Subscribe to Gizbot

ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ

Posted By:

ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ. ಗೆಲಾಕ್ಸಿ ನೋಟ್‌3 ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಒಂದು ಕೋಟಿ ಫ್ಯಾಬ್ಲೆಟ್‌ ವಿಶ್ವದಲ್ಲಿ ಮಾರಾಟವಾಗಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.

ಗೆಲಾಕ್ಸಿ ನೋಟ್‌3 ಮಾರಾಟದ ಮೈಲಿಗಲ್ಲಿನ ಸುದ್ದಿಯನ್ನು samsungtomorrow ವೆಬ್‌ಸೈಟ್‌ ಪ್ರಕಟಿಸಿದೆ. ವಿಶ್ವದ ಪ್ರಥಮ 3 ಜಿಬಿ ರ್‍ಯಾಮ್‌ ಹೊಂದಿರುವ ಸ್ಮಾರ್ಟ್‌‌‌‌‌ಫೋನ್ ಇದಾಗಿದ್ದು ಜರ್ಮ‌ನಿಯ ಬರ್ಲಿ‌ನ್‌ನಲ್ಲಿಸೆಪ್ಟೆಂಬರ್‌ನಲ್ಲಿ ನಡೆದ ಐಎಫ್‌ಎ ಶೋನಲ್ಲಿ ಸ್ಯಾಮ್‌ಸಂಗ್‌ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿತ್ತು.

ಸ್ಯಾಮ್‌ಸಂಗ್ ಈ ಹಿಂದೆ ಬಿಡುಗಡೆ ಮಾಡಿದ್ದ ಗೆಲಾಕ್ಸಿ ಎಸ್4 ಸಹ ಇದೇ ರೀತಿಯ ಮೈಲಿಗಲ್ಲು ಸೃಷ್ಟಿಸಿತ್ತು. ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ವಿಶ್ವದಾದ್ಯಂತ 2 ಕೋಟಿ ಗೆಲಾಕ್ಸಿ ಎಸ್4 ಮಾರಾಟವಾಗಿತ್ತು.

ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು ಹೇಗಿದೆ ನೋಡಿದ್ದೀರಾ?

ಗೆಲಾಕ್ಸಿ ನೋಟ್‌ 3 ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ


ವಿಶೇಷತೆ:
ಸಿಂಗಲ್‌ ಸಿಮ್‌
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/ 64 GB ಆಂತರಿಕ ಮೆಮೋರಿ
3GB ರ್‍ಯಾಮ್‌
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

 ಸೆನ್ಸರ್‌:

ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ


ಗೆಶ್ಚರ್‌,ಎಕ್ಸಲರೋಮೀಟರ್‌‌,ಜಿಯೋ ಮ್ಯಾಗ್ನಟಿಕ್‌,ಗೈರೋಸ್ಕೋಪ್‌‌,ಆರ್‌ಜಿಬಿ ಪ್ರಾಕ್ಸಿಮಿಟಿ ಬಾರೋಮೀಟರ್‌,ಟೆಂಪರೇಚರ್‌ಹ್ಯುಮಿಡಿಟಿ ಸೆನ್ಸರ್‌ಗಳು ಫ್ಯಾಬ್ಲೆಟ್‌ನಲ್ಲಿದೆ.

 ಸ್ಯಾಮ್‌ಸಂಗ್ ಅಪ್ಲಿಕೇಶನ್‌:

ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ


ಫ್ಯಾಬ್ಲೆಟ್‌ ಎಸ್‌ ಪೆನ್‌ ನೀಡಲಾಗಿದ್ದುಎಸ್‌ಟ್ರಾನ್ಸ್ಲೇಟರ್‌,ಸ್ಯಾಮ್‌ಸಂಗ್‌ ಸ್ಮಾರ್ಟ್‌ ಸ್ಕ್ರೋಲ್‌,ಏರ್‌ ಗೆಶ್ಚರ್‌,ಸ್ಯಾಮ್‌ಸಂಗ್‌ ಹಬ್‌,ಸ್ಯಾಮ್‌ಸಂಗ್‌ ವಾಚ್ ಆನ್‌,ಎಸ್‌ ವಾಯ್ಸ್‌‌,ಎಸ್‌ ಹೆಲ್ತ್‌‌,ಸ್ಕ್ರೀನ್‌ ಮಾನಿಟರಿಂಗ್‌ನಂತಹ ಸ್ಯಾಮ್‌ಸಂಗ್‌ ಆಪ್‌ಗಳನ್ನು ಈ ಫ್ಯಾಬ್ಲೆಟ್‌ ಒಳಗೊಂಡಿದೆ.

 ಅಪ್ಲಿಕೇಶನ್‌:

ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ


ಕ್ರೋಮ್‌,ಸರ್ಚ್,ಜಿಮೇಲ್‌‌,ಮ್ಯಾಪ್ಸ್‌‌,ಪ್ಲೇಸ್ಟೋರ್‌‌,ಹ್ಯಾಂಗ್‌ಔಟ್‌‌,ವಾಯ್ಸ್‌ ಸರ್ಚ‌‌,ಯೂಟ್ಯೂಬ್‌,ಗೂಗಲ್‌ ಸೆಟ್ಟಿಂಗ್ಸ್‌,ಮೆಸೇಂಜರ್‌ನಂತ ಗೂಗಲ್‌ ಪ್ರಿ ಲೋಡೆಡ್‌ ಆಪ್‌ಗಳನ್ನು ಫ್ಯಾಬ್ಲೆಟ್‌ ಹೊಂದಿದೆ.

ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ


ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot