ನೀವು ನೋಡಿರದ 8 ವಿಚಿತ್ರ ಸ್ಮಾರ್ಟ್ ಫೋನ್ ಚಾರ್ಜರ್ ಗಳು

|

ಫೋನ್ ಬ್ಯಾಟರಿ ಸಾಯುತ್ತಿದೆ ಮತ್ತು ನಿಮ್ಮ ಹತ್ತಿರ ಯಾವುದೇ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್ ಇಲ್ಲದೇ ಹೋದರೆ ಎಷ್ಟು ಬೇಸರವಾಗುತ್ತದೆ ಎನ್ನುವುದನ್ನು ನೀವು ಊಹಿಸಬಹುದು.

ನೀವು ನೋಡಿರದ 8 ವಿಚಿತ್ರ ಸ್ಮಾರ್ಟ್ ಫೋನ್ ಚಾರ್ಜರ್ ಗಳು

ಈ ರೀತಿಯ ಪರಿಸ್ಥಿತಿ ನೀವು ಟ್ರೆಕ್ಕಿಂಗ್ ಹೋಗಿದ್ದಾಗಲೋ ಪ್ರವಾಸಕ್ಕೆ ಹೋಗಿದ್ದಾಗಲೋ ಎದುರಾಗಬಹುದು. ನೀವು ಒಂದು ಸೆಲ್ಫೀಯನ್ನೂ ತೆಗೆದುಕೊಳ್ಳುವುದಕ್ಕಾಗುವುದಿಲ್ಲ ಅಥವಾ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ.
ಓದಿರಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲೀಕೊದಿಂದ ಭರ್ಜರಿ ಆಫರ್

ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಸಹಾಯವಾಗಲೆಂದೇ, ಮಾಮೂಲಿ ಫೋನ್ ಚಾರ್ಜರ್ ಗಳಿಗಿಂತ ವಿಭಿನ್ನವಾಗಿರುವ ಚಾರ್ಜರ್ ಗಳು ಲಭ್ಯವಿವೆ. ನವೀಕರಿಸಬಹುದಾದ ಇಂಧನ ಮೂಲಗಳ ಚಾರ್ಜರ್ ಗಳಿವೆ ಮತ್ತು ವಿಶಿಷ್ಟವಾಗಿರುವ ವಿವಿಧ ರೀತಿಯ ಚಾರ್ಜರ್ ಗಳಿವೆ.
ಓದಿರಿ: ಲೀಕೊ ಲೀ ಮಾಲ್: ಗ್ಯಾಜೆಟ್ ಪ್ರಿಯರಿಗೆ ಹಬ್ಬ

ಈ ವಿಶಿಷ್ಟ ಸ್ಮಾರ್ಟ್ ಫೋನ್ ಚಾರ್ಜರುಗಳ ಕಡೆಗೊಮ್ಮೆ ಗಮನಹರಿಸಿ.

ಲೆದರ್ ಜಾಕೆಟ್ ಚಾರ್ಜರ್

ಲೆದರ್ ಜಾಕೆಟ್ ಚಾರ್ಜರ್

ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಂಡು ಮೊಬೈಲಿನಂತಹ ಸಣ್ಣ ಗ್ಯಾಜೆಟ್ಟುಗಳನ್ನು ಚಾರ್ಜ್ ಮಾಡಬಲ್ಲ ಬಟ್ಟೆಗಳನ್ನು ಡಚ್ ದೇಶದ ವಿನ್ಯಾಸಕಾರ ಪೌಲಿನ್ ವಾನ್ ಡೊಂಗೆನ್ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ. ಎಲೆಕ್ಟ್ರಿಕಲ್ ವೈರುಗಳನ್ನು ಬಟ್ಟೆಯ ಒಳಗೆ ನೇಯ್ಗೆ ಮಾಡಲಾಗಿದೆ ಮತ್ತಿದು ಲೇಸರ ಇರುವ ನಿಯೋಪ್ರೀನ್ ಅನ್ನು ಲೆದರ್ರಿನೊಂದಿಗೆ ಸಂಪರ್ಕಿಸುತ್ತದೆ.

ಜೋಸ್ ಜೀನ್ಸ್ #Hello

ಜೋಸ್ ಜೀನ್ಸ್ #Hello

ಕ್ಯಾಲಿಫೋರ್ನಿಯಾದ ಫ್ಯಾಷನ್ ಬ್ರ್ಯಾಂಡ್ ಜೋಸ್ ಜೀನ್ಸ್ ಸಂಸ್ಥೆಯು #Hello ಹೆಸರಿನ ಜೀನ್ಸನ್ನು ಹೊರತಂದಿದೆ. ಇದರಲ್ಲಿ ಒಂದು ರಹಸ್ಯ ಜೇಬಿದೆ, ಒಂದು ಸ್ಲಿಮ್ ಬ್ಯಾಟರಿ ಮತ್ತು ಐಫೋನುಗಳನ್ನು ಚಾರ್ಜ್ ಮಾಡುವ ಪವರ್ ಕಾರ್ಡ್ ಆ ಜೇಬಿನಲ್ಲಿರುತ್ತದೆ. ನೀವು ಪ್ರವಾಸದಲ್ಲಿದ್ದಾಗ ನಿಮ್ಮ ಐಫೋನನ್ನು ಚಾರ್ಜ್ ಮಾಡಲು ಇದು ಅಂದದ ವಿಧಾನ. ಇದರ ಬೆಲೆ $ 189 (ಅಂದಾಜು 12,500 ರುಪಾಯಿ) ಮತ್ತು ಬ್ಯಾಟರಿಗೆ ಪ್ರತ್ಯೇಕ $ 49 (ಅಂದಾಜು 3,000 ರುಪಾಯಿ)

ಸೋಲಾರ್ ಜ್ಯಾಕೆಟ್ ಚಾರ್ಜರ್

ಸೋಲಾರ್ ಜ್ಯಾಕೆಟ್ ಚಾರ್ಜರ್

ಸೋಲಾರ್ ಜ್ಯಾಕೆಟ್ ಚಾರ್ಜರ್ ಸರಳವಾಗಿದೆ, ಹೊಸ ಪರಿಕಲ್ಪನೆಯದ್ದಾಗಿದೆ. ಈ ಜ್ಯಾಕೆಟ್ಟಿನ ಹಿಂಬದಿಯಲ್ಲಿ ನಾಲ್ಕು ಸೋಲಾರ್ ಪ್ಯಾನೆಲ್ಲುಗಳಿವೆ; ನೀವು ಬಿಸಿಲಿನಲ್ಲಿದ್ದಾಗ ಈ ಪ್ಯಾನಲ್ಲುಗಳು ಸೂರ್ಯನ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಈ ಸೋಲಾರ ಜ್ಯಾಕೆಟ್ಟನ್ನು ನೀವು ಎಲ್ಲಾದರೂ ಯಾವಾಗಲಾದರೂ ಉಪಯೋಗಿಸಬಹುದು.

ಸೋಲ್ ಪವರ್ ಎನ್ಸೋಲ್ಸ್

ಸೋಲ್ ಪವರ್ ಎನ್ಸೋಲ್ಸ್

ಸೋಲ್ ಪವರ್ ಎನ್ಸೋಲ್ಸ್ ಪ್ರಕಾರ, ಅವರು ತಯಾರಿಸಿರುವ ಶೂಗಳನ್ನು ಹಾಕಿಕೊಂಡು ಒಂದು ಘಂಟೆ ನಡೆದರೆ ನಿಮ್ಮ ಸ್ಮಾರ್ಟ್ ಫೋನನ್ನು 2.5 ಘಂಟೆ ಚಾರ್ಜ್ ಮಾಡಿಕೊಳ್ಳಬಹುದು. ಈ ಇನ್ಸೋಲುಗಳನ್ನು ನೀವು ದಿನನಿತ್ಯ ಧರಿಸುವ ಶೂವಿನೊಳಗೆ ಇರಿಸುವಂತೆ ರೂಪಿಸಲಾಗಿದೆ. ಇದರಲ್ಲಿರುವ ಯಾಂತ್ರಿಕ ವ್ಯವಸ್ಥೆ ವಿದ್ಯುತ್ ಉತ್ಪಾದಿಸುತ್ತದೆ.

ಹೆಚ್.ಪಿ ಪವರ್ ಅಪ್ ಬ್ಯಾಕ್ ಪ್ಯಾಕ್

ಹೆಚ್.ಪಿ ಪವರ್ ಅಪ್ ಬ್ಯಾಕ್ ಪ್ಯಾಕ್

ಈ ಹೊಸ ಹೆಚ್.ಪಿ ಪವರ್ ಅಪ್ ಬ್ಯಾಕ್ ಪ್ಯಾಕ್ ತುಂಬಾ ಸ್ಮಾರ್ಟಾದ ಚಾರ್ಜರ್. ಇದರಲ್ಲಿ ಶಾಖ ಸಂವೇದಕಗಳಿವೆ, ಉಷ್ಣತೆಯನ್ನು ಅಳೆದು ಆಟೋಮ್ಯಾಟಿಕ್ ಆಗಿ ತನ್ನ ಕೆಲಸವನ್ನು ನಿಯಂತ್ರಿಸಿಕೊಳ್ಳುತ್ತದೆ. ಈ ಬ್ಯಾಕ್ ಪ್ಯಾಕಿನಲ್ಲಿ 22,400 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ. ಇದರ ಮೂಲಕ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳನ್ನು ತ್ವರಿತವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಇದರ ಬೆಲೆ $199.99 (ಅಂದಾಜು 13,000 ರುಪಾಯಿ)

EcoXpower ಪೆಡಲ್ ಚಾರ್ಜರ್

EcoXpower ಪೆಡಲ್ ಚಾರ್ಜರ್

EcoXpower ಪೆಡಲ್ ಚಾರ್ಜರ್ ಅನ್ನು ಯಾವುದೇ ಸೈಕಲ್ಲಿನ ಮುಂಬದಿಯ ಚಕ್ರಕ್ಕೆ ಕೂರಿಸಬಹುದು. ಇದರಲ್ಲಿ ಯು.ಎಸ್.ಬಿ ಪೋರ್ಟ್ ಇದೆ, ಇದರ ಮೂಲಕ ನಿಮ್ಮ ಫೋನನ್ನು ಚಾರ್ಜ್ ಮಾಡಿಕೊಳ್ಳಬಹುದು. ಜೊತೆಗೆ, ಒಂದು ವ್ಯಾಟಿನ ಎಲ್.ಇ.ಡಿ ಬಲ್ಬ್ ಇದೆ. ಈ ಬಲ್ಬ್ ಅನ್ನು ಹೆಡ್ ಲೈಟ್ ಆಗಿ ಉಪಯೋಗಿಸಿಕೊಳ್ಳಬಹುದು. 700 ಎಂ.ಎ.ಹೆಚ್ ಬ್ಯಾಟರಿಯಿದೆ. ಇದರ ಬೆಲೆ $ 100 (ಅಂದಾಜು 6,000 ರುಪಾಯಿ).

ಸೌಂಡ್ ಚಾರ್ಜ್ ಟಿ ಶರ್ಟ್

ಸೌಂಡ್ ಚಾರ್ಜ್ ಟಿ ಶರ್ಟ್

ಆರೆಂಜ್ ಯುಕೆ ಕಂಪನಿಯು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ವಿದ್ಯುತ್ ಉತ್ಪಾದಿಸುವ ಟಿ ಶರ್ಟ್ ಅನ್ನು ಹೊರತಂದಿದೆ. ಇದರಲ್ಲಿ ಸೌಂಡನ್ನು ವಿದ್ಯುತ್ ಆಗಿ ಪರಿವರ್ತಿಸಬಲ್ಲ ಕನ್ವರ್ಟರ್ ಇದೆ, ಮೊಬೈಲ್ ಫೋನ್ ಇಡಲು ಪವರ್ ಡಾಕ್ ಮತ್ತು ಒಂದು ಬ್ಯಾಟರಿ ಕೂಡ ಇದೆ.

ಆರೆಂಜ್ ಪವರ್ ಪಂಪ್

ಆರೆಂಜ್ ಪವರ್ ಪಂಪ್

ಕಾಲಿನಿಂದ ಒತ್ತಬಹುದಾದ ಏರ್ ಬೆಡ್ ಫುಟ್ ಪಂಪ್ ನ ಸಹಾಯದಿಂದ, ಆರೆಂಜ್ ಪವರ್ ಪಂಪ್ ಮೊಬೈಲನ್ನು ಚಾರ್ಜ್ ಮಾಡುಲು ಬೇಕಾಗಿರುವ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಪಂಪಿನ ಮೂಲಕ ಉತ್ಪತ್ತಿಯಾಗುವ ಗಾಳಿಯು ಟರ್ಬೈನನ್ನು ತಿರುಗಿಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತದೆ. ಇದು ಕಡಿಮೆ ಭಾರದ ಬ್ಯಾಕ್ ಪ್ಯಾಕಿನೊಳಗೆ ಸಲೀಸಾಗಿ ಇಡಬಹುದಾದ ಸಾಧನವಾಗಿದೆ.

Best Mobiles in India

English summary
Here we have come up with a list of chargers that are unique and cool to charge your phone on the go. Take a look at these ranging from a backpack, pedal chargers, t-shirt charger, jeans, etc.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X