ಐಟಿಯಲ್ಲಿ ಕೆಲಸ ಬೇಕೆ?.. ಹಾಗಿದ್ರೆ ಈ ಐಟಿ ಉದ್ಯೋಗಿಯ ಕಥೆ ಕೇಳಿ!!!
ಉದ್ಯೋಗಿಗಳನ್ನು ಹೇಗೆಲ್ಲಾ ಐಟಿ ಕೆಲಸದಿಂದ ತೆಗೆಯಲಾಗುತ್ತದೆ ಎಂದು ಒಂದು ಸಣ್ಣ ಉದಾಹರಣೆ ಇಲ್ಲಿದೆ.!!
ಐಟಿಯಲ್ಲಿ ಭಾರಿ ಬಿರುಗಾಳಿ ಬೀಸಿರುವುದು ಎಲ್ಲರಿಗೂ ಗೊತ್ತಿದೆ. ಐಟಿ ಕಂಪೆನಿಗಳು ತಮಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದ್ದು, ! ಅದಕ್ಕಾಗಿ, ಕೆಲವು ಕ್ಷುಲ್ಲಕ ಕಾರಣಗಳನ್ನು ನೀಡಿಡುತ್ತಿವೆ. ಜೊತೆಗೆ ಕೆಲವು ಕೆಟ್ಟ ತಂತ್ರವನ್ನು ಅನುಸರಿಸಲು ಆರಂಭಿಸಿವೆ.!
ಪ್ರಖ್ಯಾತ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ತನ್ನ ಕಂಪೆನಿ ಹೇಗೆ ತನ್ನನ್ನು ನಡೆಸಿಕೊಂಡಿತು ಎಂದು ಹೇಳಿದ್ದು, ಅವರು ಹೇಳಿದಂತೆ ಉದ್ಯೋಗಿಗಳನ್ನು ಹೇಗೆಲ್ಲಾ ಐಟಿ ಕೆಲಸದಿಂದ ತೆಗೆಯಲಾಗುತ್ತದೆ ಎಂದು ಒಂದು ಸಣ್ಣ ಉದಾಹರಣೆ ಇಲ್ಲಿದೆ.!!

ಓದಿರಿ: ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು..!!
23ರಂದು ಮ್ಯಾನೇಜರ್ ಅವರನ್ನು ಭೇಟಿಯಾಗುವಂತೆ ನನಗೆ ಕರೆ ಬಂತು. ಹೈದರಬಾದ್ ಮುಖ್ಯಸ್ಥರ ಜೊತೆ ವಿಡಿಯೋ ಚಾಟ್ ಮಾಡುತ್ತಿರುವಾಗ ನೀನು ಉದ್ಯೋಗವನ್ನು ತೊರೆಯಬೇಕು. ನಿನಗೆ 2 ವಾರ ಸಮಯವಕಾಶ ಮತ್ತು 2 ತಿಂಗಳ ಮೂಲ ವೇತನ ನೀಡುತ್ತೇವೆ ಎಂದಷ್ಟೇ ಹೇಳಿದರು. ಅದಕ್ಕೆ ಕಾರಣವನ್ನು ಸಹ ನೀಡಲಿಲ್ಲ.!!
ಇದಾದ ಬಳಿಕ ಮತ್ತೆ 29ರಂದು ಕರೆ ಮಾಡಿ ಇನ್ನು ಯಾಕೆ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದರು. ನಾನು ರಾಜೀನಾಮೆ ನೀಡುವುದಿಲ್ಲ ಎಂದೆ. ಇದಕ್ಕೆ ಅವರು ನಿಮ್ಮ ಕಾಂಟ್ರಾಕ್ಟ್ ಟರ್ಮಿನೇಟ್ ಮಾಡುತ್ತೇವೆ. ಈ ರೀತಿ ಮಾಡಿದರೆ ಮುಂದೆ ಬೇರೆ ಯಾವ ಕಂಪೆನಿಯಲ್ಲೂ ಕೆಲಸ ಸಿಗುವುದಿಲ್ಲ ಎಂದು ಬೆದರಿಸಿದರು.!

31 ರಂದು ಕರೆ ಮಾಡಿ, ನಿನ್ನ ಬದಲಿಗೆ ಬೇರೊಬ್ಬ ಉದ್ಯೋಗಿಯನ್ನು ರೆಫರ್ ಮಾಡು ಆತನನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎನ್ನುವ ವಿಚಿತ್ರ ಆಫರ್ ನೀಡಿದರು. ಅದೇ ದಿನ ನನಗೆ ಆಟೋಮೇಟೆಡ್ ಇಮೇಲ್ ಬಂತು. ಅದರಲ್ಲಿ ಕಂಪನಿಯಲ್ಲಿ ಇದು ನಿನ್ನ ಕೊನೆಯ ದಿನ ಎಂದಷ್ಟೇ ನಮೂದಿಸಿತ್ತು.
ಇಂದಿನಿಂದ ನಿನಗೆ ನೀಡಿರುವ ಕಂಪನಿ ಇಮೇಲ್ ಐಡಿ ಹಾಗೂ ಇತರ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಇಮೇಲ್ ಮೂಲಕ ಅವರಿಗೆ ತಿಳಿಸಲಾಗಿತ್ತು.ನಂತರ ಕೆಲಸದಿಂದ ನಾನು ಹೊರಬಿದ್ದಿದ್ದೆ . ಹೀಗೆ ನಾನು ಬಲಿಯಾದೆ ಎಂದು ಅವರು ಹೇಳಿಕೊಂಡರು.!! ಐಟಿಯಲ್ಲಿ ಕೆಲಸ ಬೇಕೆ. ಹಾಗಿದ್ರೆ ಒಮ್ಮೆ ಯೋಚಿಸಿ.!!
ಓದಿರಿ: ಫೇಸ್‌ಬುಕ್‌ನಲ್ಲಿಯೂ ಹೊಸ ದಾಖಲೆ ಸೃಷ್ಟಿಸಿದ ಬಾಹುಬಲಿ!! ಏನದು ಗೊತ್ತಾ?


Click it and Unblock the Notifications








