Subscribe to Gizbot

ಒಬಿ ಮೊಬೈಲ್‌: ಭಾರತದ ಮಾರುಕಟ್ಟೆಗೆ ಮತ್ತೊಂದು ಕಂಪೆನಿ ಎಂಟ್ರಿ

Posted By:

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಮತ್ತೊಂದು ಕಂಪೆನಿ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಆಪಲ್‌ನ ಮಾಜಿ ಸಿಇಒ ಜಾನ್‌ ಸ್ಕಲ್ಲೆ ನೇತೃತ್ವದ ಒಬಿ ಮೊಬೈಲ್ ಕಂಪೆನಿಯ ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಒಬಿ ಮೊಬೈಲ್ಸ್‌ ,ಸಿಂಗಾಪುರ್‌ ಮೂಲದ ಇನ್‌‌ಫ್ಲೆಕ್ಸನ್‌ಪಾಯಿಂಟ್‌‌‌( Inflexionpoint) ಕಂಪೆನಿಯ ಮೊಬೈಲ್‌ ಬ್ರ್ಯಾಂಡ್ ಆಗಿದ್ದು 120 ಕೋಟಿ ರೂಪಾಯಿ ಬಂಡವಾಳದೊಂದಿಗೆ ವಹಿವಾಟು ಆರಂಭಿಸಲು ಮುಂದಾಗಿದೆ. ಒಬಿ ಮೊಬೈಲ್ಸ್‌ ಮುಂದಿನ ತಿಂಗಳಿನಲ್ಲೇ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ದೇಶೀಯ ಟೆಕ್‌ ಮಾಧ್ಯಮಗಳು ವರದಿ ಮಾಡಿವೆ.

ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌‌ಫೋನ್‌ ವಿಭಾಗದ ಮಾಜಿ ಮುಖ್ಯಸ್ಥ ಅಜಯ್‌ ಶರ್ಮ‌ ಜೊತೆಗೂಡಿ ಜಾನ್‌ ಸ್ಕಲ್ಲೆ(John Sculley) ಏಪ್ರಿಲ್‌ನಲ್ಲಿ ಮೊಬೈಲ್‌ ಕಂಪೆನಿಯನ್ನು ಆರಂಭಿಸಲಿದ್ದಾರೆ ಎನ್ನುವ ಸುದ್ದಿ ಮಾರ್ಚ್‌‌ ತಿಂಗಳಿನಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದರೂ,ಕಂಪೆನಿ ಕಾರ್ಯ‌ಯೋಜನೆಯ ಬಗ್ಗೆ ಮಾಹಿತಿ ಪ್ರಕಟಗೊಂಡಿರಲಿಲ್ಲ. ಈಗ ಕಂಪೆನಿಯ ಬಗ್ಗೆ ಮತ್ತಷ್ಟು ಮಾಹಿತಿ ಪ್ರಕಟಗೊಂಡಿದ್ದು ಗುರ್ಗಾವ್‌ನಲ್ಲಿ ಕೇಂದ್ರ ಕಚೇರಿಯನ್ನು ತೆರಯಲಿರುವ ಒಬಿ ಮೊಬೈಲ್ಸ್‌ ಕಂಪೆನಿ ಸ್ಮಾರ್ಟ್‌‌ಫೋನ್‌‌ ವಿನ್ಯಾಸ ಮತ್ತು ಪರೀಕ್ಷೆಯನ್ನು Dragon Technology ಮತ್ತು ಐರಿಸ್‌ ಕಂಪ್ಯೂಟರ್‌ ಕಂಪೆನಿಗಳು ‌ನಡೆಸಲಿದೆ ಒಬಿ ಮೊಬೈಲ್ಸ್‌ ಹೇಳಿದೆ.

ಒಬಿ ಮೊಬೈಲ್ಸ್‌ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ನಿರ್ಮಾಣಕ್ಕೆ ಕೈ ಹಾಕದೇ ಐದರಿಂದ 15ಸಾವಿರದೊಳಗಿರುವ ಸ್ಮಾರ್ಟ್‌‌‌ಫೋನ್‌ ಮತ್ತು ಫೀಚರ್‌ ಫೋನ್‌ ನಿರ್ಮಾ‌ಣಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದೆ.ಭಾರತದ ಬಳಿಕ ಏಷಿಯಾ ಫೆಸಿಫಿಕ್‌‌‌,ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಒಬಿ ಮೊಬೈಲ್ಸ್‌ ಯೋಜನೆ ರೂಪಿಸಿದೆ.

 ಒಬಿ ಮೊಬೈಲ್‌: ಭಾರತದ ಮಾರುಕಟ್ಟೆಗೆ ಮತ್ತೊಂದು ಕಂಪೆನಿ ಎಂಟ್ರಿ

John Sculley ಈ ಹಿಂದೆ 1977 ರಿಂದ1983ರವರಗೆ ಪೆಪ್ಸಿ ಕೋ ಕಂಪೆನಿ ಅಧ್ಯಕ್ಷರಾಗಿದ್ದು,1983ರಿಂದ 1993ರವರೆಗೆ ಆಪಲ್‌ ಕಂಪೆನಿಯ ಸಿಇಒ ಆಗಿ ಕಾರ್ಯ‌ನಿರ್ವ‌ಹಿಸಿದ್ದಾರೆ. ಇನ್‌‌ಫ್ಲೆಕ್ಸನ್‌ಪಾಯಿಂಟ್‌ ಕಂಪೆನಿಯ ಸಹ ಸಂಸ್ಥಾಪಕರಾಗಿದ್ದಾರೆ.

ಐಡಿಸಿ ವರದಿ ಪ್ರಕಾರ 2012ರಲ್ಲಿ 1.62 ಕೋಟಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮಾರಾಟವಾಗಿದ್ದರೆ, 2013ರಲ್ಲಿ 4.4 ಕೋಟಿ ಸ್ಮಾರ್ಟ್‌ಫೋನ್‌‌ ಮಾರಾಟವಾಗಿತ್ತು.ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ John Sculley ಭಾರತದಲ್ಲಿ ಸ್ಮಾರ್ಟ್‌ಫೋನ್‌ ಕಂಪೆನಿಯನ್ನು ಆರಂಭಿಸಲು ಮುಂದಾಗಿದ್ದಾರೆ.

ಮೈಕ್ರೋಮ್ಯಾಕ್ಸ್‌,ಝೋಲೋ,ಕಾರ್ಬ‌ನ್‌,ಐಬಾಲ್,ಸೆಲ್ಕಾನ್,ವಿಡಿಯೋಕಾನ್‌,ಇಂಟೆಕ್ಸ್‌,ಮ್ಯಾಕ್ಸ್‌‌,ಲಾವಾ,ಸ್ಪೈಸ್‌,ಬಿಯಾಂಡ್‌,ಎಚ್‌ಸಿಎಲ್‌,ಸಿಮ್‌ಟ್ರಾನಿಕ್ಸ್‌ನಂತಹ ದೇಶೀಯ ಕಂಪೆನಿಗಳು ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ.

ದೇಶೀಯ ಕಂಪೆನಿಗಳ ಪೈಕಿ ಮೈಕ್ರೋಮ್ಯಾಕ್ಸ್‌ ಒಂದೇ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದಿಸಲು ಆರಂಭಿಸಿದೆ.ಉಳಿದ ಕಂಪೆನಿಗಳ ಸ್ಮಾರ್ಟ್‌‌ಫೋನ್‌ ಹಾರ್ಡ್‌‌ವೇರ್‌ ಭಾಗಗಳು ಚೀನಾದಲ್ಲೇ ಹೆಚ್ಚಾಗಿ ತಯಾರಾಗುತ್ತದೆ.ಮೈಕ್ರೋಮ್ಯಾಕ್ಸ್‌ ಬಿಟ್ಟರೆ ಸ್ಯಾಮ್‌ಸಂಗ್‌ ಮತ್ತು ನೋಕಿಯಾ ಕಂಪೆನಿಯ ಫ್ಯಾಕ್ಟರಿಗಳು ಭಾರತದಲ್ಲಿದೆ. ಸ್ಯಾಮ್‌ಸಂಗ್‌ ಫ್ಯಾಕ್ಟರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದ್ದರೆ,ತಮಿಳುನಾಡಿನ ಚೆನ್ನೈನಲ್ಲಿ ನೋಕಿಯಾ ಫ್ಯಾಕ್ಟರಿ ನಿರ್ಮಿಸಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot