Subscribe to Gizbot

ಭಾರತದಲ್ಲಿ ಆರಂಭಗೊಳ್ಳಲಿದೆ ಮೈಕ್ರೋಮ್ಯಾಕ್ಸ್‌ ಮೊಬೈಲ್‌ ಫ್ಯಾಕ್ಟರಿ

Posted By:

ನಂಬರ್‌ ಒನ್ ದೇಶೀಯ ಸ್ಮಾರ್ಟ್‌ಫೋನ್‌ ತಯಾರಿಕ ಕಂಪೆನಿ ಮೈಕ್ರೋಮ್ಯಾಕ್ಸ್‌ ಈಗ ದೇಶದಲ್ಲೇ ಸ್ಮಾರ್ಟ್‌‌‌ಫೋನ್‌‌ ಬಿಡಿಭಾಗಗಳನ್ನು ಜೋಡಿಸುವ ಕಾರ್ಖಾನೆ ತೆರೆಯಲು ‌‌ ಮುಂದಾಗಲಿದೆ.

ಈಗಾಗಲೇ ಉತ್ತರಖಂಡ್‌ದ ರುದ್ರಪುರದಲ್ಲಿ ಕಾರ್ಖಾನೆ ತೆರೆದಿದ್ದು ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳ ಜೋಡಣೆಯ ಕೆಲಸ ಪ್ರಯೋಗಿಕವಾಗಿ ಆರಂಭವಾಗಿದೆ.ಮುಂದಿನ ವರ್ಷ‌ ಆರಂಭದಲ್ಲಿ ಈ ಕಾರ್ಖಾನೆಯನ್ನು ಉದ್ಘಾಟನೆ ಮಾಡಲಿದ್ದೇವೆ ಎಂದು ಮೈಕ್ರೋಮ್ಯಾಕ್ಸ್‌‌ ಸಹ ಸಂಸ್ಥಾಪಕ ರಾಹುಲ್‌ ಶರ್ಮ‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇಲ್ಲಿಯವರೆಗೆ ವಿಶ್ವದ ದೊಡ್ಡ ಮೊಬೈಲ್‌ ತಯಾರಿಕಾ ಫ್ಯಾಕ್ಟರಿ ಚೀನಾದ ಫಾಕ್ಸ್ಕಾನ್‌ಲ್ಲಿ ಮೈಕ್ರೋಮ್ಯಾಕ್ಸ್‌ನ ಹಾರ್ಡ್‌ವೇರ್‌ ಭಾಗಗಳು ಜೋಡಣೆಯಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.ಈಗ ನಾವು ದೇಶದಲ್ಲೇ ಕಂಪೆನಿ ತೆರೆಯಲು ಮುಂದಾಗುತ್ತಿದ್ದು ಈಗಾಗಲೇ 400 ಜನ ಉದ್ಯೋಗಿಗಳು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್‌ ಶರ್ಮ ಹೇಳಿದ್ದಾರೆ.

ಭಾರತದಲ್ಲಿ ಆರಂಭಗೊಳ್ಳಲಿದೆ ಮೈಕ್ರೋಮ್ಯಾಕ್ಸ್‌ ಮೊಬೈಲ್‌ ಫ್ಯಾಕ್ಟರಿ

ಮುಂದಿನ ವರ್ಷದ ಆರಂಭದಲ್ಲಿ ರಷ್ಯಾ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮೈಕ್ರೋಮ್ಯಾಕ್ಸ್‌ ನಿರ್ಧರಿಸಿದೆ.ಕಳೆದ ವರ್ಷ‌ ಕಂಪೆನಿ 3,168 ಕೋಟಿ ವಹಿವಾಟು ನಡೆಸಿದ್ದು,ಈ ವರ್ಷ‌ ಅಂದಾಜು ಸುಮಾರು 6 ಸಾವಿರ ಕೋಟಿ ವಹಿವಾಟು ನಡೆಸುವ ಗುರಿಯನ್ನು ಮೈಕ್ರೋಮ್ಯಾಕ್ಸ್‌ ಹೊಂದಿದೆ.

ಆರಂಭದಲ್ಲಿ ರಷ್ಯಾದಲ್ಲಿ ಬಿಡುಗಡೆ ಮಾಡಿದ ಬಳಿಕ ಯುರೋಪಿಯನ್‌ ದೇಶದಲ್ಲಿ ಮಾರುಕಟ್ಟೆ ವಿಸ್ತರಿಸಲು ಯೋಜನೆ ಹಾಕಿದ್ದೇವೆ. ಮುಂದಿನ ವರ್ಷ‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೈಕ್ರೋಮ್ಯಾಕ್ಸ್‌ನ್ನು ದೇಶದ ಬಿಲಿಯನ್‌ ಡಾಲರ್‌ ಕಂಪೆನಿಯಾಗಿ ರೂಪುಗೊಳ್ಳುವಂತೆ ಯೋಜನೆ ರೂಪಿಸುತ್ತಿದ್ದೇವೆ ಎಂದು ಸಂದರ್ಶನದಲ್ಲಿ ರಾಹುಲ್‌ಶರ್ಮ‌ ಹೇಳಿದ್ದಾರೆ.

ಹೆಚ್ಚಾಗಿ ಕಡಿಮೆ ಬೆಲೆಯಲ್ಲಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ವಿಯಾಗುತ್ತಿರುವ ಮೈಕ್ರೋಮ್ಯಾಕ್ಸ್‌,ಭಾರತದಲ್ಲಿ ಶೇ.18 ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಐಡಿಸಿ ತನ್ನ ಅಧ್ಯಯನದಲ್ಲಿ ಹೇಳಿತ್ತು.

ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್‌ ಕಳೆದ ತಿಂಗಳು ಮೊದಲ ಫುಲ್‌ ಎಚ್‌‌ಡಿ ಸ್ಕ್ರೀನ್‌ ಹೊಂದಿರುವ ಕ್ಯಾನ್‌ವಾಸ್‌ ಟರ್ಬೋ ಸ್ಮಾರ್ಟ್‌ಫೋನ್‌ ಬಿಡುಗಡೆಮಾಡಿತ್ತು. ಈ ಸ್ಮಾರ್ಟ್‌ಫೋನಿಗೆ ಹಾಲಿವುಡ್‌ ನಟ ಹ್ಯೂ ಜ್ಯಾಕ್‌ಮನ್‌ರನ್ನು ಮೈಕ್ರೋಮ್ಯಾಕ್ಸ್‌‌ ನೂತನ ರಾಯಭಾರಿಯಾಗಿ ನೇಮಿಸಿತ್ತು.

ಇದನ್ನೂ ಓದಿ: ಚೆನ್ನೈನ ನೋಕಿಯಾದ ದೊಡ್ಡ ಫ್ಯಾಕ್ಟರಿ ಹೇಗಿದೆ ಗೊತ್ತಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot