20MP ಸೆಲ್ಫಿ ಕ್ಯಾಮೆರಾ..! ಬಜೆಟ್ ಬೆಲೆಯಲ್ಲಿ 'ವಿವೊ ವಿ5' ಬುಕ್‌ ಮಾಡಲು ರೆಡಿಯಾಗಿ!

By Suneel
|

ಚೀನ ಟೆಕ್‌ ದೈತ್ಯ ಕಂಪನಿ ವಿವೊ ತನ್ನ ಲೇಟೆಸ್ಟ್‌ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್ "ವಿವೊ ವಿ5' ಅನ್ನು ಭಾರತ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ 20MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಗೂ 'ವಿವೊ ವಿ5' ಪಾತ್ರವಾಗಿದೆ. ಸೆಲ್ಫಿ ಪ್ರಿಯರ ಖುಷಿ ಈ ಫೋನ್‌ನಿಂದ ತಾರಕಕ್ಕೇರುವುದರಲ್ಲಿ ಸಂಶಯವಿಲ್ಲ.

ವಿವೊ ತಮ್ಮ ಲೇಟೆಸ್ಟ್ ಸೆಲ್ಫಿ ದೈತ್ಯ ಫೋನ್‌ 'ವಿವೊ ವಿ5'(Vivo V5) ಅನ್ನು ಬೆಲೆ ರೂ.17,980 ಕ್ಕೆ ಲಾಂಚ್‌ ಮಾಡಿದ್ದು, ನವೆಂಬರ್ 26 ರಿಂದ ದೇಶದಾದ್ಯಂತದ ರೀಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಸೆಲ್ಫಿ ಪ್ರಿಯರು ಮುಂಗಡವಾಗಿ ಬುಕ್‌ ಸಹ ಮಾಡಬಹುದು. ಸ್ಮಾರ್ಟ್‌ಫೋನ್ ಬೆಲೆಯೂ ಓಕೆ. ಸ್ಮಾರ್ಟ್‌ಫೋನ್‌ ಸೆಲ್ಫಿ ಕ್ಯಾಮೆರಾ ಫೀಚರ್ 20MP ಇರುವುದು ಓಕೆ. ಹಾಗಿದ್ರೆ 'ವಿವೊ ವಿ5' ಆಫರ್‌ ಮಾಡುವ ಇತರೆ ಫೀಚರ್‌ಗಳೇನು ಎಂಬುದನ್ನು ತಿಳಿಯಲು ಕೆಳಗಿನ ಮಾಹಿತಿ ಓದಿರಿ.

ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್‌ಫೋನ್ ಲಾಂಚ್

20MP ಸೆಲ್ಫಿ ಕ್ಯಾಮೆರಾ -ಸೆಲ್ಫಿ ಪ್ರೇಮಿಗಳಿಗೆ ಖುಷ್‌

20MP ಸೆಲ್ಫಿ ಕ್ಯಾಮೆರಾ -ಸೆಲ್ಫಿ ಪ್ರೇಮಿಗಳಿಗೆ ಖುಷ್‌

ಪ್ರಸ್ತುತದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಡ್ರಾಯ್ಡ್‌ಗಳಿಗೆ ಹೋಲಿಸಿ ನೋಡುವುದಾದರೆ, 'ವಿವೊ ವಿ5' 20MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಅದ್ಭುತ ಸೆಲ್ಫಿ ಫೋಟೋಸ್‌ ಕ್ಯಾಪ್ಚರ್‌ಗಾಗಿ ಸೋನಿ IMX 376 ಸೆನ್ಸಾರ್, F/2.0 ಅಪರ್ಚರ್ ಮತ್ತು 5p ಲೆನ್ಸ್ ಹೊಂದಿದೆ.

ಅದ್ಭುತ ಸ್ವಾಭಾವಿಕ ಬಣ್ಣದಲ್ಲಿ, ಸೆಲ್ಫಿ ಕ್ಯಾಮೆರಾ ಎಲ್ಲರನ್ನು ಇಂಪ್ರೆಸ್‌ ಮಾಡಬಲ್ಲದು.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

20MP ಸೆಲ್ಫಿ ಕ್ಯಾಮೆರಾ ಫ್ಲ್ಯಾಶ್‌ ಲೈಟ್‌ ಅನ್ನು ಹೊಂದಿದ್ದು, ವಿವೊ ಇದನ್ನು ಮೂನ್‌ಲೈಟ್ ಫ್ಲ್ಯಾಶ್ ಎಂದು ಕರೆದಿದೆ. ಬೆಳಕಿನ ಸ್ಥಿತಿ ಉತ್ತಮವಾಗಿಲ್ಲದಿದ್ದರೂ ಸಹ ಸೆಲ್ಫಿ ಕ್ಯಾಮೆರಾ ಸ್ವಾಭಾವಿಕ ಬಣ್ಣದಲ್ಲಿ ಫೋಟೋ ಕ್ಯಾಪ್ಚರ್ ಮಾಡಲು ಸಹಾಯಕವಾಗಿದೆ.

ಫ್ರಂಟ್ ಕ್ಯಾಮೆರಾ ಫೇಸ್‌ ಬ್ಯೂಟಿ 6.0 ಮೋಡ್ ಅನ್ನು ಹೊಂದಿದೆ.

ಹಿಂಭಾಗ ಕ್ಯಾಮೆರಾ

ಹಿಂಭಾಗ ಕ್ಯಾಮೆರಾ

'ವಿವೊ ವಿ5' ಸ್ಮಾರ್ಟ್‌ಫೋನ್‌ 13MP ಹಿಂಭಾಗ ಕ್ಯಾಮೆರಾ ಹೊಂದಿದ್ದು, ಡೀಸೆಂಟ್ ಶೂಟರ್'ಗೆ ಇನ್ನೊಂದು ಹೆಸರು ಎಂದು ಹೇಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀಮಿಯಂ ಮತ್ತು ದಕ್ಷತಾ ವಿನ್ಯಾಸ

ಪ್ರೀಮಿಯಂ ಮತ್ತು ದಕ್ಷತಾ ವಿನ್ಯಾಸ

'ವಿವೊ ವಿ5' ಒಂದು ಕೈಯಲ್ಲಿ ನಯವಾಗಿ ಹಿಡಿದುಕೊಳ್ಳಬಹುದಾದ ಡಿವೈಸ್. ಸ್ಮಾರ್ಟ್‌ಫೋನ್‌ ಯುನಿಬಾಡಿ ವಿನ್ಯಾಸ ಹೊಂದಿದೆ ಮತ್ತು 5.5 ಇಂಚಿನ ಡಿಸ್‌ಪ್ಲೇ ಹೊಂದಿದ್ದರೂ, ಹಗುರವಾದ ಫೀಲ್‌ ನೀಡುತ್ತದೆ. ವಿವೊ ವಿ5, ಹಿಂಭಾಗದಲ್ಲಿ ಮ್ಯಾಟ್‌ನಿಂದ ಆವೃತವಾಗಿದ್ದು, ಆಂಟೆನಾ ಬ್ಯಾಂಡ್‌ಗಳನ್ನು ಹೊಂದಿದೆ ಮತ್ತು ಪ್ರೀಮಿಯಂ ಟಚ್‌ ಹೊಂದಿದೆ.

'ವಿವೊ ವಿ5' ಡಿವೈಸ್ ಬಣ್ಣ

'ವಿವೊ ವಿ5' ಡಿವೈಸ್ ಬಣ್ಣ

'ವಿವೊ ವಿ5' ಡಿವೈಸ್ ಗ್ರೇ ಬಣ್ಣದಲ್ಲಿ ಉತ್ತಮವಾಗಿ ಕಾಣುತ್ತಿದ್ದು, ಕ್ರೌನ್ ಗೋಲ್ಡ್ ಬಣ್ಣ ಭಿನ್ನತೆಯಲ್ಲು ಡಿವೈಸ್ ಲಭ್ಯವಾಗಲಿದೆ.

ಆಕ್ಟಾ-ಕೋರ್, ಚಿಪ್‌ಸೆಟ್ ಜೊತೆಗೆ 4GB RAM

ಆಕ್ಟಾ-ಕೋರ್, ಚಿಪ್‌ಸೆಟ್ ಜೊತೆಗೆ 4GB RAM

'ವಿವೊ ವಿ5' ಆಕ್ಟಾ ಕೋರ್ ಸಿಪಿಯು ಚಾಲಿತವಾಗಿದ್ದು, ಜೊತೆಗೆ 4GB RAM ಮತ್ತು 32GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಆಂತರಿಕ ಸ್ಟೋರೇಜ್‌ ಅನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ವಿಸ್ತರಣೆ ಮಾಡಬಹುದು.

'ವಿವೊ ವಿ5' 4GB RAM ಹೊಂದಿರುವುದರಿಂದ ಶೀಘ್ರವಾಗಿ ಮಲ್ಟಿಟಾಸ್ಕ್ ಮಾಡಲು ಉತ್ತಮ ಅನುಭ ವ ನೀಡುತ್ತದೆ.

5.5 ಇಂಚಿನ ಡಿಸ್‌ಪ್ಲೇ

5.5 ಇಂಚಿನ ಡಿಸ್‌ಪ್ಲೇ

'ವಿವೊ ವಿ5' ಡಿಸ್‌ಪ್ಲೇ ಫೀಚರ್ ವೀಕ್ ಪಾಯಿಂಟ್ ಎಂದೇ ಹೇಳಬಹುದು. ಕಾರಣ ಡಿವೈಸ್ ಅತ್ಯದ್ಭುತವಾದ 20MP ಸೆಲ್ಫಿ ಕ್ಯಾಮೆರಾ ಹೊಂದಿದ್ದರೂ, 5.5 ಇಂಚಿನ ಡಿಸ್‌ಪ್ಲೇ ಜೊತೆಗೆ 2.5D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ಹೊಂದಿದೆ.

ಆದರೂ ಸಹ ಡಿಸ್‌ಪ್ಲೇ ಉತ್ತಮ ಬ್ರೈಟ್‌ ಮತ್ತು ಕಲರ್ ಉತ್ಪಾದನೆ ಆಫರ್ ಮಾಡುತ್ತದೆ. ವಿಶೇಷ ಎಂದರೆ ಡಿಸ್‌ಪ್ಲೇ ಕಣ್ಣುಗಳ ಸುರಕ್ಷತೆ ಮೋಡ್ ಅನ್ನು ಆಫರ್‌ ಮಾಡಿದೆ. ಕಣ್ಣುಗಳು ಆಯಾಸವಾಗದಂತೆ ಕಾಪಾಡಿಕೊಳ್ಳುವ ನೀಲಿ ಲೈಟ್ ಸುರಕ್ಷತೆ ಫಿಲ್ಟರ್ ಪಡೆಯಬಹುದು.

ಆಪರೇಟಿಂಗ್ ಸಿಸ್ಟಮ್

ಆಪರೇಟಿಂಗ್ ಸಿಸ್ಟಮ್

ವಿವೊ ವಿ5, ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಆಧಾರಿತ 'ಫನ್‌ಟಚ್ ಓಎಸ್ 2.6' ಚಾಲಿತವಾಗಿದೆ. ಯಾವುದೇ ತೊಡಕುಗಳಿಲ್ಲದೇ ವರ್ಕ್‌ ಆಗುವುದರ ಜೊತೆಗೆ, UI ಸ್ಮಾರ್ಟ್‌ ಗೆಸ್ಚರ್‌ ಫೀಚರ್ ಆಫರ್ ಮಾಡುತ್ತದೆ.

ವೇಗದ ವಾಟರ್‌ ಪ್ರೂಫ್‌ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್

ವೇಗದ ವಾಟರ್‌ ಪ್ರೂಫ್‌ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್

ವಿವೊ ವಿ5, ಹೋಮ್‌ ಬಟನ್‌ನಲ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದ್ದು, ಬಯೋಮೆಟ್ರಿಕ್‌ ಸೆನ್ಸಾರ್ ಆಫರ್ ಮಾಡಿದೆ. ವಾಟರ್ ಪ್ರೂಫ್‌ ಡಿವೈಸ್‌ ಸಹ ಆಗಿದೆ.

ಸ್ಮಾರ್ಟ್‌ಫೋನ್‌ AK4376 Hi-Fi ಆಡಿಯೋ ಚಿಪ್ ಕಸ್ಟಮ್‌ ಬಿಲ್ಟ್ ಫೀಚರ್ ಹೊಂದಿದೆ.

ಬ್ಯಾಟರಿ ಮತ್ತು ಸಂಪರ್ಕಗಳು

ಬ್ಯಾಟರಿ ಮತ್ತು ಸಂಪರ್ಕಗಳು

* 3000mAh ಬ್ಯಾಟರಿ
* ಡ್ಯಯಲ್ ಸಿಮ್
* 4G LTE, VoLTE
* ವೈಫೈ, ಜಿಪಿಎಸ್,
* ಎಫ್‌ಎಂ ರೇಡಿಯೊ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Vivo V5 Smartphone First Impressions: A Capable 20MP Front Camera and Nifty Tricks in its Pocket. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X