ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್: ಪ್ರೀ ಬುಕಿಂಗ್ ಆರಂಭ, ಬೆಲೆ ಎಷ್ಟು..?

Written By:

ಸದ್ಯ ಟೆಕ್ ಲೋಕದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ನೋಕಿಯಾ. ಎಂದು ನೋಕಿಯಾ ಮತ್ತೆ ಮಾರುಕಟ್ಟೆಗೆ ಹಿಂತಿರುಗುವ ಮಾಹಿತಿ ಹೊರ ಹಾಕಿತೋ ಅಂದಿನಿಂದಲೂ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಈ ಪೋನುಗಳನ್ನು ಕೊಳ್ಳಲು.

ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್: ಪ್ರೀ ಬುಕಿಂಗ್ ಆರಂಭ, ಬೆಲೆ ಎಷ್ಟು..?

ಓದಿರಿ: ಅಣ್ಣಾವ್ರರಿಗೆ ನಮನ ಸಲ್ಲಿಸಿದ ಗೂಗಲ್: ಕನ್ನಡಿಗರೇ ಇಲ್ಲಿ ನೋಡಿ ಎಂತಹ ಗೌರವ

ಸದ್ಯ ದೊರೆತಿರುವ ಮಾಹಿತಿ ಪ್ರಕಾರ ನೋಕಿಯಾ ಭಾರತಕ್ಕೆ ಬರುವ ಮುನ್ನವೇ ಜರ್ಮನಿ ಮತ್ತು ಆಸ್ಟ್ರೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್ ಆಗಲಿದ್ದು, ಈಗಾಗಲೇ ಪ್ರೀ ಬುಕಿಂಗ್ ಸಹ ಆರಂಭವಾಗಿದೆ ಎಂದು ತಿಳಿದುಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3310 ರೀಲಿಸ್:

ನೋಕಿಯಾ 3310 ರೀಲಿಸ್:

ಈ ಹಿಂದೆಯೇ ಹೇಳಿದಂತೆ ಮೊದಲು ಮಾರುಕಟ್ಟಗೆ ಬರುವುದು ನೋಕಿಯಾ 3310. ಈ ಹಿಂದೆ ಚೀನಾ ಮಾರುಕಟ್ಟೆಯಲ್ಲಿ ನೋಕಿಯಾ 6 ಕಾಣಿಸಿಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ ನೋಕಿಯಾ ಲಾಂಚ್ ಮಾಡಿರುವ ಫೀಚರ್ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಪ್ರೀ ಬುಕಿಂಗ್ ಆರಂಭ:

ಪ್ರೀ ಬುಕಿಂಗ್ ಆರಂಭ:

ಈಗಾಗಲೇ ಜರ್ಮನ್ ಮತ್ತು ಆಸ್ಟ್ರೀಯ ಮಾರುಕಟ್ಟೆಯಲ್ಲಿ ನೋಕಿಯಾ 3310 ಕಾಣಿಸಿಕೊಂಡಿದ್ದು, ಈಗಾಗಲೇ ಪ್ರೀ ಬುಂಕಿಂಗ್ ಆರಂಭವಾಗಿದೆ ಎನ್ನಲಾಗಿದೆ. ಈ ಹಿಂದೆ ಚೀನಾ ಮಾರುಕಟ್ಟೆಯಲ್ಲಿ ಅನುಸರಿಸಿದ ರೀತಿಯನ್ನೇ ನೋಕಿಯಾ ಇಲ್ಲಿಯೂ ಬಳಕೆ ಮಾಡಿಕೊಳ್ಳುತ್ತಿದೆ.

ಆನ್‌ಲೈನಿನಲ್ಲಿ ಮಾರಾಟ:

ಆನ್‌ಲೈನಿನಲ್ಲಿ ಮಾರಾಟ:

ನೋಕಿಯಾ ಈ ಹಿಂದಿನಂತೆ ಮೊದಲು ಸಾಮಾನ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಬದಲು ಮೊದಲು ಆನ್‌ಲೈನಿನಲ್ಲಿ ಮಾರಾಟ ಆರಂಭಿಸಲಿದೆ. ಇದು ಹೆಚ್ಚಿನ ಜನರನ್ನು ತಲುಪುವುದಲ್ಲದೇ ಇದರಿಂದ ನೋಕಿಯಾ ಖ್ಯಾತಿಯೂ ಹೆಚ್ಚಲಿದೆ. ಇದು ನೋಕಿಯಾ ಮಾರ್ಕೆಟಿಂಗ್ ತಂತ್ರ ಎಂದೇ ಹೇಳಬಹುದು.

ನೋಕಿಯಾ 3310 ಬೆಲೆ:

ನೋಕಿಯಾ 3310 ಬೆಲೆ:

ನೋಕಿಯಾ 3310 ಜರ್ಮನ್ ಮತ್ತು ಆಸ್ಟ್ರೀಯ ಮಾರುಕಟ್ಟೆಯಲ್ಲಿ EUR 49 (ರೂ.3,400)ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಆದರೆ ಭಾರತೀಯ ಮಾರುಕಟ್ಟಗೆ ಬಂದರೆ ಈ ಫೋನಿನ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೇ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
it has been the Nokia 3310 (2017). Now it seems like the revamped version of the feature phone will be made available later this month to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot