Subscribe to Gizbot

ಹಿಂದೆ 16 ಎಂಪಿ,ಮುಂದೆ 8 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ

Written By:

ವಿಶ್ವದ ಪ್ರಥಮ 16 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾವಿರುವ ಸಿಂಗಲ್‌ ಸಿಮ್‌ಫ್ಯಾಬ್ಲೆಟ್‌ನ್ನು ಚೀನಾದ ಜಿಯೋನೀ ಕಂಪೆನಿ ಬಿಡುಗಡೆ ಮಾಡಿದೆ.

ಹಿಂದುಗಡೆ 16 ಎಂಪಿ ಕ್ಯಾಮೆರಾವಿರುವ ಎಸ್‌4 ಝೂಮ್‌ ಸ್ಮಾರ್ಟ್‌‌ಫೋನನ್ನು ಸ್ಯಾಮ್‌ಸಂಗ್‌ ಈ ಮೊದಲು ಪರಿಚಯಿಸಿತ್ತು, ಆದರೆ ಈ ಸ್ಮಾರ್ಟ್‌‌ಫೋನ್‌ ಮುಂದುಗಡೆ 1.9 ಎಂಪಿ ಕ್ಯಾಮೆರಾವನ್ನು ಮಾತ್ರ ಹೊಂದಿತ್ತು.ಇನ್ನು ಮುಂದುಗಡೆ 8 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ ಚೀನಾದ ಝೆನ್‌ ಮೊಬೈಲ್‌ ಕಂಪೆನಿ ಈ ಹಿಂದೆ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಹಿಂದುಗಡೆ 13 ಎಂಪಿ ಕ್ಯಾಮೆರಾವನ್ನು ಮಾತ್ರ ಹೊಂದಿತ್ತು.

ಈ ಸ್ಮಾರ್ಟ್‌ಫೋನ್‌ ಎರಡು ಆಂತರಿಕ ಮೆಮೊರಿ ಮತ್ತು ಏಳು ಬಣ್ಣದಲ್ಲಿ ಮಾರುಕಟ್ಟೆಗೆ ಬರಲಿದೆ. ಅಷ್ಟೇ ಅಲ್ಲದೇ ಸ್ಮಾರ್ಟ್‌‌ಫೋನ್‌ ಎರಡು ರ್‍ಯಾಮ್‌ನಲ್ಲಿ ಬರುತ್ತಿದೆ. 16 GB ಆಂತರಿಕ ಮೆಮೊರಿ ಫ್ಯಾಬ್ಲೆಟ್‌ಗೆ 2GB ರ್‍ಯಾಮ್‌ ನೀಡಿದ್ದರೆ,32GB ಆಂತರಿಕ ಮೆಮೊರಿ ಫ್ಯಾಬ್ಲೆಟ್‌ಗೆ 3GB ರ್‍ಯಾಮ್‌ನ್ನು ಜಿಯೋನೀ ನೀಡಿದೆ.ಗೊರಿಲ್ಲ ಕಾರ್ನಿಂಗ್‌ ಗ್ಲಾಸ್‌ ಹೊಂದಿರುವ 5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಫ್ಯಾಬ್ಲೆಟ್‌ ಡಿಸೆಂಬರ್‌ ಮೊದಲ ವಾರದಲ್ಲಿ ಚೀನಾದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಭಾರತದ ಮಾರುಕಟ್ಟೆಗೆ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಹಿಂದೆ 16 ಎಂಪಿ,ಮುಂದೆ 8 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ

ಜಿಯೋನಿ ಇಲೈಫ್‌ ಇ7
ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB ರ್‍ಯಾಮ್‌
32GB ಆಂತರಿಕ ಮೆಮೊರಿ,3GB ರ್‍ಯಾಮ್‌
ವೈಫೈ,ಬ್ಲೂಟೂತ್‌,ಜಿಪಿಎಸ್‌
2500mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot