ಆಪಲ್ ಐಫೋನ್‌ನ ಕಣ್ಸೆಳೆಯುವ 25 ಅಪ್ಲಿಕೇಶನ್‌ಗಳು

Written By:

  ಆಪಲ್‌ನ ಆಪ್ ಸ್ಟೋರ್ ಇತ್ತೀಚೆಗೆ 50 ಬಿಲಿಯನ್ ಡೌನ್‌ಲೋಡ್‌ಗಳನ್ನು ತಲುಪಿದೆ. ಜುಲೈ 2008 ರಲ್ಲಿ ಇದು ಸ್ಥಾಪನೆಯಾಗಿದ್ದು, ಮೊಬೈಲ್ ಆಪ್ಲಿಕೇಶನ್‌ಗಳಿಗೆ ಇದೊಂದು ಸುವರ್ಣ ತಾಣವಾಗಿದೆ. ಮೊಬೈಲ್ ಡೆವಲಪರ್‌ಗಳು ತಮ್ಮ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಲು ಪ್ರಥಮವಾಗಿ ಇದನ್ನೇ ಆಯ್ಕೆ ಮಾಡುತ್ತಾರೆ.

  ಪ್ರಾರಂಭದಲ್ಲೇ ಹೆಚ್ಚು ಜನಪ್ರಿಯವಾಗಿರುವ ಈ ಅಪ್ಲಿಕೇಶನ್, ಈ ಅಪ್ಲಿಕೇಶನ್‌ನ ಲಾಂಚ್‌ನ ಏಳು ತಿಂಗಳ ನಂತರ ಕೂಡ ಇದು ಒಂದು ಮಿಲಿಯನ್‌ನಷ್ಟು ಉಚಿತವಾಗಿರುವ ಅಪ್ಲಿಕೇಶನ್‌ಗಳನ್ನು ಮೀರಿ ನಿಂತಿದೆ.

  ಇದೇ ಯಶಸ್ಸನ್ನು ಹಿರಿಮೆಯಾಗಿಸಿಕೊಂಡು ಆಪಲ್ ತನ್ನ ಹೆಚ್ಚು ಉಚಿತವಾಗಿರುವ 25 ಡೌನ್‌ಲೋಡ್ ಐಫೋನ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳು ನಿಜಕ್ಕೂ ಅತ್ಯಂತ ಮನಸೆಳೆಯುವಂತಿದ್ದು ಹೆಚ್ಚು ಉಪಯುಕ್ತಕರವಾಗಿದೆ. ಅಂದರೆ ಫೇಸ್‌ಬುಕ್ ಮತ್ತು ಪಂಡೋರಾದಂತಹ ಅಪ್ಲಿಕೇಶನ್‌ಗಳು ಕೂಡ ಇದರಲ್ಲಿವೆ.

  ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿರುವ ಐಫೋನ್ ಅಪ್ಲಿಕೇಶನ್‌ಗಳನ್ನು ಇಲ್ಲಿ ನೀಡಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  #1

  ಫೇಸ್‌ಬುಕ್
  ನಿಮಗಿಲ್ಲಿ ಸಂಪೂರ್ಣ ಉಚಿತವಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಇಲ್ಲಿ ನೀವು ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು ತ್ವರಿತ ಸಂದೇಶಗಳನ್ನು ಕಳುಹಿಸಬಹುದು.

  #2

  ಪಂಡೋರಾ ರೇಡಿಯೊ
  ನೀವು ಎಲ್ಲಿದ್ದರೂ ಈ ಅಪ್ಲಿಕೇಶನ್‌ಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ತ್ವರಿತವಾಗಿ ಸಂಪರ್ಕದಲ್ಲಿರಬಹುದು. ರೇಡಿಯೊ ಸ್ಟೇಶನ್‌ಗಳನ್ನು ರಚಿಸಿಕೊಂಡು ತಿಂಗಳಲ್ಲಿ 40 ಗಂಟೆಗಳು ಉಚಿತವಾಗಿ ಜಾಹೀರಾತು ಬೆಂಬಲಿತ ಹಾಡುಗಳನ್ನು ನಿಮಗೆ ಆಲಿಸಬಹುದು.

  #3

  ಇನ್‌ಸ್ಟಾಗ್ರಾಮ್
  ನಿಮ್ಮ ಮೊಬೈಲ್ ಫೋಟೋಗಳ ಅಂದವನ್ನು ಹೆಚ್ಚಿಸುವ ಇನ್‌ಸ್ಟಾಗ್ರಾಮ್ ತನ್ನ ಫಿಲ್ಟ್‌ರ್‌ಗಳ ಮೂಲಕ ನಿಮ್ಮಲ್ಲಿರುವ ಚಿತ್ರಗಳಿಗೆ ವೃತ್ತಿಪರ ಅಥವಾ ವಿಂಟೇಜ ನೋಟವನ್ನು ನೀಡುತ್ತದೆ.

  #4

  ಯೂಟ್ಯೂಬ್
  ನಿಮಗಿಲ್ಲಿ ಇತ್ತೀಚಿನ ವೀಡಿಯೊಗಳನ್ನು ಪಡೆಯಬಹುದು ಮತ್ತು ನಿಮ್ಮ ಮೊಬೈಲ್ ಫೋನ್‌ಗಳಿಗೆ ನೇರವಾಗಿ ವೀಡಿಯೊಗಳನ್ನು ಸುಲಭವಾಗಿ ಸ್ಟ್ರೀಮ್ ಮಾಡುವ ವಿಧಾನವನ್ನು ಇದು ಸರಳಗೊಳಿಸುತ್ತದೆ.

  #5

  ಸ್ಕೈಪ್
  ಯಾವಾಗಲೂ ಸಂಪರ್ಕದಲ್ಲಿರುವುದು ತುಸು ಕಷ್ಟದ ಕೆಲಸವೇ. ಸ್ಕೈಪ್‌ನೊಂದಿಗೆ, ನೀವು ನಿಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬಹುದು. ಇದು ಧ್ವನಿ, ವೀಡಿಯೊ ಕರೆಗಳು, ಸಂದೇಶ ರಚಿಸುವಿಕೆ, ಹೀಗೆ ನಿಮ್ಮ ಮೊದಲಾದ ಕಾರ್ಯಗಳನ್ನು ಇದು ಸುಲಭಗೊಳಿಸುತ್ತದೆ.

  #6

  ವರ್ಡ್ಸ್ ವಿದ್ ಫ್ರೆಂಡ್ಸ್ ಫ್ರಿ
  ಜಿಂಗಾದ ಒಂದು ಗೇಮಿಂಗ್ ಅಪ್ಲಿಕೇಶನ್ ಆಗಿರುವ ವರ್ಡ್ಸ್ ವಿದ್ ಫ್ರೆಂಡ್ಸ್ ಫ್ರಿ ಇದರ ಮೂಲಕ ನೀವು ನಿಮ್ಮ ಫೇಸ್‌ಬುಕ್ ಸ್ನೇಹಿತರನ್ನು ಆಟದಲ್ಲಿ ಸೋಲಿಸಬಹುದು.

  #7

  ದ ವೆದರ್ ಚಾನಲ್
  ನಿಮ್ಮ ಪ್ರದೇಶದ ಮತ್ತು ಮುಂದಿನ ದಿನಗಳ ನಿಖರವಾದ ಹವಾಮಾನ ಸೂಚನೆಯನ್ನು ಈ ಅಪ್ಲಿಕೇಶನ್ ನಿಮಗೆ ನೀಡುತ್ತದೆ.

  #8

  ಟ್ವಿಟ್ಟರ್
  ನಿಮ್ಮನ್ನು ಹೆಚ್ಚು ತಾದ್ಯಾತ್ಮಗೊಳಿಸುವ ಸಾಮಾಜಿಕ ಜಾಲತಾಣ ಸಂಪರ್ಕದ ಅಪ್ಲಿಕೇಶನ್ ಆಗಿದೆ ಟ್ವಿಟ್ಟರ್. ಹೆಚ್ಚು ಟ್ರೆಂಡಿಂಗ್ ಆಗಿರುವ ಸಂಗತಿಗಳನ್ನು ಈ ಜಾಲತಾಣವು ನಿಮಗೆ ಲಭ್ಯವಾಗಿಸಲಿದ್ದು ನಿಮ್ಮನ್ನು ಹೆಚ್ಚು ಸಾಮಾಜಿಕವಾಗಿ ವ್ಯಸ್ತರಿರುವಂತೆ ಮಾಡುತ್ತದೆ.

  #9

  ಟೆಂಪಲ್ ರನ್
  ಇದೊಂದು ಅದ್ಭುತ ಗೇಮಿಂಗ್ ಅಪ್ಲಿಕೇಶನ್ ಆಗಿದ್ದು ನಿಜಕ್ಕೂ ಈ ಗೇಮ್ ನಿಮಗೆ ಮೋಜನ್ನು ನೀಡುತ್ತದೆ.

  #10

  ಗೂಗಲ್ ಸರ್ಚ್
  ನಿಮ್ಮ ಐಫೋನ್‌ನಲ್ಲಿ ವೆಬ್ ಹುಡುಕಾಟಗಳನ್ನು ನಿರ್ವಹಿಸುವ ಒಂದು ಉತ್ತಮ ಅಪ್ಲಿಕೇಶನ್ ಗೂಗಲ್ ಸರ್ಚ್ ಆಗಿದೆ.

  #11

  ನೆಟ್‌ಫ್ಲಿಕ್ಸ್
  ನಿಮ್ಮ ಮೆಚ್ಚಿನ ಟಿವಿ ಕಾರ್ಯಕ್ರಮದ ಎಪಿಸೋಡ್ ಅನ್ನು ತ್ವರಿತವಾಗಿ ನಿಮಗೆ ನೋಡಬೇಕೇ? ನಿಮಗೆ ಹಾಗಿದ್ದೆ ನೆಟ್‌ಫ್ಲಿಕ್ಸ್ ಒಂದು ಪರಿಣಾಮಕಾರಿ ಅಪ್ಲಿಕೇಶನ್ ಆಗಿದೆ.

  #12

  ಶಾಜಮ್ ಫಾರ್ ಐಫೋನ್
  ನಿಮಗೆ ಉತ್ತಮ ಹಾಡುಗಳನ್ನು ಒದಗಿಸುವ ಅಪ್ಲಿಕೇಶನ್ ಇದಾಗಿದೆ.

  #13

  ಆಂಗ್ರಿ ಬರ್ಡ್ಸ್
  ಉಚಿತವಾಗಿ ಇಲ್ಲಿ ಈ ಗೇಮ್ ಅನ್ನು ನಿಮಗೆ ಆಡಬಹುದು.

  #14

  ಡ್ರಾ ಸಮ್‌ಥಿಂಗ್ ಫ್ರಿ
  ಇಲ್ಲಿ ನೀವು ಚಿತ್ರಗಳನ್ನು ಬರೆದು ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು ಮತ್ತು ನೀವು ಏನನ್ನು ಬರೆದಿದ್ದೀರಿ ಎಂಬುದನ್ನು ಅವರು ಕಂಡುಹುಡುಕಿ ಹೇಳುವ ಮೋಜಿನ ಆಟ ಇದಾಗಿದೆ.

  #15

  ಫ್ಲ್ಯಾಶ್‌ಲೈಟ್
  ನಿಮ್ಮ ಫೋನ್ ಅನ್ನು ಮೊಬೈಲ್ ಲೈಟ್ ಅನ್ನಾಗಿ ಪರಿವರ್ತಿಸುವ ಫ್ಲ್ಯಾಶ್‌ಲೈಟ್ ಅಪ್ಲಿಕೇಶನ್ ಉತ್ತಮವಾಗಿದೆ.

  #16

  ಫೇಸ್‌ಬುಕ್ ಮೆಸೆಂಜರ್
  ಒಂದು ಅತ್ಯುತ್ತಮ ಸಂಪರ್ಕದಲ್ಲಿರಬಹುದಾದ ಚಾಟಿಂಗ್ ಅಪ್ಲಿಕೇಶನ್ ಇದಾಗಿದೆ.

  #17

  ಗೂಗಲ್ ಅರ್ತ್
  ನಿಮಗೆ ಒಂದು ಸ್ಥಳದ ಸಂಪೂರ್ಣ ಮಾಹಿತಿಯನ್ನು ನೀಡುವಂತಹ ಈ ಅಪ್ಲಿಕೇಶನ್ ಅತೀ ಉತ್ತಮವಾಗಿದೆ.

  #18

  ಫ್ರುಟ್ ನಿಂಜಾ ಫ್ರಿ
  ಅತ್ಯುತ್ತಮ ಗೇಮಿಂಗ್ ಅಪ್ಲಿಕೇಶನ್ ಇದಾಗಿದೆ.

  #19

  ಐಹಾರ್ಟ್‌ರೇಡಿಯೊ
  ನಿಮ್ಮ ಮೆಚ್ಚಿನ ರೇಡಿಯೊ ಸ್ಟೇಶನ್‌ಗಳನ್ನು ನಿಮಗಿಲ್ಲಿಂದ ಪಡೆಯಬಹುದಾಗಿದೆ.

  #20

  ಫ್ಲಿಕ್‌ಸ್ಟರ್
  ನಿಮಗೆ ಇತ್ತೀಚಿನ ಚಲನಚಿತ್ರಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಈ ಅಪ್ಲಿಕೇಶನ್ ನಿಮಗೆ ನೀಡುತ್ತದೆ.

  #21

  ಬಂಪ್
  ನಿಮ್ಮ ಫೋನ್‌ನಿಂದ ಫೋಟೋವನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಬೇಕೇ? ನಿಮ್ಮ ಪೋಟೋಗಳನ್ನು ವರ್ಗಾಯಿಸುವ ಕೆಲಸವನ್ನು ಈ ಅಪ್ಲಿಕೇಶನ್ ಮಾಡುತ್ತದೆ.

  #22

  ಇಬೇ
  ಒಂದು ರೀಟೈಲ್ ಜಾಲಲತಾಣವಾಗಿದ್ದು ಶಾಪಿಂಗ್ ಮಾಡಲು ಅನುಕೂಲಕರವಾಗಿದೆ.

  #23

  ಪಾಕ್ - ಮ್ಯಾನ್ ಲೈಟ್
  ಇದೊಂದು ಉಚಿತ ಗೇಮಿಂಗ್ ಅಪ್ಲಿಕೇಶನ್ ಆಗಿದೆ.

  #24

  ಗ್ರೂಪನ್
  ನಿಮಗೆ ಖರೀದಿಯನ್ನು ಅತ್ಯಂತ ಸರಳವಾಗಿಸುವ ಆನ್‌ಲೈನ್ ರೀಟೈಲ್ ಜಾಲತಾಣವಾಗಿದೆ.

  #25

  ಗೂಗಲ್ ಮ್ಯಾಪ್ಸ್
  ಆಪಲ್ ತನ್ನ ಐಓಎಸ್‌ನಿಂದ ಗೂಗಲ್ ಮ್ಯಾಪ್ಸ್ ಅನ್ನು ತೆಗೆದು ಹಾಕಿದ್ದರೂ, ಅಪ್ಲಿಕೇಶನ್ ಸ್ಟೋರ್‌ಗೆ ಇದು ಹಿಂತಿರುಗಿದೆ. ಆಪಲ್‌ನ ಬಿಲ್ಟ್‌ ಇನ್ ಮ್ಯಾಪ್ಸ್‌ನಂತೆ, ಗೂಗಲ್ ಮ್ಯಾಪ್ಸ್ ಸಾರ್ವಜನಿಕ ರಸ್ತೆ ಮಾಹಿತಿಯನ್ನು ನೀಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  This article tells about Top 25 free Iphone Apps for all time.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more