ಬ್ಲ್ಯಾಕ್‌ಬೆರಿ ಝಿ 30 ಬೆಲೆ ದಿಢೀರ್ ಇಳಿಕೆ
ಬ್ಲ್ಯಾಕ್‌ಬೆರಿ ಝಿ 10 ಬೆಲೆ ಇಳಿಕೆ ಮಾಡಿದ್ದಂತೆ ಬ್ಲ್ಯಾಕ್‌ಬೆರಿ ಈಗ ತನ್ನ ದುಬಾರಿ ಬೆಲೆಯ ಬ್ಲ್ಯಾಕ್‌ಬೆರಿ ಝಿ 30 ಸ್ಮಾರ್ಟ್‌ಫೋನಿನ ಬೆಲೆಯನ್ನು ಕಡಿಮೆ ಮಾಡಿದೆ.ಕಳೆದ ಅಕ್ಟೋಬರ್‌ನಲ್ಲಿ 39,990 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಿದ್ದ ಬ್ಲ್ಯಾಕ್‌ಬೆರಿ ಈಗ ಈ ಸ್ಮಾರ್ಟ್‌ಫೋನ್‌ಗೆ 34999 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.
60 ದಿನಗಳ ಅವಧಿಯವರೆಗೆ ಈ ರಿಯಾಯಿತಿ ದರವನ್ನು ಬ್ಲ್ಯಾಕ್‌ಬೆರಿ ಪ್ರಕಟಿಸಿದ್ದು ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಈ ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಲಭ್ಯವಿದೆ.72x140.7x9.4 ಮಿ.ಮೀ ಗಾತ್ರದ ಸ್ಮಾರ್ಟ್‌ಫೋನ್ 170 ಗ್ರಾಂ ತೂಕವನ್ನು ಹೊಂದಿದ್ದು, ಬ್ಲ್ಯಾಕ್‌ಬೆರಿ 10.2 ಓಎಸ್,16ಜಿಬಿ ಆಂತರಿಕ ಮೆಮೊರಿ,2ಜಿಬಿ ರ್‍ಯಾಮ್,8 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಲ್ಯಾಕ್‌ಬೆರಿ ಝಿ 30
ವಿಶೇಷತೆ:
ಸಿಂಗಲ್ ಸಿಮ್
5 ಇಂಚಿನ ಸುಪರ್ ಅಮೊಲೆಡ್ ಸ್ಕ್ರೀನ್(1280 x 720 ಪಿಕ್ಸೆಲ್)
ಬ್ಲ್ಯಾಕ್‌ಬೆರಿ 10.2 ಓಎಸ್
1.7 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಡ್ಯುಯಲ್ ಕೋರ್ ಪ್ರೊಸೆಸರ್
16ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
2880 mAh ಬ್ಯಾಟರಿ


Click it and Unblock the Notifications






