Home
ಮೊಬೈಲ್

'ಗೂಗಲ್‌ ಪಿಕ್ಸೆಲ್‌' ಫೋನ್‌ಗಳ 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು

ಮಾರುಕಟ್ಟೆಯಲ್ಲಿ ಈಗಾಗಲೇ ಭರ್ಜರಿ ಸೇಲ್ ಆಗುತ್ತಿರುವ ಗೂಗಲ್ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳ ಸಮಸ್ಯೆಗಳು ಮತ್ತು ಪರಿಹಾರಗಳು.

By Suneel

ಮೊಬೈಲ್‌ ಮಾರುಕಟ್ಟೆಯಲ್ಲಿ ಡಿಸ್‌ಪ್ಲೇ, ಆಪರೇಷನ್‌, ಟಾಪ್‌ ಎಂಡ್‌ ಹಾರ್ಡ್‌ವೇರ್‌ ಇರುವ ಸ್ಮಾರ್ಟ್‌ಫೋನ್ ಎಂದು 'ಗೂಗಲ್‌ ಪಿಕ್ಸೆಲ್‌' ಸದ್ದು ಮಾಡುತ್ತಿದೆ. ಆದರೆ ಕೆಲವು ವಿಷಯಗಳಲ್ಲಿ ಮಾತ್ರ ಸ್ಮಾರ್ಟ್‌ಫೋನ್‌ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿದೆ.

ಹೆಚ್ಚು ಹಣ ವೆಚ್ಚ ಮಾಡಿ, ಖರೀದಿಸಿದ ಗೂಗಲ್‌ ಪಿಕ್ಸೆಲ್‌ ಫೋನ್ ಸಮಸ್ಯೆಗಳ ಲೀಸ್ಟ್‌ ಅನ್ನೇ ಹೊಂದಿದ್ದಲ್ಲಿ, ಇದು ಗೂಗಲ್‌'ಗೂ ಒಳ್ಳೆಯ ಸುದ್ದಿ ಅಲ್ಲ, ಅಲ್ಲದೇ ಬಳಕೆದಾರರಿಗೂ ಸಂತೋಷ ನೀಡುವುದಿಲ್ಲ.

ಗೂಗಲ್ ಪಿಕ್ಸೆಲ್‌ ಮತ್ತು ಪಿಕ್ಸೆಲ್‌ ಎಕ್ಸ್‌ಎಲ್‌ ಖರೀದಿಯಲ್ಲಿನ ಅತ್ಯಾಕರ್ಷಕ ಆಫರ್‌ಗಳು ಯಾವುವು ಗೊತ್ತೇ?

ಗೂಗಲ್‌ ಪಿಕ್ಸೆಲ್‌(Google Pixel) ಸ್ಮಾರ್ಟ್‌ಫೋನ್'ನ ಹಲವು ವಿಶೇಷ ಫೀಚರ್‌ಗಳಿಂದ ಸ್ಮಾರ್ಟ್‌ಫೋನ್‌ ಖರೀದಿಸಿರುವವರು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ, ಪರಿಹಾರ ಹೇಗೆ ಎಂದು ತಿಳಿಯಿರಿ. ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರು ಪಿಕ್ಸೆಲ್‌ ಫೋನ್‌'ನಲ್ಲಿನ ಸಮಸ್ಯೆಗಳೇನು ಎಂದು ತಿಳಿಯಿರಿ.

ಭಾರತದಲ್ಲಿ ಗೂಗಲ್‌'ನ 'ಪಿಕ್ಸೆಲ್‌ ಫೋನ್‌' ದರ ಎಷ್ಟು: ಇಲ್ಲಿದೆ ಡೀಟೇಲ್ಸ್

ಫೋನ್‌ ಹೆಚ್ಚು ಬಿಸಿ ಆಗುವುದು

ಫೋನ್‌ ಹೆಚ್ಚು ಬಿಸಿ ಆಗುವುದು

ಹಲವು ಗೂಗಲ್‌ ಪಿಕ್ಸೆಲ್‌ ಬಳಕೆದಾರರು, ಡಿವೈಸ್ ಹೆಚ್ಚು ಬಿಸಿಯಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪರಿಹಾರವನ್ನು ಕೆಳಗೆ ಓದಿ ತಿಳಿಯಿರಿ

#1 ಫೋನ್‌ ಬ್ಯಾಟರಿ ಪವರ್‌ ಅನ್ನು ಹೆಚ್ಚು ಹೀರಿಕೊಳ್ಳುವ ಯಾವುದೇ ಫೋನ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ.

#2 ಅಥವಾ ಯಾವುದಾದರೂ ಮೂರನೇ ಆಪ್‌ ಬಿಸಿ ಆಗಲು ಕಾರಣವೇ ಚೆಕ್‌ ಮಾಡಿ. ಆಪ್‌ ನಿಯಂತ್ರಣಕ್ಕೆ 'ಪವರ್‌ ಬಟನ್‌ ಆಫ್‌' ಟ್ಯಾಪ್‌ ಮಾಡಿ, 'ಸೇಫ್‌ ಮೋಡ್‌ಗೆ ರೀಬೂಟ್‌' ಆಗುವವರೆಗೆ ಹೋಲ್ಡ್‌ ಮಾಡಿ. ಡಯಲಾಗ್‌ ಬಾಕ್ಸ್ ಪ್ರದರ್ಶನವಾಗುತ್ತದೆ. ನಂತರ ಓಕೆ ಟ್ಯಾಪ್‌ ಮಾಡಿ.

ಮೈಕ್ರೋಫೋನ್‌ ವರ್ಕ್‌ ಆಗುತ್ತಿಲ್ಲ

ಮೈಕ್ರೋಫೋನ್‌ ವರ್ಕ್‌ ಆಗುತ್ತಿಲ್ಲ

ಮೈಕ್ರೋಫೋನ್‌ ಹಲವು ಬಾರಿ ವರ್ಕ್‌ ಆಗುವುದಿಲ್ಲ. ಕರೆ ಮಾಡಿದಾಗ ಆಫ್‌ ಆಗುವ ಮೂಲಕ ತೊಂದರೆ ಆಗುತ್ತಿದೆ ಎಂದು ಪಿಕ್ಸೆಲ್‌ ಬಳಕೆದಾರರು ಹೇಳುತ್ತಿದ್ದಾರೆ.

#1 ಮೈಕ್ರೋಫೋನ್‌ ಬಳಸುವ ಆಪ್‌ ಅನ್ನು ಡಿಲೀಟ್‌ ಮಾಡಿ.

#2 ಸ್ಪೀಕರ್‌ ಅನ್ನು ಆಫ್ ಮಾಡಿ ಆನ್ ಮಾಡಿ.
ಗೂಗಲ್‌, ಪಿಕ್ಸೆಲ್‌ ಫೋನ್‌ ಅನ್ನು ಬದಲಿಸುವ ಅವಕಾಶ ನೀಡಿದೆ.

ವೈಫೈ ಸಂಪರ್ಕ ಸಮಸ್ಯೆ

ವೈಫೈ ಸಂಪರ್ಕ ಸಮಸ್ಯೆ

ವೈಫೈ ಸಂಪರ್ಕದಲ್ಲೂ ಸಹ ಸಮಸ್ಯೆ ಇರುವ ಬಗ್ಗೆ ಗೂಗಲ್‌ ಪಿಕ್ಸೆಲ್‌ ಬಳಕೆದಾರರು ಹೇಳಿದ್ದಾರೆ. ಪರಿಹಾರಕ್ಕಾಗಿ ಕೆಳಗಿನ ಸಲಹೆಗಳನ್ನು ಓದಿ.

#1 ವೈಫೈ ಅನ್ನು ಒಮ್ಮೆ ಆಫ್‌ ಮಾಡಿ, ನಂತರ ಆನ್‌ ಮಾಡಿ.

#2 ನಿಮ್ಮ ಡಿವೈಸ್‌ ಅನ್ನು ಆಂಡ್ರಾಯ್ಡ್ 7.0 ನ್ಯೂಗಾ ಓಎಸ್‌'ಗೆ ಅಪ್‌ಗ್ರೇಡ್‌ ಮಾಡಿ.

#3 ಫೋನ್‌ ಪವರ್‌ ಆಫ್‌ ಮಾಡಿ. ಪವರ್‌ ಬಟನ್‌, ವ್ಯಾಲ್ಯೂಮ್‌ ಬಟನ್‌ ಮತ್ತು ಹೋಮ್‌ ಬಟನ್‌ ಅನ್ನು ಒಮ್ಮೆಯೇ ಹೋಲ್ಡ್‌ ಮಾಡಿ. ಇದು ರಿಕವರಿ ಮೋಡ್‌ಗೆ ಲಾಂಚ್‌ ಆಗುತ್ತದೆ. ನಂತರ ನಿಮ್ಮ ಫೋನ್‌ ಅನ್ನು ಸುಲಭವಾಗಿ ರೀಬೂಟ್ ಮಾಡಬಹುದು.

ಬಹುಬೇಗ ಬ್ಯಾಟರಿ ಪವರ್ ಖಾಲಿ ಆಗುವುದು

ಬಹುಬೇಗ ಬ್ಯಾಟರಿ ಪವರ್ ಖಾಲಿ ಆಗುವುದು

ಪಿಕ್ಸೆಲ್‌ ಫೋನ್‌ ಬ್ಯಾಟರಿ ಪವರ್, ಗೂಗಲ್‌ ಹೇಳಿದ ಅವಿಧಿಗೆ ಮುನ್ನ ಖಾಲಿ ಆಗುವುದಿಲ್ಲ. ಬ್ಯಾಟರಿ ಪವರ್ ದೀರ್ಘತೆಗೆ ಕೆಳಗಿನ ಸಲಹೆಗಳನ್ನು ಓದಿರಿ.

#1 ಹೆಚ್ಚು ಬ್ಯಾಟರಿ ಪವರ್ ಹೀರುವ ಆಪ್‌'ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ. Settings>Battery ಆಪ್ಶನ್‌ಗೆ ಹೋಗಿ ಹೆಚ್ಚು ಬ್ಯಾಟರಿ ಹೀರುತ್ತಿರುವ ಆಪ್‌ ಅನ್ನು ಚೆಕ್ ಮಾಡಿ, ಅನ್‌ಇನ್‌ಸ್ಟಾಲ್‌ ಮಾಡಿ.

#2 ಹೆಚ್ಚು ಬ್ಯಾಟರಿ ಪವರ್ ಹೀರುತ್ತಿರುವ ಆಪ್‌ ಟ್ಯಾಪ್‌ ಮಾಡಿ 'Force Stop' ಕ್ಲಿಕ್ ಮಾಡಿ.

ಪಿಕ್ಸೆಲ್‌ ಬ್ಲರ್‌ ಫೋಟೋ ಕ್ಯಾಪ್ಚರ್ ಮಾಡುತ್ತಿದೆ

ಪಿಕ್ಸೆಲ್‌ ಬ್ಲರ್‌ ಫೋಟೋ ಕ್ಯಾಪ್ಚರ್ ಮಾಡುತ್ತಿದೆ

ಇತ್ತೀಚೆಗಷ್ಟೆ ಗೂಗಲ್‌, ಪಿಕ್ಸೆಲ್‌ ಫೋನ್‌ ಅತ್ಯುತ್ತಮ ಕ್ಯಾಮೆರಾ ಹೊಂದಿದೆ ಎಂದು ಹೇಳಿದೆ. ಆದರೆ ಅದೇ ಕ್ಯಾಮೆರಾ ವ್ಯವಸ್ಥೆ ಸಮಸ್ಯೆಯಿಂದ ಕೂಡಿದೆ. ಕ್ಯಾಮೆರಾ ತೊಂದರೆ ಪರಿಹಾರ ಹೇಗೆ ಮತ್ತು ಬ್ಲರ್ ಕ್ಯಾಪ್ಚರ್ ನಿಯಂತ್ರಣ ಹೇಗೆ ಎಂದು ತಿಳಿಯಿರಿ.

# 1 ಫೋನ್ ರೀಸ್ಟಾರ್ಟ್ ಮಾಡಿ

#2 ಫೋನ್‌ನಲ್ಲಿನ ಕ್ಯಾಮೆರಾ ಆಪ್‌ ಅಪ್‌ಡೇಟ್ ಮಾಡಿ.

#3 ಗೂಗಲ್‌ ಕ್ಯಾಮೆರಾ ಆಪ್‌ ಅನ್ನು ಮತ್ತೊಮ್ಮೆ ಓಫನ್ ಮಾಡಲು ಪ್ರಯತ್ನಿಸಿ

#4 ಫ್ಯಾಕ್ಟರಿ ರೀಸೆಟ್ ಆಪ್ಶನ್‌ ಪ್ರಯತ್ನಿಸಿ, ಡಾಕ್ಯುಮೆಂಟ್‌ ಬ್ಯಾಕಪ್‌ ಬಗ್ಗೆ ಎಚ್ಚರವಹಿಸಿ

#5 ಫೋನ್‌ ರೀಸ್ಟಾರ್ಟ್‌ ಮಾಡಿ, ಸೇಫ್‌ ಮೋಡ್ ಹೊರಬನ್ನಿ. ನಂತರ ಬಳಕೆದಾರರು ಡೌನ್‌ಲೋಡ್ ಆದ ಇತ್ತೀಚಿನ ಆಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ. ಕ್ಯಾಮೆರಾ ಉತ್ತಮವಾಗಿ ವರ್ಕ್‌ ಆಗುವವರೆಗೆ ಈ ರೀತಿಯಲ್ಲೇ ಕಾರ್ಯನಿರ್ವಹಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Google Pixel Smartphones: 5 Common Problems and Fixes. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+