Subscribe to Gizbot

ಫ್ಲಿಪ್ ಕಾರ್ಟ್ ಮತ್ತು ಲಿಮಾಲ್.ಕಾಮ್ ನಲ್ಲಿ ಲಿಇಕೊ ಸ್ಮಾರ್ಟ್ ಫೋನುಗಳ ಮೇಲೆ ಉತ್ತಮ ಕೊಡುಗೆ.

Written By:

ಗ್ಲೋಬಲ್ ಇಂಟರ್ನೆಟ್ ಮತ್ತು ತಂತ್ರಜ್ಞಾನ ಕಂಪನಿ ಲಿಇಕೊ ಗ್ರಾಹಕರು ಲಿಇಕೊ ಮೊಬೈಲುಗಳನ್ನು ಖರೀದಿಸಲು ಹಲವು ಕೊಡುಗೆಗಳನ್ನು ಕೊಡುತ್ತಿದೆ. ವಿವಿಧ ಜನಪ್ರಿಯ ತಾಣಗಳಲ್ಲಿ ಹಲವಾರು ಕೊಡುಗೆಗಳಿದ್ದರೂ ಲಿಇಕೊದ ಕೊಡುಗೆಗಳನ್ನು ಅವು ಮೀರಿಸಲಾರವು.

ಫ್ಲಿಪ್ ಕಾರ್ಟ್ ಮತ್ತು ಲಿಮಾಲ್.ಕಾಮ್ ನಲ್ಲಿ ಲಿಇಕೊ ಸ್ಮಾರ್ಟ್‌ಫೋನ್‌ಗಳು

ಲಿಇಕೊ ಬರುವ ದಿನಗಳಲ್ಲಿ ಕೊಡುತ್ತಿರುವ ಕೊಡುಗೆಗಳ ಬಗೆಗಿನ ವರದಿ ಇಲ್ಲಿದೆ ನೋಡಿ.

ಓದಿರಿ: 5,999 ಬೆಲೆಯ 'OKWU Pi' ಫೋನ್‌ನಲ್ಲಿ ಇಷ್ಟೆಲ್ಲಾ ಫೀಚರ್ ಇದೆಯಾ!

ಫ್ಲಿಪ್ ಕಾರ್ಟ್ ಅಕ್ಟೋಬರ್ 3ರಿಂದ 6ರವರೆಗೆ ಬಿಗ್ ಬಿಲಿಯನ್ ಸೇಲ್ ನಲ್ಲಿ ಮೊಬೈಲು ಫೋನುಗಳ ಮೇಲೆ ಭಾರೀ ರಿಯಾಯಿತಿ ಕೊಡುತ್ತಿದೆ. ಈ ಮಾರಾಟದ ಅವಧಿಯಲ್ಲಿ ಲಿಮ್ಯಾಕ್ಸ್ 2 17,999 ರುಪಾಯಿಗೆ ಲಭ್ಯವಿದೆ, ಬರೋಬ್ಬರಿ 5,000 ರಿಯಾಯಿತಿ. ಜೊತೆಗೆ ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು 10ಪರ್ಸೆಂಟ್ ಇನ್ಸ್ಟೆಂಟ್ ಕ್ಯಾಷ್ ಬ್ಯಾಕ್ ಪಡೆಯುತ್ತಾರೆ, ಹೆಚ್ಚುವರಿ ಹಣ ನೀಡದೆ 6, 9 ಅಥವಾ 12 ತಿಂಗಳವರೆಗೆ ಇ.ಎಮ್.ಐ ಆಯ್ಕೆಯೂ ಇದೆ.

ಫ್ಲಿಪ್ ಕಾರ್ಟ್ ಮತ್ತು ಲಿಮಾಲ್.ಕಾಮ್ ನಲ್ಲಿ ಲಿಇಕೊ ಸ್ಮಾರ್ಟ್‌ಫೋನ್‌ಗಳು

ನವೀನ ವಿನ್ಯಾಸದ ಲಿ 2 ಫೋನಿನ ಮೇಲೆ 1,500 ರುಪಾಯಿ ರಿಯಾಯಿತಿಯಿದೆ, 10,499 ರುಪಾಯಿಗೆ ಈ ಫೋನು ಲಭ್ಯವಿದೆ. ಜೊತೆಗೆ ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು 10ಪರ್ಸೆಂಟ್ ಇನ್ಸ್ಟೆಂಟ್ ಕ್ಯಾಷ್ ಬ್ಯಾಕ್ ಪಡೆಯುತ್ತಾರೆ.

ಲಿ1ಎಸ್ ಇಕೊ ಈ ಅವಧಿಯಲ್ಲಿ 7,999 ರುಪಾಯಿಗೆ ಲಭ್ಯವಿದೆ, 2,000 ರುಪಾಯಿಯಷ್ಟು ರಿಯಾಯಿತಿಯಿದೆ. ಜೊತೆಗೆ, ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು 10ಪರ್ಸೆಂಟ್ ಇನ್ಸ್ಟೆಂಟ್ ಕ್ಯಾಷ್ ಬ್ಯಾಕ್ ಪಡೆಯುತ್ತಾರೆ.

ಫ್ಲಿಪ್ ಕಾರ್ಟ್ ಮತ್ತು ಲಿಮಾಲ್.ಕಾಮ್ ನಲ್ಲಿ ಲಿಇಕೊ ಸ್ಮಾರ್ಟ್‌ಫೋನ್‌ಗಳು

ಲಿಮಾಲ್.ಕಾಮ್ ನಲ್ಲಿನ ಕೊಡುಗೆಗಳು.

ಲಿಮಾಲ್.ಕಾಮ್ ಅಕ್ಟೋಬರ್ 1ರಿಂದ ಮಾರಾಟ ಶುರು ಮಾಡುತ್ತದೆ. ಇದರಲ್ಲಿ ಕ್ವಾಲ್ ಕಮ್ ಸ್ಮಾಪ್ ಡ್ರಾಗನ್ 820 ಪ್ರೊಸೆಸರ್ ಹೊಂದಿರುವ ಫ್ಲಾಗ್ ಶಿಪ್ ಲಿಮ್ಯಾಕ್ಸ್ 2 ಸೂಪರ್ ಫೋನ್ 17,999ರ ವಿಶೇಷ ಬೆಲೆಗೆ ಲಭ್ಯವಿದೆ. ಜೊತೆಗೆ ಐ.ಸಿ.ಐ.ಸಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು 10ಪರ್ಸೆಂಟ್ ಕ್ಯಾಷ್ ಬ್ಯಾಕ್ ಪಡೆಯುತ್ತಾರೆ; ಹೆಚ್.ಡಿ.ಎಫ್.ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 12 ತಿಂಗಳ ಇ.ಎಮ್.ಐ ಆಯ್ಕೆ ಇದೆ.

ಓದಿರಿ: 20MP ಸೆಲ್ಫಿ ಕ್ಯಾಮೆರಾ..! ಬಜೆಟ್ ಬೆಲೆಯಲ್ಲಿ 'ವಿವೊ ವಿ5' ಬುಕ್‌ ಮಾಡಲು ರೆಡಿಯಾಗಿ!

ಮತ್ತೊಂದೆಡೆ, ಗ್ರಾಹಕರು ಮುಂದಿನ ತಲೆಮಾರಿನ ಸೂಪರ್ ಫೋನ್ ಲಿ2 ಅನ್ನು ಕೂಡ ಖರೀದಿಸಬಹುದು ಮತ್ತು 10 ಪರ್ಸೆಂಟ್ ಕ್ಯಾಷ್ ಬ್ಯಾಕ್ ಅಥವಾ 12 ತಿಂಗಳ ಬಡ್ಡಿ ರಹಿತ ಇ.ಎಮ್.ಐ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಇಷ್ಟೇ ಅಲ್ಲ, ಲಿಮಾಲ್.ಕಾಮ್ ಲಿ2 ಮತ್ತು ಲಿಮ್ಯಾಕ್ಸ್2 ಫೋನಿನ ಎಲ್ಲಾ ಆ್ಯಕ್ಸೆಸರೀಸ್ ಮೇಲೆ 200 ರುಪಾಯಿಯಷ್ಟು ರಿಯಾಯಿತಿ ಕೊಡುತ್ತಿದೆ. ಈ ವಿಶೇಷ ಕೊಡುಗೆಗಳ ಉಪಯೋಗ ಪಡೆದುಕೊಳ್ಳಿ ಮತ್ತು ಹೊಸ ತಲೆಮಾರಿನ ಸ್ಮಾರ್ಟ್ ಫೋನುಗಳನ್ನು ಖರೀದಿಸಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Get Amazing Offers on LeEco Superphones on LeMall.com and Flipkart Big Billion Days Sale. Read more..
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot