ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್ ಮಾಡಿದರೆ ಏನಾಗಬಹುದು ಗೊತ್ತೇ?
ವಾಟ್ಸಾಪ್ ಪ್ರಖ್ಯಾತ ಮೆಸೇಜಿಂಗ್ ಆಪ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ಸಹ ತಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಯಾವಾಗಲು ಸಂಪರ್ಕ ಹೊಂದಿರಲು ವಾಟ್ಸಾಪ್ ಬಳಸುತ್ತಾರೆ. ವಾಟ್ಸಾಪ್ ಹಲವು ಫೀಚರ್‌ಗಳನ್ನು ಅಭಿವೃದ್ದಿಪಡಿಸಿದ್ದು, ಮೀಡಿಯಾ ಪೈಲ್‌ಗಳು, ಡಾಕ್ಯುಮೆಂಟ್, ಸಂಪರ್ಕಗಳು ಮತ್ತು ಸ್ಥಳವನ್ನು ಇತರರಿಗೆ ಕಳುಹಿಸಲು ಸಹ ಅನುಕೂಲಕರವಾಗಿದೆ.
ಅಂದಹಾಗೆ ಹಲವರು ವಾಟ್ಸಾಪ್‌ನಲ್ಲಿ ಅಗತ್ಯವಾಗಿ ಕೆಲವರನ್ನು ಬ್ಲಾಕ್(ನಿರ್ಬಂಧಿಸು) ಮಾಡಬೇಕಿರುತ್ತದೆ. ಕೆಲವರನ್ನು ಅಗತ್ಯವಾಗಿ ಬ್ಲಾಕ್ ಮಾಡಬೇಕಾದರೆ ಹಲವು ಪ್ರಶ್ನೆಗಳು ಬ್ಲಾಕ್‌ಗೆ ಸಂಬಂಧಿಸಿದಂತೆ ಇದ್ದೇಇರುತ್ತದೆ.
ವಾಟ್ಸಾಪ್‌ನಲ್ಲಿ(whatsApp) ಯಾರನ್ನಾದರೂ ಬ್ಲಾಕ್ ಮಾಡಿದರೆ ಕಾಡುವ ಪ್ರಶ್ನೆ ಎಂದರೆ, ಬ್ಲಾಕ್ ಮಾಡಿದ ನಂತರವು ಅವರು ನಿಮ್ಮ ಪ್ರೊಫೈಲ್ ಪಿಕ್ ಮತ್ತು ನಿಮ್ಮ ಲಾಸ್ಟ್ ಸೀನ್ ಅನ್ನು ನೋಡಬಹುದೇ ಎಂಬುದು. ಇಂತಹ ಹಲವು ಪ್ರಶ್ನೆಗಳನ್ನು ಹಲವರು ಹೊಂದಿರುತ್ತಾರೆ. ಯಾರನ್ನಾದರೂ ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದಾಗ ಜರುಗುವ ಚಟುವಟಿಕೆಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ಎಲ್ಲರ ಸ್ಟೇಟಸ್ ಚೇಂಜ್ ಮಾಡೋ 12 ವಾಟ್ಸಾಪ್ ಸ್ಟೇಟಸ್‌ಗಳು

ಬ್ಲಾಕ್ ಆದವರು ಸೆಂಡ್ ಮಾಡಿದ ಮೆಸೇಜ್ ಡಿಲಿವರಿ ಆಗುವುದಿಲ್ಲ
ವಾಟ್ಸಾಪ್‌ನಲ್ಲಿ ಯಾವುದೇ ಕಾಂಟ್ಯಾಕ್ಟ್ ಅನ್ನು ಬ್ಲಾಕ್ ಮಾಡಿದರೆ, ಅವರು ನಿಮಗೆ ಕಳುಹಿಸಿದ ಮೆಸೇಜ್ ಬ್ಲಾಕ್ ಅಗಿರುವವರೆಗೆ ಬರುವುದಿಲ್ಲ. ಅಂದಹಾಗೆ ನೀವು ಅದೇ ಕಾಂಟ್ಯಾಕ್ಟ್ ಅನ್ನು ಅನ್‌ಬ್ಲಾಕ್ ಮಾಡಿದರೆ, ಬ್ಲಾಕ್ ಮಾಡಿದಾಗಿನಿಂದ ನಿಮಗೆ ಸೆಂಡ್ ಮಾಡಿದ ಎಲ್ಲಾ ಮೆಸೇಜ್‌ಗಳು ಸಹ ಬರುತ್ತವೆ.

ನಿಮ್ ಲಾಸ್ಟ್ ಸೀನ್ ಅವರಿಗೆ ಪ್ರದರ್ಶನವಾಗುವುದಿಲ್ಲ
ನೀವು ಬ್ಲಾಕ್ ಮಾಡಿದ ಕಾಂಟ್ಯಾಕ್ಟ್ ನಿಮ್ಮ ಲಾಸ್ಟ್ ಸೀನ್ ಮತ್ತು ಆನ್‌ಲೈನ್‌ನಲ್ಲಿ ಇರುವ ಬಗ್ಗೆ ಮಾಹಿತಿಯನ್ನು ನೋಡಲು ಸಾಧ್ಯವಿಲ್ಲ.

ಸ್ಟೇಟಸ್ ಮೆಸೇಜ್ ಹೈಡ್ ಆಗಿರುತ್ತದೆ
ಲಾಸ್ಟ್ ಸೀನ್ ಮಾಹಿತಿಯಂತೆ, ನಿಮ್ಮ ಸ್ಟೇಟಸ್ ಮೆಸೇಜ್ ಸಹ ನೀವು ಬ್ಲಾಕ್ ಮಾಡಿದ ಕಾಂಟ್ಯಾಕ್ಟ್‌ನಲ್ಲಿ ಹೈಡ್ ಆಗಿರುತ್ತದೆ. ನಿಮ್ಮ ಸ್ಟೇಟಸ್ ಮೆಸೇಜ್ ಅನ್ನು ಅನ್‌ಬ್ಲಾಕ್ ಮಾಡಿದ ನಂತರವಷ್ಟೇ ಕಾಂಟ್ಯಾಕ್ಟ್ ನೋಡಬಹುದು.

ನಿಮ್ಮ ಪೊಫೈಲ್ ಸಹ ಪ್ರದರ್ಶನವಾಗುವುದಿಲ್ಲ
ನಿಮ್ ವಾಟ್ಸಾಪ್ ಆಪ್‌ನಲ್ಲಿ ಬ್ಲಾಕ್ ಮಾಡಿದ ಕಾಂಟ್ಯಾಕ್ಟ್ ನಿಮ್ಮ ಪ್ರೊಫೈಲ್ ಅನ್ನು ನೋಡಲು ಸಹ ಆಗುವುದಿಲ್ಲ. ಅಲ್ಲದೇ ನಿಮ್ಮ ಪ್ರೊಫೈಲ್ ಫೋಟೋವನ್ನು ಸಹ ಅವರು ತೆಗೆದುಕೊಳ್ಳಲು ಸಾಧ್ಯವಿಲ್ಲ.

ನಿಮಗೆ ಕರೆ ಮಾಡಲು ಆಗುವುದಿಲ್ಲ
ವಾಟ್ಸಾಪ್‌ನಲ್ಲಿ ಬ್ಲಾಕ್ ಆದ ಕಾಂಟ್ಯಾಕ್ಟ್ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ. ಮೆಸೇಜ್ ಮಾತ್ರವಲ್ಲದೇ, ಬ್ಲಾಕ್ ಆದ ಕಾಂಟ್ಯಾಕ್ಟ್ ಅನ್‌ಬ್ಲಾಕ್ ಆಗುವವರೆಗೆ ನಿಮಗೆ ವಾಟ್ಸಾಪ್‌ನಲ್ಲಿ ಕರೆ ಮಾಡಲು ಸಹ ಆಗುವುದಿಲ್ಲ.

ಮೆಸೇಜ್ ಓದಿರುವ ಬಗ್ಗೆ ಮಾಹಿತಿ ತಿಳಿಯುವುದಿಲ್ಲ
ಬ್ಲಾಕ್ ಆದ ಕಾಂಟ್ಯಾಕ್ಟ್ ಮೆಸೇಜ್ ಕಳುಹಿಸದರು ಅದು ನಿಮಗೆ ಡಿಲಿವರಿ ಆಗುವುದಿಲ್ಲ. ಅಲ್ಲದೇ ಬ್ಲಾಕ್ ಆದ ಕಾಂಟ್ಯಾಕ್ಟ್ ನೀಲಿ ಟಿಕ್‌ಗಳನ್ನು ಮತ್ತು ಓದಿದ ಬಗ್ಗೆ ಮಾಹಿತಿಯನ್ನು ಪಡೆಯುವುದಿಲ್ಲ.

ಗ್ರೂಪ್‌ಚಾಟ್‌ನಲ್ಲಿ ಮಾತ್ರ ಯಾವುದೇ ಪರಿಣಾಮ ಬೀರುವುದಿಲ್ಲ
ಬ್ಲಾಕ್ ಆದ ಕಾಂಟ್ಯಾಕ್ಟ್ ನಿಮಗೆ ವೈಯಕ್ತಿಕವಾಗಿ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ. ಆದರೆ ಗ್ರೂಪ್‌ಚಾಟ್‌ನಲ್ಲಿ ಮಾತ್ರ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ ಬ್ಲಾಕ್ ಆದ ಕಾಂಟ್ಯಾಕ್ಟ್ ಮತ್ತು ನೀವಿರುವ ಗ್ರೂಪ್‌ನಲ್ಲಿ ನಿಮಗೆ ಮೆಸೇಜ್ ಅನ್ನು ಬ್ಲಾಕ್ ಆದ ಕಾಂಟ್ಯಾಕ್ಟ್ ಕಳುಹಿಸಬಹುದು.

ಅನ್‌ಬ್ಲಾಕ್ ಮಾಡುವವರೆಗೆ ಮೆಸೇಜ್ ಮತ್ತು ಕರೆ ಮಾಡಲು ನಿಮಗೂ ಸಾಧ್ಯವಿಲ್ಲ
ವಾಟ್ಸಾಪ್‌ನಲ್ಲಿ ನೀವು ಬ್ಲಾಕ್ ಮಾಡಿದ ಕಾಂಟ್ಯಾಕ್ಟ್ ಮಾತ್ರವಲ್ಲದೇ, ಬ್ಲಾಕ್ ಆದ ಕಾಂಟ್ಯಾಕ್ಟ್‌ಗೆ ನೀವು ಸಹ ಮೆಸೇಜ್ ಮತ್ತು ಕರೆ ಮಾಡಲು ಸಾಧ್ಯವಿಲ್ಲ.

ಬ್ಲಾಕ್ ಆದ ಕಾಂಟ್ಯಾಕ್ಟ್ ರೀಮೂವ್ ಸಾಧ್ಯವಿಲ್ಲ
ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ ಕಾಂಟ್ಯಾಕ್ಟ್ ಅನ್ನು ವಾಟ್ಸಾಪ್ ಕಾಂಟ್ಯಾಕ್ಟ್ ಲೀಸ್ಟ್‌ನಿಂದ ತೆಗೆಯಲು ಸಾಧ್ಯವಿಲ್ಲ ಆದರೆ ನಿಮ್ಮ ಫೋನ್‌ಬುಕ್ ಅಥವಾ ಅಡ್ರೆಸ್ ಬುಕ್‌ನಲ್ಲಿ ಕಾಂಟ್ಯಾಕ್ಟ್ ರೀಮೂವ್ ಮಾಡಿದಾಗ ಮಾತ್ರ ವಾಟ್ಸಾಪ್ ಕಾಂಟ್ಯಾಕ್ಟ್‌ನಲ್ಲಿ ಪ್ರದರ್ಶನವಾಗುವುದಿಲ್ಲ

ಬ್ಲಾಕ್ ಮತ್ತು ಅನ್‌ಬ್ಲಾಕ್
ವಾಟ್ಸಾಪ್‌ನಲ್ಲಿನ ಕಾಂಟ್ಯಾಕ್ಟ್ ಮೇಲೆ ದೀರ್ಘಕಾಲ ಟ್ಯಾಪ್ ಮಾಡಿ ಬ್ಲಾಕ್ ಮಾಡಬಹುದು, ಬ್ಲಾಕ್ ಅಗಿರುವುದನ್ನು ಅನ್‌ಬ್ಲಾಕ್ ಮಾಡಬಹುದು. ಅನ್‌ಬ್ಲಾಕ್ ಮಾಡಿ ಪುನಃ ಅವರೊಂದಿಗೆ ಸಂವಹನ ಮುಂದುವರೆಸಬಹುದು.


Click it and Unblock the Notifications








