ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್?
ಇಲ್ಲಿಯವರೆಗೆ ದುಬಾರಿ ಬೆಲೆಯ ಐಫೋನ್ ತಯಾರಿಸುತ್ತಿದ್ದ ಆಪಲ್ ಈಗ ಕಡಿಮೆ ಬೆಲೆಯ ಐಫೋನ್ ತಯಾರಿಸಲು ಮುಂದಾಗಿದೆ. ಈ ಸಂಬಂಧ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಮಾಹಿತಿಗಳು ಲೀಕ್ ಆಗಿದೆ.
ಭಾರತ, ಸೇರಿದಂತೆ ದಕ್ಷಿಣ ಏಷ್ಯಾ, ಮತ್ತು ಆಫ್ರಿಕಾ ದೇಶಗಳಲ್ಲಿ ಜನರು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಿದ್ದಾರೆ. ಜೊತೆಗೆ ವಿಶೇಷವಾಗಿ ಭಾರತದಲ್ಲಿ ದೇಶಿಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್,ಕಾರ್ಬನ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಂಪೆನಿಗಳ ಫೋನ್‌ಗೆ ಸರಿಸಾಟಿಯಾಗಿ ಆಪಲ್ ಐಫೋನ್ ಮಿನಿಯನ್ನು ತಯಾರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದ್ದು ಈ ಐಫೋನ್‌ಗೆ ಸಂಬಂಧಿಸಿದ ಮಾಹಿತಿ ಮತ್ತು ಇದರ ಚಿತ್ರವನ್ನು ಚೀನಾದ WeiPhone ವೆಬ್‌ಸೈಟ್ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಈ ಫೋನ್‌ಗೆ ಹೇಗಿದೆ? ವಿಶೇಷತೆ ಏನು? ಯಾವಾಗ ಈ ಫೋನ್ ಭಾರತದ ಮಾರುಕಟ್ಟೆಗೆ ಬರಲಿದೆ ಎಂಬಿತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಆಪಲ್ ಐಫೋನ್ ಒಳಗಡೆ ನೋಡಿದ್ದೀರಾ?

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ಐಫೋನ್ ಮಿನಿ ಎನ್ನುವ ಹೆಸರಿನಲ್ಲಿ ಈ ಸ್ಮಾರ್ಟ್‌ಫೋನ್ ಬರಲಿದ್ದು ಐಓಎಸ್ 7 ಆಪರೇಟಿಂಗ್ ಸಿಸ್ಟಂ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ಈ ಸ್ಮಾರ್ಟ್‌ಫೋನ್ 16/32/64GB ಆಂತರಿಕ ಮೆಮೋರಿಯಲ್ಲಿ ಬರಲಿದ್ದು ಈ ಐಫೋನ್ ಮಿನಿ ಬೆಲೆ ಕ್ರಮವಾಗಿ 21ಸಾವಿರ, 27 ಸಾವಿರ ಮತ್ತು 33 ಸಾವಿರ ಇರಲಿದೆ ಎಂದು ಅಂದಾಜಿಸಲಾಗಿದೆ.

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ಹಾರ್ಡ್‌ವೇರ್ ಮಾಹಿತಿ ಅಷ್ಟೇನು ಸೋರಿಕೆಯಾಗಿಲ್ಲ. ಆದರೂ ಈ ಸ್ಮಾರ್ಟ್‌ಫೋನ್ 4 ಇಂಚಿನ ಸ್ಕ್ರೀನ್,ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಬರಲಿದೆ.

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ಐಫೋನ್ ಮಿನಿ ವಿವಿಧ ಬಣ್ಣಗಳಲ್ಲಿ ಬರಲಿದ್ದು ಬಿಳಿ,ಹಸಿರು,ಹಳದಿ,ನೀಲಿ,ಕಿತ್ತಳೆ ಬಣ್ಣದಲ್ಲಿ ಬರಲಿದೆ.

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ನೋಕಿಯಾ ಲ್ಯೂಮಿಯಾ ಸ್ಮಾರ್ಟ್‌ಫೋನ್‌ನಲ್ಲಿ ಬಳಸಿರುವ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್‌ನ್ನು ಬಳಸಿ ಈ ಫೋನ್ ತಯಾರಿಸಲು ಆಪಲ್ ಮುಂದಾಗಿದೆ.

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ಕೆಲವು ಮಾಹಿತಿಗಳ ಪ್ರಕಾರ ಆಪಲ್ ಇದೇ ಸೆಪ್ಟೆಂಬರ್‌ನಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಆಪಲ್‌ನಿಂದ ಕಡಿಮೆ ಬೆಲೆಯ ಐಫೋನ್!
ಚೀನಾದಲ್ಲಿರುವ ವಿಶ್ವದ ದೊಡ್ಡ ಮೊಬೈಲ್ ಉತ್ಪಾದನ ತಯಾರಿಕ ಫ್ಯಾಕ್ಟರಿ ಫಾಕ್ಸ್ಕಾನ್‌ನಲ್ಲಿ(Foxconn) ಆಪಲ್ ಐಫೋನ್ ಮಿನಿಯನ್ನು ತಯಾರಿಸಲು ಮುಂದಾಗಿದೆ.


Click it and Unblock the Notifications








