ಐಫೋನಿಗಾಗಿ ಹೆತ್ತಮಗಳನ್ನೇ ಮಾರಿದ ಚೀನಾ ದಂಪತಿ

Posted By:

ಆಪಲ್‌ ಕಂಪೆನಿಯ ಐಫೋನಿನ ಹುಚ್ಚು ಅಭಿಮಾನಿಗಳು ಹೇಗಿರುತ್ತಾರೆ? ಯಾವ ರೀತಿಯ ಅವತಾರ ಮಾಡುತ್ತಾರೆ ಎನ್ನುವ ಸುದ್ದಿಯನ್ನು ನೀವು ಈ ಹಿಂದೆ ಓದಿರಬಹುದು. ಅವರೆಲ್ಲ ದೇಹದಲ್ಲಿ ಐಫೋನಿನ ಚಿತ್ರ ಬರೆದರೆ ಚೀನಾದ ದಂಪತಿ ತಮ್ಮ ಹೆತ್ತ ಮಗುವನ್ನೇ ಮಾರಿ ಹೊಸ ಐಫೋನ್‌ ಖರೀದಿಸಿದ್ದಾರೆ.

ತಮ್ಮ ಮೂರನೇ ಮಗು ಹುಟ್ಟುವ ಮೊದಲೇ ಜೂನ್‌ ತಿಂಗಳಿನಲ್ಲಿ ಇವರು ಆನ್‌ಲೈನ್‌ಲ್ಲಿ ಹಣ ನೀಡಿ ದತ್ತು ಪಡೆಯುವಂತೆ ಜಾಹೀರಾತು ನೀಡಿದ್ದರು. ನಂತರ ದಂಪತಿ ಹುಟ್ಟಿದ ಹೆಣ್ಣು ಮಗವನ್ನು 50,000 ಯೆನ್ (ಅಂದಾಜು ಐದು ಲಕ್ಷ ರೂಪಾಯಿ)ಗೆ ಮಾರಾಟ ಮಾಡಿ ಹೊಸ ಐಫೋನ್‌ ಮತ್ತು ಗುಣಮಟ್ಟದ ಸ್ಪೋರ್ಟ್ಸ‌ ಶೂ ಖರೀದಿ ಮಾಡಿದ್ದರು.

ಐಫೋನಿಗಾಗಿ ಹೆತ್ತಮಗಳನ್ನೇ ಮಾರಿದ ಚೀನಾ ದಂಪತಿ

ವಿಚಾರ ತಿಳಿದು ಇವರನ್ನು ಬಂಧಿಸಿದ ಪೊಲೀಸರು ಯಾಕೆ ಮಗಳನ್ನು ಮಾರಿದ್ದು ಎಂದು ಪ್ರಶ್ನಿಸಿದ್ದಕ್ಕೆ ಈಗಾಗಲೇ ನಮಗೆ ಎರಡು ಮಕ್ಕಳಿದ್ದಾರೆ ಮೂರನೇ ಮಗುವನ್ನು ಸಾಕುವುದು ಕಷ್ಟ ಎನ್ನುವ ಕಾರಣಕ್ಕೆ ಅವಳ ಭವಿಷ್ಯ ಉತ್ತಮವಾಗಿರಲು ಮಾರಿದ್ದೇವೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ಆಪಲ್‌ ಕಂಪೆನಿಯ ಪ್ರಸಿದ್ದಿ ಹೆಚ್ಚಿದ್ದು ಕಳೆದ ತಿಂಗಳು ಆಪಲ್‌ ತನ್ನ ದುಬಾರಿ ಬೆಲೆಯ ಐಫೋನ್‌ 5 ಎಸ್‌ ಮತ್ತು ಐಫೋನ್‌ 5 ಸಿಯನ್ನು ಬಿಡುಗಡೆ ಮಾಡಿತ್ತು.

ಚೀನಾದಲ್ಲಿ ಐಫೋನ್‌ ಖರೀದಿಗೆ ಈ ರೀತಿ ವಿಚಿತ್ರವಾಗಿ ಹಣವನ್ನುಗಳಿಸುವ ಸುದ್ದಿ ಹೊಸದೇನಲ್ಲ. ಈ ಹಿಂದೆ 17ವರ್ಷದ ಯುವಕನೊಬ್ಬ ತನ್ನ ಕಿಡ್ನಿಯನ್ನೇ ಮಾರಿ ಐಫೋನ್‌ ಖರೀದಿಸಿದ್ದ.

ಇದನ್ನೂ ಓದಿ: ಪಾಚಿಯಲ್ಲಿ ಸಮುದ್ರ!ಚೀನಾ ಸಮುದ್ರದಲ್ಲೊಂದು ವಿಚಿತ್ರ ಪಾಚಿ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot