ಜಿಯೋ ಪ್ರೈಮ್ ಬಳಕೆದಾರರಿಗೆ ಟ್ರಾಯ್ ನೀಡಿದೆ ಸಿಹಿ ಸುದ್ದಿ

ಜಿಯೋ ದೇಶದಲ್ಲಿ ಅತೀ ವೇಗದ 4G ಡೌನ್‌ಲೋಡ್ ಸೇವೆಯನ್ನು ನೀಡುತ್ತಿದೆ ಎಂದು ಟ್ರಾಯ್ ಬಿಡುಗಡೆ ಮಾಡಿರುವ ಮಾರ್ಚ್ ತಿಂಗಳ ಡೇಟಾ ಮಾಹಿತಿಯಲ್ಲಿ ತಿಳಿದು ಬಂದಿದೆ.

|

ಇತ್ತೀಚಿಗಷ್ಟೆ ಏರ್‌ಟೆಲ್ ದೇಶದ ಅತೀ ವೇಗದ 4G ವೇಗವನ್ನು ಹೊಂದಿರುವುದಾಗಿ ಜಾಹೀರಾತುಗಳನ್ನು ನೀಡಿ ದೊಡ್ಡ ವಿವಾದ ಹುಟ್ಟಿ ಹಾಕಿತ್ತು. ಇದಕ್ಕೆ ರಿಲಯನ್ಸ್ ಮಾಲೀಕತ್ವದ ಜಿಯೋ ತಕರಾರು ತೆಗೆದಿತ್ತು. ಏರ್‌ಟೆಲ್ ಖಾಸಗಿ ಡೇಟಾ ಸ್ಪೀಡ್ ಆಳತೆ ಮಾಡುವ ಓಕ್ಲಾ ನೀಡಿದ ಮಾಹಿತಿ ಅನ್ವಯ ತನ್ನದೇ ವೇಗದ ನೆಟ್‌ವರ್ಕ್ ಎಂದು ಹೇಳಿಕೊಂಡು ಜಾಹೀರಾತು ಪ್ರಸಾರ ಮಾಡುವುದು ಸರಿಯಲ್ಲ ಎಂದು.

ಜಿಯೋ ಪ್ರೈಮ್ ಬಳಕೆದಾರರಿಗೆ ಟ್ರಾಯ್ ನೀಡಿದೆ ಸಿಹಿ ಸುದ್ದಿ

ಓದಿರಿ: ಕೇವಲ 1 ರೂ.ಗೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌: ಇದು ಸುಳ್ಳಲ್ಲ, 100% ನಿಜ

ಇದೇ ವಿಷಯವಾಗಿ ಏರ್‌ಟೆಲ್ ವಿರುದ್ಧ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್‌ನಲ್ಲಿ ಜಿಯೋ ದೂರು ದಾಖಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಏರ್‌ಟೆಲ್‌ಗೆ ಎಚ್ಚರಿಕೆ ನೀಡಿ, ಏಪ್ರಿಲ್ 11 ರ ಒಳಗೆ ತನ್ನ ಜಾಹೀರಾತುಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚನೆ ನೀಡಿತ್ತು. ಈಗ ಟ್ರಾಯ್ ಮಾರ್ಚ್ ನಲ್ಲಿ 4G ಡೌನ್‌ಲೋಟ್ ವೇಗದ ಕುರಿತ ಡೇಟಾವನ್ನು ಹೊರಹಾಕಿದೆ.

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಜಿಯೋ ದೇಶದಲ್ಲಿ ಅತೀ ವೇಗದ 4G :

ಜಿಯೋ ದೇಶದಲ್ಲಿ ಅತೀ ವೇಗದ 4G :

ಆದರೆ ಸದ್ಯ ಜಿಯೋ ದೇಶದಲ್ಲಿ ಅತೀ ವೇಗದ 4G ಡೌನ್‌ಲೋಡ್ ಸೇವೆಯನ್ನು ನೀಡುತ್ತಿದೆ ಎಂದು ಟ್ರಾಯ್ ಬಿಡುಗಡೆ ಮಾಡಿರುವ ಮಾರ್ಚ್ ತಿಂಗಳ ಡೇಟಾ ಮಾಹಿತಿಯಲ್ಲಿ ತಿಳಿದು ಬಂದಿದೆ. ಭಾರತದಲ್ಲಿ ಜಿಯೋ 4G ನೆಟ್‌ವರ್ಕ್ 16.487 Mbps ಡೌನ್‌ಲೋಡ್ ವೇಗವನ್ನು ಹೊಂದಿದೆ ಎನ್ನಲಾಗಿದೆ.

ಜಿಯೋದಲ್ಲಿ 16.487 Mbps ಡೌನ್‌ಲೋಡ್ ವೇಗ:

ಜಿಯೋದಲ್ಲಿ 16.487 Mbps ಡೌನ್‌ಲೋಡ್ ವೇಗ:

ಟ್ರಾಯ್ ಮೈಸ್ಪಿಡ್ ಆಪ್ ನಲ್ಲಿ ತೋರಿಸಿರುವಂತೆ ರಿಲಯನ್ಸ್ ಮಾಲೀಕತ್ವದ ಜಿಯೋ ಟೆಲಿಕಾಮ್ ವಲಯದಲ್ಲಿ ವೇಗದ 4G ಮೊಬೈಲ್ ಡೌನ್‌ಲೋಡ್ ಸೇವೆಯನ್ನು ನೀಡುತ್ತಿದೆ. ಜಿಯೋ 16.487 Mbps ಡೌನ್‌ಲೋಡ್ ವೇಗವನ್ನು ಹೊಂದುವ ಮೂಲಕ ಮೊದಲನೇ ಸ್ಥಾನದಲ್ಲಿದೆ.

ಐಡಿಯಾಕ್ಕೆ ಎರಡನೇ ಸ್ಥಾನ:

ಐಡಿಯಾಕ್ಕೆ ಎರಡನೇ ಸ್ಥಾನ:

ಇನ್ನು ಸರ್‌ಪ್ರೈಸ್ ಎನ್ನುವಂತೆ ಐಡಿಯಾ ಎರಡನೇ ಸ್ಥಾನದಲ್ಲಿದ್ದು, 12.092 Mbps ಡೌನ್‌ಲೋಡ್ ವೇಗವನ್ನು ಹೊಂದಿದೆ ಎನ್ನಲಾಗಿದೆ. ಈ ಮೂಲಕ ಏರ್‌ಟೆಲ್ ಮತ್ತು ವೋಡೊಪೋನ್ ಹಿಂದಿಕ್ಕಿದೆ.

ನಂತರದ ಸ್ಥಾನದಲ್ಲಿದೆ ಏರ್‌ಟೆಲ್-ವೋಡೊಪೋನ್:

ನಂತರದ ಸ್ಥಾನದಲ್ಲಿದೆ ಏರ್‌ಟೆಲ್-ವೋಡೊಪೋನ್:

ಇಷ್ಟು ದಿನ ವೇಗದ 4G ನೆಟ್‌ವರ್ಕ್ ಎನ್ನುತ್ತಿದ್ದ ಏರ್‌ಟೆಲ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, 10.439 Mbps ಡೌನ್‌ಲೋಡ್ ಸ್ಪೀಡ್ ಹೊಂದಿದೆ ಎನ್ನಲಾಗಿದೆ. ಉಳಿದಂತೆ ನಾಲ್ಕನೇ ಸ್ಥಾನದಲ್ಲಿದೆ ವೋಡೊಪೋನ್ 7.933 Mbps ವೇಗದಲ್ಲಿ ಡೌನ್‌ಲೋಡ್ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಪ್‌ಲೋಡ್ ವೇಗ ಹೇಗಿದೆ:

ಆಪ್‌ಲೋಡ್ ವೇಗ ಹೇಗಿದೆ:

4G ಆಪ್‌ಲೋಡ್ ವೇಗದಲ್ಲಿ ಜಿಯೋ ಹಿಂದೆ ಬಿದ್ದಿದೆ. ಇದರಲ್ಲಿ ಐಡಿಯಾ ಮೊದಲ ಸ್ಥಾನದಲ್ಲಿದೆ. ಇದರ ವೇಗ 6.536Mbps ಇದೆ. ನಂತರದ ಎರಡನೇ ಸ್ಥಾನದಲ್ಲಿರುವ ವೋಡೊಪೋನ್ 5.429Mbps ವೇಗವನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿ ಏರ್‌ಟೆಲ್ ಇದ್ದು, 4.455Mbps ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಯೋ ನಾಲ್ಕನೇ ಸ್ಥಾನದಲ್ಲಿದ್ದು, 3.581Mbps ವೇಗದಲ್ಲಿ ಆಪ್‌ಲೋಡ್ ಮಾಡುತ್ತಿದೆ.

Best Mobiles in India

Read more about:
English summary
Jio has fastest 4G network in India at 16.487Mbps average download speed. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X