೇಗೆ ಎಂಬುದನ್ನು ಲೇಖನ ಸ್ಲೈಡರ್‌ ನೋಡಿ ತಿಳಿಯಿರಿ. ಹಾಗೂ ವೀಡಿಯೋ ನೋಡಿ ಸಹ ನೀವು ಕಲಿತರೆ ತುರ್ತು ಸಂಧರ್ಭಗಳಲ್ಲಿ ವಿದ್ಯುತ್‌ ತಯಾರಿಸಲು ಅನುಕೂಲವಾಗುತ್ತದೆ.

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೇಕಾಗುವ ವಸ್ತುಗಳು

ಟೊಮೊಟೊ/ ಆಲೂಗೆಡ್ಡೆಯಿಂದ ವಿದ್ಯುತ್‌ ತಯಾರಿಸುವುದು ಹೇಗೆ?

* 4 ಟೊಮೊಟೊ ಮತ್ತು 4 ಆಲೂಗೆಡ್ಡೆಗಳು
* ತಾಮ್ರದ ಬ್ಲೇಡ್‌ಗಳು ಮತ್ತು ಹಳೆ ಶೆಲ್‌ಗಳಿಂದ ತೆಗೆದ ಜಿಂಕ್‌(ಸತು) ಬ್ಲೇಡ್‌ (ವೀಡಿಯೋ ನೋಡಿದರೆ ತಿಳಿಯುತ್ತದೆ)
* 3 ವಿದ್ಯುತ್‌ ಪ್ರವಹಿಸುವ ವೈರ್‌ಗಳು ಮತ್ತು 1 ಸಣ್ಣ ಬಲ್ಬ್‌ (ಅದು ವೈರ್‌ ಅನ್ನು ಹೊಂದಿರಲಿ)

ವಿದ್ಯುತ್‌ ಉತ್ಪಾದನೆ ಹೇಗೆ?

ಟೊಮೊಟೊ/ ಆಲೂಗೆಡ್ಡೆಯಿಂದ ವಿದ್ಯುತ್‌ ತಯಾರಿಸುವುದು ಹೇಗೆ?

ತಾಮ್ರದ ಬ್ಲೇಡ್‌ ಅನ್ನು ನಾಲ್ಕು ಸಣ್ಣ ಬ್ಲೇಡ್‌ಗಳಾಗಿ ಮತ್ತು ಹಳೆ ಶೆಲ್‌ನ ಜಿಂಕ್‌ ಬ್ಲೇಡ್‌ ಅನ್ನು ನಾಲ್ಕು ಸಣ್ಣ ಬ್ಲೇಡ್‌ಗಳಾಗಿ ಕತ್ತರಿಸಿಕೊಂಡು 4 ಟೊಮೊಟೊಗಳಿಗೂ ಒಂದು ತಾಮ್ರದ ಬ್ಲೇಡ್ ಮತ್ತು ಒಂದು ಜಿಂಕ್‌ ಬ್ಲೇಡ್‌ ಅನ್ನು ಟೊಮೊಟೊಗೆ ಸೇರಿಸಿ. 3 ವೈರ್‌ಗಳ 2 ತುದಿಗಳನ್ನು (ತಾಮ್ರದ ಬ್ಲೇಡ್‌ + ಜಿಂಕ್‌ ಬ್ಲೇಡ್‌) ಆಗಿ ಸಂಪರ್ಕಿಸಿ. ಕೊನೆಯಲ್ಲಿ ಬಲ್ಬ್‌ ಇರುವ ವೈರ್‌ಗಳನ್ನು ಸಹ "ತಾಮ್ರದ ಬ್ಲೇಡ್‌ + ಜಿಂಕ್‌ ಬ್ಲೇಡ್‌" ಸೇರಿಸಿ. ಆಗ ಬಲ್ಬ್‌ ಬೆಳಕು ನೀಡುತ್ತದ. ಇದೇ ಸುಲಭ ಮಾರ್ಗವನ್ನು ಆಲೂಗೆಡ್ಡೆಯಿಂದ ವಿದ್ಯುತ್‌ ಉತ್ಪಾದಿಸಲು ಸಹ ಅನ್ವಯಿಸಿ. ವೀಡಿಯೋ ನೋಡಲು ಮುಂದಿನ ಸ್ಲೈಡ್‌ ಕ್ಲಿಕ್ ಮಾಡಿ.

rn

ಟೊಮೊಟೊ/ ಆಲೂಗೆಡ್ಡೆಯಿಂದ ವಿದ್ಯುತ್‌ ತಯಾರಿಸುವುದು ಹೇಗೆ?

ಟೊಮೊಟೊ ಮತ್ತು ಆಲೂಗೆಡ್ಡಯಿಂದ ವಿದ್ಯುತ್‌ ಉತ್ಪಾದಿಸುವ ವೀಡಯೋ ನೋಡಿರಿ.
ವೀಡಿಯೋ ಕೃಪೆ: Navin Khambhala # crazyNK

rn

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ನೀವು ಈ ವೀಡಿಯೋ ನೋಡಿ ಸಹ ಟೇಬಲ್‌ ಫ್ಯಾನ್‌ ಸಹಾಯದಿಂದ ಮನೆಯಲ್ಲಿ ಹೇಗೆ AC ತಯಾರಿಸುವುದು ಎಂದು ತಿಳಿಯಬಹುದು.
ವೀಡಿಯೋ ಕೃಪೆ:fixitsamo

 ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Produce Electricity using Tomato and Potato. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot