ಅಭ್ಯರ್ಥಿ‌ಗಳ ಪೂರ್ವಾಪರ ಮಾಹಿತಿ ಮೊಬೈಲ್‌ನಲ್ಲಿ ನೋಡಿ

Posted By:

ಈ ವರ್ಷ ಉಳಿದ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಅಭ್ಯರ್ಥಿ‌ಗಳ ಪೂರ್ವಾಪರ ಮಾಹಿತಿ ಜನರ ಕೈಯಲ್ಲೇ ಸಿಗಲಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅಭ್ಯರ್ಥಿ‌ಗಳ ಸಂಪೂರ್ಣ‌ ಮಾಹಿತಿಯನ್ನು ಜನರ ಮೊಬೈಲ್‌ಗೆ ಉಚಿತವಾಗಿ ತಲುಪಿಸಿ ಜಾಗೃತಿ ಮೂಡಿಸಲು ಮುಂದಾಗಿದೆ.

ಈ ಸಂಬಂಧ ಫೇಸ್‌ಬುಕ್‌ ಇಂಡಿಯಾ ಎಡಿಆರ್‌(Association for Democratic Reforms) ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಕ್ರಿಮಿನಲ್‌,ಆರ್ಥಿಕ,ಶೈಕ್ಷಣಿಕ‌, ವೃತ್ತಿ ಮಾಹಿತಿಯನ್ನು ಯುಎಸ್‌ಎಸ್‌ಡಿ(Unstructured Supplementary Service Data)ಮೆಸೇಜ್‌ ರೂಪದಲ್ಲಿ ಬಳಕೆದಾರನಿಗೆ ನೀಡಲಿದೆ.ಬಳಕೆದಾರ ಮೊಬೈಲ್‌ನಿಂದ *325# ಅಥವಾ *325*35# ನಂಬರ್‌  ಡಯಲ್‌ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದು ಎಂದು ಫೇಸ್‌ಬುಕ್‌ ಹೇಳಿದೆ.

ಏನಿದು ಯುಎಸ್‌ಎಸ್‌ಡಿ?
ಜಿಎಸ್‌ಎಂ( ಗ್ಲೋಬಲ್‌ ಸಿಸ್ಟಂ ಫಾರ್‌ ಮೊಬೈಲ್‌ ಕಮ್ಯೂನಿಕೇಷನ್‌) ಮೊಬೈಲ್‌‌ ಸೇವೆ ನೀಡುವ ಕಂಪೆನಿಗಳ ಕಂಪ್ಯೂಟರ್‌ಗಳು ತಮ್ಮ ಬಳಕೆದಾರರ ಜೊತೆ ಸಂವಹನ ನಡೆಸಲು ಯುಎಸ್‌ಎಸ್‌ಡಿ ಶಿಷ್ಟತೆಯನ್ನು ಬಳಸಿಕೊಳ್ಳುತ್ತವೆ.ವ್ಯಾಪ್‌ ಬ್ರೌಸಿಂಗ್‌,ಮೆನು ಆಧಾರಿತ ಸೇವೆ,ಪ್ರಿಪೇಡ್‌ ಕಾಲ್‌ ಬ್ಯಾಕ್‌ ಸೇವೆಗಳು ಈ ಯುಎಸ್‌ಎಸ್‌ಡಿ ಪ್ರೊಟೋಕಾಲ್ ಅಡಿಯಲ್ಲಿ ನಡೆಯುತ್ತದೆ. ಈ ಯುಎಸ್‌ಎಸ್‌ಡಿ ಮೆಸೇಜ್‌ಗಳು 182 ಅಕ್ಷರದ ಮಿತಿಯಲ್ಲಿರುತ್ತದೆ.

ಫೇಸ್‌ಬುಕ್‌ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯ ಸೇವೆಗಳನ್ನು ಆರಂಭಿಸುವುದು ಹೊಸದೇನಲ್ಲ.ಕಳೆದ ಸೆಪ್ಟೆಂಬರ್‌ನಲ್ಲಿ ಹೊಸದಾಗಿ ಮತದಾನದ ಹಕ್ಕನ್ನು ಪಡೆಯುತ್ತಿರುವ ಯುವಜನತೆ ವೋಟರ್‌ ಐಡಿ ಮಾಡಿಸಲು 'ರಿಜಿಸ್ಟರ್‌ ವೋಟ್‌' ಎನ್ನುವ ಹೊಸ ವಿಶೇಷತೆಯಿರುವ ತನ್ನ ಟೈಮ್‌ಲೈನ್‌ ಆರಂಭಿಸಿತ್ತು.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಅಭ್ಯರ್ಥಿ‌ಗಳ ಪೂರ್ವಾಪರ ಮಾಹಿತಿ ಮೊಬೈಲ್‌ನಲ್ಲಿ ನೋಡಿ

ಅಭ್ಯರ್ಥಿ‌ಗಳ ಪೂರ್ವಾಪರ ಮಾಹಿತಿ ಮೊಬೈಲ್‌ನಲ್ಲಿ ನೋಡಿ

ಅಭ್ಯರ್ಥಿ‌ಗಳ ಪೂರ್ವಾಪರ ಮಾಹಿತಿ ಮೊಬೈಲ್‌ನಲ್ಲಿ ನೋಡಿ

ಯುಎಸ್‌ಎಸ್‌ಡಿ ಮೆಸೇಜ್‌ ಪ್ರಕ್ರೀಯೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot