4G VoLTE, 16GB ಸ್ಟೋರೇಜ್‌ನ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ಬೆಲೆ ರೂ.6,390 !

Written By:

'ಆಕ್ವಾ ಪ್ರೊ 4G' ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗೆ ಲಾಂಚ್‌ ಮಾಡಿದ ನಂತರ, ಈಗಾಗಲೇ ಇಂಟೆಕ್ಸ್ 'ಆಕ್ವಾ ಸ್ಟ್ರಾಂಗ್ 5.2' ಸ್ಮಾರ್ಟ್‌ಫೋನ್ ಲಾಂಚ್‌ ಮಾಡಿ ಆಕ್ವಾ ಸೀರೀಸ್‌ಗೆ ಮೊತ್ತೊಂದು ಡಿವೈಸ್‌ ದಾಖಲಿಸಿದೆ. ಈ ಹಿಂದಿನ ಯಶಸ್ವಿ ಡಿವೈಸ್‌ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1' VoLTE ಸಪೋರ್ಟ್ ಜೊತೆಗೆ, 2GB RAM, ಅಭಿವೃದ್ದಿ ಹೊಂದಿದ ಆಂತರಿಕ ಸ್ಟೋರೇಜ್‌ನೊಂದಿಗೆ ಬಂದಿತ್ತು. ಅಂದಹಾಗೆ ಈಗಿನ ಲೇಟೆಸ್ಟ್ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ರೂ.6,390 ಗೆ ಲಾಂಚ್ ಆಗಿದೆ. ಆದರೆ ಎಲ್ಲಿ ಲಭ್ಯ ಎಂಬ ಮಾಹಿತಿ ಮಾತ್ರ ಇನ್ನೂ ತಿಳಿದುಬಂದಿಲ್ಲ.

4G VoLTE, 16GB ಸ್ಟೋರೇಜ್‌ನ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ಬೆಲೆ ರೂ.6,390

'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1' 8GB ಆಂತರಿಕ ಸ್ಟೋರೇಜ್ ಅನ್ನು ಹೊಂದಿದ್ದು, 4,999 ಕ್ಕೆ ರೂಗೆ ಲಾಂಚ್‌ ಆಗಿತ್ತು. ಎರಡು ತಿಂಗಳ ನಂತರ ಲಾಂಚ್‌ ಆಗಿರುವ ಇಂಟೆಕ್ಟ್ ಆಕ್ವಾ ಸೀರೀಸ್‌ನ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' 16GB ಇನ್‌ಬಿಲ್ಟ್‌ ಸ್ಟೊರೇಜ್‌ನೊಂದಿಗೆ ಬೆಲೆ ರೂ. 6,390 ಕ್ಕೆ ಭಾರತದಲ್ಲಿ ಲಾಂಚ್‌ ಆಗಿದೆ.

ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್‌ಫೋನ್ ಲಾಂಚ್

'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ಸ್ಮಾರ್ಟ್‌ಫೋನ್‌ 5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2MP ಮುಂಭಾಗ ಕ್ಯಾಮೆರಾ ಮತ್ತು 5MP ಹಿಂಭಾಗ ಕ್ಯಾಮೆರಾ ಫೀಚರ್‌ ಹೊಂದಿದೆ. ಡ್ಯುಯಲ್‌ ಸಪೋರ್ಟ್, 4G VoLTE, ಬ್ಲೂಟೂತ್‌ 4.0, ವೈಫೈ, ಮೈಕ್ರೋ USB ಪೋರ್ಟ್‌, ಎಫ್‌ಎಂ ರೇಡಿಯೊ, ಜಿಪಿಎಸ್ ಸಂಪರ್ಕಗಳನ್ನು ಹೊಂದಿದೆ.

4G VoLTE, 16GB ಸ್ಟೋರೇಜ್‌ನ 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ಬೆಲೆ ರೂ.6,390

ಆಂಡ್ರಾಯ್ಡ್ 6.0 ಓಎಸ್‌ ಚಾಲಿತವಾಗಿದ್ದು, 2800mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.2' ಫೋನ್ ಬಿಳಿ, ನೀಲಿ, ಮತ್ತು ಷಾಂಪೇಜ್‌ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಎಕ್ಸ್‍ಕ್ಲುಸಿವ್ : ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾದ 5 ವಿಷಯಗಳು

 Read more about:
English summary
Intex Aqua Strong 5.2 With 4G VoLTE Support Launched at Rs. 6,390. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot