ಫೋನ್‌ನಲ್ಲಿನ ಬ್ಯಾಕ್ಟೀರಿಯಾ ತೆಗೆದು ಸ್ವಚ್ಛಗೊಳಿಸುವ ಮನೆಯ 5 ವಸ್ತು ಯಾವುವು ಗೊತ್ತೇ?

By Suneel
|

ಸ್ಮಾರ್ಟ್‌ಫೋನ್‌ಗಳು ಸಹ ಕೊಳಕಾಗುತ್ತವೆ ಮತ್ತು ಬ್ಯಾಕ್ಟೀರಿಯಾಗಳನ್ನು ಕ್ಯಾರಿ ಮಾಡುತ್ತವೆ. ಕಾರಣ ಸ್ಮಾರ್ಟ್‌ಫೋನ್‌ ಅನ್ನು ಎಲ್ಲಿ ಹೋದರು ಸಹ ತೆಗೆದುಕೊಂಡು ಹೋಗುತ್ತೇವೆ.

ಇತ್ತೀಚಿನ ವರದಿ ಪ್ರಕಾರ ನಮ್ಮ ಸ್ಮಾರ್ಟ್‌ಫೋನ್‌ಗಳು ಟಾಯ್ಲೆಟ್‌ ಹ್ಯಾಂಡಲ್‌ಗಿಂತ 18 ಪಟ್ಟು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ ಎಂದು ತಿಳಿಯಲಾಗಿದೆ. ಆದರೆ ಹಾಗಂತ ಸ್ಮಾರ್ಟ್‌ಫೋನ್‌ ಅನ್ನು ಶರ್ಟ್ ಜೇಬಿನಲ್ಲಿ ಇಟ್ಟಾಗ, ಶರ್ಟ್‌ಗೆ ಹೊರಸಿದಾಗ ಅಷ್ಟು ಬ್ಯಾಕ್ಟೀರಿಯಾಗಳನ್ನು ಪಡೆಯುವುದಿಲ್ಲ.

ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್‌ ಮಾಡಿದರೆ ಏನಾಗಬಹುದು ಗೊತ್ತೇ?

ಅಂದಹಾಗೆ ಸ್ಮಾರ್ಟ್‌ಫೋನ್‌(Smartphone) ಅನ್ನು ಹಂತ ಹಂತವಾಗಿ ಸ್ವಚ್ಛತೆ ಮಾಡಬೇಕಿದೆ. ಸ್ಮಾರ್ಟ್‌ಫೋನ್‌ಗಳನ್ನು ನಮ್ಮ ಮನೆಗಳಲ್ಲಿಯೇ ಇರುವ ಹಲವು ವಸ್ತುಗಳಿಂದ ಉತ್ತಮವಾಗಿ ಸ್ವಚ್ಛತೆ ಮಾಡಬಹುದು. ಫೋನ್‌ ಸ್ವಚ್ಛತೆ ಮತ್ತು ಸೋಂಕು ತೆಗೆಯುವ ಮುನ್ನ ಫೋನ್‌ ಅನ್ನು ಸ್ವಿಚ್ ಆಫ್‌ ಮಾಡಿ, ಸಾಧ್ಯವಿದ್ದಲ್ಲಿ ಬ್ಯಾಟರಿಯನ್ನು ಸಹ ತೆಗೆಯಿರಿ. ಸ್ವಚ್ಚತೆಗಾಗಿ ಯಾವುದಾದರೂ ದ್ರವ ಸಿಂಪಡಿಸುವ ಮೊದಲು ಪೋರ್ಟ್‌ಗಳನ್ನು ಟೇಪ್‌ನಿಂದ ಸೀಲ್ ಮಾಡಿ.

ಅಂದಹಾಗೆ ಮನೆಯಲ್ಲೇ ಸ್ಮಾರ್ಟ್‌ಫೋನ್‌ಗಳನ್ನು ಸ್ವಚ್ಛತೆ ಮಾಡಲು ಬಳಸುವ ಅತ್ಯುತ್ತಮ ವಸ್ತುಗಳು ಯಾವುವು ಎಂದು ತಿಳಿಯಿರಿ.

ಅರ್ಧ ಬೆಲೆಗೆ ಲಭ್ಯವಿರುವ ಟಾಪ್ 10 ರಿಫರ್ಬಿಷ್ಡ್ ಸ್ಮಾರ್ಟ್ ಫೋನುಗಳು.

ಮೈಕ್ರೋಫೈಬರ್ ಅಥವಾ ಹತ್ತಿಯಿಲ್ಲದ ಬಟ್ಟೆ ಉತ್ತಮ ಆಯ್ಕೆ

ಮೈಕ್ರೋಫೈಬರ್ ಅಥವಾ ಹತ್ತಿಯಿಲ್ಲದ ಬಟ್ಟೆ ಉತ್ತಮ ಆಯ್ಕೆ

ಸ್ಮಾರ್ಟ್‌ಫೋನ್‌ನ ಸನ್‌ಗ್ಲಾಸ್ ಸ್ವಚ್ಛತೆಗಾಗಿ ಮೈಕ್ರೋಫೈಬರ್ ಅಥವಾ ಹತ್ತಿಯಲ್ಲದ ಬಟ್ಟೆ ಉತ್ತಮ ಆಯ್ಕೆಯಾಗಿದೆ. ಪೇಪರ್‌ ನ್ಯಾಪ್ಕಿನ್ಸ್ ರೀತಿಯಲ್ಲಿ, ಮೈಕ್ರೋಫೈಬರ್ ಬಟ್ಟೆಗಳು ಯಾವುದೇ ಸ್ಕ್ರಾಚ್‌ ಆಗದೇ ಸ್ಮಾರ್ಟ್‌ಫೋನ್ ಅನ್ನು ಕ್ಲೀನ್ ಮಾಡುತ್ತವೆ. ಅಲ್ಲದೇ ಆಯಿಲ್‌ಫಿಂಗರ್‌ ಪ್ರಿಂಟ್ ಮತ್ತು ಬ್ಲರ್‌ಗೆ ಒಳಗಾಗುವ ಸಮಸ್ಯೆಯನ್ನು ಸಹ ಡಿವೈಸ್‌ ಸ್ಕ್ರೀನ್ ಮೇಲೆ ತೆಗೆಯುತ್ತದೆ. ಬಟ್ಟೆಗೆ ಒಂದೆರಡು ಹನಿ ನೀರು ಹಾಕಿ ಒರೆಸುವುದರಿಂದ ಡಿವೈಸ್‌ ಸ್ವಚ್ಛಗೊಳ್ಳುತ್ತದೆ. ಎಡ್ಜ್‌ಗಳಲ್ಲಿ ಒಣಗಿದ ಬಟ್ಟೆಯ ತುದಿಯಿಂದ ತೇವಾಂಶ ತೆಗೆಯಿರಿ.

ಹತ್ತಿ ಸ್ವಾಬ್ಸ್ ಪ್ರಯೋಜನಕಾರಿ

ಹತ್ತಿ ಸ್ವಾಬ್ಸ್ ಪ್ರಯೋಜನಕಾರಿ

ಹತ್ತಿ ಸ್ವಾಬ್ಸ್‌ಗಳು ಮೊಬೈಲ್‌ನಲ್ಲಿ ಸಣ್ಣ ಚೂರುಗಳು ಮತ್ತು ಧೂಳು ಕಣಗಳನ್ನು ತೆಗೆಯಲು ಉಪಯೋಗವಾಗುತ್ತವೆ. ಡಿವೈಸ್‌ನಲ್ಲಿನ ಕಷ್ಟದ ಜಾಗಗಳಲ್ಲಿಯೂ ಕಪ್ಪು ಬಿಳಿ ಮಸಿ ಕಣಗಳನ್ನು ತೆಗೆಯಲು ಬಳಕೆಯಾಗುತ್ತವೆ. ಹತ್ತಿ ಸ್ವಾಬ್ಸ್‌ಗಳು ಪೋರ್ಟ್‌ ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಲು ಹೆಚ್ಚು ಸಹಕಾರಿಯಾಗಿವೆ.

ಸ್ವಲ್ಪ ಆಲ್ಕೋಹಾಲ್ ಬಳಸಿ

ಸ್ವಲ್ಪ ಆಲ್ಕೋಹಾಲ್ ಬಳಸಿ

ಸ್ವಲ್ಪ ಆಲ್ಕೋಹಾಲ್ ಬಳಸಿ ಉತ್ತಮವಾಗಿ ಪೋನ್‌ ಸ್ವಚ್ಛತೆ ಮಾಡಬಹುದು. ಹಲವು ಮೊಬೈಲ್ ತಯಾರಕರು ಅಮೋನಿಯ, ಆಲ್ಕೋಹಾಲ್‌ಗಳನನು ಬಳಸಬೇಡಿ ಎಂದು ಶಿಫಾರಸು ಮಾಡಿವೆ. ಇನ್ನೂ ಹಲವು ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಬಳಸಿದರೆ ಸಮಸ್ಯೆ ಇಲ್ಲ ಎಂದು ಹೇಳುತ್ತವೆ. ಆದರೆ ಜಾಗರೂಕತೆಯಿಂದ ಬಳಸಬಹುದಾಗಿದೆ. ಜಸ್ಟ್ ಶೇ.40 ರಷ್ಟು ಐಸೊಪ್ರೊಪೈಲ್ ಅನ್ನು ಆಲ್ಕೋಹಾಲ್‌ ರಬ್ ಮಾಡಲು ಮತ್ತು ಶೇ.60 ನೀರನ್ನು ಮಿಕ್ಸ್ ಮಾಡಿ ಮೈಕ್ರೋಫೈಬರ್‌ನಿಂದ ಹೊರೆಸಿ. ಇದರಿಂದ ಬ್ಯಾಕ್ಟೀರಿಯಾ ಕಿಲ್‌ ಮಾಡಲು ಸಾಧ್ಯ.

ಬಿಳಿ ಹುಳಿರಸ ಮತ್ತು ಡಿಸ್ಟಿಲ್ಡ್ ನೀರು

ಬಿಳಿ ಹುಳಿರಸ ಮತ್ತು ಡಿಸ್ಟಿಲ್ಡ್ ನೀರು

ಆಲ್ಕೋಹಾಲ್ ವಿಧಾನ ಬಳಸದಿದ್ದರೇ ಈ ವಿಧಾನ ಬಳಸಬಹುದು. ಬಿಳಿ ಹುಳಿರಸ ಮತ್ತು ಡಿಸ್ಟಿಲ್ಡ್‌ ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಮೇಲೆ ತಿಳಿಸಿದ ವಿಧಾನವನ್ನೇ ಬ್ಯಾಕ್ಟೀರಿಯಾ ತೆಗೆಯಲು ಅನುಸರಿಸಿ.

ಸ್ಯಾನಿಟೈಜರ್ ಫೋನ್‌ಗೆ ಉತ್ತಮವಾಗಿ ಕೆಲಸ ಮಾಡುತ್ತದೆ

ಸ್ಯಾನಿಟೈಜರ್ ಫೋನ್‌ಗೆ ಉತ್ತಮವಾಗಿ ಕೆಲಸ ಮಾಡುತ್ತದೆ

ಸ್ಯಾನಿಟೈಜರ್ ಅನ್ನು ಮೈಕ್ರೋಫೈಬರ್‌ ಅಥವಾ ಹತ್ತಿರಹಿತ ಬಟ್ಟೆಯ ಮೇಲೆ ಕಿವಿಚಿ ಜಾಗರೂಕತೆಯಿಂದ ಹೊರೆಸಿ. ಇದರಿಂದ ಸೋಂಕು ಮತ್ತು ಬ್ಯಾಕ್ಟೀರಿಯಾಗಳು ಡಿವೈಸ್‌ನಿಂದ ರಿಮೂವ್‌ ಆಗುತ್ತವೆ.

Best Mobiles in India

English summary
5 Household Items That Can Help You Clean Your Smartphone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X