ಗೂಗಲ್‌ ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಲು ರೆಡಿಯಾಗಿ!

By Ashwath
|

ಆಂಡ್ರಾಯ್ಡ್‌ ಹೊಸ ಓಎಸ್‌ ಹೆಸರೇನು ಎನ್ನುವ ಕುತೂಹಲಕ್ಕೆ ಗೂಗಲ್‌ ಈಗ ತೆರೆ ಎಳೆದಿದೆ. ತನ್ನ ಹೊಸ 4.4 ಆಂಡ್ರಾಯ್ಡ್‌ ಓಎಸ್‌ಗೆ ಕಿಟ್‌ಕ್ಯಾಟ್‌ ಎಂದು ಹೆಸರನ್ನಿರಿಸಿದೆ ಎಂದು ಆಂಡ್ರಾಯ್ಡ್‌ ಮುಖ್ಯಸ್ಥ ಭಾರತೀಯ ಮೂಲದ ಸುಂದರ್‌ ಪಿಚಾಯ್‌ ತಮ್ಮ ಗೂಗಲ್‌ ಪ್ಲಸ್‌ನಲ್ಲಿ ಪ್ರಕಟಿಸಿದ್ದಾರೆ.

ಜೆಲ್ಲಿ ಬೀನ್‌ ಬಳಿಕ ಗೂಗಲ್‌ ಆಂಡ್ರಾಯ್ಡ್‌ ಓಎಸ್‌ಗೆ ಕೀ.ಲೈಮ್‌ ಹೆಸರನ್ನು ಇಡಲಿದೆ ಎನ್ನುವ ಸುದ್ದಿ ವಿಶ್ವದ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತಿತ್ತು. ಈ ಸಂಬಂಧ ಈ ಓಎಸ್‌ ಸ್ಮಾರ್ಟ್‌ಫೋನ್‌ ಹೇಗೆ ಕಾಣುತ್ತದೆ ಎನ್ನುವದಕ್ಕೆ ಆದರ ಫೋಟೋಗಳು ಸಹ ಲೀಕ್‌ ಆಗಿತ್ತು. ಆದರೆ ಗೂಗಲ್‌ ಇಲ್ಲಿಯವರೆಗೆ ಹೊಸ ಓಎಸ್‌ಗೆ ಯಾವ ಹೆಸನ್ನಿಟ್ಟಿದೆ ಎನ್ನುವುದನ್ನು ಎಲ್ಲಿಯೂ ಪ್ರಕಟಸಿರಲಿಲ್ಲ. ಈಗ ಸುಂದರ್‌ ಪಿಚಾಯ್‌ ಚಾಕಲೇಟ್‌ ತಯಾರಕ ಕಂಪೆನಿ ನೆಸ್ಟ್ಲೆಯ ಜನಪ್ರಿಯ ಚಾಕಲೇಟ್‌ ಕಿಟ್‌ಕ್ಯಾಟ್‌ ಹೆಸರನ್ನು ಹೆಸರನ್ನು ಪ್ರಕಟಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಮುಂದಿನ ಅಕ್ಟೋಬರ್‌ನಲ್ಲಿ ಈ ಓಎಸ್‌ ಗೂಗಲ್‌ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಗೂಗಲ್‌ ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಲು ರೆಡಿಯಾಗಿ!

ಗೂಗಲ್‌ ಬಿಡುಗಡೆ ಮಾಡಿದ ಆಪರೇಟಿಂಗ್‌ ಸಿಸ್ಟಂಗಳಿಗೆ ಚಾಕಲೇಟ್‌ ಫ್ಲೇವರ್‌ಗಳನ್ನು ಹೆಸರನ್ನುಇರಿಸಿದ್ದು, ಇಲ್ಲಿಯವರೆಗೆ ಎಂಟು ಚಾಕಲೇಟ್‌ ಫ್ಲೇವರ್‌ಗಳ ಓಎಸ್‌ನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಇಂಗ್ಲಿಷ್‌ ವರ್ಣ‌ಮಾಲೆಯ ಅಕ್ಷರಗಳ ಅನುಸರವಾಗಿ ತನ್ನ ಆಪರೇಟಿಂಗ್‌ ಸಿಸ್ಟಂಗಳ ಹೆಸರನ್ನು ಇರಿಸಿಕೊಂಡು ಬಂದಿದ್ದು ವಿಶೇಷ.

ಇದೇ ಜುಲೈನಲ್ಲಿ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಅಪ್‌ಡೇಟ್‌ ಆವೃತ್ತಿಯನ್ನು ಗೂಗಲ್‌ ಬಿಡುಗಡೆ ಮಾಡಿತ್ತು. ಅಪ್‌ಡೇಟ್‌ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌ನ್ನು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಮಾಡಿದ್ದು,ಬಿಡುಗಡೆಯಾಗಿರುವ ನೆಕ್ಸಸ್‌ 7 ಟ್ಯಾಬ್ಲೆಟ್‌ ಈಗ ಹೊಸದಾಗಿ ಬಂದಿರುವ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಂದಿದೆ.

ಇದನ್ನೂ ಓದಿ: ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

<blockquote class="twitter-tweet blockquote"><p>We now have over 1 Billion Android activations and hope this guy in front of the building keeps that momentum going <a href="http://t.co/V0VovgmObl">pic.twitter.com/V0VovgmObl</a></p>— sundarpichai (@sundarpichai) <a href="https://twitter.com/sundarpichai/statuses/374933465998708736">September 3, 2013</a></blockquote> <script async src="//platform.twitter.com/widgets.js" charset="utf-8"></script>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X