ಗೂಗಲ್ ಪಿಕ್ಸೆಲ್‌ ಮತ್ತು ಪಿಕ್ಸೆಲ್‌ ಎಕ್ಸ್‌ಎಲ್‌ ಖರೀದಿಯಲ್ಲಿನ ಅತ್ಯಾಕರ್ಷಕ ಆಫರ್‌ಗಳು ಯಾವುವು ಗೊತ್ತೇ?

By Suneel
|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಸ್ತುತದಲ್ಲಿ ಎರಡು ಅತಿದೊಡ್ಡ ಕಂಪನಿಗಳ ಡಿವೈಸ್‌ಗಳು ಪೈಪೋಟಿಯಾಗಿ ಮಾರಾಟಕ್ಕೆ ಸಿದ್ಧವಾಗಿವೆ. ಆಪಲ್‌ ಐಫೋನ್ 7'ಗೆ ಪೈಪೋಟಿಯಾಗಿ, ಗೂಗಲ್‌ ಫ್ಲಾಗ್‌ಶಿಪ್‌ನ ಸ್ಮಾರ್ಟ್‌ಫೋನ್‌ 'ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್‌ಎಲ್‌(Pixel and Pixel XL)' ಅಂತಿಮವಾಗಿ ಭಾರತದ ಹಲವು ಇ-ಕಾಮರ್ಸ್‌ ಸೈಟ್‌ಗಳಲ್ಲಿ ಖರೀದಿಗೆ ಲಭ್ಯವಿವೆ.

ಅಂದಹಾಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೂಗಲ್‌ ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಹಳ ದುಬಾರಿ ಆಗಿದೆ ಮತ್ತು ಬಜೆಟ್ ಬೆಲೆಯಲ್ಲಿ ಫೋನ್‌ ಖರೀದಿಸಬೇಕು ಎಂದುಕೊಂಡಿರುವವರಿಗೆ ಫೋನ್‌ ಕೈಗೆಟಕುವ ಬೆಲೆಯನ್ನು ಹೊಂದಿಲ್ಲ.

ದಿಪಾವಳಿ ಸೇಲ್: ಟಾಪ್ 10 ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 20,000 ರೂವರೆಗೆ ಎಕ್ಸ್‌ಚೇಂಜ್‌ ಆಫರ್

ಗೂಗಲ್‌ ಪಿಕ್ಸೆಲ್‌ ಮಾಡೆಲ್‌ ಫೋನ್‌ಗಳು ಫ್ಲಿಪ್‌ಕಾರ್ಟ್, ರಿಲಾಯನ್ಸ್ ಡಿಜಿಟಲ್, ಕ್ರೊಮ ಮತ್ತು ಇತರೆ 1000 ಮೊಬೈಲ್‌ ರೀಟೇಲರ್‌ ಕಂಪನಿಗಳಲ್ಲಿ ಲಭ್ಯವಿವೆ. 'ಗೂಗಲ್‌ ಪಿಕ್ಸೆಲ್‌ ಮತ್ತು ಪಿಕ್ಸೆಲ್‌ ಎಕ್ಸ್‌ಎಲ್‌' ದುಬಾರಿ ಫೋನ್‌ಗಳಾಗಿದ್ದರೂ ಸಹ, ಆನ್‌ಲೈನ್‌ ರೀಟೇಲರ್‌ಗಳು ನೀಡುವ ಅತ್ಯಾಕರ್ಷಕ ಆಫರ್‌ಗಳೊಂದಿಗೆ ಈ ಡಿವೈಸ್‌ಗಳನ್ನು ಖರೀದಿಸಬಹುದಾಗಿದೆ. ಅಂದಹಾಗೆ ಆನ್‌ಲೈನ್ ರೀಟೇಲರ್‌ಗಳು ನೀಡುತ್ತಿರುವ ಅತ್ಯಾಕರ್ಷಕ ಬೆಲೆಯ ಆಫರ್‌ಗಳು ಮತ್ತು ಯಾವ ರೀತಿಯ ಆಫರ್‌ ಪಡೆಯಬಹುದು, ಫೀಚರ್ ಏನು ಎಂಬಿತ್ಯಾದಿ ಮಾಹಿತಿಗಳನ್ನು ಲೇಖನದಲ್ಲಿ ಖರೀದಿಗೆ ಮುನ್ನ ಓದಿರಿ.(Google Pixel, Pixel XL)

ಗೂಗಲ್‌ ಪಿಕ್ಸೆಲ್ ಎಕ್ಸ್‌ಎಲ್‌(Pixelf XL)- ಪೂರ್ಣ ಕಪ್ಪು (128GB)

ಗೂಗಲ್‌ ಪಿಕ್ಸೆಲ್ ಎಕ್ಸ್‌ಎಲ್‌(Pixelf XL)- ಪೂರ್ಣ ಕಪ್ಪು (128GB)

ಈ ಡಿವೈಸ್‌ ರೂ.76,000 ಕ್ಕೆ, ಪೂರ್ಣ ಕಪ್ಪು ಬಣ್ಣದಲ್ಲಿ, 128GB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಖರೀದಿಗೆ ಲಭ್ಯವಿದೆ. 12.3MP ಕ್ಯಾಮೆರಾವಿರುವ ಗೂಗಲ್‌ ಪಿಕ್ಸೆಲ್ ಪೋನ್ ಫ್ಲಿಪ್‌ಕಾರ್ಟ್‌ನಲ್ಲಿ EMI ರೂ.4,223/month ನಲ್ಲಿ ದೊರೆಯುತ್ತದೆ. ಖರೀದಿದಾರರು ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಹಿಂದಿರುಗಿಸುವುದಾದರೆ, ರೂ.27,000 ದರಕಡಿತ ಎಕ್ಸ್‌ಚೇಂಜ್‌ ಡಿಸ್ಕೌಂಟ್‌ ಇದೆ.

ಗೂಗಲ್ ಪಿಕ್ಸೆಲ್ -ಕಪ್ಪು (32 GB)

ಗೂಗಲ್ ಪಿಕ್ಸೆಲ್ -ಕಪ್ಪು (32 GB)

32 GB ಸ್ಟೋರೇಜ್‌ನ ಗೂಗಲ್‌ ಪಿಕ್ಸೆಲ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಡಿವೈಸ್‌ ರೂ.57,000 ಕ್ಕೆ ಖರೀದಿಗೆ ಲಭ್ಯವಿದ್ದು, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇ.10 ಡಿಸ್ಕೌಂಟ್ ಪಡೆಯಬಹುದು ಮತ್ತು ಆಕ್ಸಿಸ್ ಬ್ಯಾಂಕ್ ಬುಜ್ ಕ್ರೆಡಿಟ್‌ ಕಾರ್ಡ್ ಬಳಕೆದಾರರು ಫ್ಲಿಪ್‌ಕಾರ್ಟ್‌ನಲ್ಲಿ ಡಿವೈಸ್‌ ಖರೀದಿಸಿ ಶೇ.5 ರಷ್ಟು ವಿನಾಯಿತಿ ಪಡೆಯಬಹುದು.

 ಗೂಗಲ್‌ ಪಿಕ್ಸೆಲ್ - ಕಪ್ಪು(128 GB)

ಗೂಗಲ್‌ ಪಿಕ್ಸೆಲ್ - ಕಪ್ಪು(128 GB)

ರೂ.27,000 ದರಕಡಿತ ಎಕ್ಸ್‌ಚೇಂಜ್‌ ಆಫರ್ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಡಿವೈಸ್‌ ಖರೀದಿಸಬಹುದು. ಗೂಗಲ್‌ ಪಿಕ್ಸೆಲ್‌ (128 GB) ಫೋನ್‌ ಅನ್ನು ರೂ.66,000 ಕ್ಕೆ ಯಾವುದೇ EMIs ಚಾರ್ಜ್‌ ಇಲ್ಲದೇ ರೂ.3,667/Month ಪ್ಲಾನ್‌ನಲ್ಲಿ ಖರೀದಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೂಗಲ್‌ ಪಿಕ್ಸೆಲ್‌ ಎಕ್ಸ್‌ಎಲ್‌ - ಬೆಳ್ಳಿ (32 GB)

ಗೂಗಲ್‌ ಪಿಕ್ಸೆಲ್‌ ಎಕ್ಸ್‌ಎಲ್‌ - ಬೆಳ್ಳಿ (32 GB)

ಹಲವು ಅತ್ಯಾಕರ್ಷಕ ಆಫರ್‌ಗಳೊಂದಿಗೆ ಬೆಲೆ ರೂ.67,000 ಕ್ಕೆ ಬೆಳ್ಳಿ ಬಣ್ಣದ ಗೂಗಲ್‌ ಪಿಕ್ಸೆಲ್‌ ಎಕ್ಸ್ಎಲ್‌ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆದಾರರು ಶೇ.10 ಡಿಸ್ಕೌಂಟ್'ನಲ್ಲಿ ಖರೀದಿಸಬಹುದು ಮತ್ತು ಆಕ್ಸಿಸ್ ಬ್ಯಾಂಕ್ ಬುಜ್ ಕ್ರೆಡಿಟ್‌ ಕಾರ್ಡ್ ಬಳಕೆದಾರರು ಫ್ಲಿಪ್‌ಕಾರ್ಟ್‌ನಲ್ಲಿ ಡಿವೈಸ್‌ ಖರೀದಿಯಲ್ಲಿ ಶೇ.5 ರಷ್ಟು ವಿನಾಯಿತಿ ಪಡೆಯಬಹುದು.

ಗೂಗಲ್ ಪಿಕ್ಸೆಲ್ - ಬೆಳ್ಳಿ (32 GB)

ಗೂಗಲ್ ಪಿಕ್ಸೆಲ್ - ಬೆಳ್ಳಿ (32 GB)

ಗೂಗಲ್‌ ಪಿಕ್ಸೆಲ್ (32 GB) ಡಿವೈಸ್ ಫ್ಲಿಪ್‌ಕಾರ್ಟ್‌ನಲ್ಲಿ ರೂ.57,000 ಕ್ಕೆ ಖರೀದಿಗೆ ಲಭ್ಯವಿದೆ. ಖರೀದಿದಾರರು ಎಕ್ಸ್‌ಚೇಂಜ್‌ ಆಯ್ಕೆ ಮಾಡಿಕೊಳ್ಳಲು ಬಯಸಿದರೆ, ರೂ.27,000 ದರಕಡಿತ ಆಪ್ಶನ್‌ ಇದೆ.

ಗೂಗಲ್‌ ಪಿಕ್ಸೆಲ್ -  (128 GB)

ಗೂಗಲ್‌ ಪಿಕ್ಸೆಲ್ - (128 GB)

ಕ್ವಾಲ್ಕಂ ಸ್ನಾಪ್‌ಡ್ರಾಗನ್ 821 64-ಬಿಟ್ ಪ್ರೊಸೆಸರ್ ಹೊಂದಿರುವ ಗೂಗಲ್‌ ಪಿಕ್ಸೆಲ್ (128 GB) ಬೆಲೆ ರೂ.66,000. ಖರೀದಿದಾರರು ಯಾವುದೇ EMIs ಚಾರ್ಜ್‌ ಇಲ್ಲದೇ ರೂ.3,667/Month ಪ್ಲಾನ್‌ನಲ್ಲಿ ಮತ್ತು ಇತರೆ EMIs ಪ್ಲಾನ್ ರೂ.3,107/Month ಮೂಲಕ ಡಿವೈಸ್‌ ಖರೀದಿಸಬಹುದು. ಈ ಮೊಬೈಲ್‌ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ರೂ.27,000 ದರಕಡಿತ ಲಭ್ಯ.

 ಗೂಗಲ್ ಪಿಕ್ಸೆಲ್‌ ಎಕ್ಸ್‌ಎಲ್‌ - ಕಪ್ಪು (32GB)

ಗೂಗಲ್ ಪಿಕ್ಸೆಲ್‌ ಎಕ್ಸ್‌ಎಲ್‌ - ಕಪ್ಪು (32GB)

ಗೂಗಲ್ ಪಿಕ್ಸೆಲ್‌ ಎಕ್ಸ್‌ಎಲ್‌ ಸ್ಮಾರ್ಟ್‌ಫೋನ್ ಅನ್ನು , ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆದಾರರು ಶೇ.10 ಡಿಸ್ಕೌಂಟ್‌ನಲ್ಲಿ ಮತ್ತು ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್'ನಿಂದ ಶೇ.5 ವಿನಾಯಿತಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಡಿವೈಸ್‌ ಬೆಲೆ ರೂ.67,000 ಆಗಿದ್ದು, 10 ದಿನಗಳ ಬದಲಾವಣೆ ಆಫರ್ ಮತ್ತು ಒಂದು ವರ್ಷ ತಯಾರಕರ ವಾರಂಟಿ ಲಭ್ಯ.

ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್‌ - ಬೆಳ್ಳಿ (128GB)

ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್‌ - ಬೆಳ್ಳಿ (128GB)

'ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್‌ - ಬೆಳ್ಳಿ (128GB)' ಲಾಂಚ್‌ ಆದ ಮಾರನೆಯ ದಿನಕ್ಕೆ ಫ್ಲಿಪ್‌ಕಾರ್ಟ್‌ ಸ್ಟಾಕ್‌ನಿಂದಲೇ ಖಾಲಿ. ಈ ಡಿವೈಸ್‌ ಖರೀದಿ ಬೆಲೆ ರೂ.76,000 ಆಗಿದ್ದು, 10 ದಿನಗಳ ಬದಲಾವಣೆ ಆಫರ್ ಮತ್ತು ಒಂದು ವರ್ಷ ತಯಾರಕರ ವಾರಂಟಿ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Avail These Attractive Offers While Purchasing Google Pixel and Pixel XL Online. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X