ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್‌ನಲ್ಲಿದೆ 100GB ಡೇಟಾ: ನಿಮಗೆ ಇದು ಗೊತ್ತಾ..?

Written By:

ಜಿಯೋ ಉಚಿತ ಸೇವೆಯನ್ನು ನೀಡುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಇತರೆ ಟೆಲಿಕಾಂ ಕಂಪನಿಗಳು ತಕರಾರು ತೆಗೆದ ಕಾರಣ ರಿಲಯನ್ಸ್ ಮಾಲೀಕತ್ವದ ಜಿಯೋ ಪ್ರೈಮ್ ಆಫರ್ ಘೋಷಣೆ ಮಾಡಿ ತನ್ನ ಸೇವೆಗಳಿಗೆ ದರ ವಿಧಿಸುವುದಾಗಿ ತಿಳಿಸಿತು.

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್‌ನಲ್ಲಿದೆ 100GB ಡೇಟಾ: ನಿಮಗೆ ಇದು ಗೊತ್ತಾ..?

ಓದಿರಿ: ಜಿಯೋದಿಂದ ಮತ್ತೊಂದು ಸೇವೆ: ಜಿಯೋ 4G ಲ್ಯಾಪ್‌ಟಾಪ್' ಶೀಘ್ರವೇ ಮಾರುಕಟ್ಟೆಗೆ

'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೊದಲ ಆರು ತಿಂಗಳು ಯಾವುದೇ ಷರತ್ತು ಇಲ್ಲದೇ ಉಚಿತ ಡೇಟಾ ಮತ್ತು ಉಚಿತ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ಮಾಡಿಕೊಟ್ಟಿದ ಜಿಯೋ, ನಂತರ 'ಹ್ಯಾಪಿ ನ್ಯೂಯಿರ್' ಹೆಸರಲಿನಲ್ಲಿ ದಿನಕ್ಕೆ 1GB ಡೇಟಾ, ಹೆಚ್ಚಿಗೆ ಬೇಕಿದರೆ ಹಣ ಪಾವತಿಸಬೇಕು ಹಾಗೂ ಉಚಿತ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿತ್ತು. ಇದಾದ ನಂತರ ಪ್ರೈಮ್ ಆಫರ್ ಘೋಷಣೆ ಮಾಡಿತ್ತು.

ಓದಿರಿ: ಜಿಯೋ ಪ್ರೈಮ್ ಬಳಕೆದಾರರಿಗೆ ಟ್ರಾಯ್ ನೀಡಿದೆ ಸಿಹಿ ಸುದ್ದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೈಮ್ ಆಫರ್ ಘೋಷಣೆ:

ಪ್ರೈಮ್ ಆಫರ್ ಘೋಷಣೆ:

ಮಾರ್ಚ್ 31ಕ್ಕೆ ಜಿಯೋ ಹ್ಯಾಪಿ ನ್ಯೂ ಯಿಯರ್ ಆಫರ್ ಕೊನೆಯಾಗುತ್ತಿತು. ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರಿಗೆ ಪ್ರೈಮ್ ಸದಸ್ಯರಾಗುವಂತೆ ಕರೆ ನೀಡಿತ್ತು. ಅಲ್ಲದೇ ಹೇಗೆ ಸದಸ್ಯರಾದವರಿಗೆ ವರ್ಷ ಪೂರ್ತಿ ಹ್ಯಾಪಿ ನ್ಯೂಯಿರ್ ಸೇವೆಯನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಹೀಗೆ ಸದ್ಯರಾದವರಿಗೆ ಮತ್ತೆ ಮೂರು ತಿಂಗಳ ಉಚಿತ ಸೇವೆಯನ್ನು ಘೋಷಣೆ ಮಾಡಿತು.

ಸಮ್ಮರ್ ಸರ್ಪ್ರೈಸ್ ಆಫರ್:

ಸಮ್ಮರ್ ಸರ್ಪ್ರೈಸ್ ಆಫರ್:

ಮೊದಲು ಉಚಿತ ಸೇವೆ, ನಂತರ ಉಚಿತ ಸೇವೆಗೆ ಬಳಕೆಗೆ ಷರತ್ತು, ಈಗ ತನ್ನ ಸೇವೆಗೆ ಕೊಂಚ ಬೆಲೆ ನಿಗಧಿ. ಹೀಗೆ ಮೂರು ಹಂತದಲ್ಲಿ ತನ್ನ ಬಳಕೆದಾರಿಗೆ ಉಪಯೋಗವನ್ನು ಮಾಡಿಕೊಟ್ಟ ಜಿಯೋ, ಇತರೆ ಕಂಪನಿಗಳ ತಂತ್ರವನ್ನು ನೆಲಕಚ್ಚುವಂತೆ ಮಾಡಿದೆ. ತನ್ನ ಮೂರನೇ ಉಚಿತ ಕೊಡುಗೆಯಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಘೋಷನೆ ಮಾಡಿದ್ದು, 303 ರೂ. ಪಾವತಿ ಮಾಡಿದರೆ ಮೂರು ತಿಂಗಳು ಹ್ಯಾಪಿ ನ್ಯೂಯಿರ್ ಸೇವೆಯನ್ನು ಅನುಭವಿಸಬಹುದಾಗಿದೆ.

ಮೂರು ತಿಂಗಳೊಂದಿಗೆ ಇನ್ನು ಇದೆ;

ಮೂರು ತಿಂಗಳೊಂದಿಗೆ ಇನ್ನು ಇದೆ;

ಜಿಯೋ ತನ್ನ ಪ್ರೈಮ್ ಸದಸ್ಯರಾದವರಿಗೆ ಮಾತ್ರ ಸಮ್ಮರ್ ಸರ್ಪ್ರೈಸ್ ಆಫರ್ ನೀಡಲು ಮುಂದಾಗಿದೆ. ಹಾಗಾಗಿ ಪ್ರೈಮ್ ಸದಸ್ಯತ್ವ ಅವಧಿಯನ್ನು ಮತ್ತಷ್ಟು ವಿಸ್ತರಿಸಿದೆ. ಹಾಗಾಗಿ 303 ರೂ. ಪಾವತಿ ಮಾಡಿ ಒಂದು ತಿಂಗಳು ಸೇವೆಯನ್ನು ಪಡೆಯುತ್ತಿದ್ದವರು ಈಗ ಅದೇ ದುಡ್ಡಿಗೆ ಮೂರು ತಿಂಗಳು ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇಲ್ಲಿದೆ 100 GB ಆಫರ್:

ಇಲ್ಲಿದೆ 100 GB ಆಫರ್:

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲು ಮುಂದಾದ ಮಾದರಿಯಲ್ಲಿ ಮೂರು ತಿಂಗಳಿಗೆ 100 GB ಡೇಟಾವನ್ನು ನೀಡಲಿದೆ. 303 ಮತ್ತು 499 ರೂ. ರೀಚಾರ್ಜ್ ಮಾಡಿಸಿದವರಿಗೆ ಮೂರು ತಿಂಗಳ ಸೇವೆ ಉಚಿತವಾಗಿರಲಿದ್ದು, ಇದೇ ಮಾದರಿಯಲ್ಲಿ 999 ರೂ.ಗಳಿಗಿಂತ ಹೆಚ್ಚಿನ ರೀಚಾಜ್ ಮಾಡಿಸಿದವರಿಗೆ ಜಿಯೋ 100 GB ಡೇಟಾವನ್ನು ಉಚಿತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ನಲ್ಲಿ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Jio Summer Surprise offer provides 100GB data with Rs. 999 or more value. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot