IFA 2014ನಲ್ಲಿ ಮನಸೆಳೆದ ಏಸರ್ ಲಿಕ್ವಡ್ Z500
ಇಲ್ಲಿಯವರೆಗೆ ಏಸರ್, IFA ದಲ್ಲಿ ನೆನಪಿನಲ್ಲಿಡುವಂತಹ ಉತ್ಪನ್ನಗಳನ್ನು ಲಾಂಚ್ ಮಾಡುವ ಮೂಲಕ ಗಮನ ಸೆಳೆಯುವಂತೆ ಮಾಡುತ್ತಿದೆ. ನ್ಯೂ ಐಕೋನಿಯಾ ಟ್ಯಾಬ್ ಒನ್ 8 ನಿಂದ ಹಿಡಿದು ಟ್ಯಾಬ್ 10 ವರೆಗೆ ಕಂಪೆನಿಯು ಆಕರ್ಷಕ ಡಿವೈಸ್‌ಗಳನ್ನು IFA ದಲ್ಲಿ ಲಾಂಚ್ ಮಾಡಿದೆ.
ಇದರ ಜೊತೆಗೆ ಸಂಗೀತವನ್ನು ಇಷ್ಟಪಡುವ ಬಳಕೆದಾರರಿಗ ಕೂಡ ಕಂಪೆನಿ ಮ್ಯೂಸಿಕ್ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಪ್ರಸ್ತುತಪಡಿಸಲಿದೆ. ಲಿಕ್ವಿಡ್ Z500 ಸ್ಮಾರ್ಟ್‌ಫೋನ್ ಅನ್ನು IFA ದಲ್ಲಿ ಲಾಂಚ್ ಮಾಡುವುದರೊಂದಿಗೆ ಏಸರ್ ಮ್ಯೂಸಿಕ್ ಪ್ರಿಯರ ಮನಗೆಲ್ಲಲಿದೆ.

ಇನ್ನು ಫೋನ್‌ನ ವಿಶೇಷತೆಗಳತ್ತ ಗಮನ ಹರಿಸುವುದಾದರೆ, ಲಿಕ್ವಿಡ್ Z500 ಸ್ಮಾರ್ಟ್‌ಫೋನ್ 5 ಇಂಚಿನ ಡಿಸ್‌ಪ್ಲೇ ಮತ್ತು 8MP ಪ್ರಾಥಮಿಕ ರಿಯರ್ ಕ್ಯಾಮೆರಾದೊಂದಿಗೆ ಬಂದಿದೆ. ಇದು ಮೆಟಾಲಿಕ್ ವಿನ್ಯಾಸವನ್ನು ಹೊಂದಿದ್ದು, ಮ್ಯೂಸಿಕ್ ಪ್ಲೇಬ್ಯಾಕ್‌ಗೆ ಇದು ಸಿಡಿ ಗುಣಮಟ್ಟವನ್ನು ಹೊಂದಿದೆ. ಫೋನ್‌ನ ದಪ್ಪ 8.65mm ಆಗಿದ್ದು ಏಸರ್ ಲಿಕ್ವಿಡ್ Z500 ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಹಸಿರು, ಸಿಲ್ವರ್ ಮತ್ತು ಕಪ್ಪು ಬಣ್ಣಗಳಲ್ಲಿ ಈ ಫೋನ್ ಪ್ರಸ್ತುತ ದೊರೆಯುತ್ತಿದ್ದು ಈ ಹ್ಯಾಂಡ್‌ಸೆಟ್‌ನ ಲಭ್ಯತೆಯು ಸಪ್ಟೆಂಬರ್ 15 ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಖರೀದಿಯ ಮೋಹವನ್ನು ಉಂಟುಮಾಡುವ ಡಿವೈಸ್‌ಗಳು
ಇದರ ಬೆಲೆಯನ್ನು ಕಂಪೆನಿ ಅಂದಾಜು ಪಡಿಸಿದ್ದು ರೂ 10,000 ಕ್ಕೆ ಇದು ಲಭ್ಯವಾಗಲಿದೆ. ಇದಲ್ಲದೆ ಏಸರ್ ಲಿಕ್ವಿಡ್ ಜೇಡ್ ಫೋನ್‌ನ ಯುರೋಪಿಯನ್ ಲಭ್ಯತೆಯನ್ನು ಕಂಪೆನಿ ಘೋಷಿಸಿದೆ. ಲಿಕ್ವಿಡ್ ಜೇಡ್ ಹ್ಯಾಂಡ್‌ಸೆಟ್ ಅನ್ನು ಪ್ರಥಮ ಬಾರಿಗೆ ಕಂಪ್ಯೂಟೆಕ್ಸ್‌ನಲ್ಲಿ ಪ್ರದರ್ಶಿಸಿದ್ದು ಡ್ಯುಯಲ್ ಸಿಮ್ ಬೆಂಬಲವನ್ನು ಈ ಫೋನ್ ಒದಗಿಸಲಿದೆ.
ಫೋನ್ ಅತ್ಯಾಧುನಿಕ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಅನ್ನು ಚಾಲನೆ ಮಾಡುತ್ತಿದ್ದು 5 ಇಂಚಿನ 'Zero Air Gap' ಡಿಸ್‌ಪ್ಲೇಯೊಂದಿಗೆ 720x1280 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒದಗಿಸುತ್ತಿದೆ ಇಷ್ಟಲ್ಲದೆ ಫೋನ್ ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ನೀಡುತ್ತಿದೆ
ಲಿಕ್ವಿಡ್ ಜೇಡ್ 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ 1ಜಿಬಿ RAM ಫೋನ್‌ನಲ್ಲಿದೆ. ಇದು 8ಜಿಬಿ ಆಂತರಿಕ ಸಂಗ್ರಹಣೆಯನ್ನು ಒದಗಿಸುತ್ತಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಒದಗಿಸುತ್ತಿದೆ (32 ಜಿಬಿ)
ಲಿಕ್ವಿಡ್ ಜೇಡ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಒದಗಿಸುತ್ತಿದ್ದು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಫೋನ್‌ನಲ್ಲಿದೆ.
ಆಪಲ್ ಐಫೋನ್‌ನ ಕಣ್ಸೆಳೆಯುವ 25 ಅಪ್ಲಿಕೇಶನ್‌ಗಳು


Click it and Unblock the Notifications








