ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಮೋಟರೋಲಾ ಕಂಪೆನಿಯ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಕಡಿಮೆ ಬೆಲೆಯ ಮೋಟೋ ಜಿ ಸ್ಮಾರ್ಟ್‌ಫೋನ್‌ ಬ್ರಝಿಲ್‌ನಲ್ಲಿ ಬಿಡುಗಡೆಯಾಗಿದೆ. ಗೂಗಲ್‌‌ ಮಾಲೀಕತ್ವದ ಮೋಟರೋಲಾದ ಹೊಸ ಸ್ಮಾರ್ಟ್‌ಫೋನ್‌‌‌ ಅಮೆರಿಕದಲ್ಲಿ ಲಭ್ಯವಿದ್ದು, 2014 ಆರಂಭದಲ್ಲಿ 30 ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮೋಟರೋಲಾ ನಿರ್ಧರಿಸಿದೆ.

ಅಮೆರಿಕದಲ್ಲಿ ಕಾಂಟ್ಯ್ರಾಕ್ಟ್‌‌ ಹೊರತಾದ 8GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 179 ಡಾಲರ್‌(11,300 ರೂಪಾಯಿ)16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 199 ಡಾಲರ್‌(ಅಂದಾಜು12,600 )ನಿಗದಿ ಮಾಡಿದೆ.

ಗೂಗಲ್‌ ಕಳೆದ ನವೆಂಬರ್‌ನಲ್ಲಿ ಎಲ್‌ಜಿ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. 16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 349 ಡಾಲರ್‌(ಅಂದಾಜು 28,999 ರೂಪಾಯಿ) 32 GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನಿಗೆ 399 ಡಾಲರ್‌(ಅಂದಾಜು 32,999 ರೂಪಾಯಿ)ನಿಗದಿ ಪಡಿಸಿತ್ತು.

ಗೂಗಲ್‌ ಯಾವಾಗಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗೆ ಉತ್ತೇಜನ ನೀಡುತ್ತಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ ತಯಾರಿಸಬಹುದು ಎಂದು ಮಾರ್ಚ್‌ನಲ್ಲಿ ಭಾರತದ ಪ್ರವಾಸದ ಸಂದರ್ಭದಲ್ಲಿ ಗೂಗಲ್‌ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್‌ ಹೇಳಿದ್ದರು. ಅದರಂತೆ ಗೂಗಲ್‌ ಈಗ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು,ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸುವ ಭಾರತ ಮತ್ತು ಚೀನಾದ ಕಂಪೆನಿಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.

ನೆಕ್ಸ್‌ಸ್ ಸ್ಮಾರ್ಟ್‌ಫೋನ್‌‌ಗೆ ದುಬಾರಿ ಬೆಲೆಯನ್ನು ಗೂಗಲ್‌ ನಿಗದಿ ಪಡಿಸಿದ್ದರೆ ಮೋಟೋ ಜಿ ಸ್ಮಾರ್ಟ್‌ಫೋನಿಗೆ ಕಡಿಮೆಬೆಲೆಯನ್ನು ನಿಗದಿ ಪಡಿಸಿದೆ. ಈ ಮೂಲಕ ಎರಡು ವರ್ಗದ ಜನರನ್ನು ತನ್ನ ಸೆಳೆಯಲು ಗೂಗಲ್‌ ದೊಡ್ಡ ಯೋಜನೆಯನ್ನು ರೂಪಿಸಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲೂ ತನ್ನ ಪ್ರಭುತ್ವವನ್ನು ಸ್ಪಾಪಿಸಲು ಗೂಗಲ್‌ ಯೋಚಿಸುತ್ತಿದೆ ಎನ್ನಲಾಗಿದೆ.

ಮುಂದಿನ ವಾರದ ಆರಂಭದಲ್ಲಿ ಬ್ರಝಿಲ್‌ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದ್ದು,ನಂತರ ಲ್ಯಾಟಿನ್‌ ಅಮೆರಿಕ,ಯುರೋಪ್‌‌,ಕೆನಡಾ, ಏಷ್ಯಾದ ಹಲವು ದೇಶಗಳಲ್ಲಿ ಸ್ಮಾರ್ಟ್‌ಫೋನ್‌‌ ಬಿಡುಗಡೆಯಾಗಲಿದೆ.

ಮೋಟೋ ಜಿ
ವಿಶೇಷತೆ:
ಸಿಂಗಲ್‌ ಸಿಮ್‌/ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB ರ್‍ಯಾಮ್‌
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ಮೋಟೋ ಜಿ ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


ಮೋಟೋ ಜಿ ಸಿಂಗಲ್‌ ಸಿಮ್‌ನಲ್ಲಿ ಬಿಡುಗಡೆಯಾಗಿದ್ದರೂ ಭಾರತ ಮತ್ತು ಬ್ರಝಿಲ್‌ನಲ್ಲಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ದೇಶಗಳಲ್ಲಿ ಡ್ಯುಯಲ್‌ ಸಿಮ್‌ನಲ್ಲೂ ಮೋಟೋ ಜಿ ಬಿಡುಗಡೆಯಾಗಲಿದೆ. ಈ ಬಗ್ಗೆ ಮೋಟರೋಲಾ ಕಂಪೆನಿಗೆ ಸಲಹೆ ನೀಡುವ Guy Kawasaki ಟ್ವೀಟರ್‌ನಲ್ಲಿ ಟ್ವೀಟ್‌ ಮಾಡುವ ಈ ವಿಷಯ ಹೇಳಿದ್ದಾರೆ.

 ಆಪರೇಟಿಂಗ್‌ ಸಿಸ್ಟಂ:

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


ಮೋಟರೋಲಾವನ್ನು ಗೂಗಲ್‌ ಖರೀದಿಸಿದ್ದರಿಂದ ಬಹುತೇಕ ಜನ ಹೊಸ ಸ್ಮಾರ್ಟ್‌ಫೋನ್‌ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾಗಬಹುದು ಎಂದು ಊಹಿಸಿದ್ದರು. ಆದರೆ ಮೋಟೋ ಜಿ ಆಂಡ್ರಾಯ್ಡ್‌ ಜೆಲ್ಲಿ ಬೀನ್ ಅಪ್‌ಡೇಟ್‌4.3 ಓಎಸ್‌ನಲ್ಲಿ ಬಿಡುಗಡೆಯಾಗಿದ್ದು ಜನವರಿಯಲ್ಲಿ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಆಗಲಿದೆ.

ಮೆಮೊರಿ

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

8 ಮತ್ತು16 GBಯ ಎರಡು ಆಂತರಿಕ ಮೆಮೊರಿಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೇ ಗೂಗಲ್ ಡ್ರೈವ್‌ನಲ್ಲಿ ಎರಡು ವರ್ಷಗಳ ಕಾಲ 50GB ಡೇಟಾವನ್ನು ಉಚಿತವಾಗಿ ಸಂಗ್ರಹಿಸಬಹುದು ಎಂದು ಹೇಳಿದೆ.ಈಗಾಗಲೇ ಗೂಗಲ್‌ ತನ್ನ ಬಳಕೆದಾರು ಉಚಿತವಾಗಿ 15GB ಡೇಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸಂಗ್ರಹಿಸಲು ಅನುಮತಿ ನೀಡಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಬಳಕೆದಾರರು 65GB ಡೇಟಾವನ್ನು ಗೂಗಲ್‌ ಡ್ರೈವ್‌ನಲ್ಲಿ ಸಂಗ್ರಹಿಸಬಹುದಾಗಿದೆ.

 ಇಷ್ಟ ಬಂದ ಬಣ್ಣದಲ್ಲಿ ಸ್ಮಾರ್ಟ್‌ಫೋನ್‌!

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


ಬ್ಯಾಕ್‌ ಪ್ಯಾನೆಲ್‌‌ನ್ನು ತೆಗೆಯಬಹುದು. ಬ್ಯಾಟರಿ ಕವರ್‌ ಮತ್ತು ಫ್ಲಿಪ್‌ ಕವರ್‌ಗಳು ಏಳು ಬಣ್ಣದಲ್ಲಿ ಲಭ್ಯವಿದ್ದು ಬೇಕಾದ ಬಣ್ಣದಲ್ಲಿ ಜೋಡಿಸಬಹುದು. ಇನ್ನು ಗ್ರಿಪ್‌ ಶೆಲ್‌ ಐದು ಬಣ್ಣದಲ್ಲಿದ್ದು ಬೇಕಾದ ಬಣ್ಣದ ಗ್ರಿಪ್‌ ಶೆಲ್‌ನ್ನು ಹಾಕಬಹುದಾಗಿದೆ.

 ಸ್ಕ್ರೀನ್‌:

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ) ಮೋಟೋ ಜಿ ಹೊಂದಿದೆ.

ಪ್ರೊಸೆಸೆರ್‌:

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


1GB ರ್‍ಯಾಮ್‌, 1.2 GHz Qualcomm Snapdragon 400 ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 305 ಗ್ರಾಫಿಕ್ ಪ್ರೊಸೆಸರ್‌ನ್ನು ಹೊಂದಿದೆ.

 ಕ್ಯಾಮೆರಾ:

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


ಎಲ್‌‌ಇಡಿ ಫ್ಲ್ಯಾಶ್‌ ಹೊಂದಿರುವ ಹಿಂದುಗಡೆ 5 ಎಂಪಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ. 4X ಡಿಜಿಟಲ್‌ ಝೂಮ್‌ ಮಾಡಬಹದಾದ ಕ್ಯಾಮೆರಾದಲ್ಲಿ ಸ್ಲೋ ಮೋಷನ್‌ ವಿಡಿಯೋ,ಬರ್ಸ್ಟ್ ಮೂಡ್‌,ಆಟೋ ಎಚ್‌ಡಿಆರ್‌,ಪನೋರಮಾ,ಟ್ಯಾಪ್‌ ಟು ಫೋಕಸ್‌ ವಿಶೆಷತೆ ಇದೆ.1.3 ಎಂಪಿ ಮುಂದುಗಡೆ ಕ್ಯಾಮೆರಾವಿದ್ದು, ಹಿಂದೆ ಮತ್ತು ಮುಂದೆ 720p ಎಚ್‌ಡಿ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ.

 ಬ್ಯಾಟರಿ/ಸೆನ್ಸರ್‌

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


ಸ್ಮಾರ್ಟ್‌ಫೋನ್‌ 2070 mAh ಬ್ಯಾಟರಿ ಹೊಂದಿದ್ದು,ಎಕ್ಸಲರೋ ಮೀಟರ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

 ಗಾತ್ರ

ಮೋಟೋ ಜಿ: ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ


129.9ಮಿ.ಮೀ*65.9*ಮಿ.ಮೀ*11.6ಮಿ.ಮೀ ಗಾತ್ರವನ್ನು ಸ್ಮಾರ್ಟ್‌ಫೋನ್‌ ಹೊಂದಿದ್ದು, 143 ಗ್ರಾಂ ತೂಕ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot