ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ

By Ashwath
|

ಆಪಲ್‌ ಕಂಪೆನಿಯ ಕಡಿಮೆ ಬೆಲೆಯ ಐಫೋನ್‌ 5 ಸಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವಿಫಲವಾಗಿದೆ.ಆಪಲ್‌ ಈಗಾಗಲೇ ಐಫೋನ್‌ 5 ಸಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು,ಉತ್ಪಾದನೆಯಾದ ಐಫೋನಿಗೆ ಹೊಸ ಮಾರುಕಟ್ಟೆ ಸೃಷ್ಟಿಸಲು ಹೊಸ ತಂತ್ರವನ್ನು ರೂಪಿಸಲು ಆರಂಭಿಸಿದೆ.

ನಿಜವಾಗಿ ಏಷ್ಯಾ,ಆಫ್ರಿಕಾ ದೇಶಗಳಲ್ಲಿ ಜನ ಮಿಡ್‌ ರೇಂಜ್ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಆಪಲ್‌ ಈ ಗ್ರಾಹಕರನ್ನು ಸೆಳೆಯಲು ತನ್ನ ಕಡಿಮೆ ಬೆಲೆಯ ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಐಫೋನ್‌ 5 ಸಿಯನ್ನು ಬಿಡುಗಡೆ ಮಾಡಿತ್ತು. ಆದರೆ ಈ ದೇಶದಲ್ಲೇ ಕಡಿಮೆ ಬೆಲೆಯ ಐಫೋನ್‌ ಬೇಡಿಕೆ ಕಡಿಮೆಯಾಗತೊಡಗಿದೆ.

ಹಳೇಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿ ವಿತರಿಸಿದರೆ ಆದರ ಗುಣದಲ್ಲಿ ಏನು ಬದಲಾವಣೆ ಇಲ್ಲವೋ ಅದೇ ರೀತಿಯಾಗಿ ಐಫೋನ್‌ 5ರಲ್ಲಿರುವ ವಿಶೇಷತೆಯನ್ನೇ ಹೊಸ ಐಫೋನ್‌ 5ಸಿ ನೀಡಿದ ಆಪಲ್‌ ತಂತ್ರ ವಿಫಲವಾಗಿದೆ.ಮೊದಲೇ ವಿಶ್ವದ ನಂಬರ್‌ ಒನ್‌ ಬ್ರ್ಯಾಂಡ್‌ ಕಂಪೆನಿ ಆಪಲ್‌. ಹೀಗಾಗಿ ಯಾವ ಉತ್ಪನ್ನವನ್ನು ಹೇಗೆ ಮಾರಾಟ ಮಾಡಿ ಯಾವ ರೀತಿ ಲಾಭ ಮಾಡುವಂತೆ ಯೋಚಿಸುವ ಮಾರುಕಟ್ಟೆ ಪಂಡಿತರು ಆಪಲ್‌ನಲ್ಲಿದ್ದಾರೆ. ಈ ಪಂಡಿತರು ಬೇಡಿಕೆ ಇಲ್ಲದಿರುವ ಐಫೋನ್‌ 5 ಸಿಗೂ ಬೇಡಿಕೆ ಸೃಷ್ಟಿಸುವಂತೆ ಮಾಡಲು ನಾನಾ ಯೋಜನೆ ರೂಪಿಸುವ ಸಾಧ್ಯತೆ ಇದೆ.

ಹೀಗಾಗಿ ಇಲ್ಲಿ ಯಾವ ರೀತಿ ಐಫೋನ್‌ 5 ಸಿಗೆ ಮಾರುಕಟ್ಟೆ ಸೃಷ್ಟಿಸಬಹುದು ಎನ್ನುವುದಕ್ಕೆ ಆಪಲ್‌ ಅನುಸರಿಸಬಹುದಾದ ಕೆಲವು ತಂತ್ರಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಆಪಲ್‌ ಐಫೋನ್‌ 5 ಸಿ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ


ಕಂಪೆನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನಿನತ್ತ ಜನರನ್ನು ಆಕರ್ಷಿಸಲು ರೂಪಿಸಿದ ಹೊಸ ಉಪಾಯ.ಈ ಹಿಂದೆ ಸ್ಯಾಮ್‌ಸಂಗ್‌,ನೋಕಿಯಾ ಸೇರಿದಂತೆ ಹಲವರು ಕಂಪೆನಿಗಳು ಈ ರೀತಿಯ ಆಫರ್‌ ಬಿಡುಗಡೆ ಮಾಡಿ ಯಶಸ್ಸನ್ನು ಸಾಧಿಸಿದೆ. ಹೀಗಾಗಿ ಆಪಲ್‌ ಸಹ ತನ್ನ ಐಫೋನ್‌ 5ಸಿಗೆ ಈಗಾಗಲೇ ಎಕ್ಸೆಚೆಂಜ್‌ ಆಫರ್‌ನ್ನು ಪ್ರಕಟಿಸಿದ್ದು,ಗ್ರಾಹಕರು ಹಳೇ ಫೋನನ್ನು ನೀಡಿ ಹೊಸ ಐಫೋನ್‌ ಸಿಯನ್ನು ಖರೀದಿಸಬಹುದಾಗಿದೆ.

 ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ

ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ


ತಮ್ಮ ಎರಡು ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಎನ್ನುವ ಹೊಸ ಆಫರ್‌ ಪ್ರಕಟಿಸುವುದು. ಉದಾಹರಣೆಗೆ ಐ ಪ್ಯಾಡ್‌ ಮಿನಿ ಮತ್ತು ಐ ಫೋನ್‌ 5ಸಿ ಶೇ.10 ರಿಯಾಯಿತಿ ದರದಲ್ಲಿ ಒಟ್ಟಿಗೆ ಖರೀದಿಸಿ ಎನ್ನುವ ಹೊಸ ಆಫರ್‌ ಪರಿಚಿಯಿಸುವುದು.ಈ ಮೂಲಕ ಐಫೋನ್‌ 5 ಸಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ.

 ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ

ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ


ಆಪಲ್ ಐಫೋನ್‌ 5ಎಸ್‌ಗೆ ಭಾರತದ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ತುಂಬಾ ಬೇಡಿಕೆ ಇದೆ.ಬೆಲೆ ದುಬಾರಿಯಾದರೂ ಖರೀದಿಸುವವರು ಇದ್ದಾರೆ. ಹೀಗಾಗಿ ಐಫೋನ್‌ 5ಎಸ್‌ ಬೇಡಿಕೆ ಹೆಚ್ಚಿರುವುದರಿಂದ ಈ ಫೋನ್‌ ಮಾರಾಟವನ್ನು ಕೆಲಕಾಲ ಸ್ಥಗಿತಗೊಳಿಸುವುದು.ಈ ಮೂಲಕ ಐಫೋನ್‌ 5 ಸಿಯನ್ನು ಮಾತ್ರ ಮಾರಾಟ ಮಾಡುವ ತಂತ್ರವನ್ನು ಆಪಲ್‌ ಅನುಸರಿಸುವ ಸಾಧ್ಯತೆ ಇದೆ.

 ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ

ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ


ಆಪಲ್‌ ತನ್ನ ರಿಟೇಲ್‌ ಅಂಗಡಿಗಳಿಗೆ ಐಫೋನ್‌ 5 ಎಸ್‌ ವಿತರಿಸದೇ ಕೇವಲ ಐಫೋನ್‌ 5ಸಿಯನ್ನು ಮಾತ್ರ ಮಾರಾಟ ಮಾಡಿ ಎನ್ನುವ ಸೂಚನೆ ಕೊಡಬಹುದು.ಅಥವಾ ಐಫೋನ್‌ 5 ಸಿಯನ್ನು ಮಾರಾಟ ಮಾಡಲು ಒಂದು ನಿಗದಿತ ಸಂಖ್ಯೆಯನ್ನು ನಿಗದಿಗೊಳಿಸಿ,ಅಷ್ಟು ಪ್ರಮಾಣದ ಐಫೋನ್‌ ಮಾರಾಟ ಮಾಡಿದ ಬಳಿಕ ದುಬಾರಿ ಬೆಲೆಯ ಐಫೋನ್‌ 5 ಎಸ್‌ನ್ನು ರಿಟೇಲ್‌ ಅಂಗಡಿಗಳಿಗೆ ವಿತರಣೆ ಮಾಡುವಂತೆ ವ್ಯವಸ್ಥೆ ರೂಪಿಸಬಹುದು.

ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ

ಸಿನಿಮಾ ಸೆಲೆಬ್ರಿಟಿಗಳಿಂದ ಹೊಸ ರೀತಿಯ ವೈರಲ್‌ ವಿಡಿಯೋ ರೂಪಿಸಿ ಮಾರುಕಟ್ಟೆಯನ್ನು ಸೃಷ್ಟಿಸುವುದು.ಈ ಹಿಂದೆ ಸ್ಯಾಮ್‌ಸಂಗ್ ರನ್‌ವೀರ್‌ ಸಿಂಗ್‌ ರಿಂದ ಸ್ಯಾಮ್‌ಸಂಗ್‌ ಸ್ಟೈಲ್‌ ಎನ್ನುವ ಹೊಸ ನೃತ್ಯವನ್ನು ಆಯೋಜಿಸಿ ಪ್ರಚಾರ ಮಾಡಿತ್ತು

 ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ

ಕಡಿಮೆ ಬೆಲೆಯ ಐಫೋನ್‌ ಮಾರಾಟಕ್ಕೆ ಆಪಲ್‌ನಿಂದ ಹೊಸ ತಂತ್ರ


ಕೊನೆಯ ಪ್ರಯತ್ನ ಆಫೋನ್‌ ಐಫೋನ್‌ 5 ಸಿಗೆ ನಿಷೇಧ ಹಾಕುವುದು.ನಮ್ಮ ದೇಶ ಸೇರಿದಂತೆ ಹಲವಾರು ದೇಶಗಳಲ್ಲಿ ಈ ತಂತ್ರ ಯಶಸ್ವಿಯಾಗುತ್ತಿದೆ. ಅದು ಪುಸ್ತಕವಾಗಲಿ ಉತ್ಪನ್ನವಾಗಲಿ ನಿಷೇಧ ಹಾಕಿದೊಡನೇ ಜನರಿಗೆ ಆ ವಸ್ತುವಿನ ಬಗ್ಗೆ ಕುತೂಹಲ ಹೆಚ್ಚಾಗಿ ವಸ್ತುಗಳನ್ನು ಬ್ಲ್ಯಾಕ್‌ ಮಾರುಕಟ್ಟೆಯಲ್ಲಿ ಖರೀದಿಸಲು ಮುಂದಾಗುತ್ತಾರೆ. ಆದರೆ ಆಪಲ್‌ ಈ ತಂತ್ರವನ್ನು ಮಾಡುವ ಸಾಧ್ಯತೆ ಕಡಿಮೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X