ಜಿಯೋನೀ 16 ಎಂಪಿ ಕ್ಯಾಮೆರಾ ಫ್ಯಾಬ್ಲೆಟ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ
ವಿಶ್ವದ ಪ್ರಥಮ 16 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾವಿರುವ ಸಿಂಗಲ್ ಸಿಮ್ ಫ್ಯಾಬ್ಲೆಟ್‌ನ್ನು ಚೀನಾದ ಜಿಯೋನೀ ಕಂಪೆನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹಿಂದುಗಡೆ 16 ಎಂಪಿ ಕ್ಯಾಮೆರಾವಿರುವ ಎಸ್4 ಝೂಮ್ ಸ್ಮಾರ್ಟ್‌ಫೋನನ್ನು ಸ್ಯಾಮ್‌ಸಂಗ್ ಈ ಮೊದಲು ಪರಿಚಯಿಸಿತ್ತು, ಆದರೆ ಈ ಸ್ಮಾರ್ಟ್‌ಫೋನ್ ಮುಂದುಗಡೆ 1.9 ಎಂಪಿ ಕ್ಯಾಮೆರಾವನ್ನು ಮಾತ್ರ ಹೊಂದಿತ್ತು.ಇನ್ನು ಮುಂದುಗಡೆ 8 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್ ಚೀನಾದ ಝೆನ್ ಮೊಬೈಲ್ ಕಂಪೆನಿ ಈ ಹಿಂದೆ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ಫೋನ್ ಹಿಂದುಗಡೆ 13 ಎಂಪಿ ಕ್ಯಾಮೆರಾವನ್ನು ಮಾತ್ರ ಹೊಂದಿತ್ತು.
ಈ ಫ್ಯಾಬ್ಲೆಟ್ ಎರಡು ಆಂತರಿಕ ಮೆಮೊರಿ ಮತ್ತು ಏಳು ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 2GB ರ್‍ಯಾಮ್ ಹೊಂದಿರುವ 16 GB ಆಂತರಿಕ ಮೆಮೊರಿ ಫ್ಯಾಬ್ಲೆಟ್‌ಗೆ 26,999 ಬೆಲೆ ನಿಗದಿಯಾಗಿದ್ದರೆ,3GB ರ್‍ಯಾಮ್ ಹೊಂದಿರುವ 32GB ಆಂತರಿಕ ಮೆಮೊರಿಯ ಫ್ಯಾಬ್ಲೆಟ್ 29,999 ಬೆಲೆಯನ್ನು ಜಿಯೋನೀ ನಿಗದಿ ಪಡಿಸಿದೆ. ಗೊರಿಲ್ಲ ಕಾರ್ನಿಂಗ್ ಗ್ಲಾಸ್ ಹೊಂದಿರುವ 5.5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್ ಫ್ಯಾಬ್ಲೆಟ್ 150.6 x 75.0 x 9.5 ಮಿ.ಮೀಟರ್ ಗಾತ್ರ,150 ಗ್ರಾಂ ತೂಕವನ್ನು ಹೊಂದಿದೆ.
ಜಿಯೋನಿ ಇಲೈಫ್ ಇ7 ಫ್ಯಾಬ್ಲೆಟ್ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸಿಂಗಲ್ ಸಿಮ್
5.5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB ರ್‍ಯಾಮ್
32GB ಆಂತರಿಕ ಮೆಮೊರಿ,3GB ರ್‍ಯಾಮ್
3ಜಿ, 4ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2500mAh ಬ್ಯಾಟರಿ
ಇದನ್ನೂ ಓದಿ: ಹೊಸ ವರ್ಷ ಆಫರ್- ಬೆಲೆ ಇಳಿಕೆಯಾಗಿರುವ ಸ್ಮಾರ್ಟ್‌ಫೋನ್‌ಗಳು


Click it and Unblock the Notifications





