ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು..!!

ಆದಾಯ ತೆರಿಗೆ (ಇನ್‌ಕಮ್‌ಟ್ಯಾಕ್ಸ್) ಇಲಾಖೆ ಮಾಡಲು ಪಾನ್‌ಕಾರ್ಡ್ ಮತ್ತು ಆಧಾರ್‌ಕಾರ್ಡ್ ಲಿಂಕ್ ಮಾಡಲು ಸರಳವಾದ ಸೌಲಭ್ಯ ಕಲ್ಪಿಸಿದೆ.!!

|

ಪಾನ್‌ಕಾರ್ಡ್ ಮತ್ತು ಆಧಾರ್‌ಕಾರ್ಡ್ ಲಿಂಕ್ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇದೇ ವರ್ಷದ ಕೊನೆಯ ವೇಳೆಗೆ ಆಧಾರ್‌ಕಾರ್ಡ್ ಲಿಂಕ್ ಆಗದ ಪಾನ್‌ಕಾರ್ಡ್ಗಳನ್ನು ಬ್ಲಾಕ್ ಮಾಡಲಾಗುತ್ತದೆ ಎನ್ನುವ ಶಾಕಿಂಗ್ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದೆ !!

ಈ ಮೊದಲು ಪಾನ್‌ಕಾರ್ಡ್ ಮತ್ತು ಆಧಾರ್‌ಕಾರ್ಡ್ ಲಿಂಕ್ ಮಾಡಲು ಆನ್‌ಲೈನ್‌ ಮೂಲಕ ಮಾತ್ರ ಸಾಧ್ಯವಿತ್ತು. ಆದರೆ, ಆದಾಯ ತೆರಿಗೆ (ಇನ್‌ಕಮ್‌ಟ್ಯಾಕ್ಸ್) ಇಲಾಖೆ ಮಾಡಲು ಪಾನ್‌ಕಾರ್ಡ್ ಮತ್ತು ಆಧಾರ್‌ಕಾರ್ಡ್ ಲಿಂಕ್ ಮಾಡಲು ಸರಳವಾದ ಸೌಲಭ್ಯ ಕಲ್ಪಿಸಿದೆ.!!

ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು..!!

567678 ಮತ್ತು 56161 ಎರಡು ನಂಬರ್‌ಗಳನ್ನು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ್ದು, ಕೇವಲ ಒಂದು ಮೆಸೇಜ್ ಮೂಲಕವೇ ಪಾನ್‌ಕಾರ್ಡ್ ಮತ್ತು ಆಧಾರ್‌ಕಾರ್ಡ್ ಲಿಂಕ್ ಮಾಡಿ ಎಂದು ಆದಾಯ ತೆರಿಗೆ (ಇನ್‌ಕಮ್‌ಟ್ಯಾಕ್ಸ್) ಇಲಾಖೆ ಜಾಹಿರಾತು ನಿಡಿದೆ.

ಎಸ್‌ಎಮ್‌ಎಸ್ ಮೂಲಕವೇ ಆಧಾರ್ ಮತ್ತು ಪಾನ್ ಕಾರ್ಡ್‌ ಅನ್ನು ಹೇಗೆ ಲಿಂಕ್ ಮಾಡುವುದು ಹೇಗೆ ಎಂಬುದರ ಪೂರ್ಣ ಮಾಹಿತಿ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿಲ್ಲ. ಆದರೆ, ಇನ್ನೇನು ಕೆಲವೇ ದಿವಸಗಳಲ್ಲಿ ಎಸ್‌ಎಮ್‌ಎಸ್ ಮೂಲಕವೇ ಆಧಾರ್ ಮತ್ತು ಪಾನ್ ಕಾರ್ಡ್‌ ಲಿಂಕ್ ಹೇಗೆ ಎನ್ನುವುದು ತಿಳಿಯುತ್ತದೆ.!!

ಹಾಗಾಗಿ, ಈಗ ಪ್ರಸ್ತುತ ಇರುವ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮೂಲಕ ಆಧಾರ್ ಮತ್ತು ಪಾನ್ ಕಾರ್ಡ್‌ ಹೇಗೆ ಸಂಪರ್ಕಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ. ನಂತರ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿರಿ.( ರಿಜಿಸ್ಟರ್ ಆಗಿಲ್ಲದಿದ್ದರೆ ರಿಜಿಸ್ಟರ್ ಆಗಬೇಕಿದೆ. ಹಾಗಾಗಿ, ಮಾಹಿತಿ ಭರ್ತಿ ಮಾಡಿ ರಿಜಿಸ್ಟರ್ ಆಗಿರಿ.)

ಲಾಗಿನ್ ಆದ ನಂತರ ಏನು ಮಾಡಬೇಕು?

ಲಾಗಿನ್ ಆದ ನಂತರ ಏನು ಮಾಡಬೇಕು?

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ಹೆಸರು, ಜನ್ಮ ದಿನಾಂಕ ವಿವರಗಳನ್ನು ಪರಿಶೀಲಿಸಿ ಆದಾಯ ತೆರಿಗೆ ಇಲಾಖೆ ನಿಮ್ಮ ಎಲ್ಲಾ ವಿವರಗಳನ್ನು ಮೌಲ್ಯೀಕರಿಸುತ್ತದೆ.

ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ

ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ

ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಪಾನ್‌ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ವೆಬ್‌ಸೈಟ್‌ ಕೇಳುತ್ತದೆ. ನಿಮ್ಮೆಲ್ಲಾ ಮಾಹಿತಿಗಳು ಆಗಲೆ ಪಾನ್‌ಕಾರ್ಡ್ ದಾಖಲೆಯಲ್ಲಿ ಇರುವುದರಿಂದ ನೀವು ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ತುಂಬಿ.!!

ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ.!!

ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ.!!

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ 12 ಅಂಕಿಗಳ ಆಧಾರ್ ನಂಬರ್ ತುಂಬಿದ ನಂತರ ಪಾನ್‌ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ನಿಮಗೆ ದೃಡಿಕೃತವಾಗಲಿದೆ. ಜೊತೆಗೆ ನಿಮ್ಮ ಪಾನ್‌ಕಾರ್ಡ್ ಸಹ ಸೇಫ್ ಆಗಿರಲಿದೆ. ಈ ಮಾಹಿತಿಯನ್ನು ಇತರರಿಗೂ ತಿಳಿಸಲು ಈ ಲೇಖನವನ್ನು ಶೇರ್ ಮಾಡಿ

<strong></strong></a></strong><a href=ಜಿಯೋ ಹೊಸ ಆಫರ್ ಬಗ್ಗೆ ಈ 5 ವಿಷಯ ನೀವು ತಿಳಿಯಲೇಬೇಕು!! ಏಕೆ ಗೊತ್ತಾ?" title="ಜಿಯೋ ಹೊಸ ಆಫರ್ ಬಗ್ಗೆ ಈ 5 ವಿಷಯ ನೀವು ತಿಳಿಯಲೇಬೇಕು!! ಏಕೆ ಗೊತ್ತಾ?" loading="lazy" width="100" height="56" />ಜಿಯೋ ಹೊಸ ಆಫರ್ ಬಗ್ಗೆ ಈ 5 ವಿಷಯ ನೀವು ತಿಳಿಯಲೇಬೇಕು!! ಏಕೆ ಗೊತ್ತಾ?

Best Mobiles in India

Read more about:
English summary
Link Aadhaar with PAN Using SMS, Says Income Tax Department

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X