ಐಫೋನ್‌ 5ಸಿ ಉತ್ಪಾದನೆ ನಿಲ್ಲಿಸಿದ ಆಪಲ್‌

Posted By:

ಆಪಲ್‌ನ ಕಡಿಮೆ ಬೆಲೆಯ, ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ನಿಗದಿಯಾಗಿರುವ ಐಫೋನ್‌ 5ಸಿ ಸ್ಮಾರ್ಟ್‌ಫೋನ್‌‌ಗೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಫೋನ್‌ 5ಸಿ ಉತ್ಪಾದನೆಯನ್ನು ಆಪಲ್‌ ಈಗ ನಿಲ್ಲಿಸಿದೆ.

ಐಫೋನ್‌ 5ಸಿ ಉತ್ಪಾದನೆಯಾಗುತ್ತಿರುವ ಚೀನಾದ ಫಾಕ್ಸ್‌ಕಾನ್‌ ಫ್ಯಾಕ್ಟರಿಗೆ ಐಫೋನ್‌ 5 ಎಸ್‌ ಮಾತ್ರ ಉತ್ಪಾದನೆ ಮಾಡಲು ಹೇಳಿದೆ ಎಂದು ಕೋರಿಯದ ಡಿಗಿಟೈಮ್ಸ್‌ ವರದಿ ಮಾಡಿದೆ.

ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ಗಳ ಮಧ್ಯೆ ಐಫೋನ್‌ ಬೇಡಿಕೆ ಕುಸಿದಿರುವ ಹಿನ್ನಲೆಯಲ್ಲಿ ಆಪಲ್ ಕಡಿಮೆ ಬೆಲೆಯ ಐಫೋನ್‌ ಸಿಯನ್ನು ಬಿಡುಗಡೆ ಮಾಡಿತ್ತು. ಭಾರತದ ಮಾರುಕಟ್ಟೆಯಲ್ಲಿ ಐಫೋನ್‌ 5 ಸಿ 16GB ಸ್ಮಾರ್ಟ್‌ಫೋನಿಗೆ 41,900 ರೂಪಾಯಿ, 32GB ಐಫೋನ್‌‌53,500ಬೆಲೆಯನ್ನು ಆಪಲ್‌‌ ನಿಗದಿ ಮಾಡಿತ್ತು.

 ಐಫೋನ್‌ 5ಸಿ ಉತ್ಪಾದನೆ ನಿಲ್ಲಿಸಿದ ಆಪಲ್‌

ಈ ಬೆಲೆಗಳು ಆಪಲ್‌ಗೆ ಅಗ್ಗವಾಗಿ ಕಂಡರೂ ಭಾರತದ ಸೇರಿದಂತೆ ವಿಶ್ವದ ಎಲ್ಲಾ ಕಡೆ ಉಳಿದ ಜಾಗತಿಕ ಮಟ್ಟದ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಹೋಲಿಸಿದರೆ  ದುಬಾರಿಯಾಗಿದೆ. ಸ್ಮಾರ್ಟ್‌ಫೋನ್‌ ವಿವಿಧ ಬಣ್ಣದಲ್ಲಿ ಲಭ್ಯವಿದೆ ಎನ್ನುವ ಒಂದು ಅಂಶವನ್ನು ಹೊರತುಪಡಿಸಿದರೆ ಹಳೇಯ ಐಫೋನ್‌ 5ರ ವಿಶೇಷತೆಯನ್ನೇ ಹೊಸ ಐಫೋನ್‌5 ಸಿ ಹೊಂದಿದೆ. ಹೀಗಾಗಿ ಜನರು ಐಫೋನ್‌ 5 ಎಸ್‌ನ್ನು ಖರೀದಿಸಲು ಮುಂದಾಗುತ್ತಿದ್ದು ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ ಹೆಚ್ಚು ಮಾರಾಟವಾಗುತ್ತಿದೆ.

ಐಫೋನ್‌ 5 ಸಿ

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32GB ಆಂತರಿಕ ಮೆಮೊರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ


ಇದನ್ನೂ ಓದಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಡಿಯೋ ವೀಕ್ಷಿಸಿ: ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot