2017 ಕ್ಕೆ ಐಫೋನ್ 8 ಲಾಂಚ್! ನೂತನ ಫೀಚರ್ ಏನಿರಬಹುದು?

By Prateeksha
|

ಇತ್ತೀಚೆಗೆ ಸೆಪ್ಟೆಂಬರ್ ನಲ್ಲಿ ಮಾತ್ರ ಐಫೋನ್ 7 ಬಿಡುಗಡೆಗೊಂಡಿರುವಾಗ ಆಪಲ್ ನಿರ್ದಿಷ್ಟವಾಗಿ ಮುಂದಿನ ಬಾರಿ ಏನನ್ನು ತರಲಿದೆಯೆಂದು ಹೇಳುವುದು ಕಷ್ಟವಾಗುತ್ತದೆ.

2017 ಕ್ಕೆ ಐಫೋನ್ 8 ಲಾಂಚ್! ನೂತನ ಫೀಚರ್ ಏನಿರಬಹುದು?

ಅಂತರ್ಜಾಲದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಹೋದರೆ ಇನ್ನು ಸ್ಪಷ್ಟವಾಗಿ ತಿಳಿದಿಲ್ಲಾ ಐಫೋನ್ ಏನಾಗುತ್ತದೆಯೆಂದು ಐಫೋನ್ 7ಎಸ್, ಐಫೋನ್ 8 ಅಥವಾ ಐಫೋನ್ ನ 10 ನೇ ವಾರ್ಷಿಕೊತ್ಸವ.

ಓದಿರಿ: ಅಪ್‌ಗ್ರೇಡ್‌ ಆಯಿತು ಓಪ್ಪೋ ಎಫ್‌1ಎಸ್: ಸೆಲ್ಫಿ ಕ್ಲಿಕ್ಕಿಸಲು ಇನ್ನೊಂದು ಹೆಜ್ಜೆ ಮುಂದೆ!

ಇನ್ನೊಂದೆಡೆ ವಿಮರ್ಶೆಗೆ ಒಳಪಟ್ಟ ಐಫೋನ್ 7 ತನ್ನ ಹಳೆ ವರ್ಷನ್ ಗಳಿಗೆ ಹೋಲುತ್ತದೆ ಎನ್ನಲಾಗಿತ್ತು. ಆಪಲ್ ಎಷ್ಟು ಚೆನ್ನಾಗಿ ಮಾರಾಟ ಮಾಡುತ್ತಿದ್ದರೂ ಕೂಡ 2016 ರಲ್ಲಿ ಐಫೋನ್ ಅಷ್ಟೊಂದು ಮಾರಾಟದಲ್ಲಿ ಬೆಳವಣಿಗೆಯನ್ನು ಕಾಣಲಿಲ್ಲಾ.

ಓದಿರಿ: ಐಫೊನ್ 6S ಸ್ಪೋಟಗೊಳ್ಳಲು ಕಾರಣವೇನು? ಆಪಲ್ ಸಂಸ್ಥೆ ಹೇಳಿದ್ದೇನು?

ಸ್ಪಷ್ಟವಾಗಿ ಗೊತ್ತಾಗುತ್ತದೆ, ಜನ ಹೆಚ್ಚಿನದನ್ನು ಬಯಸುತ್ತಿದ್ದಾರೆ ಮತ್ತು ಆಪಲ್ ಇದರ ಬಗ್ಗೆ ಗಮನಹರಿಸಬೇಕು ತಮ್ಮ ಮುಂದಿನ ಉತ್ಪಾದನೆಯಲ್ಲಿ. ಗಾಳಿಸುದ್ದಿ ಪ್ರಕಾರ ಐಫೋನ್ 8 ಸಂಪೂರ್ಣ ಹೊಸ ವಿನ್ಯಾಸ ಹೊಂದಿದ್ದು ಕಂಪನಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬೆಳವಣಿಗೆ ಕಾಣಬಹುದು.

ವಿನ್ಯಾಸ ಇನ್ನೂ ಕೊನೆಯ ಹಂತಕ್ಕೆ ಬಂದಿಲ್ಲದ ಕಾರಣ ಸ್ಪಷ್ಟವಾಗಿ ಹೇಳಲು ಆಗುವುದಿಲ್ಲಾ, ಆದರೆ ಅದರ ಫೀಚರ್ಸ್ ಏನಿರಬಹುದೆಂದು ತಿಳಿಯಬಹುದಾಗಿದೆ.

ಒಲೆಡ್ ಡಿಸ್ಪ್ಲೆ

ಒಲೆಡ್ ಡಿಸ್ಪ್ಲೆ

ಐಫೋನ್ ಎಲ್‍ಇಡಿ ಡಿಸ್ಪ್ಲೆ ಒಲೆಡ್ ಡಿಸ್ಪ್ಲೆಗೆ ಬದಲಾಗಲಿದೆ. ಆದರೆ ಅದನ್ನು ಒದಗಿಸುವ 4 ಹಂಚಿಕೆದಾರರಲ್ಲಿ ಡಿಸ್ಪ್ಲೆಯನ್ನು ತಯಾರಿಸುವಷ್ಟು ಉತ್ಪನ್ನವಿಲ್ಲಾ, ಆಪಲ್ ಇದನ್ನು 2017 ರ ಐಫೋನ್ ನಲ್ಲಿ ಉಪಯೋಗಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಕ್ರೀನ್ ಅಳತೆ

ಸ್ಕ್ರೀನ್ ಅಳತೆ

ಇದರ ಬಗ್ಗೆ ಮಿಶ್ರ ಅಭಿಪ್ರಾಯ ಮತ್ತು ವರದಿಗಳಿವೆ. ದೊಡ್ಡದಾದ ಮತ್ತು ಕರ್ವ್‍ಡ್ ಎಡ್ಜ್ ಇರುವುದು. ಒಲೆಡ್ ಡಿಸ್ಪ್ಲೆ ಇರುವ ಐಫೋನ್ 5.8 ಇಂಚಿನದಾದರೆ ಬೇರೆಯದು 4.7 ಮತ್ತು 5.5 ಟಿಎಫ್‍ಟಿ ಎಲ್‍ಸಿಡಿ ಯದಾಗಿರುತ್ತದೆ.

ಕ್ಯಾಮೆರಾ

ಕ್ಯಾಮೆರಾ

ಐಫೋನ್ 7 ಕ್ಯಾಮೆರಾ ಅತ್ಯದ್ಭುತವಾಗಿದೆ. ಆದರೂ ಆಪಲ್ ಅದನ್ನು ಅಪ್‍ಗ್ರೇಡ್ ಮಾಡಿ ಇನ್ನೂ ಸುಧಾರಿಸಿದ್ದಾರೆ ಅದರ ಗುಣಮಟ್ಟ ಮತ್ತು ಜೂಮಿಂಗ್ ಕ್ಷಮತೆಯನ್ನು. ಐಫೋನ್7 ಪ್ಲಸ್ ಎರಡು ಕ್ಯಾಮೆರಾಗಳಲ್ಲಿ ಒಂದು ಮಾತ್ರ ಒಪ್ಟಿಕಲ್ ಇಮೇಜ್ ಸ್ಟೆಬಿಲೈಜೆಷನ್ ಹೊಂದಿತ್ತು.

ಐಫೋನ್8 ರಲ್ಲಿ ಡುಂiÀiಲ್ ಒಪ್ಟಿಕಲ್ ಇಮೇಜ್ ಸ್ಟೆಬಿಲೈಜೆಷನ್ ಇರಲಿದೆ ಎರಡೂ ಕ್ಯಾಮೆರಾದಲ್ಲಿ. ಇದರಿಂದ ಫೋಟೊ ಗುಣಮಟ್ಟ ಮತ್ತು ಜೂಮ್ ರೇಂಜ್ ಮತ್ತಷ್ಟು ಉತ್ತಮವಾಗಲಿದೆ.

ವೈರ್‍ಲೆಸ್ ಚಾರ್ಜಿಂಗ್

ವೈರ್‍ಲೆಸ್ ಚಾರ್ಜಿಂಗ್

ಕೇಬಲ್ ಸಂಬಂಧವನ್ನು ಕಡಿದು ವೈರ್‍ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ತರಬಹುದು. ಬಳಕೆದಾರರು 15 ಫೀಟ್ ದೂರದಿಂದ ತಮ್ಮ ಫೋನ್ ಚಾರ್ಜ್ ಮಾಡಬಹುದು.

ಬಿಡುಗಡೆಯ ದಿನಾಂಕ

ಬಿಡುಗಡೆಯ ದಿನಾಂಕ

ಐಫೋನ್ ತನ್ನ 10 ನೇ ವಾರ್ಷಿಕೋತ್ಸವ ವನ್ನು ಮುಂದಿನ ವರ್ಷ ಆಚರಿಸುತ್ತದೆ. ಅಂದಾಜಿನ ಪ್ರಕಾರ ಜೂನ್ 29, 2017.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Apple might release the new iPhone 8 on their 10th Anniversary next year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X