ಅಸೂಸ್ 'ಜೆನ್‌ಫೋನ್ 3 ಲೇಸರ್‌(ZC551KL)' ಇಂದಿನಿಂದ ಮಾರಾಟಕ್ಕೆ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

By Suneel
|

ಅಸೂಸ್‌ ಇಂದು (ಬುಧವಾರ, ಅಕ್ಟೋಬರ್ 12) 'ಜೆನ್‌ಫೋನ್ 3 ಲೇಸರ್‌(ZC551KL)' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಖರೀದಿಗೆ ಲಭ್ಯವಿದೆ ಎಂದು ಪ್ರಕಟಣೆ ಹೊರಡಿಸಿದೆ. ಭಾರತದಲ್ಲಿ ಲಭ್ಯವಿರುವ ಈ ಫೋನ್‌ ಬೆಲೆ ರೂ.18,999 ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು.

ಅಸೂಸ್ 'ಜೆನ್‌ಫೋನ್ 3 ಲೇಸರ್‌(ZC551KL)' ಇಂದಿನಿಂದ ಮಾರಾಟಕ್ಕೆ

'ಜೆನ್‌ಫೋನ್ 3 ಲೇಸರ್‌(ZC551KL)' ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದ್ದು. ಮೆಟಲ್‌ ಬಾಡಿ ಮತ್ತು ಹೈಬ್ರಿಡ್ ಡ್ಯುಯಲ್‌ ಸಿಮ್ ಕಾರ್ಡ್‌ ಸ್ಲಾಟ್ ಫೀಚರ್ ಹೊಂದಿದೆ. ಡಿವೈಸ್‌ ಹಿಂಭಾಗ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಪೋರ್ಟ್‌ ಮಾಡಲಿದ್ದು, ಕೇವಲ 0.3 ಸೆಕೆಂಡ್‌ಗಳಲ್ಲಿ ಅನ್‌ಲಾಕ್‌ ಮಾಡಬಹುದು ಎಂದು ಅಸೂಸ್‌ ಹೇಳಿದೆ. ಅಲ್ಲದೇ 5 ಫ್ರಿಂಗರ್‌ ಪ್ರಿಂಟ್‌ ಸೆನ್ಸಾರ್‌ಗಳನ್ನು ರಿಜಿಸ್ಟರ್ ಮಾಡಬಹುದು.

ದಸರಾ ದೀಪಾವಳಿಗಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ಆಫರ್ಸ್

'ಜೆನ್‌ಫೋನ್ 3 ಲೇಸರ್‌(ZC551KL)' ಸ್ಮಾರ್ಟ್‌ಫೋನ್ ವಿಶೇಷತೆಗಳಲ್ಲಿ 5.5 ಇಂಚಿನ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ, ಆಕ್ಟಾಕೋರ್ ಸ್ನಾಪ್‌ಡ್ರಾಗನ್ 430 SoC ಸಂಯೋಜಿತವಾಗಿದ್ದು, ಜೊತೆಗೆ 4GB RAM ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸೂಸ್ 'ಜೆನ್‌ಫೋನ್ 3 ಲೇಸರ್‌(ZC551KL)' ಇಂದಿನಿಂದ ಮಾರಾಟಕ್ಕೆ

'ಜೆನ್‌ಫೋನ್ 3 ಲೇಸರ್‌(ZC551KL)' ಬಹುದೊಡ್ಡ ಹೈಲೈಟ್‌ ಎಂದರೆ ಲೇಸರ್‌ ಆಟೋಫೋಕಸ್ ಹೊಂದಿರುವ 13mp ಹಿಂಭಾಗ ಕ್ಯಾಮೆರಾ, ಡ್ಯುಯಲ್ ಟೋನ್ LED ಫ್ಲ್ಯಾಶ್‌ ಮತ್ತು ಎಲೆಕ್ಟ್ರಾನಿಕ್ ಇಮೇಜ್‌ ಸ್ಥಿರೀಕರಣ ಫೀಚರ್‌ ಹೊಂದಿದೆ. 8MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೆನ್‌ಫೋನ್ 3 ಸಿರೀಸ್‌ನ ಸ್ಮಾರ್ಟ್‌ಫೋನ್‌ ಕಲರ್‌ ಕರೆಕ್ಷನ್‌ ಸೆನ್ಸಾರ್ ಅನ್ನು ಸ್ವಯಂಚಾಲಿತ ವ್ಯವಸ್ಥೆಯೊಂದಿಗೆ ಹೊಂದಿದೆ. 3000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

4G VoLTE, 16GB ಸ್ಟೋರೇಜ್‌ನ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ಬೆಲೆ ರೂ.6,390 !

Best Mobiles in India

English summary
Asus ZenFone 3 Laser (ZC551KL) Goes on Sale: Price and Specifications. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X