Subscribe to Gizbot

5,999 ಬೆಲೆಯ 'OKWU Pi' ಫೋನ್‌ನಲ್ಲಿ ಇಷ್ಟೆಲ್ಲಾ ಫೀಚರ್ ಇದೆಯಾ!

Written By:

ಮೊಬಿಲಿಟಿ ಕಂಪನಿ 'OKWU' ತನ್ನ ಮೊದಲ ಸ್ಮಾರ್ಟ್‌ಫೋನ್‌ 'OKWU Pi (ಓಕೆಡಬ್ಲ್ಯೂಯು ಪಿ)' ಅನ್ನು ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಅಂದಹಾಗೆ OKWU Pi ಸ್ಮಾರ್ಟ್‌ಫೋನ್‌ ಬೆಲೆ ರೂ.5,999. ಈ ಬಜೆಟ್‌ ಸ್ಮಾರ್ಟ್‌ಫೋನ್‌ ವಿಶೇಷತೆಗಳಲ್ಲಿ ಪ್ರಮುಖವಾಗಿ ಇದು 'ಯು-ಟ್ಯಾಗ್' ಎಂಬ ಹೊಸ ಪರಿಕರದೊಂದಿಗೆ ಬಂದಿದೆ. ಅಲ್ಲದೇ ಬಳಕೆದಾರರು ತಮ್ಮ ವಸ್ತುಗಳ ಬಗ್ಗೆ ಟ್ರ್ಯಾಕ್‌ ಮಾಡಲು 'ಇಂಟರ್ನೆಟ್ ಆಫ್ ಥಿಂಗ್ಸ್ (IoT)' ಉಪಯೋಗಿಸಿಕೊಳ್ಳುತ್ತದೆ.

ಅಂದಹಾಗೆ ಮೇಲೆ ತಿಳಿಸಿದಂತಹ ಟೆಕ್ನಾಲಜಿಯನ್ನು ಭಾರತೀಯ ಸ್ಮಾರ್ಟ್‌ಫೋನ್‌ ಬಳಕೆದಾರರು ಇದೇ ಮೊದಲೇನು ನೋಡುತ್ತಿಲ್ಲ. ಆದರೆ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಇಂತಹ ಟೆಕ್ನಾಲಜಿಯನ್ನು ಅಭಿವೃದ್ದಿಪಡಿಸಿರುವುದು ಇದೇ ಮೊದಲ ಬಾರಿಗೆ. ಅಲ್ಲದೇ ಈ OKWU Pi ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಬಂದಿರುವುದು ಇನ್ನೊಂದು ದೊಡ್ಡ ವಿಶೇಷತೆ. ಹಾಗಾದ್ರೆ OKWU Pi ಸ್ಮಾರ್ಟ್‌ಫೋನ್‌ ರೂ.5,999 ಬಜೆಟ್‌ ಬೆಲೆಯಲ್ಲಿ ಬಳಕೆದಾರರಿಗೆ ಏನೇನು ವಿಶೇಷತೆಗಳನ್ನು ಆಫರ್‌ ಮಾಡುತ್ತಿದೆ ಎಂದು ಮುಂದೆ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
U-Tag (ಯು-ಟ್ಯಾಗ್) ಎಂದರೆ ಏನು?

U-Tag (ಯು-ಟ್ಯಾಗ್) ಎಂದರೆ ಏನು?

U-Tag ಎಂಬುದು ಬ್ಲೂಟೂತ್‌ ಟ್ಯಾಗ್. ಇದು ಬಳಕೆದಾರರ ಪರಿಕರಗಳು, ಕಾರು, ಐಪಾಡ್, ಇತರೆ ಡಿವೈಸ್‌ಗಳಿಗೆ ಕನೆಕ್ಟ್ ಆಗಿರುತ್ತದೆ. ಟ್ಯಾಗ್‌ ಆದ ಎಲ್ಲಾ ಪರಿಕರಗಳು ತಾವಿರುವ ಸ್ಥಳದ ಬಗ್ಗೆ ಮಾಹಿತಿ ನೀಡುತ್ತವೆ. ಅಲ್ಲದೇ ಬಳಕೆದಾರರು ಅಲರ್ಟ್‌ ಅನ್ನು ಹೊಂದಬಹುದು.

OKWU Pi ಸ್ಮಾರ್ಟ್‌ಫೋನ್‌ ತನ್ನ ಸ್ಥಳದ ಬಗ್ಗೆ ಸರ್ವರ್‌ಗೆ ಮಾಹಿತಿ ಅಪ್‌ಲೋಡ್ ಮಾಡುತ್ತಿರುತ್ತದೆ. ಹಿಂದಿನ ಸ್ಥಳ ತೋರಿಸದೇ ಪ್ರಸ್ತುತ ಸ್ಥಳವನ್ನು ಟ್ರ್ಯಾಕ್‌ ಮಾಡುತ್ತದೆ. ಈ ಫೀಚರ್‌ನಿಂದ ಕಳ್ಳರು ಏನಾದರು ಬಳಕೆದಾರರ ಪರಿಕರಗಳು, ವಸ್ತುಗಳನ್ನು ಕದ್ದರೇ, ಅವುಗಳ ಸ್ಥಳವನ್ನು ಟ್ರ್ಯಾಕ್ ಮಾಡುತ್ತದೆ. ಟ್ಯಾಕ್ ಕಡ್ಡಾಯವಾಗಿ ಮಾಡಿರಬೇಕು.

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಡಿಸ್‌ಪ್ಲೇ ಮತ್ತು ಪ್ರೊಸೆಸರ್

OKWU Pi ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಗೂ ಮೀರಿದಂತೆ ಡೀಸೆಂಟ್ ಖರೀದಿ ಬೆಲೆ ಹೊಂದಿದೆ. ಹ್ಯಾಂಡ್‌ಸೆಟ್ 5 ಇಂಚಿನ HD ಡಿಸ್‌ಪ್ಲೇ ಮತ್ತು 1.2GHz ಕ್ವಾಡ್‌ಕೋರ್ ಮೀಡಿಯಾಟೆಕ್ MT6735 64bit ಪ್ರೊಸೆಸರ್ ಚಾಲಿತವಾಗಿದೆ. 5 ಇಂಚಿನ ಡಿಸ್‌ಪ್ಲೇ ವೆಬ್ ಬ್ರೌಸಿಂಗ್‌ಗೆ, ವೀಡಿಯೊ ನೋಡಲು, ಗೇಮ್‌ ಆಡಲು, ಇತರೆ ಉದ್ದೇಶಗಳಿಗೆ ಉತ್ತಮವಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲರ ಕೈಗೆಟಕುವ ಬೆಲೆಯಲ್ಲಿ ಡ್ಯುಯಲ್ ಕ್ಯಾಮೆರಾ ಫೋನ್

ಎಲ್ಲರ ಕೈಗೆಟಕುವ ಬೆಲೆಯಲ್ಲಿ ಡ್ಯುಯಲ್ ಕ್ಯಾಮೆರಾ ಫೋನ್

OKWU Pi ಫೋನ್ ಡ್ಯುಯಲ್ ಕ್ಯಾಮೆರಾ ಫೀಚರ್ ಹೊಂದಿದ್ದು, ಎಲ್ಲರ ಕೈಗೆಟಕುವ ಬೆಲೆಯ ಡಿವೈಸ್ ಆಗಿದೆ. ಹ್ಯಾಂಡ್‌ಸೆಟ್ 8MP+2MP ಹಿಂಭಾಗ ಕ್ಯಾಮೆರಾ ಜೊತೆಗೆ ಫೇಸ್‌ ಡಿಟೆಕ್ಷನ್ ಮತ್ತು ಆಟೋ ಫೋಕಸ್ ಮತ್ತು ಸ್ಮೈಲ್‌ ಟು ಕ್ಲಿಕ್' ಕಾರ್ಯಗಳನ್ನು ನಿರ್ವಹಿಸುವ ಫೀಚರ್ ಹೊಂದಿದೆ. ಸ್ಮಾರ್ಟ್‌ಫೋನ್ 2MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, ವೀಡಿಯೊ ಕರೆಗಾಗಿ ಹೊಂದಿದೆ.

ಸಾಫ್ಟ್‌ವೇರ್, ಬ್ಯಾಟರಿ ಮತ್ತು ಮೆಮೊರಿ

ಸಾಫ್ಟ್‌ವೇರ್, ಬ್ಯಾಟರಿ ಮತ್ತು ಮೆಮೊರಿ

OKWU Pi, ಆಂಡ್ರಾಯ್ಡ್ 6.1 ಮಾರ್ಷ್‌ಮಲ್ಲೊ ಓಎಸ್‌ ಹೊಂದಿದೆ. 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿದ್ದು, 32GB ವರೆಗೆ ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ ಶೇಖರಣ ಸಾಮರ್ಥ್ಯ ವಿಸ್ತರಣೆ ಮಾಡಬಹುದು. ಸ್ಮಾರ್ಟ್‌ಫೋನ್ 2,000mAh ರಿಮೂವ್‌ ಮಾಡಲಾಗದ ಬ್ಯಾಟರಿ ಹೊಂದಿದೆ.

ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸಂಪರ್ಕಗಳು

ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸಂಪರ್ಕಗಳು

OKWU Pi ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 4G VoLTE, 3G, ವೈಫೈ, ಬ್ಲೂಟೂತ್ ಸಂಪರ್ಕಗಳ ಆಪ್ಶನ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
5 Things you Need to know about OKWU Pi IoT Smartphone. To know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot